logo
ಕನ್ನಡ ಸುದ್ದಿ  /  ಕ್ರಿಕೆಟ್  /  Wpl 2024: ಡಬ್ಲ್ಯುಪಿಎಲ್ ಹರಾಜು ದಿನ ಪ್ರಕಟ; ಉಳಿಸಿಕೊಂಡ-ಬಿಡುಗಡೆಯಾದ ಆಟಗಾರ್ತಿಯರ ಪಟ್ಟಿ ಹೀಗಿದೆ

WPL 2024: ಡಬ್ಲ್ಯುಪಿಎಲ್ ಹರಾಜು ದಿನ ಪ್ರಕಟ; ಉಳಿಸಿಕೊಂಡ-ಬಿಡುಗಡೆಯಾದ ಆಟಗಾರ್ತಿಯರ ಪಟ್ಟಿ ಹೀಗಿದೆ

Prasanna Kumar P N HT Kannada

Nov 25, 2023 04:35 PM IST

google News

ಡಬ್ಲ್ಯುಪಿಎಲ್ ಹರಾಜು ದಿನ ಪ್ರಕಟ.

    • WPL 2024 Mini Auction: ಮಹಿಳೆಯರ ಪ್ರೀಮಿಯರ್ ಲೀಗ್​ನಲ್ಲಿ ಯಾವ ತಂಡ ಯಾರನ್ನು ಉಳಿಸಿಕೊಂಡಿದೆ? ಯಾರನ್ನು ತಂಡದಿಂದ ಕೈಬಿಟ್ಟಿವೆ ಎಂಬ ಪಟ್ಟಿಯನ್ನು ಈ ಮುಂದೆ ನೋಡೋಣ.
ಡಬ್ಲ್ಯುಪಿಎಲ್ ಹರಾಜು ದಿನ ಪ್ರಕಟ.
ಡಬ್ಲ್ಯುಪಿಎಲ್ ಹರಾಜು ದಿನ ಪ್ರಕಟ.

ಮಹಿಳೆಯರ ಪ್ರೀಮಿಯರ್ ಲೀಗ್ (Women’s Premier League) ಮಿನಿ ಹರಾಜು ಪ್ರಕ್ರಿಯೆ ಡಿಸೆಂಬರ್ 9ರಂದು ಮುಂಬೈನಲ್ಲಿ ನಡೆಯಲಿದೆ. ಇದೀಗ ಎಲ್ಲಾ ತಂಡಗಳು ತಮ್ಮ ಉಳಿಸಿಕೊಳ್ಳುವ ಪಟ್ಟಿ ಬಿಡುಗಡೆ ಮಾಡಿವೆ. ಉದ್ಘಾಟನಾ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್​ ಚೊಚ್ಚಲ ಟ್ರೋಫಿ ಗೆದ್ದುಕೊಂಡಿತ್ತು. ಡೆಲ್ಲಿ ಕ್ಯಾಪಿಟಲ್ಸ್​ ರನ್ನರ್​ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

ಮುಂಬೈ, ಡೆಲ್ಲಿ, ಬೆಂಗಳೂರು, ಗುಜರಾತ್ ಮತ್ತು ಯುಪಿ ತಂಡಗಳು 21 ವಿದೇಶಿ ಆಟಗಾರ್ತಿಯರು ಸೇರಿದಂತೆ 60 ಮಂದಿಯನ್ನು ಮಿನಿ ಹರಾಜಿಗೂ ಮುನ್ನ ಉಳಿಸಿಕೊಂಡಿವೆ. 5 ತಂಡಗಳು ಒಟ್ಟು 29 ಆಟಗಾರ್ತಿಯರನ್ನು ತಂಡದಿಂದ ಕೈಬಿಟ್ಟಿವೆ. ಹಾಗಾದರೆ ಯಾವ ತಂಡ ಯಾರನ್ನು ಉಳಿಸಿಕೊಂಡಿದೆ? ಯಾರನ್ನು ತಂಡದಿಂದ ಕೈಬಿಟ್ಟಿವೆ ಎಂಬ ಪಟ್ಟಿಯನ್ನು ಈ ಮುಂದೆ ನೋಡೋಣ.

ದೆಹಲಿ ಕ್ಯಾಪಿಟಲ್ಸ್ (Delhi Capitals)

ಉಳಿಸಿಕೊಂಡಿರುವ ಆಟಗಾರ್ತಿಯರು: ಆಲಿಸ್ ಕ್ಯಾಪ್ಸೆ*, ಅರುಂಧತಿ ರೆಡ್ಡಿ, ಜೆಮಿಮಾ ರೋಡ್ರಿಗಸ್, ಜೆಸ್ ಜೊನಾಸೆನ್*, ಲೋರಾ ಹ್ಯಾರಿಸ್*, ಮರಿಜಾನ್ನೆ ಕಪ್*, ಮೆಗ್ ಲ್ಯಾನಿಂಗ್*, ಮಿನ್ನು ಮಣಿ, ಪೂನಂ ಯಾದವ್, ರಾಧಾ ಯಾದವ್, ಶಫಾಲಿ ವರ್ಮಾ, ಶಿಖಾ ಪಾಂಡೆ, ಸ್ನೇಹಾ ದೀಪ್ತಿ, ತಾನಿಯಾ, ಟಿಟಾಸ್ ಸಾಧು

ಬಿಡುಗಡೆಯಾದ ಆಟಗಾರ್ತಿಯರು: ಅಪರ್ಣಾ ಮೊಂಡಲ್, ಜಸಿಯಾ ಅಖ್ತರ್, ತಾರಾ ನಾರ್ರಿಸ್*

ಗುಜರಾತ್ ಜೈಂಟ್ಸ್ (Gujarat Giants)

ಉಳಿಸಿಕೊಂಡಿರುವ ಆಟಗಾರ್ತಿಯರು: ಆಶ್ಲೆ ಗಾರ್ಡ್ನರ್*, ಬೆತ್ ಮೂನಿ*, ದಯಾಲನ್ ಹೇಮಲತಾ, ಹರ್ಲೀನ್ ಡಿಯೋಲ್, ಲಾರಾ ವೊಲ್ವಾರ್ಡ್*, ಶಬ್ನಮ್ ಶಕಿಲ್, ಸ್ನೇಹ ರಾಣಾ, ತನುಜಾ ಕನ್ವರ್

ಬಿಡುಗಡೆಯಾದ ಆಟಗಾರ್ತಿಯರು: ಅನ್ನಾಬೆಲ್ ಸದರ್ಲ್ಯಾಂಡ್*, ಅಶ್ವನಿ ಕುಮಾರಿ, ಜಾರ್ಜಿಯಾ ವೇರ್ಹ್ಯಾಮ್*, ಹರ್ಲಿ ಗಾಲಾ, ಕಿಮ್ ಗಾರ್ತ್*, ಮಾನ್ಸಿ ಜೋಶಿ, ಮೋನಿಕಾ ಪಟೇಲ್, ಪರುಣಿಕಾ ಸಿಸೋಡಿಯಾ, ಸಬ್ಬಿನೇನಿ ಮೇಘನಾ, ಸೋಫಿಯಾ ಡಂಕ್ಲೆ*, ಸುಷ್ಮಾ ವರ್ಮಾ

ಮುಂಬೈ ಇಂಡಿಯನ್ಸ್ (Mumbai Indians)

ಉಳಿಸಿಕೊಂಡಿರುವ ಆಟಗಾರ್ತಿಯರು: ಅಮನ್‌ಜೋತ್ ಕೌರ್, ಅಮೆಲಿಯಾ ಕೆರ್*, ಕ್ಲೋಯ್ ಟ್ರಯಾನ್*, ಹರ್ಮನ್‌ಪ್ರೀತ್ ಕೌರ್, ಹೇಲಿ ಮ್ಯಾಥ್ಯೂಸ್*, ಹುಮೈರಾ ಕಾಜಿ, ಇಸಾಬೆಲ್ಲೆ ವಾಂಗ್*, ಜಿಂಟಿಮಣಿ ಕಲಿತಾ, ನಟಾಲಿ ಸೀವರ್*, ಪೂಜಾ ವಸ್ತ್ರಾಕರ್, ಪ್ರಿಯಾಂಕಾ ಬಾಲಾ, ಸೈಕಾ ಇಶಾಕ್, ಯಾಸ್ತಿಕಾ ಭಾಟಿಯಾ

ಬಿಡುಗಡೆಯಾದ ಆಟಗಾರ್ತಿಯರು: ಧಾರಾ ಗುಜ್ಜರ್, ಹೀದರ್ ಗ್ರಹಾಂ*, ನೀಲಂ ಬಿಷ್ಟ್, ಸೋನಮ್ ಯಾದವ್.

ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore)

ಉಳಿಸಿಕೊಂಡಿರುವ ಆಟಗಾರ್ತಿಯರು: ಆಶಾ ಶೋಬನಾ, ದಿಶಾ ಕಸತ್, ಎಲ್ಲಿಸ್ ಪೆರ್ರಿ*, ಹೀದರ್ ನೈಟ್*, ಇಂದ್ರಾಣಿ ರಾಯ್, ಕನಿಕಾ ಅಹುಜಾ, ರೇಣುಕಾ ಸಿಂಗ್, ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್, ಸ್ಮೃತಿ ಮಂಧಾನ, ಸೋಫಿ ಡಿವೈನ್*

ಬಿಡುಗಡೆಯಾದ ಆಟಗಾರ್ತಿಯರು: ಡೇನೆ ವ್ಯಾನ್ ನೀಕರ್ಕ್*, ಎರಿನ್ ಬರ್ನ್ಸ್*, ಕೋಮಲ್ ಝಂಜಾದ್, ಮೇಗನ್ ಶುಟ್*, ಪೂನಮ್ ಖೇಮ್ನಾರ್, ಪ್ರೀತಿ ಬೋಸ್, ಸಹನಾ ಪವಾರ್

ಯುಪಿ ವಾರಿಯರ್ಜ್ (UP Warriorz)

ಉಳಿಸಿಕೊಂಡಿರುವ ಆಟಗಾರ್ತಿಯರು: ಅಲಿಸ್ಸಾ ಹೀಲಿ*, ಅಂಜಲಿ ಸರ್ವಾಣಿ, ದೀಪ್ತಿ ಶರ್ಮಾ, ಗ್ರೇಸ್ ಹ್ಯಾರಿಸ್*, ಕಿರಣ್ ನವಗಿರೆ, ಲಾರೆನ್ ಬೆಲ್*, ಲಕ್ಷ್ಮಿ ಯಾದವ್, ಪಾರ್ಶವಿ ಚೋಪ್ರಾ, ರಾಜೇಶ್ವರಿ ಗಾಯಕ್ವಾಡ್, ಎಸ್ ಯಶಸ್ರಿ, ಶ್ವೇತಾ ಸೆಹ್ರಾವತ್, ಸೋಫಿ ಎಕ್ಲೆಸ್ಟೋನ್*, ತಹ್ಲಿಯಾ*

ಬಿಡುಗಡೆಯಾದ ಆಟಗಾರ್ತಿಯರು: ದೇವಿಕಾ ವೈದ್ಯ, ಶಬ್ನಿಮ್ ಇಸ್ಮಾಯಿಲ್*, ಶಿವಾಲಿ ಶಿಂಧೆ, ಸಿಮ್ರಾನ್ ಶೇಖ್.

(ಗಮನಿಸಿ: ಸ್ಟಾರ್​ * ಎಂದು ಗುರುತಿಸಿದವರು ವಿದೇಶಿ ಆಟಗಾರ್ತಿಯರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ