logo
ಕನ್ನಡ ಸುದ್ದಿ  /  ಕ್ರಿಕೆಟ್  /  ಸಮಯ ವ್ಯರ್ಥ, 2 ಪಂದ್ಯಗಳ ಸರಣಿ ಬೇಕಿರಲಿಲ್ಲ; ಇಂಡೋ-ಆಫ್ರಿಕಾ ಟೆಸ್ಟ್ ಸಿರೀಸ್​ಗೆ ರವಿ ಶಾಸ್ತ್ರಿ ಕಟು ಟೀಕೆ

ಸಮಯ ವ್ಯರ್ಥ, 2 ಪಂದ್ಯಗಳ ಸರಣಿ ಬೇಕಿರಲಿಲ್ಲ; ಇಂಡೋ-ಆಫ್ರಿಕಾ ಟೆಸ್ಟ್ ಸಿರೀಸ್​ಗೆ ರವಿ ಶಾಸ್ತ್ರಿ ಕಟು ಟೀಕೆ

Prasanna Kumar P N HT Kannada

Jan 07, 2024 11:16 AM IST

ಭಾರತ vs ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಗೆ ರವಿ ಶಾಸ್ತ್ರಿ ಕಟು ಪ್ರತಿಕ್ರಿಯೆ.

    • Ravi Shastri: ಮೂರು ಪಂದ್ಯಗಳ ಟೆಸ್ಟ್ ಸರಣಿಯಾದರೆ ಮಾತ್ರ ಒಪ್ಪಿಗೆ ನೀಡಿ. ಎಲ್ಲೇ ಆಗಲಿ ಎರಡು ಪಂದ್ಯಗಳ ಟೆಸ್ಟ್​ ಸರಣಿ ಸುಖಾಸುಮ್ಮನೆ ವ್ಯರ್ಥ. ಗೆಲ್ಲುವೂ ಇಲ್ಲ, ಸೋಲುವುದೂ ಇಲ್ಲ ಎಂದು ರವಿ ಶಾಸ್ತ್ರಿ ಹೇಳಿದ್ದಾರೆ.
ಭಾರತ vs ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಗೆ ರವಿ ಶಾಸ್ತ್ರಿ ಕಟು ಪ್ರತಿಕ್ರಿಯೆ.
ಭಾರತ vs ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಗೆ ರವಿ ಶಾಸ್ತ್ರಿ ಕಟು ಪ್ರತಿಕ್ರಿಯೆ.

ಭಾರತ ಮತ್ತು ಸೌತ್ ಆಫ್ರಿಕಾ (India vs South africa) ನಡುವಿನ 2 ಪಂದ್ಯಗಳ ಟೆಸ್ಟ್​ ಸರಣಿಯು 1-1ರಲ್ಲಿ ಡ್ರಾಗೊಂಡಿತು. ಕೇಪ್​ಟೌನ್​ನ ನ್ಯೂಲ್ಯಾಂಡ್ಸ್​ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್​ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲ್ಲುವ ಮೂಲಕ ಸಿರೀಸ್ ಸಮಬಲ ಸಾಧಿಸಿತು. ಸೆಂಚೂರಿಯನ್ ಟೆಸ್ಟ್​ನಲ್ಲಿ ಇನ್ನಿಂಗ್ಸ್​ ಹಾಗೂ 32 ರನ್​ಗಳಿಂದ ಸೋತಿದ್ದ ಭಾರತ, ಎರಡನೇ ಟೆಸ್ಟ್​ನಲ್ಲಿ 7 ವಿಕೆಟ್​​ಗಳ ಭರ್ಜರಿ ಜಯ ಸಾಧಿಸಿತು.

ಟ್ರೆಂಡಿಂಗ್​ ಸುದ್ದಿ

ಆರ್‌ಸಿಬಿ-ಸಿಎಸ್‌ಕೆ ಪಂದ್ಯ ನೋಡೋಕೆ ಬೈಕ್‌ನಲ್ಲಿ ಹೋಗ್ತಿದ್ದಾರಾ; ತಲೆಗೆ ಹೆಲ್ಮೆಟ್ ಮರೆಯಬೇಡಿ, ಬೆಂಗಳೂರು ಟ್ರಾಫಿಕ್ ಪೊಲೀಸರ ಸಂದೇಶ

RCB vs CSK: ಕೃಪೆ ತೋರು ವರುಣ, ಮ್ಯಾಚ್ ನಡೀಲಿ ಬಿಡು ಪ್ಲೀಸ್; ಮಳೆರಾಯನಿಗೆ ಫ್ಯಾನ್ಸ್ ಮೊರೆ, ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತ ಜನಸಾಗರ

ನಿನ್ ದಮ್ಮಯ್ಯ ಅಂತೀನಿ, ಆಡಿಯೋ ಮ್ಯೂಟ್ ಮಾಡು ಪ್ಲೀಸ್; ಕ್ಯಾಮರಾಮೆನ್​ಗೆ ಕೈಮುಗಿದು ಬೇಡ್ಕೊಂಡ ರೋಹಿತ್​ ಶರ್ಮಾ

Rajat Patidar: ಸ್ಫೋಟಕ ಬ್ಯಾಟಿಂಗ್ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟ ಆರ್‌ಬಿಸಿ ಬ್ಯಾಟರ್ ರಜತ್ ಪಾಟಿದಾರ್

ಟೀಕಿಸಿದ ರವಿ ಶಾಸ್ತ್ರಿ

ಉಭಯ ತಂಡಗಳ ನಡುವಿನ 2 ಪಂದ್ಯಗಳ ಸರಣಿಗಾಗಿ ಟೀಮ್ ಇಂಡಿಯಾ ಮಾಜಿ ಹೆಡ್​ಕೋಚ್​ ರವಿ ಶಾಸ್ತ್ರಿ (Ravi Shastri), ಬೇಸರ ವ್ಯಕ್ತಪಡಿಸಿದ್ದಾರೆ. ಇದು 3 ಪಂದ್ಯಗಳ ಸರಣಿಯಾಗಬೇಕಿತ್ತು. ಮೂರು ಪಂದ್ಯಗಳ ಸರಣಿಯಾಗಿದ್ದರೆ ಭಾರತ, ದಕ್ಷಿಣ ಆಫ್ರಿಕಾ ನೆಲದಲ್ಲಿ ಐತಿಹಾಸಿಕ ಚೊಚ್ಚಲ ಸರಣಿ ಗೆಲ್ಲುವ ಅವಕಾಶ ಇತ್ತು. ಆದರೆ ಈ ಬಗ್ಗೆ ಈಗ ಮಾತನಾಡಲು ಪದಗಳಿಲ್ಲ ಎಂದು 2 ಪಂದ್ಯಗಳ ಟೆಸ್ಟ್​​ ಸರಣಿಯನ್ನು ಟೀಕಿಸಿದ್ದಾರೆ.

‘ಸಮಯ ವ್ಯರ್ಥ ಎಂದ ಮಾಜಿ ಕೋಚ್

ಸ್ಟಾರ್ ಸ್ಪೋರ್ಟ್ಸ್‌ನೊಂದಿಗಿನ ಸಂವಾದದಲ್ಲಿ ಮಾತನಾಡಿದ ಭಾರತದ ಮಾಜಿ ಆಲ್‌ರೌಂಡರ್ ರವಿಶಾಸ್ತ್ರಿ, ಭಾರತ ತಂಡ ಆಡಳಿತವು ಎಂದಿಗೂ 2 ಪಂದ್ಯಗಳ ಟೆಸ್ಟ್ ಸರಣಿ ಆಡದಂತೆ ನೋಡಿಕೊಳ್ಳಬೇಕು. ಅವುಗಳಿಂದ ಸಮಯ ವ್ಯರ್ಥ. ಸಮಯ ವ್ಯರ್ಥ ಎಂದು ಕರೆಯಬೇಕು. ಇಲ್ಲವಾದಲ್ಲಿ ಟೆಸ್ಟ್ ಮತ್ತು ಏಕದಿನ ಅಥವಾ ಟಿ20 ಮತ್ತು ಏಕದಿನ ಎರಡು ಸ್ವರೂಪ ಸರಣಿ ಮೇಲೆ ಮಾತ್ರ ಗಮನಹರಿಸಬೇಕು ಎಂದು ಹೇಳಿದ್ದಾರೆ.

‘ಇಲ್ಲವೆಂದರೆ ಹೀಗೆ ಆಡಿಸಿ’

ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಟಿ20 ಮತ್ತು ಮೂರು ಟೆಸ್ಟ್ ಪಂದ್ಯಗಳನ್ನು ಸುಲಭವಾಗಿ ಆಡಬಹುದಿತ್ತು. ಇಲ್ಲವಾದಲ್ಲಿ ಮೂರು ಏಕದಿನ ಅಥವಾ 3 ಟೆಸ್ಟ್ ಆಡಬಹುದಿತ್ತು. ಮತ್ತೊಂದು ಟೆಸ್ಟ್​ ಹೊರತುಪಡಿಸಿ 3 ಟಿ20, ಮೂರು ಏಕದಿನ ಏಕದಿನ ಆಡಬೇಕಿತ್ತು. ಆದರೀಗ ಈ ಟೆಸ್ಟ್ ಸರಣಿ ನಂತರ ಮುಂದಿನ ದಿನಗಳಲ್ಲಿ ಬಿಸಿಸಿಐ ಎರಡು ಟೆಸ್ಟ್​​ಗಳ ಸರಣಿಗೆ ಆಡುವುದಿಲ್ಲ ಎಂದು ಎದುರಾಳಿ ಕ್ರಿಕೆಟ್ ಸಂಸ್ಥೆಗೆ ಹೇಳಬೇಕು ಎಂದು ಸಲಹೆ ನೀಡಿದ್ದಾರೆ.

ಇದು ಯಾರಿಗೂ ಲಾಭ ಇಲ್ಲ ಎಂದ ಶಾಸ್ತ್ರಿ

ಮುಂದೆ ಇಂತಹ ಸನ್ನಿವೇಶಗಳು ಸೃಷ್ಟಿಯಾಗುವ ಸಾಧ್ಯತೆಗಳಿವೆ. ಕೆಲವು ಕ್ರಿಕೆಟ್​ ಮಂಡಳಿಗಳು ನಿಮ್ಮನ್ನು (ಬಿಸಿಸಿಐ) ಎರಡು ಟೆಸ್ಟ್​ಗಳ ಸರಣಿಗೆ ಆಹ್ವಾನ ನೀಡಿದರೆ ನಾವು ಆಡುವುದಿಲ್ಲ. ಮೂರು ಪಂದ್ಯಗಳ ಟೆಸ್ಟ್ ಸರಣಿಯಾದರೆ ಮಾತ್ರ ಒಪ್ಪಿಗೆ ನೀಡಿ. ಎಲ್ಲೇ ಆಗಲಿ ಎರಡು ಪಂದ್ಯಗಳ ಟೆಸ್ಟ್​ ಸರಣಿ ಸುಖಾಸುಮ್ಮನೆ ವ್ಯರ್ಥ. ಗೆಲ್ಲುವೂ ಇಲ್ಲ, ಸೋಲುವುದೂ ಇಲ್ಲ. ಇಲ್ಲಿ ಯಾರಿಗೂ ಲಾಭ ಇಲ್ಲ ಎಂದು ಗುಡುಗಿದ್ದಾರೆ.

ಇದನ್ನೇ ಹೇಳಿದ್ದ ರೋಹಿತ್​

ಎರಡನೇ ಟೆಸ್ಟ್ ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ರೋಹಿತ್ ಶರ್ಮಾ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಿಸುವ ಕುರಿತು ಪ್ರತಿಕ್ರಿಸಿದ್ದರು. ಎರಡು ಅಥವಾ ಮೂರು ಪಂದ್ಯಗಳು ನಡೆಸುವ ವೇಳಾಪಟ್ಟಿಗೆ ಸಂಬಂಧಿಸಿ ಎಲ್ಲವನ್ನೂ ನಾವು ನಿರ್ಧರಿಸುವುದಿಲ್ಲ. ಇದೆಲ್ಲವೂ ನಮ್ಮ ಕೈಯಲ್ಲಿ ಇರುವುದಿಲ್ಲ. ನಿಜವಾಗಿ ಇದು ನಮ್ಮ ಕೈಯಲ್ಲಿ ಇದ್ದಿದ್ದರೆ ನಾವು ಏನಾದರೂ ಮಾಡುತ್ತಿದ್ದೆವು ಎಂದು ಹೇಳಿದ್ದರು.

ನಾವು ಬಂದು ಆಡುವುದು, ಗೆಲ್ಲುವುದು ನಮ್ಮ ಕೈಯಲ್ಲೇ ಇರುತ್ತದೆ. ಆದರೆ ಸೆಂಚುರಿಯನ್‌ನಲ್ಲಿ ಸಂಭವಿಸಿದ ಸೋಲು ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮತ್ತು ಕೇಪ್​​ಟೌನ್‌ನಲ್ಲಿ ನಾವು ಹಿಂದೆಂದೂ ಟೆಸ್ಟ್ ಗೆಲ್ಲದಿದ್ದಲ್ಲಿ ಹೇಗೆ ಜಯಗಳಿಸಿದೆವು ಎಂಬುದರ ಬಗ್ಗೆ ನಾವು ತುಂಬಾ ಹೆಮ್ಮೆಪಡುತ್ತೇವೆ. ಇನ್ನೂ ಅವಕಾಶ ಇದ್ದಿದ್ದರೆ ಖಂಡಿತವಾಗಿ ಸರಣಿ ಗೆಲ್ಲುತ್ತಿದ್ದೆವು ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

IPL, 2024

Live

RCB

0/0

0.0 Overs

VS

CSK

YTB

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ