logo
ಕನ್ನಡ ಸುದ್ದಿ  /  ಕ್ರಿಕೆಟ್  /  Watch: ಪಾಸ್​ಪೋರ್ಟ್ ಮರೆತು ಮತ್ತದೇ ತಪ್ಪು ಮಾಡಿದ ರೋಹಿತ್; ಕೊಹ್ಲಿ ಹೇಳಿದ್ದ ಹಳೆ ಮಾತನ್ನು ನೆನೆದ ಫ್ಯಾನ್ಸ್

WATCH: ಪಾಸ್​ಪೋರ್ಟ್ ಮರೆತು ಮತ್ತದೇ ತಪ್ಪು ಮಾಡಿದ ರೋಹಿತ್; ಕೊಹ್ಲಿ ಹೇಳಿದ್ದ ಹಳೆ ಮಾತನ್ನು ನೆನೆದ ಫ್ಯಾನ್ಸ್

Prasanna Kumar P N HT Kannada

Sep 18, 2023 04:40 PM IST

google News

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ.

    • Rohit Sharma: ಏಷ್ಯಾಕಪ್ ಟ್ರೋಫಿ ಗೆಲುವಿನ ಖುಷಿಯಲ್ಲಿದ್ದ ನಾಯಕ ರೋಹಿತ್ ಶರ್ಮಾ ಮತ್ತೆ ಹಳೆಯ ತಪ್ಪನ್ನೇ ಮರುಕಳಿಸಿರುವ ಮೂಲಕ ಹಾಸ್ಯಕ್ಕೆ ಗುರಿಯಾಗಿದ್ದಾರೆ.
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ.
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ.

ಶ್ರೀಲಂಕಾದ ಏಷ್ಯಾಕಪ್​ ಟೂರ್ನಿಯನ್ನು ಗೆದ್ದ ಕೆಲವೇ ಕ್ಷಣಗಳಲ್ಲಿ ಭಾರತದ ಆಟಗಾರರು ತವರಿಗೆ ಮರಳಿದ್ದಾರೆ. ರಾತ್ರೋ ರಾತ್ರಿಯೇ ದ್ವೀಪ ರಾಷ್ಟ್ರವನ್ನು ತೊರೆದು ಭಾರತಕ್ಕೆ ಬಂದಿಳಿದಿದ್ದಾರೆ. ಆದರೆ, ವಿಮಾನ ನಿಲ್ದಾಣಕ್ಕೆ ಬರುವ ಸಂದರ್ಭದಲ್ಲಿ ಟ್ರೋಫಿ ಗೆಲುವಿನ ಖುಷಿಯಲ್ಲಿದ್ದ ನಾಯಕ ರೋಹಿತ್ ಶರ್ಮಾ ಮತ್ತೆ ಹಳೆಯ ತಪ್ಪನ್ನೇ ಮರುಕಳಿಸಿರುವ ಮೂಲಕ ಹಾಸ್ಯಕ್ಕೆ ಗುರಿಯಾಗಿದ್ದಾರೆ. ಇದೇ ವೇಳೆ ಈ ಹಿಂದೆ ವಿರಾಟ್ ಕೊಹ್ಲಿ ಹೇಳಿದ ಮಾತನ್ನು ಅಭಿಮಾನಿಗಳನ್ನೂ ನೆನೆಸಿಕೊಂಡು ಟ್ರೋಲ್ ಮಾಡುತ್ತಿದ್ದಾರೆ.

ಪಾಸ್​ಪೋರ್ಟ್ ಮರೆತು ಬಂದ ರೋಹಿತ್​

ಐತಿಹಾಸಿಕ 8ನೇ ಟ್ರೋಫಿ ಗೆದ್ದ ನಂತರ ರೋಹಿತ್​, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ ಸೇರಿದಂತೆ ಹಲವರು ಸಮಯ ವ್ಯರ್ಥ ಮಾಡದೆ ಭಾರತಕ್ಕೆ ಹಿಂದಿರುಗಿದರು. ಇದಕ್ಕಾಗಿ ರಾತ್ರಿ ಹೋಟೆಲ್​ನಿಂದ ವಿಮಾನ ನಿಲ್ದಾಣಕ್ಕೆ ಬಸ್​​ನಲ್ಲಿ ಹೊರಡಲು ಸಿದ್ಧರಾದರು. ಆದರೆ ರೋಹಿತ್​​, ಬಸ್​ ಅನ್ನು ಕೆಲಹೊತ್ತು ತಡೆದರು. ಯಾಕೆಂದರೆ ತನ್ನ ಪಾಸ್​ಪೋರ್ಟ್​ ಅನ್ನು ಹೋಟೆಲ್​ ರೂಮ್​​ನಲ್ಲೇ ಮರೆತು ಬಂದಿದ್ದರು. ಹೋಟೆಲ್ ಅಧಿಕಾರಿಯೊಬ್ಬರು ರೋಹಿತ್​​ ರೂಮ್​ಗೆ ತೆರಳಿ ಪಾಸ್​ಪೂರ್ಟ್ ತಂದುಕೊಟ್ಟ ಬಳಿಕವೇ ಅಲ್ಲಿಂದ ಬಸ್ ಹೊರಟಿತು.

ರೋಹಿತ್​​ಗಿದೆ ಮರೆವಿನ ಕಾಯಿಲೆ

ರೋಹಿತ್​ ಶರ್ಮಾಗೆ ಮರೆಯುವ ಕಾಯಿಲೆ ಇದೆ. ಯಾವುದೇ ವಿಷಯವನ್ನೂ ಬೇಗನೇ ಮರೆಯುತ್ತಾರೆ. ಈ ಹಿಂದೆಯೂ ಹಲವು ಬಾರಿ ಏರ್​ಪೋರ್ಟ್​ಗೆ ಹೋಗುವ ಸಂದರ್ಭದಲ್ಲಿ ಪಾಸ್​​ಪೋರ್ಟ್​ ಅನ್ನು ಮರೆತಿದ್ದು ಇದೆ. ಒಂದು ಸಲ ಎಂಗೇಜ್ಮೆಂಟ್​ ರಿಂಗ್​ ಅನ್ನು ಹೋಟೆಲ್​ನಲ್ಲೇ ಮರೆತು ಬಂದಿದ್ದ ಘಟನೆಯನ್ನು ಕೊಹ್ಲಿ ಹೇಳಿದ್ದರು. ಇದೀಗ ಅದಕ್ಕೆ ಸಾಕ್ಷಿ ಎಂಬಂತೆ ನಿನ್ನೆ ಈ ಘಟನೆ ನಡೆದಿದೆ. ರೋಹಿತ್‌ಗೆ ಮರೆತುಹೋಗುವ ಅಭ್ಯಾಸ ಹೆಚ್ಚು ಕೊಹ್ಲಿ ತನ್ನ ಹಳೆಯ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದರು.

2017ರಲ್ಲೇ ಕೊಹ್ಲಿ ಈ ಬಗ್ಗೆ ಹೇಳಿದ್ದರು!

ಬ್ರೇಕ್‌ಫಾಸ್ಟ್ ವಿತ್ ಚಾಂಪಿಯನ್ಸ್ ಶೋನಲ್ಲಿ ಕೊಹ್ಲಿ, ರೋಹಿತ್​​ ಮರೆಯುವಿಕೆ ಕುರಿತು ಹೇಳಿದ್ದರು. ರೋಹಿತ್ ತುಂಬಾ ಮರೆವಿನ ಸ್ವಭಾವದ ವ್ಯಕ್ತಿ. ಯಾವುದನ್ನಾದರೂ ಬೇಗನೇ ಮರೆತುಬಿಡುತ್ತಾರೆ. ಹೋಟೆಲ್​​ ಖಾಲಿ ಮಾಡುವಾಗ ತನ್ನ ಮೊಬೈಲ್, ಐಪ್ಯಾಡ್ ಮತ್ತು ಪಾಸ್‌ಪೋರ್ಟ್ ಅನ್ನು ಮರೆತುಬಿಡುತ್ತಾರೆ. ಇಂತಹ ಪ್ರಸಂಗಗಳು ತುಂಬಾ ನಡೆದಿವೆ ಎಂದಿದ್ದರು. ಇದೀಗ ಏಷ್ಯಾಕಪ್ ಫೈನಲ್​ ನಂತರ ಸಹ ಇದೇ ರೀತಿ ನಡೆದಿದ್ದು ಇದಕ್ಕೆ ಸಾಕ್ಷಿ.

ಈ ಸಂದರ್ಶನಲ್ಲಿ ಬಹುಬೇಗನೇ ಮರೆತು ಹೋಗುವ ಆಟಗಾರ ಯಾರು ಎಂಬ ಪ್ರಶ್ನೆಯನ್ನು ಎದುರಿಸಿದ್ದ ಕೊಹ್ಲಿ, ತಕ್ಷಣವೇ ರೋಹಿತ್ ಹೆಸರು ಹೇಳಿದ್ದರು. 2017ರಲ್ಲಿ ವಿರಾಟ್ ಕೊಹ್ಲಿ ಈ ಬಗ್ಗೆ ಹೇಳಿದ್ದರು. ಆದರೆ ಆ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ರೋಹಿತ್ ಸಲ ಎಂಗೇಜ್​ಮೆಂಟ್ ರಿಂಗ್​ ಅನ್ನೇ ಮರೆತು ಬಂದಿದ್ದರು. ಆ ಬಳಿಕ ಬೇರೊಬ್ಬರು ತಂದು ಕೊಟ್ಟಿದ್ದರು ಎಂದು ಕೊಹ್ಲಿ ವಿವರಿಸಿದ್ದರು.

ಬೆಳ್ಳಂಬೆಳಗ್ಗೆ ಭಾರತಕ್ಕೆ ಬಂದ ಆಟಗಾರರು

ಏಷ್ಯಾಕಪ್ ಫೈನಲ್ ಬೇಗನೇ ಮುಗಿದ ಕಾರಣ ಭಾರತದ ಆಟಗಾರರು ಶ್ರೀಲಂಕಾದಲ್ಲಿ ಹೆಚ್ಚು ಸಮಯ ವ್ಯಯಿಸದೆ ನೇರವಾಗಿ ಏರ್​ಪೋರ್ಟ್​ಗೆ ಬಂದರು. 4 ಗಂಟೆ ಹೊತ್ತಿಗೆ ಭಾರತದ ಆಟಗಾರರು ಮುಂಬೈನ ಕಲಿನಾ ವಿಮಾನ ನಿಲ್ದಾಣಕ್ಕೆ ತಲುಪಿದ್ದರು. ರೋಹಿತ್, ಕೊಹ್ಲಿ, ಹಾರ್ದಿಕ್, ಗಿಲ್, ಇಶಾನ್ ಕಿಶನ್, ರಾಹುಲ್, ಜಸ್ಪ್ರೀತ್ ಬುಮ್ರಾ, ಸಿರಾಜ್ ಮತ್ತು ಇತರ ಆಟಗಾರರು ತಮ್ಮ ಮನೆಗೆ ತೆರಳಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ