logo
ಕನ್ನಡ ಸುದ್ದಿ  /  ಕ್ರಿಕೆಟ್  /  ಅಂಡರ್​-19 ವಿಶ್ವಕಪ್; ಕಣ್ಣೀರಿಡುತ್ತಿದ್ದ ಸೌತ್ ಆಫ್ರಿಕಾ ನಾಯಕನನ್ನು ಬಿಗಿದಪ್ಪಿ ಸಂತೈಸಿದ ಭಾರತದ ಕ್ಯಾಪ್ಟನ್

ಅಂಡರ್​-19 ವಿಶ್ವಕಪ್; ಕಣ್ಣೀರಿಡುತ್ತಿದ್ದ ಸೌತ್ ಆಫ್ರಿಕಾ ನಾಯಕನನ್ನು ಬಿಗಿದಪ್ಪಿ ಸಂತೈಸಿದ ಭಾರತದ ಕ್ಯಾಪ್ಟನ್

Prasanna Kumar P N HT Kannada

Feb 07, 2024 02:19 PM IST

ಕಣ್ಣೀರಿಡುತ್ತಿದ್ದ ಸೌತ್ ಆಫ್ರಿಕಾ ನಾಯಕನನ್ನು ಬಿಗಿದಪ್ಪಿ ಸಂತೈಸಿದ ಭಾರತದ ಕ್ಯಾಪ್ಟನ್

    • Uday Saharan - Juan James : ಅಂಡರ್​-19 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಸೋತ ಬಳಿಕ ಕಣ್ಣೀರಿಡುತ್ತಿದ್ದ ಸೌತ್ ಆಫ್ರಿಕಾ ತಂಡದ ನಾಯಕ ಜುವಾನ್ ಜೇಮ್ಸ್ ಅವರನ್ನು ಭಾರತ ತಂಡದ ನಾಯಕ ಉದಯ್ ಸಹರಾನ್ ಬಿಗಿದಪ್ಪಿ ಸಂತೈಸಿದರು.
ಕಣ್ಣೀರಿಡುತ್ತಿದ್ದ ಸೌತ್ ಆಫ್ರಿಕಾ ನಾಯಕನನ್ನು ಬಿಗಿದಪ್ಪಿ ಸಂತೈಸಿದ ಭಾರತದ ಕ್ಯಾಪ್ಟನ್
ಕಣ್ಣೀರಿಡುತ್ತಿದ್ದ ಸೌತ್ ಆಫ್ರಿಕಾ ನಾಯಕನನ್ನು ಬಿಗಿದಪ್ಪಿ ಸಂತೈಸಿದ ಭಾರತದ ಕ್ಯಾಪ್ಟನ್

ಅಂಡರ್-19 ವಿಶ್ವಕಪ್​ನಲ್ಲಿ (U19 World Cup 2024) ಭಾರತ ತಂಡ (Team India) ಇತಿಹಾಸ ಸೃಷ್ಟಿಸಿದೆ. ಸೆಮಿ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು (South Afric) ಸೋಲಿಸಿದ ಭಾರತ ಸತತ 5ನೇ ಬಾರಿಗೆ ಟೂರ್ನಿಯ ಫೈನಲ್‌ಗೆ ತಲುಪಿದೆ. ಆ ಮೂಲಕ ಈ ದಾಖಲೆ ಬರೆದ ಕ್ರಿಕೆಟ್​ ಇತಿಹಾಸದ ಮೊದಲ ಪುರುಷರ ತಂಡ ಎಂಬ ದಾಖಲೆಗೆ ಪಾತ್ರವಾಗಿದೆ. ಫೆಬ್ರವರಿ 11ರಂದು ಫೈನಲ್‌ ನಡೆಯಲಿದ್ದು, ದಾಖಲೆಯ 6ನೇ ಬಾರಿಗೆ ಟ್ರೋಫಿ ಗೆಲ್ಲಲು ಯುವ ಭಾರತ ಸಜ್ಜಾಗುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಒಂದು ಅವಕಾಶ ಕೊಡಿ ಎಂದು ಅಂಗಾಲಾಚಿದ್ದಾತ ಈಗ ಆರ್‌ಸಿಬಿ ಲಕ್ಕೀ ಚಾರ್ಮ್; ನಡೆದು ಬಂದ ಹಾದಿ ನೆನೆದು ಕಣ್ಣೀರಿಟ್ಟ ಸ್ವಪ್ನಿಲ್‌ ಸಿಂಗ್

ನೀನು ನಮ್ಮ ಪ್ರಮುಖ ಬೌಲರ್‌ ಎಂದು ಮೊದಲ ದಿನವೇ ಆರ್‌ಸಿಬಿ ಹೇಳಿತ್ತು; ಕಂಬ್ಯಾಕ್‌ ಕುರಿತು ಯಶ್‌ ದಯಾಳ್ ಮಾತು

ಆರ್‌ಸಿಬಿ vs ಆರ್‌ಆರ್‌, ಕೆಕೆಆರ್‌ vs ಎಸ್‌ಆರ್‌ಎಚ್‌ ಪ್ಲೇಆಫ್‌ ಪಂದ್ಯಗಳಿಗೆ ಮಳೆ ಆತಂಕ ಇದೆಯಾ? ಅಹಮದಾಬಾದ್‌ ಹವಾಮಾನ ವರದಿ ಹೀಗಿದೆ

ಐಪಿಎಲ್‌ ಪ್ಲೇಆಫ್ ಪಂದ್ಯಗಳು ಮಳೆಯಿಂದ ರದ್ದಾದರೆ ಮುಂದೇನು; ಮೀಸಲು ದಿನ ಇದೆಯೇ? ನಿಯಮಗಳು ಹೀಗಿವೆ

ಆತಿಥೇಯ ದಕ್ಷಿಣ ಆಫ್ರಿಕಾ ಟೂರ್ನಮೆಂಟ್‌ನಿಂದ ಹೊರಬಿದ್ದ ಬೆನ್ನಲ್ಲೇ ತಂಡದ ಆಟಗಾರರು, ತಮ್ಮ ತವರು ಪ್ರೇಕ್ಷಕರ ಮುಂದೆ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ ಎಂಬ ಕಾರಣಕ್ಕೆ ನಿರಾಸೆಗೊಂಡು ಕಣ್ಣೀರು ಹಾಕಿದರು. ಭಾರತ 2 ವಿಕೆಟ್‌ಗಳ ಗೆಲುವು ಸಾಧಿಸುತ್ತಿದ್ದಂತೆ ಕಂಗಾಲಾದ ಆಟಗಾರರು ಕಣ್ಣೀರು ಹಾಕಿದರು. ಇದರ ವಿಡಿಯೋ, ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಬಿಗಿದಪ್ಪಿ ಸಂತೈಸಿದ ಉದಯ್ ಸಹರಾನ್

ನಾಕೌಟ್ ಆದ ನಂತರ ಸೌತ್ ಆಫ್ರಿಕಾ ತಂಡದ ನಾಯಕ ಜುವಾನ್ ಜೇಮ್ಸ್ ಗಳಗಳನೆ ಕಣ್ಣೀರಿಡುತ್ತಿದ್ದರು. ಆಗ ತವರಿನ ಪ್ರೇಕ್ಷಕರ ಮುಂದೆ ಅಸಹನೀಯವಾಗಿದ್ದ ಜೇಮ್ಸ್​ ಅವರನ್ನು ಭಾರತ ತಂಡದ ನಾಯಕ ಉದಯ್ ಸಹರಾನ್, ಬಿಗಿದಪ್ಪಿ ಸಂತೈಸಿದರು. ಆ ಮೂಲಕ ಕ್ರೀಡಾಭಿಮಾನಿಗಳ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಸಹರಾನ್ ದಕ್ಷಿಣ ಆಫ್ರಿಕಾದ ಅಂಡರ್​-19 ನಾಯಕನನ್ನು ತಬ್ಬಿ ಸಮಾಧಾನಪಡಿಸುತ್ತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನಾಯಕ ಜೇಮ್ಸ್ ಮಾತ್ರವಲ್ಲ, ದಕ್ಷಿಣ ಆಫ್ರಿಕಾ ತಂಡದ ಬಹುತೇಕ ಆಟಗಾರರು ಕಣ್ಣೀರು ಹಾಕಿದರು. ಹಿಂದಿನ ವಿಶ್ವಕಪ್ ಅವಧಿಯಲ್ಲೂ ಸೆಮಿಫೈನಲ್​ನಲ್ಲೇ ಮುಗ್ಗರಿಸಿದ್ದ ಸೌತ್ ಆಫ್ರಿಕಾ, ಏಳನೇ ಸ್ಥಾನ ಪಡೆದಿತ್ತು. ಆದರೆ ಈ ಬಾರಿ 2014ರ ನಂತರ ಎರಡನೇ ಬಾರಿಗೆ ಟ್ರೋಫಿ ಎತ್ತಿ ಹಿಡಯಲು ಫೈನಲ್ ಪ್ರವೇಶಿಸುವ ಅವಕಾಶ ಕಳೆದುಕೊಂಡಿತು. ಭಾರತ ತಂಡ ರೋಚಕ ಗೆಲುವು ದಾಖಲಿಸಿತು.

ಸ್ಕೋರ್ ವಿವರ

ನಿರ್ಣಾಯಕ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಎರಡು ಆರಂಭಿಕ ವಿಕೆಟ್‌ಗಳನ್ನು ಕಳೆದುಕೊಂಡರೂ ದಕ್ಷಿಣ ಆಫ್ರಿಕಾ ತನ್ನ 50 ಓವರ್‌ಗಳಲ್ಲಿ 244/7 ಸ್ಕೋರ್ ಮಾಡಿತು. ಲುವಾನ್-ಡ್ರೆ ಪ್ರೀಟೋರಿಯಸ್ 76 ರನ್ ಗಳಿಸಿ ದಕ್ಷಿಣ ಆಫ್ರಿಕಾ ತಂಡದಲ್ಲಿ ಟಾಪ್ ಸ್ಕೋರರ್ ಆದರು. ಮಧ್ಯಮ ಕ್ರಮಾಂಕದ ಬ್ಯಾಟರ್ ರಿಚರ್ಡ್ ಸೆಲೆಟ್ಸ್ವಾನೆ ಕೂಡ 64 ರನ್​​ಗಳ ಇನ್ನಿಂಗ್ಸ್‌ನೊಂದಿಗೆ ನಿರ್ಣಾಯಕ ಪಾತ್ರ ವಹಿಸಿದರು. ಭಾರತದ ಬೌಲರ್‌ಗಳಲ್ಲಿ ರಾಜ್ ಲಿಂಬಾನಿ 3 ವಿಕೆಟ್ ಪಡೆದಿದ್ದಾರೆ.

245 ರನ್​ಗಳ ಗುರಿ ಬೆನ್ನಟ್ಟಿದ ಭಾರತ ಕೇವಲ 32 ರನ್‌ಗಳಿಗೆ ಮೊದಲ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ರನ್ ಚೇಸ್‌ನಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ನಾಯಕ ಉದಯ್ ಸಹರಾನ್ ಮತ್ತು ಸಚಿನ್ ದಾಸ್ ಅವರು 171 ರನ್ ಜೊತೆಯಾಟದೊಂದಿಗೆ ಮೆನ್ ಇನ್ ಬ್ಲೂ ತಂಡಕ್ಕೆ ಗೆಲುವಿನ ಆಸೆ ಹೆಚ್ಚಿಸಿದರು. ಸಹರನ್ 81 ರನ್ ಗಳಿಸಿದರೆ, ದಾಸ್ 96 ರನ್ ಗಳಿಸಿ ಶತಕ ವಂಚಿತರಾದರು. ಭಾರತ ಇನ್ನೂ 7 ಎಸೆತಗಳು ಬಾಕಿ ಇರುವಂತೆ 2 ವಿಕೆಟ್‌ ಜಯ ಸಾಧಿಸಿತು.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ