logo
ಕನ್ನಡ ಸುದ್ದಿ  /  ಕ್ರಿಕೆಟ್  /  ಅಫ್ಘನ್ ವಿರುದ್ಧದ ಅಂತಿಮ ಟಿ20 ಪಂದ್ಯಕ್ಕೆ ನಿರೀಕ್ಷೆ ಹೆಚ್ಚಿಸಿರುವ ಭಾರತದ ಟಾಪ್-5 ಆಟಗಾರರು

ಅಫ್ಘನ್ ವಿರುದ್ಧದ ಅಂತಿಮ ಟಿ20 ಪಂದ್ಯಕ್ಕೆ ನಿರೀಕ್ಷೆ ಹೆಚ್ಚಿಸಿರುವ ಭಾರತದ ಟಾಪ್-5 ಆಟಗಾರರು

Prasanna Kumar P N HT Kannada

Jan 17, 2024 11:22 AM IST

google News

ಭಾರತ ತಂಡ.

    • India vs Afghanistan 3rd T20I: ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುವ ಅಫ್ಘಾನಿಸ್ತಾನ ವಿರುದ್ಧದ 3ನೇ ಟಿ20 ಪಂದ್ಯದಲ್ಲೂ ಗೆಲುವು ದಾಖಲಿಸಿ ವೈಟ್​ವಾಶ್ ಮಾಡಿಕೊಳ್ಳುವ ಗುರಿಯಲ್ಲಿದೆ ಭಾರತ. ಆದರೆ ಈ ಪಂದ್ಯಕ್ಕೂ ಮುನ್ನ ನಿರೀಕ್ಷೆ ಹುಟ್ಟು ಹಾಕಿರುವ ಟೀಮ್ ಇಂಡಿಯಾದ ಟಾಪ್-5 ಆಟಗಾರರು ಅನ್ನೋದನ್ನ ನೋಡೋಣ.
ಭಾರತ ತಂಡ.
ಭಾರತ ತಂಡ.

ಪ್ರವಾಸಿ ಅಫ್ಘಾನಿಸ್ತಾನ ತಂಡದ ವಿರುದ್ಧ ಮೊಹಾಲಿ, ಇಂದೋರ್​ನಲ್ಲಿ ನಡೆದ ಎರಡು ಟಿ20 ಪಂದ್ಯಗಳಲ್ಲಿ ಗೆದ್ದಿರುವ ಭಾರತ, ಮೂರನೇ ಟಿ20 ಪಂದ್ಯದಲ್ಲೂ (India vs Afghanistan 3rd T20I) ಗೆಲುವಿನ ಗುರಿಯಲ್ಲಿದೆ. ಬ್ಯಾಟ್ಸ್​​ಮನ್​​ಗಳ ಸ್ವರ್ಗ ಎಂದೇ ಕರೆಸಿಕೊಂಡಿರುವ ಚಿನ್ನಸ್ವಾಮಿ ಮೈದಾನದಲ್ಲಿ ರನ್ ಮಳೆ ನಿರೀಕ್ಷೆ ಮಾಡಲಾಗಿದೆ. ಆದರೆ ಈ ಪಂದ್ಯದಲ್ಲಿ ನಿರೀಕ್ಷೆ ಹುಟ್ಟಿಸಿರುವ ಭಾರತದ ಟಾಪ್-5 ಆಟಗಾರರು ಯಾರು? ಇಲ್ಲಿದೆ ವಿವರ.

ಯಶಸ್ವಿ ಜೈಸ್ವಾಲ್

ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್, ರೋಹಿತ್​ ಶರ್ಮಾ ಅವರ ವೈಫಲ್ಯದ ನಡುವೆಯೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಅಫ್ಘನ್ ಬೌಲರ್​ಗಳಿಗೆ ಬೆಂಡೆತ್ತಿ ಭರ್ಜರಿ ಅರ್ಧಶತಕ ಸಿಡಿಸಿದ್ದೇ ಅದಕ್ಕೆ ಸಾಕ್ಷಿ. ಮೊದಲ ಪಂದ್ಯದಲ್ಲಿ ಅಲಭ್ಯರಾಗಿದ್ದ ಜೈಸ್ವಾಲ್, ಎರಡನೇ ಟಿ20ಯಲ್ಲಿ ಅಬ್ಬರದ 68 ರನ್ ಗಳಿಸಿದ್ದರು. ಹಾಗಾಗಿ, ಅಂತಿಮ ಟಿ20 ಪಂದ್ಯಕ್ಕೆ ನಿರೀಕ್ಷೆ ಹೆಚ್ಚಾಗಿದೆ.

ವಿರಾಟ್ ಕೊಹ್ಲಿ

14 ತಿಂಗಳ ನಂತರ ಟಿ20 ಕ್ರಿಕೆಟ್​ಗೆ ಮರಳಿದ ಕೊಹ್ಲಿ ಮೊದಲ ಟಿ20ಯಲ್ಲಿ ಆಡಿರಲಿಲ್ಲ. ವೈಯಕ್ತಿಕ ಕಾರಣಗಳಿಂದ ರಜೆ ಪಡೆದಿದ್ದ ವಿರಾಟ್, ಎರಡನೇ ಪಂದ್ಯದಲ್ಲಿ ಕಣಕ್ಕಿಳಿದು ಅಮೋಘ 29 ರನ್ ಬಾರಿಸಿದರು. ಆಡಿದ್ದು ಕೆಲವೇ ಹೊತ್ತಾದರೂ ಎಲ್ಲರನ್ನೂ ಆಕರ್ಷಿಸಿತು. ಇದೀಗ ತನ್ನ ಫೇವರಿಟ್ ಮೈದಾನವಾದ ಚಿನ್ನಸ್ವಾಮಿಯಲ್ಲಿ ಅಬ್ಬರಿಸುವ ನಿರೀಕ್ಷೆ ದುಪ್ಪಟ್ಟಾಗಿದೆ. ಹಲವು ದಾಖಲೆಗಳನ್ನು ಬರೆಯಲು ಸಿದ್ಧಗೊಂಡಿದ್ದಾರೆ.

ಶಿವಂ ದುಬೆ

ಮೊದಲ 2 ಪಂದ್ಯಗಳಲ್ಲೂ ಸತತ ಅರ್ಧಶತಕ ಸಿಡಿಸಿದ ದುಬೆ, ಬೌಲಿಂಗ್​ನಲ್ಲೂ ಕಮಾಲ್ ಮಾಡಿದ್ದರು. ಮೊದಲ ಟಿ20ಯಲ್ಲಿ 60 ರನ್, ಎರಡನೇ ಪಂದ್ಯದಲ್ಲಿ 63 ರನ್ ಬಾರಿಸಿದ್ದರು. ಬೌಲಿಂಗ್​ನಲ್ಲಿ 2 ವಿಕೆಟ್ ಪಡೆದಿದ್ದಾರೆ. ಟಿ20 ವಿಶ್ವಕಪ್ ಟೂರ್ನಿಗೆ ಆಯ್ಕೆಯ ರೇಸ್​​ಗಿಳಿದಿರುವ ದುಬೆ ಮೇಲೆ ನಿರೀಕ್ಷೆ ಗಗನಕ್ಕೇರಿದೆ.

ಅಕ್ಷರ್ ಪಟೇಲ್

ತವರಿನ ಮೈದಾನಗಳಲ್ಲಿ ಮ್ಯಾಜಿಕ್ ನಡೆಸುವ ಅಕ್ಷರ್ ಪಟೇಲ್, ಮತ್ತೊಮ್ಮೆ ವಿಕೆಟ್ ಬೇಟೆಗೆ ಸಜ್ಜಾಗಿದ್ದಾರೆ. ಮೊದಲ ಎರಡು ಟಿ20 ಪಂದ್ಯಗಳಲ್ಲಿ ಅತ್ಯಂತ ಕಡಿಮೆ ಎಕಾನಮಿಯೊಂದಿಗೆ ಎರಡೆರಡು ವಿಕೆಟ್ ಕಿತ್ತಿರುವ ಅಕ್ಷರ್​, ಚಿನ್ನಸ್ವಾಮಿಯಲ್ಲೂ ಅಫ್ಘನ್​ಗೆ ಸವಾಲಾಗುವ ನಿರೀಕ್ಷೆ ಇದೆ.

ಅರ್ಷದೀಪ್ ಸಿಂಗ್

ಎಡಗೈ ವೇಗಿ ಅರ್ಷದೀಪ್ ಸಿಂಗ್ ಅವರು ಖಡಕ್ ಬೌಲಿಂಗ್ ನಡೆಸುತ್ತಿದ್ದಾರೆ. ಸೌತ್ ಆಫ್ರಿಕಾ ನೆಲದಲ್ಲೂ ಮಿಂಚಿದ್ದ ಅರ್ಷದೀಪ್ ಅವರು ಅಂತಿಮ ಚುಟುಕು ಪಂದ್ಯದಲ್ಲೂ ವಿಕೆಟ್ ಬೇಟೆಗೆ ಸಜ್ಜಾಗಿದ್ದಾರೆ. ಎರಡು ಪಂದ್ಯಗಳಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶಿಸಿ ಮೂರು ವಿಕೆಟ್ ಪಡೆದಿರುವ ವೇಗಿ, ಮತ್ತೊಮ್ಮೆ ಮಿಂಚುವ ನಿರೀಕ್ಷೆಯಲ್ಲಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ