logo
ಕನ್ನಡ ಸುದ್ದಿ  /  ಕ್ರಿಕೆಟ್  /  ವಿವಾದಾತ್ಮಕ ಕ್ಯಾಚ್​ಗೆ ಸಂಜು ಸ್ಯಾಮ್ಸನ್ ಔಟ್; ಅಂಪೈರ್​ಗಳ ನಿರ್ಧಾರಕ್ಕೆ ಮೈದಾನದಲ್ಲೇ ಸಿಟ್ಟಾದ ಆರ್​ಆರ್ ನಾಯಕ, ವಿಡಿಯೋ

ವಿವಾದಾತ್ಮಕ ಕ್ಯಾಚ್​ಗೆ ಸಂಜು ಸ್ಯಾಮ್ಸನ್ ಔಟ್; ಅಂಪೈರ್​ಗಳ ನಿರ್ಧಾರಕ್ಕೆ ಮೈದಾನದಲ್ಲೇ ಸಿಟ್ಟಾದ ಆರ್​ಆರ್ ನಾಯಕ, ವಿಡಿಯೋ

Prasanna Kumar P N HT Kannada

May 08, 2024 01:27 AM IST

ವಿವಾದಾತ್ಮಕ ಕ್ಯಾಚ್​ಗೆ ಸಂಜು ಸ್ಯಾಮ್ಸನ್ ಔಟ್; ಅಂಪೈರ್​ಗಳ ನಿರ್ಧಾರಕ್ಕೆ ಮೈದಾನದಲ್ಲೇ ಸಿಟ್ಟಾದ ಆರ್​ಆರ್ ನಾಯಕ

    • Sanju Samson : ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ವಿವಾದಾತ್ಮಕ ಔಟ್​ಗೆ ಬಲಿಯಾದರು. ಅಂಪೈರ್​ಗಳ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.
ವಿವಾದಾತ್ಮಕ ಕ್ಯಾಚ್​ಗೆ ಸಂಜು ಸ್ಯಾಮ್ಸನ್ ಔಟ್; ಅಂಪೈರ್​ಗಳ ನಿರ್ಧಾರಕ್ಕೆ ಮೈದಾನದಲ್ಲೇ ಸಿಟ್ಟಾದ ಆರ್​ಆರ್ ನಾಯಕ
ವಿವಾದಾತ್ಮಕ ಕ್ಯಾಚ್​ಗೆ ಸಂಜು ಸ್ಯಾಮ್ಸನ್ ಔಟ್; ಅಂಪೈರ್​ಗಳ ನಿರ್ಧಾರಕ್ಕೆ ಮೈದಾನದಲ್ಲೇ ಸಿಟ್ಟಾದ ಆರ್​ಆರ್ ನಾಯಕ

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡವು (RR vs DC) 20 ರನ್​ಗಳ ಭರ್ಜರಿ ಜಯ ಸಾಧಿಸಿ ಪ್ಲೇಆಫ್​ ಆಸೆಯನ್ನು ಜೀವಂತವಾಗಿರಿಸಿದೆ. ಆದರೆ ಈ ಪಂದ್ಯದಲ್ಲಿ ವಿವಾದವೊಂದು ದಾಖಲಾಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ಡೆಲ್ಲಿ ನೀಡಿದ್ದ 22 ರನ್​ಗಳ ಗುರಿಯನ್ನು ಬೆನ್ನಟ್ಟುವಾಗ ಆರ್​ಆರ್​ ನಾಯಕ ಸಂಜು ಸ್ಯಾಮ್ಸನ್​ (Sanju Samson), ವಿವಾದಾತ್ಮಕ ತೀರ್ಪಿಗೆ ಬಲಿಯಾಗಿದ್ದು, ಐಪಿಎಲ್​ನ ಅತ್ಯಂತ ಕೆಟ್ಟ ಅಂಪೈರಿಂಗ್ ಎಂದು ಕ್ರಿಕೆಟ್ ಪ್ರಿಯರು ಕಿಡಿಕಾರಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಆರ್​ಸಿಬಿ ಫೈನಲ್​ ಗೆದ್ದಂತೆ ಹಾರಾಡ್ತಿದೆ ಎಂದ ರಾಯುಡು; ಇವರಿಗೆ ಅರಗಿಸಿಕೊಳ್ಳೊಕೆ ಆಗ್ತಿಲ್ಲ ಎಂದ ಬೆಂಗಳೂರು ಮಾಜಿ ಆಟಗಾರ

ವಿರಾಟ್ ಕೊಹ್ಲಿಗೆ ಕರ್ನಾಟಕದ ನಂಟು; ಎರಡನೇ ತವರು ಬೆಂಗಳೂರಲ್ಲಿ ವಿರುಷ್ಕಾ ದಂಪತಿ ಓಡಾಡಿರುವ ಜಾಗಗಳಿವು

ಬ್ಯಾಟರ್‌ಗಳ ಅಬ್ಬರ; ಪಂಜಾಬ್‌ ಮಣಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ನೆಗೆದ ಸನ್‌ರೈಸರ್ಸ್‌ ಹೈದರಾಬಾದ್

ಕದನದೊಳ್ ಕಿಂಗ್ ಕೊಹ್ಲಿ ಕೆಣಕಿ ಉಳಿದವರಿಲ್ಲ; ರವೀಂದ್ರ ಜಡೇಜಾಗೆ ಅಲ್ಲೇ ಡ್ರಾ, ಅಲ್ಲೇ ಬಹುಮಾನ, ವಿಡಿಯೋ

ಮೊದಲ ಓವರ್​​ನಲ್ಲೇ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಔಟಾದ ನಂತರ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಸತತ ವಿಕೆಟ್​ಗಳ ನಡುವೆಯೂ ಏಕಾಂಗಿ ಹೋರಾಟ ನಡೆಸಿದ ಸಂಜು, ತನ್ನ ತಂಡವನ್ನು ಗೆಲುವಿನತ್ತ ಕೊಂಡೊಯ್ಯುತ್ತಿದ್ದರು. ಆದರೆ ಮುಕೇಶ್ ಕುಮಾರ್​ ಅವರ ಬೌಲಿಂಗ್​ನಲ್ಲಿ 15 ಓವರ್​ನ 4ನೇ ಎಸೆತದಲ್ಲಿ ಸ್ಯಾಮ್ಸನ್​ ಬಿಗ್ ಹಿಟ್ ಮಾಡಿದ ಸಂಜು, ಲಾಂಗ್​ ಆನ್​ನಲ್ಲಿ ಶಾಯ್ ಹೋಪ್​ಗೆ ಕ್ಯಾಚ್​ ನೀಡಿದರು.

ಆದರೆ 46 ಎಸೆತಗಳಲ್ಲಿ 8 ಬೌಂಡರಿ, 6 ಸಿಕ್ಸರ್ ಸಹಿತ 86 ರನ್ ಸಿಡಿಸಿದ್ದ ಸಂಜು ಔಟಾಗಿದ್ದು, ವಿವಾದಾತ್ಮಕ ಕ್ಯಾಚ್​ಗೆ. ಹೌದು, ಶಾಯ್ ಹೋಪ್ ಹಿಡಿದ ಕ್ಯಾಚ್​, ಐಪಿಎಲ್​ನಲ್ಲಿ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಸ್ಯಾಮ್ಸನ್, ಅಂಪೈರ್​​ಗಳ ನಿರ್ಧಾರಕ್ಕೆ ಸಿಟ್ಟಾಗಿ ವಾಗ್ವಾದ ನಡೆಸಿದರು. ಸರಿಯಾಗಿ ಪರಿಶೀಲನೆ ನಡೆಸದೆ ಔಟ್ ನೀಡಿವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಕ್ಯಾಚ್ ಹಿಡಿಯುವ ಅವಧಿಯಲ್ಲಿ ಹೋಪ್​ ಕಾಲು ಬೌಂಡರಿ ಗೆರೆಗೆ ತಾಗಿರುವುದು ರಿಪ್ಲೇನಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಆದರೂ ಔಟ್ ನೀಡಿರುವುದು ಅಚ್ಚರಿ ಮೂಡಿಸಿದೆ.

ಹಗ್ಗಕ್ಕೆ ಮುಟ್ಟಿದಂತಿದೆ ಹೋಪ್ ಪಾದ

ಮುಕೇಶ್ ಕುಮಾರ್​​ ಬೌಲಿಂಗ್​ನಲ್ಲಿ ಮತ್ತೊಂದು ಸಿಕ್ಸರ್​​ಗೆ ಯತ್ನಿಸಿದ​ ನಾಯಕನ ಕ್ಯಾಚ್​ ಅನ್ನು ಬೌಂಡರಿಯಲ್ಲಿ ನಿಂತಿದ್ದ ಶಾಯ್ ಹೋಪ್​ರನ್ನು ಔಟ್ ಮಾಡಲು ಅಮೋಘ ಕ್ಯಾಚ್ ಪಡೆದರು. ಹೋಪ್ ತೆಗೆದುಕೊಂಡ ಕ್ಯಾಚ್, ಬೌಂಡರಿ ಹಗ್ಗಕ್ಕೆ ಟಚ್​ ಆದಂತೆ ಕಾಣುತ್ತಿದೆ. ಗೊಂದಲಕ್ಕೆ ಒಳಗಾದ ಆನ್​ಫೀಲ್ಡ್​ ಅಂಪೈರ್ಸ್, 3ನೇ ಅಂಪೈರ್​ಗೆ ಮನವಿ ಮಾಡಿದರು. ರಿಪ್ಲೇನಲ್ಲಿ ಕ್ಲೀನ್ ಕ್ಯಾಚ್ ತೆಗೆದುಕೊಳ್ಳುವುದನ್ನು ತೋರಿಸಿದವು. ಆದಾಗ್ಯೂ, ಒಂದು ನಿರ್ದಿಷ್ಟ ಕೋನದಿಂದ ಪಾದವು ಹಗ್ಗಗಳನ್ನು ಮುಟ್ಟಿದಂತಿದೆ.

 

ಮೈದಾನದಲ್ಲೇ ಸಿಟ್ಟಾದ ಸಂಜು ಸ್ಯಾಮ್ಸನ್

ಥರ್ಡ್ ಅಂಪೈರ್ ಮೈಕೆಲ್ ಗೋಫ್ ಇತರ ಕೋನಗಳಲ್ಲಿ ಪರಿಶೀಲನೆ ನಡೆಸದೆ ಏಕ್​ದಮ್ ಔಟ್ ನೀಡಿದರು. ವಿಡಿಯೋ-ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇದು ಸಾಕಷ್ಟು ವಿವಾದಕ್ಕೆ ಕಾರಣವಾಯಿತು. ಸಂಜು ಸ್ಯಾಮ್ಸನ್ ಮೈದಾನದಿಂದ ಹೊರಬರದೆ ಮೈದಾನದ ಅಂಪೈರ್‌ಗಳೊಂದಿಗೆ ವಾಗ್ವಾದ ನಡೆಸಿದರು. ಅವರು ಮತ್ತೊಂದು ಡಿಆರ್‌ಎಸ್ ಕರೆಗೆ ಹೋಗಲು ಬಯಸಿದ್ದರು. ಆದರೆ, ಅದಾಗಲೇ ಸಮಯ ಮುಗಿದೇ ಹೋಗಿತ್ತು. ಇಡೀ ರಾಜಸ್ಥಾನ್ ರಾಯಲ್ಸ್ ಡ್ರೆಸ್ಸಿಂಗ್ ರೂಮ್ ಗೊಂದಲಕ್ಕೆ ಒಳಗಾಯಿತು. ಅಭಿಮಾನಿಗಳು ಸಹ ಅಂಪೈರ್ಸ್ ವಿರುದ್ಧ ಕಿಡಿಕಾರಿದ್ದು, ಇದು ಅತ್ಯಂತ ಕೆಟ್ಟ ಅಂಪೈರಿಂಗ್ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ಬೃಹತ್ ಮೊತ್ತ ಪೇರಿಸಿತು. ಜೇಕ್​ ಫ್ರೇಸರ್​ ಮೆಕ್​ಗುರ್ಕ್​ 50, ಅಭಿಷೇಕ್ ಪೊರೆಲ್ 65 ರನ್​ ಸಿಡಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. 20 ಓವರ್​​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿತು. ರವಿಚಂದ್ರನ್ ಅಶ್ವಿನ್ 3 ವಿಕೆಟ್ ಪಡೆದರು. ಈ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್, 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಲಷ್ಟೆ ಶಕ್ತವಾಯಿತು. ಸಂಜು ಸ್ಯಾಮ್ಸನ್ 86 ರನ್ ಗಳಿಸಿದರೂ ಗೆಲುವು ಸಾಧ್ಯವಾಗಲಿಲ್ಲ. ಖಲೀಲ್ ಅಹ್ಮದ್, ಮುಕೇಶ್ ಅಹ್ಮದ್, ಕುಲ್ದೀಪ್ ಯಾದವ್ ತಲಾ 2 ವಿಕೆಟ್ ಪಡೆದರು.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ