logo
ಕನ್ನಡ ಸುದ್ದಿ  /  ಕ್ರಿಕೆಟ್  /  ಆತನಿಲ್ಲದೆ ಟೆಸ್ಟ್​ ಸರಣಿ ಅಪೂರ್ಣ; ಸ್ಟಾರ್​​​ ಕ್ರಿಕೆಟಿಗನ ಅನುಪಸ್ಥಿತಿ ಬಗ್ಗೆ ಹರ್ಭಜನ್ ಸಿಂಗ್

ಆತನಿಲ್ಲದೆ ಟೆಸ್ಟ್​ ಸರಣಿ ಅಪೂರ್ಣ; ಸ್ಟಾರ್​​​ ಕ್ರಿಕೆಟಿಗನ ಅನುಪಸ್ಥಿತಿ ಬಗ್ಗೆ ಹರ್ಭಜನ್ ಸಿಂಗ್

Prasanna Kumar P N HT Kannada

Feb 11, 2024 10:06 AM IST

google News

ಆತನಿಲ್ಲದೆ ಟೆಸ್ಟ್​ ಸರಣಿ ಅಪೂರ್ಣ; ಸ್ಟಾರ್​​​ ಕ್ರಿಕೆಟಿಗನ ಅನುಪಸ್ಥಿತಿ ಬಗ್ಗೆ ಹರ್ಭಜನ್ ಸಿಂಗ್

    • Harbhajan singh on Virat Kohli : ವಿರಾಟ್ ಕೊಹ್ಲಿ ಇಲ್ಲದ ಟೆಸ್ಟ್ ಪಂದ್ಯಗಳು ಅಪೂರ್ಣವಾಗಿವೆ. ಏಕೆಂದರೆ ಟೆಸ್ಟ್ ಕ್ರಿಕೆಟ್‌ ಬ್ರಾಂಡ್ ಆಗಿರುವ ಕೊಹ್ಲಿ, ದೀರ್ಘ ಸ್ವರೂಪಕ್ಕೆ ಹೊಸ ರೂಪ ಕೊಟ್ಟಿದ್ದೇ ಅವರು ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.
ಆತನಿಲ್ಲದೆ ಟೆಸ್ಟ್​ ಸರಣಿ ಅಪೂರ್ಣ; ಸ್ಟಾರ್​​​ ಕ್ರಿಕೆಟಿಗನ ಅನುಪಸ್ಥಿತಿ ಬಗ್ಗೆ ಹರ್ಭಜನ್ ಸಿಂಗ್
ಆತನಿಲ್ಲದೆ ಟೆಸ್ಟ್​ ಸರಣಿ ಅಪೂರ್ಣ; ಸ್ಟಾರ್​​​ ಕ್ರಿಕೆಟಿಗನ ಅನುಪಸ್ಥಿತಿ ಬಗ್ಗೆ ಹರ್ಭಜನ್ ಸಿಂಗ್

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ (India vs England Test Series) ಭಾರತ ತಂಡದಲ್ಲಿ ವಿರಾಟ್ ಕೊಹ್ಲಿ (Virat Kohli) ಅನುಪಸ್ಥಿತಿಯ ಬಗ್ಗೆ ಭಾರತೀಯ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ (Harbhajan Singh) ಮಾತನಾಡಿದ್ದಾರೆ. ಅವರಿಲ್ಲದೆ ಟೆಸ್ಟ್ ಪಂದ್ಯ ಅಪೂರ್ಣವೆಂದು ತೋರುತ್ತದೆ ಎಂದು ಹೇಳಿದ್ದಾರೆ. ಜನವರಿ 22ರಂದು ವೈಯಕ್ತಿಕ ಕಾರಣಗಳಿಂದ ಹಿಂದೆ ಸರಿದ ಕೊಹ್ಲಿ, ಕೊನೆಯ 3 ಪಂದ್ಯಗಳಿಗೆ ಮರಳುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಮತ್ತೆ ಅಲಭ್ಯರಾಗಿದ್ದಾರೆ.

ಕೊಹ್ಲಿ ಆಯ್ಕೆಗೆ ಅಲಭ್ಯರಾಗಿದ್ದಾರೆ ಎಂದು ಬಿಸಿಸಿಐ (BCCI) ತಿಳಿಸಿದೆ. ನಡೆಯುತ್ತಿರುವ ತವರಿನ ಸರಣಿಯಿಂದ ಕೊಹ್ಲಿ ಅನುಪಸ್ಥಿತಿಯ ಬಗ್ಗೆ ಹರ್ಭಜನ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್​ನಲ್ಲಿ ಅಪ್‌ಲೋಡ್ ಮಾಡಿದ ವಿಡಿಯೊದಲ್ಲಿ ಮಾತನಾಡಿದ್ದು, ವಿರಾಟ್ ಕುಟುಂಬದೊಂದಿಗೆ ಎಲ್ಲವೂ ಸರಿಯಾಗಿರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಕೋರಿದ್ದಾರೆ.

ಕೊಹ್ಲಿ ಇಲ್ಲದ ಟೆಸ್ಟ್ ಅಪೂರ್ಣ ಎಂದ ಭಜ್ಜಿ

ವಿರಾಟ್ ಕೊಹ್ಲಿ ಇನ್ನೂ ಆಯ್ಕೆಗೆ ಅಲಭ್ಯರಾಗಿದ್ದಾರೆ. ಅಲ್ಲಿ ಏನಾಗಿದೆ ಎಂಬುದು ಯಾರಿಗೂ ತಿಳಿಯದ ಕಾರಣ ವಿರಾಟ್ ಅವರ ಕುಟುಂಬ ಮತ್ತು ಎಲ್ಲರೂ ಚೆನ್ನಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ. ಕೊಹ್ಲಿ ಶೀಘ್ರದಲ್ಲೇ ಮರಳುತ್ತಾರೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ, ಅವರಿಲ್ಲದೆ ಟೆಸ್ಟ್ ಪಂದ್ಯಗಳು ಅಪೂರ್ಣವಾಗಿವೆ. ಟೆಸ್ಟ್ ಕ್ರಿಕೆಟ್‌ ಬ್ರಾಂಡ್ ಆಗಿರುವ ಕೊಹ್ಲಿ, ದೀರ್ಘ ಸ್ವರೂಪಕ್ಕೆ ಹೊಸ ರೂಪ ಕೊಟ್ಟು ಮುಂದಕ್ಕೆ ಕೊಂಡೊಯ್ಯಲು ಪ್ರಮುಖ ಕಾರಣರಾಗಿದ್ದಾರೆ ಎಂದಿದ್ದಾರೆ.

ಎಲ್ಲವೂ ಸರಿಯಾಗಲಿದೆ ಎಂದ ಮಾಜಿ ಸ್ಪಿನ್ನರ್

ಮುಂದಿನ 3 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಕಾಣಿಸಿಕೊಳ್ಳುವುದಿಲ್ಲ. ಆದರೆ ಎಲ್ಲವೂ ಸರಿಯಾಗಿ ನಡೆಯುತ್ತದೆ. ಶೀಘ್ರದಲ್ಲೇ ಮರಳುತ್ತಾರೆ ಎಂದು ನಾವು ಭಾವಿಸುತ್ತೇವೆ. ಮೊದಲಿನಂತೆ ಹಿಂತಿರುಗಲಿ. ತನ್ನ ಅಭಿಮಾನಿಗಳಿಗೆ ಮನರಂಜನೆ ನೀಡಲಿ. ಅವರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹರ್ಭಜನ್ ಸಿಂಗ್ ಕೋರಿದ್ದಾರೆ. ಕೊಹ್ಲಿ ಇದೇ ಮೊದಲ ಬಾರಿಗೆ ತಮ್ಮ ವೃತ್ತಿಜೀವನದಲ್ಲಿ ತವರಿನಲ್ಲಿ ನಡೆದ ಟೆಸ್ಟ್​​ ಸರಣಿಯನ್ನು ಕಳೆದುಕೊಳ್ಳುತ್ತಿದ್ದಾರೆ.

ವಿರಾಟ್ ಕೊಹ್ಲಿ ಟೆಸ್ಟ್​ ಕ್ರಿಕೆಟ್​ ಪ್ರದರ್ಶನ

35 ವರ್ಷದ ಬಲಗೈ ಬ್ಯಾಟರ್ ಜೂನ್ 20, 2011ರಂದು ವೆಸ್ಟ್ ಇಂಡೀಸ್ ವಿರುದ್ಧ ಕಿಂಗ್‌ಸ್ಟನ್‌ನಲ್ಲಿ ಭಾರತ ಪರ ಟೆಸ್ಟ್‌ಗೆ ಪದಾರ್ಪಣೆ ಮಾಡಿದರು. ವೃತ್ತಿಜೀವನದಲ್ಲಿ ಇದುವರೆಗೆ ಒಟ್ಟು 113 ಟೆಸ್ಟ್‌ಗಳಲ್ಲಿ ಆಡಿದ್ದು, 29 ಶತಕ ಮತ್ತು 30 ಅರ್ಧಶತಕ ಸೇರಿ 8848 ರನ್ ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ಸರಾಸರಿ 49.15 ಆಗಿದೆ. ಕೊಹ್ಲಿ ಟೆಸ್ಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಭಾರತೀಯ ನಾಯಕ. ಅವರ ನಾಯಕತ್ವದಲ್ಲಿ 68 ಟೆಸ್ಟ್‌ಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದು, 40ರಲ್ಲಿ ಗೆಲುವು ಸಾಧಿಸಿದ್ದಾರೆ.

ಈಗಾಗಲೇ ಮೊದಲ ಎರಡು ಪಂದ್ಯಗಳಲ್ಲಿ ಇಂಗ್ಲೆಂಡ್ ಮತ್ತು ಭಾರತ ತಲಾ ಒಂದೊಂದು ಗೆಲುವು ಸಾಧಿಸಿವೆ. ಉಭಯ ತಂಡಗಳ ನಡುವೆ 3ನೇ ಟೆಸ್ಟ್ ಪಂದ್ಯ ರಾಜ್‌ಕೋಟ್‌ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ನಡೆಯಲಿದೆ. ಫೆಬ್ರವರಿ 15ರ ಗುರುವಾರದಂದು ಪಂದ್ಯ ಆರಂಭವಾಗಲಿದೆ. ಫೆಬ್ರವರಿ 23 ರಿಂದ ನಾಲ್ಕನೇ ಟೆಸ್ಟ್ ಪಂದ್ಯ ರಾಂಚಿಯಲ್ಲಿ ಜರುಗಲಿದೆ. ಐದನೇ ಟೆಸ್ಟ್​ ಮಾರ್ಚ್​ 7ರಿಂದ ಪ್ರಾರಂಭವಾಗಲಿದ್ದು, ಧರ್ಮಶಾಲಾದಲ್ಲಿ ನಡೆಯಲಿದೆ.

ಇಂಗ್ಲೆಂಡ್ ವಿರುದ್ಧದ ಕೊನೆಯ 3 ಟೆಸ್ಟ್​​ಗಳಿಗೆ ಭಾರತ ತಂಡ ಪ್ರಕಟ

ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ಕೆಎಲ್ ರಾಹುಲ್*, ರಜತ್ ಪಾಟೀದಾರ್, ಸರ್ಫರಾಜ್ ಖಾನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೇಜಾ*, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್​ ಯಾದವ್, ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ಆಕಾಶ್ ದೀಪ್.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ