logo
ಕನ್ನಡ ಸುದ್ದಿ  /  ಕ್ರಿಕೆಟ್  /  ಜಸ್ಟ್​ ಲುಕಿಂಗ್​ ಲೈಕ್​ ಎ ವಾವ್ಹ್​ ಎಂದ ಕಿಚ್ಚ ಸುದೀಪ್, ಸಚಿನ್ ಕೊಟ್ರು ಸ್ವೀಟ್ ರಿಪ್ಲೈ, ಫ್ಯಾನ್ಸ್ ಫುಲ್ ಖುಷ್

ಜಸ್ಟ್​ ಲುಕಿಂಗ್​ ಲೈಕ್​ ಎ ವಾವ್ಹ್​ ಎಂದ ಕಿಚ್ಚ ಸುದೀಪ್, ಸಚಿನ್ ಕೊಟ್ರು ಸ್ವೀಟ್ ರಿಪ್ಲೈ, ಫ್ಯಾನ್ಸ್ ಫುಲ್ ಖುಷ್

Prasanna Kumar P N HT Kannada

Feb 02, 2024 06:50 PM IST

ಜಸ್ಟ್​ ಲುಕಿಂಗ್​ ಲೈಕ್​ ಎ ವಾವ್ಹ್​ ಎಂದ ಕಿಚ್ಚ ಸುದೀಪ್, ಸಚಿನ್ ಕೊಟ್ರು ಸ್ವೀಟ್ ರಿಪ್ಲೈ

    • Sachin Tendulkar and Kichcha Sudeep : ಕಿಚ್ಚ ಸುದೀಪ್ ಮತ್ತು ಸಚಿನ್ ತೆಂಡೂಲ್ಕರ್ ಇರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಚಿತ್ರಕ್ಕೆ ಪರಸ್ಪರ ಇಬ್ಬರು ಸಹ ಪ್ರತಿಕ್ರಿಯಿಸಿದ್ದು, ಕಿಚ್ಚನ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಜಸ್ಟ್​ ಲುಕಿಂಗ್​ ಲೈಕ್​ ಎ ವಾವ್ಹ್​ ಎಂದ ಕಿಚ್ಚ ಸುದೀಪ್, ಸಚಿನ್ ಕೊಟ್ರು ಸ್ವೀಟ್ ರಿಪ್ಲೈ
ಜಸ್ಟ್​ ಲುಕಿಂಗ್​ ಲೈಕ್​ ಎ ವಾವ್ಹ್​ ಎಂದ ಕಿಚ್ಚ ಸುದೀಪ್, ಸಚಿನ್ ಕೊಟ್ರು ಸ್ವೀಟ್ ರಿಪ್ಲೈ (Hemanth Shaiva (From X))

ಸ್ಯಾಂಡಲ್​ವುಡ್​ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ಗೆ (Kichcha Sudeep) ಭಾರತೀಯ ಕ್ರಿಕೆಟರ್​ಗಳ ಪರಿಚಯ ಇರುವುದು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ದಿಗ್ಗಜ ಆಟಗಾರರಾದ ಸಚಿನ್ ತೆಂಡೂಲ್ಕರ್ (Sachin Tendulkar), ವಿರಾಟ್ ಕೊಹ್ಲಿಯಿಂದ (Virat Kohli) ಯುವ ಆಟಗಾರ ಪೃಥ್ವಿ ಶಾರವರೆಗೆ ಬಹುತೇಕ ಕ್ರಿಕೆಟರ್ಸ್​ಗೆ ಕಿಚ್ಚ ಪರಿಚಯ ಇದೆ. ಸಾಕಷ್ಟು ಸ್ಟಾರ್ ಕ್ರಿಕೆಟರ್ಸ್ ಸುದೀಪ್​ ಭೇಟಿಯಾಗಿ ಸಹಿ ಹಾಕಿದ ಬ್ಯಾಟ್​, ಕ್ಯಾಪ್, ಜೆರ್ಸಿ ಸೇರಿ ಹಲವು ಉಡುಗೊರೆಗಳನ್ನು ನೀಡಿದ್ದಾರೆ. ಕಿಂಗ್​ ಕೊಹ್ಲಿ ಸಹ ಸಹಿ ಹಾಕಿದ ಕ್ಯಾಪ್ ಕಳಿಸಿದ್ದರು.

ಟ್ರೆಂಡಿಂಗ್​ ಸುದ್ದಿ

ಅಂದು ಟೀಕಿಸಿದವರಿಂದಲೇ ಇಂದು ಶಹಬ್ಬಾಷ್‌ಗಿರಿ; ಟ್ರೋಲ್‌ಗಳಿಗೆ ಕುಗ್ಗದೆ ಆರ್‌ಸಿಬಿ ಅದೃಷ್ಟವನ್ನೇ ಬದಲಿಸಿದ ಯಶ್ ದಯಾಳ್

RCB Hosa Adhyaya: ಸಿಎಸ್​ಕೆ ವಿರುದ್ಧ ಪರಾಕ್ರಮ ಮೆರೆದು ಪ್ಲೇಆಫ್ ಹೆಬ್ಬಾಗಿಲು ದಾಟಲು ಪ್ರಮುಖ 6 ಕಾರಣಗಳು

ಬೆಂಗಳೂರು ಬೀದಿಗಳಲ್ಲಿ ರಾತ್ರಿ 1.30ಕ್ಕೂ ವಿರಾಟ್‌ ಫ್ಯಾನ್ಸ್‌ ಹರ್ಷೋದ್ಘಾರ; ವಿಡಿಯೋ ಹಂಚಿಕೊಂಡು ನೀವೇ ಬೆಸ್ಟ್‌ ಎಂದ ಆರ್‌ಸಿಬಿ

ಐಪಿಎಲ್‌ 2024: ಇಂದು ಲೀಗ್‌ ಹಂತದ ಕೊನೆಯ 2 ಪಂದ್ಯಗಳು; ಎಲಿಮನೇಟರ್‌ನಲ್ಲಿ ಆರ್‌ಸಿಬಿ ಎದುರಾಳಿಯಾಗೋರು ಯಾರು?

ಫೆಬ್ರವರಿ 23ರಿಂದ ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ ಶುರುವಾಗಲಿದ್ದು, ಕರ್ನಾಟಕ ಬುಲ್ಡೋಜರ್ ತಂಡಕ್ಕೆ ನಾಯಕರಾಗಿ ಅಖಾಡಕ್ಕಿಳಿಯಲು ಸುದೀಪ್‌ ಸಜ್ಜಾಗಿದ್ದಾರೆ. ಇತ್ತೀಚೆಗೆ ರಿಯಾಲಿಟಿ ಶೋ ಬಿಗ್​ಬಾಸ್ ಮುಗಿಸಿ ಕ್ರಿಕೆಟ್​ ಮರಳಲು ಸಿದ್ಧತೆ ನಡೆಸುತ್ತಿರುವ ಈ ವೇಳೆ ಮಾಸ್ಟರ್​ ಬ್ಲಾಸ್ಟರ್​​ ಸಚಿನ್ ತೆಂಡೂಲ್ಕರ್​ ಅವರು ಚಂದನವನದ ಮಾಣಿಕ್ಯನ ಪೋಸ್ಟ್​ವೊಂದಕ್ಕೆ 18 ದಿನಗಳ ನಂತರ ಪ್ರತಿಕ್ರಿಯಿಸಿದ್ದಾರೆ. #AskKichcha ಪ್ರಶ್ನೋತ್ತರ ಅವಧಿಯಲ್ಲಿ ಅಭಿಮಾನಿ ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದ ಸುದೀಪ್​ಗೆ ಸಚಿನ್​ ಪ್ರತಿಕ್ರಿಯಿಸಿರುವುದು ವಿಶೇಷ.

ಸದ್ಯ ಸುದೀಪ್​ಗೆ ಸಚಿನ್​ ರಿಪ್ಲೈ ಕೊಟ್ಟಿರುವುದು ಎಕ್ಸ್​ ಖಾತೆಯಲ್ಲಿ ಇದು ಸಂಚಲನ ಸೃಷ್ಟಿಸಿದೆ. ಕಿಚ್ಚನ ಅಭಿಮಾನಿಗಳಂತೂ ಫುಲ್ ಖುಷ್​ ಆಗಿದ್ದಾರೆ. ಹಾಗಾದರೆ ಈ ಸ್ಯಾಂಡಲ್​ವುಡ್​ ಬಾದ್​ಶಾಗೆ ಮಾಸ್ಟರ್ ಬ್ಲಾಸ್ಟರ್​ ಪ್ರತಿಕ್ರಿಯಿಸಿ ಕಾರಣವೇನು? ಸುದೀಪ್ ಯಾವ ಪೋಸ್ಟ್ ಹಾಕಿದ್ದರು. ಏನೆಲ್ಲಾ ಆಯಿತು ಎಂಬುದಕ್ಕೆ ಇಲ್ಲಿದೆ ಉತ್ತರ.

ಇಷ್ಟಕ್ಕೂ ಆ ಪೋಸ್ಟ್​ನಲ್ಲಿದೆ?

ಜನವರಿ 16ರ ಬೆಳಗಿನ ಜಾವ 6:12ಕ್ಕೆ ಎಕ್ಸ್​ ಖಾತೆಯಲ್ಲಿ ಆಸ್ಕ್​ ಕಿಚ್ಚ (AskKichcha) ಪ್ರಶ್ನೋತ್ತರ ಅವಧಿಯನ್ನು ಪ್ರಾರಂಭಿಸಿದ್ದರು. ಆ ಪೋಸ್ಟ್​ನಲ್ಲಿ ನಾನು ನನ್ನ ವಿಮಾನ ಹತ್ತುವ ಮೊದಲು ಆರಂಭಿಕ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸುತ್ತೇನೆ ಎಂದು ಬರೆದಿದ್ದರು. ಹಾಗಾಗಿ ಅಭಿಮಾನಿಗಳು ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದರು. ಈ ವೇಳೆ ಹೇಮಂತ್ ಶೈವ ಎಂಬವರು ಬೆಳಿಗ್ಗೆ 6.52ಕ್ಕೆ ಒಂದು ಫೋಟೋ ಸಹಿತ ಪ್ರಶ್ನೆ ಕೇಳಿದ್ದರು.

ಕಿಚ್ಚನ ಅಭಿಮಾನಿ ಹೇಮಂತ್ ಶೈವ ಎಂಬಾತ ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿಯಾಗಿ ಮಾತನಾಡುತ್ತಿರುವ ಫೋಟೋವನ್ನು ಶೇರ್ ಮಾಡಿ, ಅಣ್ಣಾ ಈ ಚಿತ್ರದ ಬಗ್ಗೆ ಒಂದು ಮಾತು ಹೇಳಿ. ನೀವು ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿಯಾದಾಗ ನಿಮ್ಮ ಆಂತರಿಕ ಭಾವನೆ ಏನು? ಎಂದು ಬರೆದಿದ್ದರು. ಇದಕ್ಕೆ ಉತ್ತರಿಸಿದ ಸುದೀಪ್​, ಈ ಚಿತ್ರ ಜಸ್ಟ್​ ಲುಕಿಂಗ್​ ಲೈಕ್​ ವಾವ್ಹ್. ಒಂದು ಸವಿ ನೆನಪು ಗೆಳೆಯ ಎಂದಿದ್ದರು. ಈ ಪೋಸ್ಟ್​ ಮಾಡಿದ್ದು ಜನವರಿ 16ರಂದು. ಈ ಪೋಸ್ಟ್​ಗೆ ಸಚಿನ್ ಫೆಬ್ರವರಿ 02ರಂದು ಪ್ರತಿಕ್ರಿಯಿಸಿದ್ದಾರೆ.

ಕಿಚ್ಚನ ಪೋಸ್ಟ್​ಗೆ ಸಚಿನ್ ಹೇಳಿರುವುದೇನು?

ಅಭಿನಯ ಚಕ್ರವರ್ತಿಗೆ ರಿಪ್ಲೈ ಕೊಟ್ಟಿರುವ ದಿಗ್ಗಜ ಆಟಗಾರ ಅವರ ಆರೋಗ್ಯದ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ. ನಿಮ್ಮನ್ನು ಭೇಟಿಯಾಗಿದ್ದು ತುಂಬಾ ಸಂತೋಷವಾಗಿತ್ತು. ಆ ದಿನ ಯಾರೋ ನಮ್ಮಿಬ್ಬರ ಫೋಟೋ ಎಷ್ಟು ಚೆನ್ನಾಗಿ ತೆಗೆದಿದ್ದಾರೆ. ಯಾವಾಗಲೂ ನಿಮಗೆ ಉತ್ತಮ ಆರೋಗ್ಯ ಮತ್ತು ಜೀವನದಲ್ಲಿ ಸಂತೋಷ ಸಿಗಲಿ ಎಂದು ಬಯಸುತ್ತೇನೆ ಎಂದು ಲೆಜೆಂಡರಿ ಆಟಗಾರ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ, ನಡುವೆ ಕಿಚ್ಚ ಎಂದು ಹೇಳಿದ್ದಾರೆ. ಪೋಸ್ಟ್​ನ ಮಧ್ಯದಲ್ಲಿ ಕಿಚ್ಚ ಎಂದು ಹೇಳಿರುವ ಸಚಿನ್, ಎರಡು ಅರ್ಥ ಬರುವಂತೆ ಹೇಳಿದ್ದಾರೆ. ಹಿಂದಿಯಲ್ಲಿ ಕಿಚ ಎಂದರೆ ತೆಗೆಯೋದು ಎಂದು ಅರ್ಥ. ಮತ್ತೊಂದು ಅರ್ಥ ಕಿಚ್ಚ ಎಂದು ಸುದೀಪ್​​ಗೂ ಹೇಳಿರುವುದು.

ನಾನು ನಿರೀಕ್ಷಿಸಿರಲಿಲ್ಲ ಸರ್ ಎಂದ ಕಿಚ್ಚ

ಸಚಿನ್ ನೀಡಿದ್ದ ಪ್ರತಿಕ್ರಿಯೆಗೆ ಅಚ್ಚರಿ ವ್ಯಕ್ತಪಡಿಸಿರುವ ಸುದೀಪ್, ನಾನು ಇದನ್ನು ನಿರೀಕ್ಷಿಸಿರಲಿಲ್ಲ ಸರ್ ಎಂದು ಹೇಳಿದ್ದಾರೆ. ಅದ್ಧುತ ಎಂದು ಎರಡು ಲವ್ ಎಮೋಜಿ ಹಾಕಿರುವ ಕಿಚ್ಚ, ಇದನ್ನು ನಿರೀಕ್ಷಿಸಿರಲಿಲ್ಲ. ನೀವು ನನಗೆ ಮತ್ತೊಂದು ಸ್ಮರಣೀಯ ಕ್ಷಣವನ್ನು ಉಡುಗೊರೆಯಾಗಿ ನೀಡಿದ್ದೀರಿ ಎಂದು ಹೇಳಿದ್ದಾರೆ. ಅಲ್ಲದೆ, ನಿಮಗೂ ಸಹ ಆರೋಗ್ಯ ಮತ್ತು ಪ್ರೀತಿಯನ್ನು ಹಾರೈಸುತ್ತೇನೆ ಸಚಿನ್ ಸರ್​ ಎಂದು ಸುದೀಪ್ ಪ್ರತಿಕ್ರಿಯಿಸಿದ್ದಾರೆ.

IPL, 2024

Live

PBKS

214/5

20.0 Overs

VS

SRH

129/3

(10.1)

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ