logo
ಕನ್ನಡ ಸುದ್ದಿ  /  ಕ್ರಿಕೆಟ್  /  ಟಿ20 ವಿಶ್ವಕಪ್ ಟೂರ್ನಿಗೆ ಬಲಿಷ್ಠ ವೆಸ್ಟ್ ಇಂಡೀಸ್ ತಂಡ ಪ್ರಕಟ; ಆರ್​​ಸಿಬಿ ವೇಗಿ ಅಲ್ಜಾರಿ ಜೋಸೆಫ್​ ಉಪನಾಯಕ

ಟಿ20 ವಿಶ್ವಕಪ್ ಟೂರ್ನಿಗೆ ಬಲಿಷ್ಠ ವೆಸ್ಟ್ ಇಂಡೀಸ್ ತಂಡ ಪ್ರಕಟ; ಆರ್​​ಸಿಬಿ ವೇಗಿ ಅಲ್ಜಾರಿ ಜೋಸೆಫ್​ ಉಪನಾಯಕ

Prasanna Kumar P N HT Kannada

May 04, 2024 07:00 AM IST

ಟಿ20 ವಿಶ್ವಕಪ್ ಟೂರ್ನಿಗೆ ಬಲಿಷ್ಠ ವೆಸ್ಟ್ ಇಂಡೀಸ್ ತಂಡ ಪ್ರಕಟ; ಆರ್​​ಸಿಬಿ ವೇಗಿ ಅಲ್ಜಾರಿ ಜೋಸೆಫ್​ ಉಪನಾಯಕ

    • West Indies T20 World Cup Squad : 2024ರ ಐಪಿಎಲ್​ ಟೂರ್ನಿಗೆ ಆತಿಥ್ಯ ವಹಿಸುತ್ತಿರುವ ವೆಸ್ಟ್ ಇಂಡೀಸ್ ತಂಡವು ತನ್ನ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಆರ್​ಸಿಬಿ ವೇಗಿ ಅಲ್ಜಾರಿ ಜೋಸೆಫ್ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ.
ಟಿ20 ವಿಶ್ವಕಪ್ ಟೂರ್ನಿಗೆ ಬಲಿಷ್ಠ ವೆಸ್ಟ್ ಇಂಡೀಸ್ ತಂಡ ಪ್ರಕಟ; ಆರ್​​ಸಿಬಿ ವೇಗಿ ಅಲ್ಜಾರಿ ಜೋಸೆಫ್​ ಉಪನಾಯಕ
ಟಿ20 ವಿಶ್ವಕಪ್ ಟೂರ್ನಿಗೆ ಬಲಿಷ್ಠ ವೆಸ್ಟ್ ಇಂಡೀಸ್ ತಂಡ ಪ್ರಕಟ; ಆರ್​​ಸಿಬಿ ವೇಗಿ ಅಲ್ಜಾರಿ ಜೋಸೆಫ್​ ಉಪನಾಯಕ

ಐಸಿಸಿ ಟಿ20 ವಿಶ್ವಕಪ್ 2024 ಟೂರ್ನಿಗೆ ಆತಿಥೇಯ ವೆಸ್ಟ್​ ಇಂಡೀಸ್ (West Indies T20 World Cup Squad)​ ತನ್ನ 15 ಸದಸ್ಯರ ಬಲಿಷ್ಠ ತಂಡ ಪ್ರಕಟಿಸಿದೆ. ರಾಜಸ್ಥಾನ್ ರಾಯಲ್ಸ್ ಪವರ್-ಹಿಟ್ಟರ್ ರೊವ್ಮನ್ ಪೊವೆಲ್ (Rovman Powell) ಅವರು ವಿಶ್ವದ ಕೆಲವು ಅತ್ಯುತ್ತಮ ಫ್ರಾಂಚೈಸ್ ಫ್ರೀಲಾನ್ಸರ್‌ಗಳಿಂದ ತುಂಬಿರುವ ಬಲಿಷ್ಠ ವೆಸ್ಟ್ ಇಂಡೀಸ್ ತಂಡವನ್ನು ಮುನ್ನಡೆಸಲಿದ್ದಾರೆ. ಪ್ರಸಕ್ತ ಆವೃತ್ತಿಯ ಐಪಿಎಲ್​ನಲ್ಲಿ ಲಕ್ನೋ ಸೂಪರ್ ಜೈಂಟ್ಸ್‌ ಭಾಗವಾಗಿರುವ ವೇಗಿ ಶಮರ್ ಜೋಸೆಫ್ (Shamar Joseph) ಕೂಡ ತಂಡವನ್ನು ಸೇರ್ಪಡೆಗೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಆರ್‌ಸಿಬಿ vs ಸಿಎಸ್‌ಕೆ ಪಂದ್ಯದ ಟಿಕೆಟ್‌ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್;‌ 1500 ರೂ ಟಿಕೆಟ್‌ ಬೆಲೆ ಐದಂಕಿಗೆ ಏರಿಕೆ!

ರಾಹುಲ್ ದ್ರಾವಿಡ್ ಸ್ಥಾನಕ್ಕೆ ಕೆಕೆಆರ್ ಮೆಂಟರ್‌ಗೆ ಗಾಳ ಹಾಕಲು ಮುಂದಾದ ಬಿಸಿಸಿಐ; ಆಫರ್‌ ಒಪ್ತಾರಾ 2011ರ ವಿಶ್ವಕಪ್ ವಿಜೇತ?

ಆರ್​ಸಿಬಿ vs ಸಿಎಸ್​ಕೆ ಪಂದ್ಯ; ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಸಂಚಾರ ಬದಲಾವಣೆ, ಇಲ್ಲಿ ಪಾರ್ಕಿಂಗ್ ಮಾಡಂಗಿಲ್ಲ

Bengaluru Weather: ಐಪಿಎಲ್‌ ಕ್ರಿಕೆಟ್‌ನ ಆರ್‌ಸಿಬಿ vs ಸಿಎಸ್‌ಕೆ ಪಂದ್ಯ ಇಂದು, ಬೆಂಗಳೂರನ್ನಾವರಿಸಿದೆ ಮಳೆ ಮೋಡ, ಇವತ್ತಿನ ಮಳೆ ಕಥೆ ಏನು

ಲಕ್ನೋ ಸೂಪರ್ ಜೈಂಟ್ಸ್‌ನ ನಿಕೋಲಸ್ ಪೂರನ್, ಕೋಲ್ಕತ್ತಾ ನೈಟ್ ರೈಡರ್ಸ್‌ನ ಆಂಡ್ರೆ ರಸೆಲ್, ರಾಜಸ್ಥಾನ್ ರಾಯಲ್ಸ್‌ನ ಶಿಮ್ರಾನ್ ಹೆಟ್ಮೆಯರ್ ಅವರಂತಹ ದೊಡ್ಡ ಪವರ್-ಹಿಟ್ಟರ್‌ಗಳೇ ತಂಡದ ಭಾಗವಾಗಿದ್ದಾರೆ. ಮುಂಬೈ ಇಂಡಿಯನ್ಸ್‌ನ ರೊಮಾರಿಯೊ ಶೆಫರ್ಡ್, ಶೆರ್ಫೇನ್ ರುದರ್‌ಫೋರ್ಡ್ (ಕೆಕೆಆರ್) ಮತ್ತು ಶಾಯ್ ಹೋಪ್ (ಡೆಲ್ಲಿ ಕ್ಯಾಪಿಟಲ್ಸ್) ಅವರು ನಗದು-ಸಮೃದ್ಧ ಐಪಿಎಲ್‌ನಲ್ಲಿ ವಿವಿಧ ತಂಡಗಳಲ್ಲಿ ಮಿಂಚಿನ ಪ್ರದರ್ಶನ ನೀಡುತ್ತಿದ್ದಾರೆ.

ಆರ್​​ಸಿಬಿ ವೇಗಿ ಅಲ್ಜಾರಿ ಜೋಸೆಫ್​ ಉಪನಾಯಕ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿರುವ ವೇಗಿ ಅಲ್ಜಾರಿ ಜೋಸೆಫ್ ಪೊವೆಲ್ ಉಪನಾಯಕನಾಗಿದ್ದು, ಆಲ್‌ರೌಂಡರ್‌ಗಳಾದ ರಸ್ಟನ್ ಚೇಸ್, ಜೇಸನ್ ಹೋಲ್ಡರ್, ಬ್ಯಾಟರ್‌ಗಳಾದ ಜಾನ್ಸನ್ ಚಾರ್ಲ್ಸ್, ಬ್ರಾಂಡನ್ ಕಿಂಗ್ ಅವರಂತಹ ಅನುಭವಿ ಆಟಗಾರರನ್ನೇ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಪೊವೆಲ್, ಶೆಫರ್ಡ್, ರಸೆಲ್ ಮತ್ತು ರುದರ್‌ಫೋರ್ಡ್ ಎಲ್ಲರೂ ತಮ್ಮ ಪ್ರಾಥಮಿಕ ಬ್ಯಾಟಿಂಗ್ ಕೌಶಲ್ಯದ ಹೊರತಾಗಿ ಅರೆಕಾಲಿಕ ಮಧ್ಯಮ ವೇಗದ ಬೌಲರ್​ಗಳೂ ಆಗಿದ್ದಾರೆ.

ಎಡಗೈ ಆರ್ಥಡಾಕ್ಸ್ ಅಕೇಲ್ ಹೊಸೈನ್, ಲೆಗ್-ಸ್ಪಿನ್ನರ್ ಗುಡಾಕೇಶ್ ಮೋಟಿ ಮತ್ತು ಆಫ್-ಸ್ಪಿನ್ನರ್ ರಸ್ಟನ್ ಚೇಸ್‌ ಮೂವರು ಸ್ಪೆಷಲಿಸ್ಟ್ ಸ್ಪಿನ್ನರ್​​​ಗಳಿದ್ದಾರೆ. ಎರಡು ಬಾರಿ ಟಿ20 ವಿಶ್ವಕಪ್ ಚಾಂಪಿಯನ್‌ ತಂಡವು ಅಫ್ಘಾನಿಸ್ತಾನ, ನ್ಯೂಜಿಲೆಂಡ್, ಪಪುವಾ ನ್ಯೂಗಿನಿಯಾ ಮತ್ತು ಉಗಾಂಡಾ ತಂಡಗಳೊಂದಿಗೆ ಕ್ಲಬ್‌ ಆಗಿದ್ದಾರೆ. ಜೂನ್ 2 ರಂದು ಗಯಾನಾದಲ್ಲಿ ಪಪುವಾ ನ್ಯೂಗಿನಿಯಾ ವಿರುದ್ಧ ತಮ್ಮ ಅಭಿಯಾನ ಪ್ರಾರಂಭಿಸಲಿದೆ.

ಟಿ20 ವಿಶ್ವಕಪ್​ ಟೂರ್ನಿಗೆ ವೆಸ್ಟ್​ ಇಂಡೀಸ್​ ತಂಡ

ರೋವ್‌ಮನ್ ಪೊವೆಲ್ (ನಾಯಕ), ಅಲ್ಜಾರಿ ಜೋಸೆಫ್ (ಉಪನಾಯಕ), ಜಾನ್ಸನ್ ಚಾರ್ಲ್ಸ್, ರಸ್ಟನ್ ಚೇಸ್, ಶಿಮ್ರಾನ್ ಹೆಟ್ಮೆಯರ್, ಜೇಸನ್ ಹೋಲ್ಡರ್, ಶಾಯ್ ಹೋಪ್, ಅಕೇಲ್ ಹೊಸೈನ್, ಶಮರ್ ಜೋಸೆಫ್, ಬ್ರೆಂಡನ್ ಕಿಂಗ್ (ವಿಕೆಟ್ ಕೀಪರ್), ಗುಡಕೇಶ್ ಮೋಟಿ, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಆಂಡ್ರೆ ರಸೆಲ್, ಶೆರ್ಫಾನ್ ರುದರ್​ಫೋರ್ಡ್​, ರೊಮಾರಿಯೋ ಶೆಫರ್ಡ್.

ಟಿ20 ವಿಶ್ವಕಪ್​ಗೆ ಆಸ್ಟ್ರೇಲಿಯಾ ತಂಡ

ಮಿಚೆಲ್ ಮಾರ್ಷ್ (ನಾಯಕ), ಆಷ್ಟನ್ ಅಗರ್, ಪ್ಯಾಟ್ ಕಮಿನ್ಸ್, ಟಿಮ್ ಡೇವಿಡ್, ನಾಥನ್ ಎಲ್ಲಿಸ್, ಕ್ಯಾಮರೂನ್ ಗ್ರೀನ್, ಜೋಶ್ ಹೇಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೋಯ್ನಿಸ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್, ಆಡಮ್ ಜಂಪಾ.

ಟಿ20 ವಿಶ್ವಕಪ್​ಗೆ ದಕ್ಷಿಣ ಆಫ್ರಿಕಾ 15 ಸದಸ್ಯರ ತಂಡ

ಏಡೆನ್ ಮಾರ್ಕ್ರಾಮ್ (ನಾಯಕ), ಒಟ್ನಿಯೆಲ್ ಬಾರ್ಟ್‌ಮ್ಯಾನ್, ಜೆರಾಲ್ಡ್ ಕೊಯೆಟ್ಜಿ, ಕ್ವಿಂಟನ್ ಡಿ ಕಾಕ್, ಜಾರ್ನ್ ಫೋರ್ಚುಯಿನ್, ರೀಜಾ ಹೆಂಡ್ರಿಕ್ಸ್, ಮಾರ್ಕೊ ಜಾನ್ಸೆನ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಡೇವಿಡ್ ಮಿಲ್ಲರ್, ಆನ್ರಿಚ್ ನೋಕಿಯಾ, ಕಗಿಸೊ ರಬಾಡ, ರಿಯಾನ್ ರಿಕೆಲ್ಟನ್, ತಬ್ರೈಜ್ ಶಮ್ಸಿ, ಟ್ರಿಸ್ಟಾನ್ ಸ್ಟಬ್ಸ್.

ಮೀಸಲು ಆಟಗಾರರು: ನಾಂಡ್ರೆ ಬರ್ಗರ್ ಮತ್ತು ಲುಂಗಿ ಎನ್ಗಿಡಿ.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ