ನಾಳೆಯೇ ಡಬ್ಲ್ಯುಪಿಎಲ್ ಹರಾಜು; ಪರ್ಸ್ ಮೊತ್ತ, ಸ್ಲಾಟ್ಗಳು, ತಂಡಗಳು, ಸಮಯ; ಇಲ್ಲಿದೆ ಮಾಹಿತಿ
Dec 08, 2023 02:55 PM IST
ಡಬ್ಲ್ಯುಪಿಎಲ್ ಹರಾಜು.
- WPL Auction 2024: ಡಬ್ಲ್ಯುಪಿಎಲ್ ತಂಡಗಳ ಬಳಿ ಎಷ್ಟು ಪರ್ಸ್ ಮೊತ್ತ ಇದೆ? ಎಷ್ಟು ಸ್ಲಾಟ್ಗಳು ಖಾಲಿ ಇವೆ, ರಿಟೈನ್ ಮತ್ತು ರಿಲೀಸ್ ಆಟಗಾರ್ತಿಯರ ಪಟ್ಟಿ ಹೇಗಿದೆ? ನೇರ ಪ್ರಸಾರ ವೀಕ್ಷಿಸುವುದೆಲ್ಲಿ? ಎಂಬುದರ ವಿವರ ಇಲ್ಲಿದೆ.
2024ರ ಮಹಿಳಾ ಪ್ರೀಮಿಯರ್ ಲೀಗ್ನ (Womens Premier League) ಮಿನಿ ಹರಾಜಿಗೆ ದಿನವಷ್ಟೇ ಬಾಕಿ ಇದೆ. ಡಿಸೆಂಬರ್ 9ರಂದು ಮಧ್ಯಾಹ್ನ 3 ಗಂಟೆಗೆ ಮುಂಬೈನಲ್ಲಿ ಈ ಹರಾಜು ನಡೆಯಲಿದೆ. ಡಬ್ಲ್ಯುಪಿಎಲ್ ಇತಿಹಾಸದಲ್ಲಿ 2ನೇ ಬಾರಿ ಆಕ್ಷನ್ ನಡೆಯುತ್ತಿದ್ದು, ಆಟಗಾರ್ತಿಯರು ಲಕ್ಷ ಲಕ್ಷ ಹಣವನ್ನು ತಮ್ಮ ಜೇಬಿಗಿಳಿಸಿಕೊಳ್ಳಲು ಸಜ್ಜಾಗಿದ್ದಾರೆ. ಈಗಾಗಲೇ 5 ತಂಡಗಳು 60 ಆಟಗಾರ್ತಿಯರನ್ನು (21 ಸಾಗರೋತ್ತರ) ಉಳಿಸಿಕೊಂಡಿದ್ದು, 29 ಮಂದಿಯನ್ನು ಬಿಡುಗಡೆ ಮಾಡಿವೆ.
ಹಾಗಾದರೆ ಯಾವ ತಂಡದ ಬಳಿ ಎಷ್ಟು ಪರ್ಸ್ ಮೊತ್ತ ಇದೆ? ಎಷ್ಟು ಸ್ಲಾಟ್ಗಳು ಖಾಲಿ ಇವೆ, ರಿಟೈನ್ ಮತ್ತು ರಿಲೀಸ್ ಆಟಗಾರ್ತಿಯರ ಪಟ್ಟಿ ಹೇಗಿದೆ? ಯಾವ ತಂಡದ ಬಳಿಕ ಹೆಚ್ಚಿನ ಪರ್ಸ್ ಇದೆ? ನೇರ ಪ್ರಸಾರ ವೀಕ್ಷಿಸುವುದೆಲ್ಲಿ? ಎಂಬುದರ ವಿವರ ಇಲ್ಲಿದೆ.
ದೆಹಲಿ ಕ್ಯಾಪಿಟಲ್ಸ್ (DC)
ಉಳಿಸಿಕೊಂಡಿರುವ ಆಟಗಾರ್ತಿಯರು: ಆಲಿಸ್ ಕ್ಯಾಪ್ಸೆ*, ಅರುಂಧತಿ ರೆಡ್ಡಿ, ಜೆಮಿಮಾ ರೋಡ್ರಿಗಸ್, ಜೆಸ್ ಜೊನಾಸೆನ್*, ಲಾರಾ ಹ್ಯಾರಿಸ್*, ಮರಿಜಾನ್ನೆ ಕಪ್*, ಮೆಗ್ ಲ್ಯಾನಿಂಗ್*, ಮಿನ್ನು ಮಣಿ, ಪೂನಂ ಯಾದವ್, ರಾಧಾ ಯಾದವ್, ಶಫಾಲಿ ವರ್ಮಾ, ಶಿಖಾ ಪಾಂಡೆ, ಸ್ನೇಹಾ ದೀಪ್ತಿ, ತಾನಿಯಾ, ಟಿಟಾಸ್ ಸಾಧು.
ಬಿಡುಗಡೆಯಾದ ಆಟಗಾರ್ತಿಯರು: ಅಪರ್ಣಾ ಮೊಂಡಲ್, ಜಸಿಯಾ ಅಖ್ತರ್, ತಾರಾ ನಾರ್ರಿಸ್*
ಗುಜರಾತ್ ಜೈಂಟ್ಸ್ (GG)
ಉಳಿಸಿಕೊಂಡಿರುವ ಆಟಗಾರ್ತಿಯರು: ಆ್ಯಶ್ಲೆ ಗಾರ್ಡ್ನರ್*, ಬೆತ್ ಮೂನಿ*, ದಯಾಲನ್ ಹೇಮಲತಾ, ಹರ್ಲೀನ್ ಡಿಯೋಲ್, ಲಾರಾ ವೊಲ್ವಾರ್ಡ್*, ಶಬ್ನಮ್ ಶಕಿಲ್, ಸ್ನೇಹ ರಾಣಾ, ತನುಜಾ ಕನ್ವರ್
ಬಿಡುಗಡೆಯಾದ ಆಟಗಾರ್ತಿಯರು: ಅನ್ನಾಬೆಲ್ ಸದರ್ಲ್ಯಾಂಡ್*, ಅಶ್ವನಿ ಕುಮಾರಿ, ಜಾರ್ಜಿಯಾ ವೇರ್ಹ್ಯಾಮ್*, ಹರ್ಲಿ ಗಾಲಾ, ಕಿಮ್ ಗಾರ್ತ್*, ಮಾನ್ಸಿ ಜೋಶಿ, ಮೋನಿಕಾ ಪಟೇಲ್, ಪರುಣಿಕಾ ಸಿಸೋಡಿಯಾ, ಸಬ್ಬಿನೇನಿ ಮೇಘನಾ, ಸೋಫಿಯಾ ಡಂಕ್ಲೆ*, ಸುಷ್ಮಾ ವರ್ಮಾ.
ಮುಂಬೈ ಇಂಡಿಯನ್ಸ್ (MI)
ಉಳಿಸಿಕೊಂಡಿರುವ ಆಟಗಾರ್ತಿಯರು: ಅಮನ್‌ಜೋತ್ ಕೌರ್, ಅಮೆಲಿಯಾ ಕೆರ್*, ಕ್ಲೋಯ್ ಟ್ರಯಾನ್*, ಹರ್ಮನ್‌ಪ್ರೀತ್ ಕೌರ್, ಹೇಲಿ ಮ್ಯಾಥ್ಯೂಸ್*, ಹುಮೈರಾ ಕಾಜಿ, ಇಸಾಬೆಲ್ಲೆ ವಾಂಗ್*, ಜಿಂಟಿಮಣಿ ಕಲಿತಾ, ನಟಾಲಿ ಸ್ಕೈವರ್*, ಪೂಜಾ ವಸ್ತ್ರಾಕರ್, ಪ್ರಿಯಾಂಕಾ ಬಾಲಾ, ಸೈಕಾ ಇಶಾಕ್, ಯಾಸ್ತಿಕಾ ಭಾಟಿಯಾ
ಬಿಡುಗಡೆಯಾದ ಆಟಗಾರ್ತಿಯರು: ಧಾರಾ ಗುಜ್ಜರ್, ಹೀದರ್ ಗ್ರಹಾಂ*, ನೀಲಂ ಬಿಷ್ಟ್, ಸೋನಮ್ ಯಾದವ್
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)
ಉಳಿಸಿಕೊಂಡಿರುವ ಆಟಗಾರ್ತಿಯರು: ಆಶಾ ಶೋಬನಾ, ದಿಶಾ ಕಸತ್, ಎಲ್ಲಿಸ್ ಪೆರ್ರಿ*, ಹೀದರ್ ನೈಟ್*, ಇಂದ್ರಾಣಿ ರಾಯ್, ಕನಿಕಾ ಅಹುಜಾ, ರೇಣುಕಾ ಸಿಂಗ್, ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್, ಸ್ಮೃತಿ ಮಂಧಾನ, ಸೋಫಿ ಡಿವೈನ್*
ಬಿಡುಗಡೆಯಾದ ಆಟಗಾರ್ತಿಯರು: ಡೇನೆ ವ್ಯಾನ್ ನೀಕರ್ಕ್*, ಎರಿನ್ ಬರ್ನ್ಸ್*, ಕೋಮಲ್ ಝಂಜಾದ್, ಮೇಗನ್ ಶುಟ್*, ಪೂನಮ್ ಖೇಮ್ನಾರ್, ಪ್ರೀತಿ ಬೋಸ್, ಸಹನಾ ಪವಾರ್
ಯುಪಿ ವಾರಿಯರ್ಸ್ (UPW)
ಉಳಿಸಿಕೊಂಡಿರುವ ಆಟಗಾರ್ತಿಯರು: ಅಲಿಸ್ಸಾ ಹೀಲಿ*, ಅಂಜಲಿ ಸರ್ವಾಣಿ, ದೀಪ್ತಿ ಶರ್ಮಾ, ಗ್ರೇಸ್ ಹ್ಯಾರಿಸ್*, ಕಿರಣ್ ನವಗಿರೆ, ಲಾರೆನ್ ಬೆಲ್*, ಲಕ್ಷ್ಮಿ ಯಾದವ್, ಪಾರ್ಶವಿ ಚೋಪ್ರಾ, ರಾಜೇಶ್ವರಿ ಗಾಯಕ್ವಾಡ್, ಎಸ್ ಯಶಸ್ರಿ, ಶ್ವೇತಾ ಸೆಹ್ರಾವತ್, ಸೋಫಿ ಎಕ್ಲೆಸ್ಟೋನ್*, ತಹ್ಲಿಯಾ*
ಬಿಡುಗಡೆಯಾದ ಆಟಗಾರ್ತಿಯರು: ದೇವಿಕಾ ವೈದ್ಯ, ಶಬ್ನಿಮ್ ಇಸ್ಮಾಯಿಲ್*, ಶಿವಾಲಿ ಶಿಂಧೆ, ಸಿಮ್ರಾನ್ ಶೇಖ್.
ಪರ್ಸ್ ಗಾತ್ರ, ಸ್ಲಾಟ್ಗಳು
ಮುಂಬೈ ಇಂಡಿಯನ್ಸ್: ಹರ್ಮನ್ ನೇತೃತ್ವದ ತಂಡದಲ್ಲಿ 2.1 ಕೋಟಿ ಮಾತ್ರ ಉಳಿದಿದೆ. 1 ಒಂದು ವಿದೇಶಿ ಸೇರಿ ಒಟ್ಟು 5 ಸ್ಲಾಟ್ಗಳನ್ನು ತುಂಬಬೇಕಿದೆ.
ಡೆಲ್ಲಿ ಕ್ಯಾಪಿಟಲ್ಸ್: ಮೆಗ್ ಲ್ಯಾನಿಂಗ್ ನಾಯಕತ್ವದ ಡೆಲ್ಲಿ ತಂಡದಲ್ಲಿ 2.25 ಕೋಟಿ ಪರ್ಸ್ ಮೊತ್ತ ಇದೆ. 1 ವಿದೇಶಿ ಸೇರಿ ಮೂವರ ಮೇಲೆ ಬಂಡವಾಳ ಹೂಡಬೇಕು.
ಯುಪಿ ವಾರಿಯರ್ಸ್: ಅಲಿಸಾ ಹೀಲಿ ಸಾರಥ್ಯದ ಯುಪಿ ತಂಡದಲ್ಲಿ 4 ಕೋಟಿ ಪರ್ಸ್ ಮೊತ್ತ ಇದೆ. ಒಂದು 1 ವಿದೇಶಿ ಸೇರಿ 5 ಆಟಗಾರ್ತಿಯರನ್ನು ತಂಡಕ್ಕೆ ಖರೀದಿಸಬೇಕಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸ್ಮೃತಿ ಮಂಧಾನ ಕ್ಯಾಪ್ಟನ್ಸಿಯ ಆರ್ಸಿಬಿಯಲ್ಲಿ 3.35 ಕೋಟಿ ಬಜೆಟ್ ಉಳಿದಿದೆ. 3 ವಿದೇಶಿ ಸೇರಿ ಒಟ್ಟು 7 ಭಾರತದ ಆಟಗಾರ್ತಿಯರನ್ನು ಖರೀದಿಸಬೇಕು.
ಗುಜರಾತ್ ಜೈಂಟ್ಸ್: ಅತಿ ಹೆಚ್ಚು ಬಜೆಟ್ ಹೊಂದಿರುವ ತಂಡ ಎನಿಸಿರುವ ಗುಜರಾತ್ ಪರ್ಸ್ನಲ್ಲಿ 5.95 ಕೋಟಿ ಇದೆ. 3 ವಿದೇಶಿ ಸೇರಿ 10 ಆಟಗಾರ್ತಿಯರನ್ನು ಖರೀದಿಸಬೇಕು.
ಹರಾಜಿನಲ್ಲಿ ಎಷ್ಟಿದ್ದಾರೆ?
2024ರ ಮಹಿಳಾ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಒಟ್ಟು 165 (56 ಕ್ಯಾಪ್ಡ್, 109 ಅನ್‌ಕ್ಯಾಪ್ಡ್) ಆಟಗಾರ್ತಿಯರಿದ್ದಾರೆ. ಈ ಪೈಕಿ 104 ಭಾರತೀಯರ ಜೊತೆಗೆ 61 ವಿದೇಶಿ ಆಟಗಾರ್ತಿಯರಿದ್ದಾರೆ ಎಂಬುದು ವಿಶೇಷ. ದೇವಿಕಾ ವೈದ್ಯ (ಮೂಲ ಬೆಲೆ: ರೂ 30 ಲಕ್ಷ), ದೆಯಾಂಡ್ರಾ ದೊಟ್ಟಿನ್ (ಮೂಲ ಬೆಲೆ: ರೂ. 50 ಲಕ್ಷ, ಚಾಮರಿ ಅಟ್ಟಪಟ್ಟು (ಮೂಲ ಬೆಲೆ: ರೂ. 30 ಲಕ್ಷ, ಶಬ್ನಿಮ್ ಇಸ್ಮಾಯಿಲ್ (ಮೂಲ ಬೆಲೆ: ರೂ. 40 ಲಕ್ಷ) ಸೇರಿದಂತೆ ಹಲವು ದೊಡ್ಡ ಹೆಸರುಗಳಾಗಿವೆ.
ಹರಾಜನ್ನು ಎಲ್ಲಿ ವೀಕ್ಷಿಸಬೇಕು?
2024ರ ಡಬ್ಲ್ಯುಪಿಎಲ್ ಹರಾಜನ್ನು ಸ್ಪೋರ್ಟ್ಸ್ 18ನಲ್ಲಿ ಪ್ರಸಾರ ಮಾಡಲಾಗುತ್ತದೆ. ಜಿಯೋ ಸಿನಿಮಾ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್‌ಸ್ಟ್ರೀಮ್ ಮಾಡಲಾಗುತ್ತದೆ.
ಗಮನಕ್ಕೆ - ಸ್ಟಾರ್ * ಎಂದು ಗುರುತು ಹಾಕಿರುವ ಆಟಗಾರ್ತಿಯರು ವಿದೇಶಿಗರು ಎಂದರ್ಥ.