logo
ಕನ್ನಡ ಸುದ್ದಿ  /  ಕ್ರಿಕೆಟ್  /  Fact Check: ವಿಶ್ವಕಪ್‌ ಸೋಲಿಗೂ ರೋಹಿತ್ ಮಗಳ ಮಾತಿಗೂ ಸಂಬಂಧವೇ ಇಲ್ಲ; ವೈರಲ್‌ ವಿಡಿಯೋ ಸತ್ಯಾಸತ್ಯತೆ ಬಯಲು

Fact Check: ವಿಶ್ವಕಪ್‌ ಸೋಲಿಗೂ ರೋಹಿತ್ ಮಗಳ ಮಾತಿಗೂ ಸಂಬಂಧವೇ ಇಲ್ಲ; ವೈರಲ್‌ ವಿಡಿಯೋ ಸತ್ಯಾಸತ್ಯತೆ ಬಯಲು

HT Kannada Desk HT Kannada

Nov 26, 2023 04:02 PM IST

google News

ರೋಹಿತ್‌ ಶರ್ಮಾ ಮಗಳು ಸಮೈರಾ

    • Rohit Sharma Samaira: ಭಾರತ ತಂಡವು 2023ರ ವಿಶ್ವಕಪ್ ಫೈನಲ್‌ನಲ್ಲಿ ಸೋತ ಬಳಿಕ, ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಕುರಿತಾಗಿ ಅವರ ಮಗಳು ಮಾತನಾಡಿದ್ದಾಳೆ ಎಂಬ ವಿಡಿಯೋ ವೈರಲ್‌ ಆಗಿತ್ತು. ಈ ವಿಡಿಯೋ ಎಷ್ಟು ಸತ್ಯ ಎಂಬ ವಿವರ ಇಲ್ಲಿದೆ.
ರೋಹಿತ್‌ ಶರ್ಮಾ ಮಗಳು ಸಮೈರಾ
ರೋಹಿತ್‌ ಶರ್ಮಾ ಮಗಳು ಸಮೈರಾ

ಟೀಮ್‌ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಅವರ ಮಗಳು ಸಮೈರಾ ಮಾತನಾಡುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ದೃಶ್ಯದಲ್ಲಿ ಸಮೈರಾ (Samaira) ತಮ್ಮ ತಂದೆ ರೋಹಿತ್‌ ಶರ್ಮಾ ಬಗ್ಗೆ ಮಾತನಾಡುವುದನ್ನು ನೋಡಬಹುದು. ಇತ್ತೀಚೆಗೆ ಭಾರತ ಕ್ರಿಕೆಟ್‌ ತಂಡವು ಏಕದಿನ ವಿಶ್ವಕಪ್‌ ಫೈನಲ್‌ (ICC ODI World Cup 2023) ಪಂದ್ಯದಲ್ಲಿ ಸೋತ ಬಳಿಕ, ಈ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.

ವಿಡಿಯೋದಲ್ಲಿ ಏನಿದೆ?

ದೃಶ್ಯದಲ್ಲಿ‌ ಕಾಣುತ್ತಿರುವಂತೆ ಇಬ್ಬರು ಮಹಿಳೆಯರೊಂದಿಗೆ ಸಮೈರಾ ನಡೆದುಕೊಂಡು ಹೋಗುತ್ತಿರುವಾಗ, ವಿಡಿಯೋ ಚಿತ್ರೀಕರಿಸುತ್ತಿದ್ದ ವ್ಯಕ್ತಿಯೊಬ್ಬರು ತಂದೆಯ (ರೋಹಿತ್ ಶರ್ಮಾ) ಕುರಿತು ಪ್ರಶ್ನೆ ಕೇಳುತ್ತಾರೆ. ಅದಕ್ಕೆ ಉತ್ತರಿಸಿದ ಪುಟ್ಟ ಬಾಲಕಿ ಸಮೈರಾ, ಅವರು ಕೋಣೆಯಲ್ಲಿದ್ದಾರೆ. ಬಹುತೇಕ ಪಾಸಿಟಿವ್‌ ಆಗಿದ್ದಾರೆ. ಒಂದು ತಿಂಗಳೊಳಗೆ ಅವರು ಮತ್ತೆ ನಗುತ್ತಾರೆ ಎಂದು ಹೇಳುವುದನ್ನು ಕೇಳಬಹುದು.

ಇತ್ತೀಚೆಗಷ್ಟೇ ಭಾರತ ತಂಡವು 2023ರ ವಿಶ್ವಕಪ್ ಫೈನಲ್‌ನಲ್ಲಿ ಆಸೀಸ್‌ ವಿರುದ್ಧ ಸೋತಿತ್ತು. ಆ ಬಳಿಕ ಹಿಟ್‌ಮ್ಯಾನ್‌ ಕುರಿತಾಗಿ ಅವರ ಮಗಳು ಈ ರೀತಿ ಮಾತನಾಡಿದ್ದಾಳೆ ಎಂಬುದಾಗಿ ಈ ವಿಡಿಯೋವನ್ನು ಹಲವರು ಶೇರ್‌ ಮಾಡಿದ್ದಾರೆ. ವಿಶ್ವಕಪ್‌ಗೆ ಸಂಬಂಧಿಸಿದ ಹ್ಯಾಶ್‌ಟ್ಯಾಗ್‌ನೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಹರಿದಾಡುತ್ತಿದೆ.

ಹಳೆಯ ವಿಡಿಯೋ ಈಗ ವೈರಲ್

ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗಿರುವ ವಿಡಿಯೋದಲ್ಲಿ “ರೋಹಿತ್ ಶರ್ಮಾ ಎದೆಗುಂದಿದ್ದಾರೆ” ಎಂಬ ಕ್ಯಾಪ್ಷನ್‌ ಜೊತೆಗೆ ದೃಶ್ಯ ಕಂಡುಬಂದಿದೆ. ಇದು ವಿಶ್ವಕಪ್‌ ಸೋಲಿನ ನಂತರದ ವಿಡಿಯೋ ಎಂಬುದಾಗಿ ಕೆಲವೊಂದು ಮಾಧ್ಯಮಗಳು ಕೂಡಾ ತಪ್ಪು ಸುದ್ದಿ ಪ್ರಕಟಿಸಿವೆ. ಆದರೆ, ಈ ವಿಡಿಯೋ ಹಳೆಯದು ಎಂಬುದು ಪತ್ತೆಯಾಗಿದೆ.

2022ರ ವಿಡಿಯೋ ಈಗ ವೈರಲ್

ಈ ವಿಡಿಯೋ, ವಿಶ್ವಕಪ್‌ ಸೋಲಿನ ಬಳಿಕದ್ದು ಅಲ್ಲ. ಬದಲಿಗೆ 2022ರ ಕೋವಿಡ್‌ ಸಂದರ್ಭದ ದೃಶ್ಯ ಇದಾಗಿದೆ. ಕೋವಿಡ್ 19 ಸೋಂಕಿಗೆ ಒಳಗಾದ ತಮ್ಮ ತಂದೆ ರೋಹಿತ್‌ ಶರ್ಮಾ ಅವರ ಆರೋಗ್ಯದ ಕುರಿತಾಗಿ ಸಮೈರಾ ಅಪ್ಡೇಟ್‌ ನೀಡಿದ್ದಾರೆ. ಆ ಮುದ್ದಾದ ದೃಶ್ಯವೇ ಇದಾಗಿದೆ.

2022ರ ಜುಲೈ 1ರಂದು ಇಂಗ್ಲೆಂಡ್‌ನಲ್ಲಿ ನಡೆಯಬೇಕಿದ್ದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯಕ್ಕೂ ಮುಂಚಿತವಾಗಿ ರೋಹಿತ್ ಶರ್ಮಾಗೆ ಕೋವಿಡ್ ಪಾಸಿಟಿವ್‌ ದೃಢಪಟ್ಟಿತ್ತು. ಆಗ ಸಮೈರಾ ಬಳಿ ಪತ್ರಕರ್ತರು ಪ್ರಶ್ನೆ ಕೇಳಿದ್ದಾರೆ. ಆಗ ತಂದೆಯ ಆರೋಗ್ಯ ಕುರಿತು ಮುದ್ದಾಗಿ ಮಾತನಾಡಿದ್ದ ಸಮೈರಾ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಇದೀಗ ಒಂದು ವರ್ಷದ ಬಳಿಕ ಅದೇ ವಿಡಿಯೋವನ್ನು ವಿಶ್ವಕಪ್‌ ಸೋಲಿಗೆ ಲಿಂಕ್‌ ಮಾಡಿ ಹಂಚಿಕೊಳ್ಳಲಾಗುತ್ತಿದೆ. ಹೀಗಾಗಿ ಈ ದೃಶ್ಯ ಹಳೆಯದು ಮತ್ತು ಫೇಕ್‌ ಎಂಬುದು ಸ್ಪಷ್ಟವಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ