logo
ಕನ್ನಡ ಸುದ್ದಿ  /  ಕ್ರಿಕೆಟ್  /  Virender Sehwag: ಭಾರತದ ಜರ್ಸಿ ಮೇಲಿರುವ ಇಂಡಿಯಾ ಹೆಸರು ಕಿತ್ತಾಕಿ; ವೀರೇಂದ್ರ ಸೆಹ್ವಾಗ್ ಟ್ವೀಟ್ ವೈರಲ್

Virender sehwag: ಭಾರತದ ಜರ್ಸಿ ಮೇಲಿರುವ ಇಂಡಿಯಾ ಹೆಸರು ಕಿತ್ತಾಕಿ; ವೀರೇಂದ್ರ ಸೆಹ್ವಾಗ್ ಟ್ವೀಟ್ ವೈರಲ್

Raghavendra M Y HT Kannada

Sep 05, 2023 06:10 PM IST

google News

ಭಾರತ ತಂಡದ ಜರ್ಸಿ ಮೇಲಿರುವ ಇಂಡಿಯಾ ಹೆಸರನ್ನು ತೆಗೆದು ಹಾಕಿ ಎಂದು ಟೀಂ ಇಂಡಿಯಾದ ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.

  • ಟೀಂ ಇಂಡಿಯಾ ಜರ್ಸಿ ಮೇಲಿರುವ ಇಂಡಿಯಾ ಹೆಸರನ್ನು ತೆಗೆದುಹಾಕಿ ಎಂದು ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ. ಅಲ್ಲದೆ, ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಅವರಿಗೆ ಟ್ಯಾಗ್ ಮಾಡಿದ್ದಾರೆ.

ಭಾರತ ತಂಡದ ಜರ್ಸಿ ಮೇಲಿರುವ ಇಂಡಿಯಾ ಹೆಸರನ್ನು ತೆಗೆದು ಹಾಕಿ ಎಂದು ಟೀಂ ಇಂಡಿಯಾದ ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.
ಭಾರತ ತಂಡದ ಜರ್ಸಿ ಮೇಲಿರುವ ಇಂಡಿಯಾ ಹೆಸರನ್ನು ತೆಗೆದು ಹಾಕಿ ಎಂದು ಟೀಂ ಇಂಡಿಯಾದ ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.

ಮುಂಬೈ: ಭಾರತ vs ಇಂಡಿಯಾ (India vs Bharat) ಸಾಮಾಜಿಕ ಜಾಲತಾಣಗಳಲ್ಲಿ (Social Media) ಸಖತ್ ಟ್ರೆಂಡ್ ಆಗುತ್ತಿದ್ದು, ಇದರ ಬೆನ್ನಲ್ಲೇ ಟೀಂ ಇಂಡಿಯಾದ (Team India) ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ (Virender Sehwag) ಈ ವಿವಾದಕ್ಕೆ ಧುಮುಕಿದ್ದು, ಭಾರತದ ಪರ ಬ್ಯಾಟ್ ಬೀಸಿದ್ದಾರೆ.

ಐಸಿಸಿ ವಿಶ್ವಕಪ್‌ಗಾಗಿ (ICC WORLD CUP 2023) ಬಿಸಿಸಿಐ (BCCI) ಪ್ರಕಟಿಸಿರುವ ಟೀಂ ಇಂಡಿಯಾ ಬಗ್ಗೆ ಸೆಹ್ವಾಗ್ ತಮ್ಮ ಎಕ್ಸ್‌ (ಈ ಹಿಂದೆ ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿದ್ದು, ಅದು ಟೀಂ ಇಂಡಿಯಾ ಅಲ್ಲ ಎನ್ನುವ ಮೂಲಕ ಇಂಡಿಯಾ ಎನ್ನುವ ಪದವನ್ನು ಭಾರತ ತಂಡದ ಜರ್ಸಿಯಿಂದ ತೆಗೆದುಹಾಕಿ ಎಂದಿದ್ದಾರೆ. ಅಲ್ಲದೆ, ಇದನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ (Jay Shah) ಅವರನ್ನು ಟ್ಯಾಗ್ ಮಾಡಿದ್ದಾರೆ. ಸೆಹ್ವಾಗ್ ಅವರ ಈ ಟ್ವೀಟ್‌ಗೆ ಜಯ್ ಶಾ ಪ್ರತಿಕ್ರಿಯಿಸುತ್ತಾರಾ ಅನ್ನೋದನ್ನ ಕಾದು ನೋಡಬೇಕು.

ಐಸಿಸಿ ವಿಶ್ವಕಪ್‌ಗೆ ಭಾರತದ ಈ ಆಟಗಾರರನ್ನು ಬೆಂಬಲಿಸಿದ ಸೆಹ್ವಾಗ್

ಈ ಬಾರಿಯ ವಿಶ್ವಕಪ್‌ನಲ್ಲಿ ವೀರೇಂದ್ರ ಸೆಹ್ವಾಗ್ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಅವರನ್ನು ಬೆಂಬಲಿಸಿದ್ದಾರೆ. ಸೆಹ್ವಾಗ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ, ಭಾರತ ತಂಡದ ಜರ್ಸಿಯಲ್ಲಿ ಇಂಡಿಯಾ ಬದಲಿಗೆ ಟೀಂ ಭಾರತ ಎಂದು ಬರೆಯಬೇಕು. ಯಾಕೆಂದರೆ ನಮ್ಮ ಹೃದಯದಲ್ಲಿ ಭಾರತವಿದೆ ಎಂದು ಬರೆದುಕೊಂಡಿದ್ದಾರೆ.

ಈ ಬಗ್ಗೆ ಹಲವು ಟ್ವೀಟ್‌ಗಳಿಗೆ ಉತ್ತರಿಸಿರುವ ಸೆಹ್ವಾಗ್, ಇಂಡಿಯಾಗೆ ಬದಲಾಗಿ ಭಾರತ್ ಎಂಬ ಹೆಸರನ್ನು ಬೆಂಬಲಿಸಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೀರೇಂದ್ರ ಸೆಹ್ವಾಗ್ ಅವರ ಟ್ವೀಟ್ ಸಖತ್ ವೈರಲ್ ಆಗುತ್ತಿದೆ.

ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್‌ಗೆ ಭಾರತ ತಂಡವನ್ನು ಇಂದು (ಸೆಪ್ಟೆಂಬರ್ 4, ಮಂಗಳವಾರ) ಬಿಸಿಸಿಐ ಮುಖ್ಯ ಆಯ್ಕೆಗಾರರ ಅಜಿತ್ ಅಗರ್ಕರ್ ಅವರು ಪ್ರಕಟಿಸಿದ್ದಾರೆ. ಈ ವೇಳೆ ನಾಯಕ ರೋಹಿತ್ ಶರ್ಮಾ ಕೂಡ ಉಪಸ್ಥಿತರಿದ್ದರು. ವಿಶ್ವಕಪ್‌ಗೆ ಘೋಷಣೆ ಮಾಡಿರುವ ತಂಡದಲ್ಲಿ ಹಾರ್ದಿಕ್ ಪಾಂಡ್ಯಗೆ ಉಪ ನಾಯಕ ಜವಾಬ್ದಾರಿಯನ್ನು ನೀಡಲಾಗಿದೆ.

ಐಸಿಸಿ ಏಕದಿನ ವಿಶ್ವಕಪ್‌ಗೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಅಕ್ಷರ್ ಪಟೇಲ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್.

ಸ್ಯಾಮ್ಸನ್‌ಗೆ ಭಾರತ ತಂಡದಲ್ಲಿ ಅವಕಾಶ ಸಿಗದಿದ್ದಕ್ಕೆ ಫ್ಯಾನ್ಸ್ ಬೇಸರ

ಟೀಂ ಇಂಡಿಯಾದ ಯುವ ಬ್ಯಾಟ್ಸಮನ್ ಕಂ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿಲ್ಲ. ಇದು ಅವರ ಅಭಿಮಾನಿಗಳನ್ನು ಮತ್ತೊಮ್ಮೆ ಕೆರಳಿಸಿದ್ದು, ಬಿಸಿಸಿಐ ಅನ್ನು ಟ್ರೋಲ್ ಮಾಡುತ್ತಿದ್ದಾರೆ. ಅನುಭವಿ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಕೂಡ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.

ಉತ್ತಮ ಫಾರ್ಮ್‌ನಲ್ಲಿರುವ ಹೈದರಾಬಾದ್‌ನ ಯುವ ಪ್ರತಿಭೆ ತಿಲಕ್ ವರ್ಮಾ ವಿಶ್ವಕಪ್‌ನಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಆದರೆ ಈ ನಿರೀಕ್ಷೆ ಹುಸಿಯಾಗಿದೆ. ತಿಲಕ್ ವರ್ಮಾ ಕೂಡ ಐಸಿಸಿ ವಿಶ್ವಕಪ್ ಭಾರತ ತಂಡದಲ್ಲಿ ಸ್ಥಾನ ಪಡೆದಿಲ್ಲ. ವರ್ಮಾಗೆ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ ಅನುಭವ ಇಲ್ಲದಿರುವುದೇ ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಅಕ್ಟೋಬರ್ 5 ರಿಂದ ಭಾರತದಲ್ಲಿ ಐಸಿಸಿ ವಿಶ್ವಕಪ್ ಪಂದ್ಯಗಳು ಆರಂಭವಾಗಲಿವೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ