logo
ಕನ್ನಡ ಸುದ್ದಿ  /  ಕ್ರಿಕೆಟ್  /  ಬಲಗೈಯಿಂದ ಎಡಗೈ ಆಟಗಾರ್ತಿಯಾಗಿ ಬದಲಾಗಿದ್ದೇಗೆ ಸ್ಮೃತಿ ಮಂಧಾನ; ಇದು ಲೇಡಿ ಕೊಹ್ಲಿ ಬರ್ತ್​ಡೇ ಸ್ಪೆಷಲ್

ಬಲಗೈಯಿಂದ ಎಡಗೈ ಆಟಗಾರ್ತಿಯಾಗಿ ಬದಲಾಗಿದ್ದೇಗೆ ಸ್ಮೃತಿ ಮಂಧಾನ; ಇದು ಲೇಡಿ ಕೊಹ್ಲಿ ಬರ್ತ್​ಡೇ ಸ್ಪೆಷಲ್

Prasanna Kumar P N HT Kannada

Jul 18, 2024 04:59 PM IST

google News

ಬಲಗೈಯಿಂದ ಎಡಗೈ ಆಟಗಾರ್ತಿಯಾಗಿ ಬದಲಾಗಿದ್ದೇಗೆ ಸ್ಮೃತಿ ಮಂಧಾನ; ಇದು ಲೇಡಿ ಕೊಹ್ಲಿ ಬರ್ತ್​ಡೇ ಸ್ಪೆಷಲ್

    • Smriti Mandhana Birthday: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಸ್ಮೃತಿ ಮಂಧಾನ ಅವರು ಇಂದು (ಜುಲೈ 18) 28ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ಬಲಗೈಯಿಂದ ಎಡಗೈ ಆಟಗಾರ್ತಿಯಾಗಿ ಬದಲಾಗಿದ್ದೇಗೆ ಸ್ಮೃತಿ ಮಂಧಾನ; ಇದು ಲೇಡಿ ಕೊಹ್ಲಿ ಬರ್ತ್​ಡೇ ಸ್ಪೆಷಲ್
ಬಲಗೈಯಿಂದ ಎಡಗೈ ಆಟಗಾರ್ತಿಯಾಗಿ ಬದಲಾಗಿದ್ದೇಗೆ ಸ್ಮೃತಿ ಮಂಧಾನ; ಇದು ಲೇಡಿ ಕೊಹ್ಲಿ ಬರ್ತ್​ಡೇ ಸ್ಪೆಷಲ್

ಸ್ಮೃತಿ ಮಂಧಾನ (Smriti Mandhana Birthday) ಭಾರತೀಯ ಮಹಿಳಾ ಕ್ರಿಕೆಟ್ ಸೂಪರ್‌ಸ್ಟಾರ್. ಈ ಸ್ಟೈಲಿಶ್ ಎಡಗೈ ಆಟಗಾರ್ತಿಯು ಮೈದಾನದಲ್ಲಿ ಅದ್ಭುತ ಇನ್ನಿಂಗ್ಸ್​​ಗಳ ಜೊತೆಗೆ ಬ್ಯೂಟಿಯಿಂದಲೂ ಹೆಚ್ಚು ಗುರುತಿಸಿಕೊಂಡಿದ್ದಾರೆ. ಬಾಲಿವುಡ್​ನ ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಅವರೊಂದಿಗೆ ಡೇಟಿಂಗ್ ನಡೆಸುತ್ತಿರುವ ಸ್ಮೃತಿ ಅವರು ಇಂದು (ಜುಲೈ 18ರಂದು) 28ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. 1996ರ ಜುಲೈ 18ರಂದು ಮುಂಬೈನಲ್ಲಿ ಜನಿಸಿದ ಸ್ಮೃತಿ, ಬ್ಯಾಟಿಂಗ್ ಮಾಡುತ್ತಿದ್ದದ್ದು, ಬಲಗೈನಲ್ಲಿ. ಮಂಧಾನ ಅವರನ್ನು ಕ್ರಿಕೆಟಿಗರನ್ನಾಗಿಸುವಲ್ಲಿ ಸಹೋದರನ ಪಾತ್ರ ಮಹತ್ವದ್ದು.

ಸ್ಮೃತಿ ಮಂಧಾನ ಅವರ ವೃತ್ತಿಜೀವನದ ವಿಷಯಕ್ಕೆ ಬಂದರೆ ಅವರ ಸಹೋದರನ ಪಾತ್ರ ಮರೆಯುವಂತಿಲ್ಲ. ಏಕೆಂದರೆ, ಸ್ಮೃತಿ ಅವರನ್ನು ಇಂದಿನ ಸ್ಥಿತಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸ್ಮೃತಿ ಅವರ ಕುಟುಂಬದ ಪ್ರತಿಯೊಬ್ಬರಿಗೂ ಕ್ರಿಕೆಟ್‌ ಜೊತೆಗೆ ಸಂಪರ್ಕ ಇದೆ. ಆಕೆಯ ತಂದೆ ಮತ್ತು ಸಹೋದರ ಎಲ್ಲರೂ ಕ್ರಿಕೆಟ್ ಆಡುತ್ತಿದ್ದರು. ಸ್ಮೃತಿ ತಂದೆ ಜಿಲ್ಲಾ ಮಟ್ಟದವರೆಗೂ ಕ್ರಿಕೆಟ್ ಆಡಿದ್ದಾರೆ. ಸಹೋದರ ಶ್ರವಣ್ ಮಂಧಾನ ಮಹಾರಾಷ್ಟ್ರ ಅಂಡರ್-19 ತಂಡ ಪ್ರತಿನಿಧಿಸಿದ್ದರು. ನಂತರ ಅವಕಾಶಗಳ ಕೊರತೆ, ನಾನಾ ಕಾರಣಗಳಿಂದ ಕ್ರಿಕೆಟ್​ನಿಂದ ಹಿಂದೆ ಸರಿದರು.

ಸ್ಮೃತಿ ಮಂಧಾನ ಅವರಿಗೆ ಕ್ರಿಕೆಟ್‌ ಮೇಲೆ ಪ್ರೀತಿ ಹೆಚ್ಚಾಗಲು ಅವರ ಸಹೋದರ ಶ್ರವಣ್‌. ತನ್ನ ಸಹೋದರ ಮೈದಾನಕ್ಕೆ ಅಭ್ಯಾಸಕ್ಕೆಂದು ಹೋದಾಗಲೆಲ್ಲಾ ಸ್ಮೃತಿ ಕೂಡ ಜೊತೆಯಲ್ಲೇ ಹೋಗುತ್ತಿದ್ದರು. ಇದು ಕ್ರಿಕೆಟ್​ ಮೇಲೆ ಒಲವು ಹೆಚ್ಚಾಗುವಂತೆ ಮಾಡಿತ್ತು. ನಂತರ ಆಕೆಯು ಅಭ್ಯಾಸ ಅರಂಭಿಸಿದಳು. ಅದರ ಫಲವೇ ಇಂದಿನ ಸ್ಮೃತಿ ಬೆಳವಣಿಗೆ. ವಿಶ್ವ ಕ್ರಿಕೆಟ್​ನಲ್ಲಿ ಹೆಸರು ಸಂಪಾದಿಸಿದ್ದಾರೆ. ಆರ್​​ಸಿಬಿಗೆ ಚೊಚ್ಚಲ ಕಪ್ ಗೆದ್ದುಕೊಟ್ಟ ಹೆಗ್ಗಳಿಕೆಯೂ ಅವರದ್ದಾಗಿದೆ.

ಬಲಗೈ ಬ್ಯಾಟರ್​ ಸ್ಮೃತಿ ಈಗೇಕೆ ಎಡಗೈಯಲ್ಲಿ ಆಡುತ್ತಿದ್ದಾರೆ?

ಸ್ಮೃತಿ ಮಂಧಾನ ಕ್ರಿಕೆಟ್‌ನಲ್ಲಿ ತನ್ನ ಸಹೋದರನ ಬ್ಯಾಟಿಂಗ್ ಶೈಲಿ ತುಂಬಾನೆ ಅನುಕರಿಸುತ್ತಿದ್ದರು. ಆರಂಭದಲ್ಲಿ ಬಲಗೈ ಬ್ಯಾಟಿಂಗ್​ನಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದ ಮಂಧಾನ, ಬಳಿಕ ಎಡಗೈನಲ್ಲಿ ಅಭ್ಯಾಸ ಆರಂಭಿಸಿ ತನ್ನ ತಂದೆಯ ಆಸೆ ಈಡೇರಿಸಿದ್ದರು. ತನ್ನ ತಂದೆಗೆ ಎಡಗೈ ಬ್ಯಾಟ್ಸ್‌ಮನ್‌ಗಳೆಂದರೆ ತುಂಬಾ ಇಷ್ಟ ಎಂದು ಈ ಹಿಂದೆ ಹೇಳಿದ್ದರು. ಹಾಗಾಗಿ ಸ್ಮೃತಿ ಮತ್ತು ಶ್ರವಣ್ ಇಬ್ಬರೂ ಎಡಗೈ ಆಟಗಾರರಾದರು.

ಸ್ಮೃತಿಗೆ ದ್ರಾವಿಡ್‌ ಬ್ಯಾಟ್ ಗಿಫ್ಟ್

ಸ್ಮೃತಿ ಮಂಧಾನ ಜೀವನ ಬದಲಾಗಿದ್ದು ಅವರ ಸಹೋದರನಿಂದ ಮಾತ್ರವಲ್ಲ, ರಾಹುಲ್ ದ್ರಾವಿಡ್​ ಅವರು ಕೂಡ ಪಾತ್ರವಹಿಸಿದ್ದಾರೆ. ಈ ವಿಷಯವನ್ನು ಸ್ವತಃ ಸ್ಮೃತಿ ಸಂದರ್ಶನವೊಂದರಲ್ಲಿ ಹೇಳಿದ್ದರು. ಶ್ರವಣ್ ಅವರು ರಾಹುಲ್ ದ್ರಾವಿಡ್ ಸರ್ ಅವರೊಂದಿಗೆ ಬ್ಯಾಟ್ ನೀಡುವಂತೆ ಮನವಿ ಮಾಡಿದ್ದರು. ರಾಹುಲ್ ಸರ್ ಬ್ಯಾಟ್ ನೀಡಿದ್ದು ಮಾತ್ರವಲ್ಲದೆ ಸಹೋದರನ ಕೋರಿಕೆಯಂತೆ ಅದರ ಮೇಲೆ ತಮ್ಮ ಆಟೋಗ್ರಾಫ್​ ಕೂಡ ಬರೆದಿದ್ದರು ಎಂದು ಸ್ಮೃತಿ ಹೇಳಿದ್ದಾರೆ.

ಆಗ ಸಹೋದರ ಶ್ರವಣ್ ಆ ಬ್ಯಾಟ್ ಅನ್ನು ನನಗೆ ಉಡುಗೊರೆಯಾಗಿ ನೀಡಿದ್ದ. ಟೀಂ ಇಂಡಿಯಾಗೆ ಆಯ್ಕೆಯಾದ ಕೂಡಲೇ ಆ ಬ್ಯಾಟ್ ಹಿಡಿದು ಆಟವಾಡಲು ಆರಂಭಿಸಿದ್ದರಂತೆ. ಪ್ರಸ್ತುತ ಪಲಾಶ್ ಅವರ ಜೊತೆ 5 ವರ್ಷಗಳ ಡೇಟಿಂಗ್ ನಡೆಸುತ್ತಿರುವ ಮಂಧಾನ, ಇತ್ತೀಚೆಗೆ 5 ವರ್ಷಗಳ ಪ್ರೇಮ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದರು. ಈ ಬಗ್ಗೆ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದರು.

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ