Imam-ul-Haq: ನಮ್ಮ ತಂಡವನ್ನು ನೋಡಿದ್ರೆ ಜನ ಹೆದರುತ್ತಾರೆ; ಪಾಕ್ ಓಪನರ್ ಇಮಾಮ್ ಉಲ್ ಹಕ್ ಪ್ರಚೋದನಕಾರಿ ಹೇಳಿಕೆ
Aug 25, 2023 03:28 PM IST
ಪಾಕಿಸ್ತಾನದ ಆರಂಭಿಕ ಆಟಗಾರ ಇಮಾಮ್ ಉಲ್ ಹಕ್.
- Asia Cup 2023: ನಮ್ಮ ತಂಡವನ್ನು ನೋಡಿ ಇತರ ತಂಡಗಳು ಹೆದರುತ್ತವೆ ಎಂದು ಆರಂಭಿಕ ಆಟಗಾರ ಇಮಾಮ್-ಉಲ್-ಹಕ್ (Imam-ul-Haq) ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ.
ಏಷ್ಯಾಕಪ್ ಟೂರ್ನಿಗೆ (Asia Cup 2023) ದಿನಗಣನೆ ಆರಂಭವಾಗಿದೆ. ಆಗಸ್ಟ್ 30ರಿಂದ ಬಹುನಿರೀಕ್ಷಿತ ಟೂರ್ನಿ ಪ್ರಾರಂಭಗೊಳ್ಳಲಿದೆ. ಭಾರತ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಆಟಗಾರರಿಂದ ಯಾವುದೇ ಪ್ರತಿಕ್ರಿಯೆ ನೀಡದಿದ್ದರೂ ಪಾಕಿಸ್ತಾನದ ಆಟಗಾರರು ಮೈಂಡ್ ಗೇಮ್ ಆರಂಭಿಸಿದ್ದಾರೆ. ನಮ್ಮ ತಂಡವನ್ನು ನೋಡಿ ಇತರ ತಂಡಗಳು ಹೆದರುತ್ತವೆ ಎಂದು ಆರಂಭಿಕ ಆಟಗಾರ ಇಮಾಮ್-ಉಲ್-ಹಕ್ (Imam-ul-Haq) ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ.
ಸೆಪ್ಟೆಂಬರ್ 2ರಂದು 2023ರ ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಣಸಾಟ ನಡೆಸಲಿವೆ. ಲೀಗ್ ಹಂತದ ನಂತರ ಸೂಪರ್-4 ಹಂತದಲ್ಲೂ ಮತ್ತೊಮ್ಮೆ ಕಾದಾಟ ನಡೆಸಲಿವೆ. ಒಂದು ವೇಳೆ ಫೈನಲ್ ಪ್ರವೇಶಿಸಿದರೂ ಮೂರನೇ ಬಾರಿಗೆ ಏಷ್ಯಾಕಪ್‌ನಲ್ಲಿ ಮುಖಾಮುಖಿಯಾಗಲಿವೆ. ಅಲ್ಲದೆ, ಅಕ್ಟೋಬರ್ 5ರಿಂದ ಶುರುವಾಗುವ ಏಕದಿನ ವಿಶ್ವಕಪ್ನಲ್ಲಿ (ODI World Cup 2023) ಭಾರತ ಮತ್ತು ಪಾಕಿಸ್ತಾನ ತಂಡಗಳು ಅಕ್ಟೋಬರ್ 14ರಂದು ಮುಖಾಮುಖಿಯಾಗಲಿವೆ.
ಪ್ರಚೋದನಾಕಾರಿ ಹೇಳಿಕೆ ನೀಡಿದ ಇಮಾಮ್
ಏಷ್ಯಾಕಪ್ ಟೂರ್ನಿಯಲ್ಲಿ ಉಭಯ ತಂಡಗಳ ಮುಖಾಮುಖಿಗಿಂತ ಈ ವಿಶ್ವಕಪ್ ಪಂದ್ಯಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಇದರ ನಡುವೆ ಪಾಕಿಸ್ತಾನದ ಆಟಗಾರ ಸಂಚಲನ ಹೇಳಿಕೆ ನೀಡಿದ್ದು, ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ಭಾರತ ತಂಡವನ್ನು ಅವರದ್ದೇ ತವರು ನೆಲದಲ್ಲಿ ಎದುರಿಸಲು ಪಾಕಿಸ್ತಾನ ಅತ್ಯಂತ ಉತ್ಸಾಹದಿಂದ ಕಾಯುತ್ತಿದೆ. ವರ್ಲ್ಡ್ಕಪ್ನಲ್ಲಿ ಪಾಕ್ ಸಾಮರ್ಥ್ಯ ಪ್ರದರ್ಶಿಸಲು ದಿಟ್ಟತನ ತೋರಿದ್ದಾರೆ.
ಈ ಬಗ್ಗೆ ಮಾತನಾಡಿರುವ ಇಮಾಮ್-ಉಲ್-ಹಕ್, ಪ್ರಸ್ತುತ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿ ಕುರಿತು ಯೋಚಿಸಬೇಕು. ಈಗಲೇ ವಿಶ್ವಕಪ್ ಕುರಿತು ಯೋಚಿಸಬಾರದು ಎಂದುಕೊಳ್ಳುತ್ತೇನೆ. ಆದರೆ, ನನ್ನೆಲ್ಲಾ ಆಲೋಚನೆಗಳು ಆ ಕಡೆಯೇ ಹೆಚ್ಚು ಗಮನ ಕೊಡುತ್ತವೆ. ಮಾನಸಿಕ ಮತ್ತು ದೈಹಿಕವಾಗಿ ಏಕದಿನ ವಿಶ್ವಕಪ್ ಕಡೆಯೇ, ಎಲ್ಲಾ ರೀತಿಯಲ್ಲೂ ತಯಾರಿ ನಡೆಸುತ್ತಿದ್ದೇವೆ ಎಂದಿದ್ದಾರೆ.
ಜನ ಭಯ ಪಡುತ್ತಾರೆ!
ನಿಜ ಹೇಳಬೇಕೆಂದರೆ ನನ್ನ ಪ್ರಕಾರ, ಪಾಕಿಸ್ತಾನ ಏಕದಿನ ತಂಡವನ್ನು ನೋಡಿ ಜನರು ಭಯಪಡುತ್ತಾರೆ. ನಮ್ಮ ಏಕದಿನ ಕ್ರಿಕೆಟ್ ತಂಡವು ಅದ್ಭುತ ಪ್ರದರ್ಶನ ನೀಡಿದೆ. ಅದ್ಭುತ ಗೆಲುವುಗಳನ್ನು ಸಾಧಿಸಿದ್ದೇವೆ. ನಮ್ಮಲ್ಲಿ ಬಲಿಷ್ಠವಾದ ಬೌಲಿಂಗ್ ಲೈನಪ್ ಇದೆ. ಹಾಗೆಯೇ ವರ್ಲ್ಡ್ ಕ್ಲಾಸ್ ಬ್ಯಾಟರ್ಗಳು ಇದ್ದಾರೆ. ಏಕದಿನ ಕ್ರಿಕೆಟ್ನಲ್ಲಿ ನಮ್ಮ ತಂಡವು ಅತ್ಯುತ್ತಮವಾದದ್ದೆಂದು ನಂಬುತ್ತೇನೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಮ್ಮದ್ದು ಬಲಿಷ್ಠ ತಂಡ
ನಾನು ಈವರೆಗೂ 60 ಏಕದಿನ ಆಡಿದ್ದೇನೆ. ಫಕಾರ್ 70, ಬಾಬರ್ 100 ಏಕದಿನ ಪಂದ್ಯಗಳನ್ನು ಆಡಿದ್ದೇವೆ. ನಸೀಂ ಶಾ, ಶಾಹೀನ್ ಶಾ ಅಫ್ರಿದಿ, ಹ್ಯಾರಿಸ್ ರವೂಫ್, ವಾಸೀಂ ಜೂನಿಯನ್, ಶಾದಾಬ್, ನವಾಜ್, ಒಸಾಮ ಮಿರ್, ಇಫ್ತಿಕಾರ್ ಅಹ್ಮದ್, ಸಲ್ಮಾನ್ ಅಲಿ ಆಘಾ, ರಿಜ್ವಾನ್.. ನಮ್ಮ ತಂಡದಲ್ಲಿ ಎಲ್ಲರೂ ಮ್ಯಾಚ್ ವಿನ್ನರ್ಗಳೇ, ಗೇಮ್ ಚೇಂಜರ್ಗಳೇ ಎಂದು ಇಮಾಮ್ ಉಲ್ ಹಕ್, ತಮ್ಮ ತಂಡ ಬಲಿಷ್ಠವೆಂದು ಆ ಮೂಲಕ ಹೇಳಿದ್ದಾರೆ.
ಎಲ್ಲರಿಗೂ ಅವರವರ ಪಾತ್ರದ ಬಗ್ಗೆ ಸ್ಪಷ್ಟನೆ ಇದೆ
ನಾನು ತಂಡದಲ್ಲಿದ್ದೇನೆಂದು ನಮ್ಮ ತಂಡವು ಬಲಿಷ್ಠ ಎಂದು ಈ ಮಾತು ಹೇಳುತ್ತಿಲ್ಲ. ನಾನು ತಂಡದಲ್ಲಿ ಭಾಗವಾಗದಿದ್ದರೂ, ನಮ್ಮ ತಂಡವೇ ಬಲಿಷ್ಠ ಎಂದು ಒಪ್ಪಿಕೊಳ್ಳುತ್ತೇನೆ. ನಮಗೆ ನೀಡಿರುವ ಪ್ರತಿ ಪಾತ್ರದ ಬಗ್ಗೆಯೂ ಸ್ಪಷ್ಟನೆ ಇದೆ. ಸುಲಭವಾಗಿ ವಿಶ್ವಕಪ್ ಗೆಲ್ಲುತ್ತೇವೆ ಎಂದು ಭಾವಿಸುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ ಪಾಕಿಸ್ತಾನದ ಆರಂಭಿಕ ಆಟಗಾರ.