logo
ಕನ್ನಡ ಸುದ್ದಿ  /  ಕ್ರಿಕೆಟ್  /  Wpl Auction 2024: ಡಬ್ಲ್ಯುಪಿಎಲ್ ಹರಾಜು ಮುಕ್ತಾಯ; ಐದು ತಂಡಗಳ ಪೂರ್ಣ ಪಟ್ಟಿ ಹೀಗಿದೆ

WPL Auction 2024: ಡಬ್ಲ್ಯುಪಿಎಲ್ ಹರಾಜು ಮುಕ್ತಾಯ; ಐದು ತಂಡಗಳ ಪೂರ್ಣ ಪಟ್ಟಿ ಹೀಗಿದೆ

Prasanna Kumar P N HT Kannada

Dec 09, 2023 08:33 PM IST

google News

ಹರಾಜು ನಡೆಸಿಕೊಟ್ಟ ಮಲ್ಲಿಕಾ ಸಾಗರ್.

    • WPL Auction 2024: ಮಹಿಳಾ ಪ್ರೀಮಿಯರ್ ಲೀಗ್ ಹರಾಜು ಮುಕ್ತಾಯಗೊಂಡಿದ್ದು, ಯಾವ ತಂಡ ಯಾರನ್ನು, ಎಷ್ಟು ಮೊತ್ತಕ್ಕೆ ಖರೀದಿಸಿದೆ ಎಂಬುದನ್ನು ಈ ಮುಂದೆ ನೋಡೋಣ.
ಹರಾಜು ನಡೆಸಿಕೊಟ್ಟ ಮಲ್ಲಿಕಾ ಸಾಗರ್.
ಹರಾಜು ನಡೆಸಿಕೊಟ್ಟ ಮಲ್ಲಿಕಾ ಸಾಗರ್.

ಮಹಿಳಾ ಪ್ರೀಮಿಯರ್ ಲೀಗ್​ 2024ರ ಮಿನಿ ಹರಾಜು (WPL Auction 2024) ಮುಕ್ತಾಯಗೊಂಡಿದೆ. ಎಲ್ಲಾ ಐದು ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರ್ತಿಯರನ್ನು ಖರೀದಿಸುವಲ್ಲಿ ಯಶಸ್ವಿಯಾಗಿವೆ. ಆದರೆ ಸ್ಟಾರ್​ ಆಟಗಾರ್ತಿಯರು ಅನ್​ಸೋಲ್ಡ್​ ಆಗಿದ್ದರೆ, ಕೆಲ ಅನ್​ಕ್ಯಾಪ್ಡ್​ ಪ್ಲೇಯರ್ಸ್ ದುಬಾರಿ ಮೊತ್ತ ಪಡೆಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಹರಾಜಿನ ನಂತರ 5 ತಂಡಗಳಲ್ಲೂ 6 ವಿದೇಶಿ ಆಟಗಾರ್ತಿಯರು ಸೇರಿ 18 ಮಂದಿ ಇದ್ದಾರೆ. 9 ವಿದೇಶಿಯರು ಸೇರಿ 30 ಮಂದಿ ಈ ಹರಾಜಿನಲ್ಲಿ ಸೋಲ್ಡ್ ಆಗಿದ್ದಾರೆ.

ಚಾಮರಿ ಅಟ್ಟಪಟ್ಟು, ದಿಯೆಂಡ್ರಾ ಡಾಟಿನ್, ಕಿಮ್ ಗಾರ್ತ್, ಆ್ಯಮಿ ಜೋನ್ಸ್ ಸೇರಿದಂತೆ ಸ್ಟಾರ್​​ ಪ್ಲೇಯರ್​​ಗಳೇ ಖರೀದಿಯಾಗದೆ ಉಳಿದಿದ್ದಾರೆ. ಆದರೆ ಕರ್ನಾಟಕದ ವೃಂದಾ ದಿನೇಶ್, ಕಾಶ್ವೀ ಗೌತಮ್, ಅನ್ನಾಬೆಲ್ ಸದರ್ಲೆಂಡ್ ಸೇರಿದಂತೆ ಹಲವು ಕೋಟಿ ಕೋಟಿ ಜಾಕ್​ ಪಾಟ್ ಹೊಡೆದಿದ್ದಾರೆ. ಹಾಗಾದರೆ ಯಾವ ತಂಡ ಯಾರನ್ನು, ಎಷ್ಟು ಮೊತ್ತಕ್ಕೆ ಖರೀದಿಸಿದೆ ಎಂಬುದನ್ನು ಈ ಮುಂದೆ ನೋಡೋಣ.

ಡೆಲ್ಲಿ ಕ್ಯಾಪಿಟಲ್ಸ್​

ಡೆಲ್ಲಿ ತಂಡದಲ್ಲಿ 2.25 ಕೋಟಿ ಪರ್ಸ್ ಮೊತ್ತ ಇತ್ತು. ಈ ಹಣದಲ್ಲಿ ಮೂವರನ್ನು ಖರೀದಿಸಿದೆ. ಈ ಪೈಕಿ ಆಸೀಸ್​ನ ಅನ್ನಾಬೆಲ್ ಸದರ್ಲೆಂಡ್​ಗೆ 2 ಕೋಟಿ ನೀಡಿದೆ. ಉಳಿದಂತೆ, ವಿಕೆಟ್​ ಕೀಪರ್ ಅಪರ್ಣಾ ಮೊಂಡಲ್, ಆಲ್​ರೌಂಡರ್ ಅಶ್ವಿನ್ ಕುಮಾರಿ ಅವರಿಗೆ ತಲಾ 10 ಲಕ್ಷ ನೀಡಿದೆ. ತಂಡದ ಪರ್ಸ್​ನಲ್ಲಿ 5 ಲಕ್ಷ ಮಾತ್ರ ಉಳಿದಿದೆ.

ಡೆಲ್ಲಿ ತಂಡದ ಸಂಪೂರ್ಣ ಪಟ್ಟಿ: ಆಲಿಸ್ ಕ್ಯಾಪ್ಸೆ, ಅರುಂಧತಿ ರೆಡ್ಡಿ, ಜೆಮಿಮಾ ರೋಡ್ರಿಗಸ್, ಜೆಸ್ ಜೊನಾಸೆನ*, ಲಾರಾ ಹ್ಯಾರಿಸ್, ಮರಿಜಾನ್ನೆ ಕಪ್, ಮೆಗ್ ಲ್ಯಾನಿಂಗ್, ಮಿನ್ನು ಮಣಿ, ಪೂನಂ ಯಾದವ್, ರಾಧಾ ಯಾದವ್, ಶಫಾಲಿ ವರ್ಮಾ, ಶಿಖಾ ಪಾಂಡೆ, ಸ್ನೇಹಾ ದೀಪ್ತಿ, ತಾನಿಯಾ, ಟಿಟಾಸ್ ಸಾಧು. ಖರೀದಿಸಿದ ಆಟಗಾರ್ತಿಯರು: ಅನ್ನಾಬೆಲ್ ಸದರ್ಲೆಂಡ್, ಅಶ್ವಿನ್ ಕುಮಾರಿ, ಅಪರ್ಣಾ ಮೊಂಡಲ್.

ಮುಂಬೈ ಇಂಡಿಯನ್ಸ್

ಹರ್ಮನ್ ನೇತೃತ್ವದ ತಂಡದಲ್ಲಿದ್ದ 2.1 ಕೋಟಿ ಪರ್ಸ್​​​ನಲ್ಲಿ ಐವರನ್ನು ಖರೀದಿಸಬೇಕಿತ್ತು. ಅದರಂತೆ ಐವರನ್ನು ಬುಟ್ಟಿಗೆ ಹಾಕಿಕೊಂಡಿದ್ದು, ಮುಂಬೈ ಪರ್ಸ್​​ನಲ್ಲಿ ಇನ್ನೂ 45 ಲಕ್ಷ ಉಳಿದಿದೆ. ಸೌತ್​ ಆಫ್ರಿಕಾದ ವೇಗದ ಬೌಲರ್ ಶಬ್ನಿಮ್ ಇಸ್ಮಾಯಿಲ್​​ಗೆ 1.2 ಕೋಟಿ ನೀಡಿದರೆ, ಭಾರತದ ಆಲ್​ರೌಂಡರ್​ ಸಜನಾಗೆ 15 ಲಕ್ಷ, ಅಮನ್​ ದೀಪ್ ಕೌರ್, ಫಾತಿಮಾ ಜಾಫರ್​, ಕೀರ್ತನಾ ಬಾಲಕೃಷ್ಣನ್​ಗೆ ತಲಾ 10 ಲಕ್ಷ ನೀಡಿ ಖರೀದಿಸಿದೆ.

ಮುಂಬೈ ಸಂಪೂರ್ಣ ತಂಡ: ಅಮನ್‌ಜೋತ್ ಕೌರ್, ಅಮೆಲಿಯಾ ಕೆರ್*, ಕ್ಲೋಯ್ ಟ್ರಯಾನ್, ಹರ್ಮನ್‌ಪ್ರೀತ್ ಕೌರ್, ಹೇಲಿ ಮ್ಯಾಥ್ಯೂಸ್, ಹುಮೈರಾ ಕಾಜಿ, ಇಸಾಬೆಲ್ಲೆ ವಾಂಗ್, ಜಿಂಟಿಮಣಿ ಕಲಿತಾ, ನಟಾಲಿ ಸೀವರ್​, ಪೂಜಾ ವಸ್ತ್ರಾಕರ್, ಪ್ರಿಯಾಂಕಾ ಬಾಲಾ, ಸೈಕಾ ಇಶಾಕ್, ಯಾಸ್ತಿಕಾ ಭಾಟಿಯಾ. ಖರೀದಿಸಿದ ಆಟಗಾರ್ತಿಯರು: ಶಬ್ನಿಮ್ ಇಸ್ಮಾಯಿಲ್, ಸಜನಾ, ಅಮನ್​ ದೀಪ್ ಕೌರ್, ಫಾತಿಮಾ ಜಾಫರ್​, ಕೀರ್ತನಾ ಬಾಲಕೃಷ್ಣನ್.

ಯುಪಿ ವಾರಿಯರ್ಸ್

ಅಲಿಸಾ ಹೀಲಿ ಸಾರಥ್ಯದ ಯುಪಿ ತಂಡದಲ್ಲಿ 4 ಕೋಟಿ ಪರ್ಸ್ ಮೊತ್ತ ಇತ್ತು. ಈ ಹಣದಲ್ಲಿ ಐವರನ್ನು ಬುಟ್ಟಿಗೆ ಹಾಕಿಕೊಂಡಿದೆ. ಕರ್ನಾಟಕದ ಬ್ಯಾಟರ್ ವೃಂದಾ ದಿನೇಶ್​ಗೆ 1.30 ಕೋಟಿ ಸುರಿದಿರುವ ಯುಪಿ, ಇಂಗ್ಲೆಂಡ್​ ಸ್ಟಾರ್ ಬ್ಯಾಟರ್ ಡೇನಿಯಲ್ ವ್ಯಾಟ್​ಗೆ 30 ಲಕ್ಷ ಸುರಿದಿದೆ. ಗೌಹರ್​ ಸುಲ್ತಾನಗೆ 30 ಲಕ್ಷ, ಭಾರತದ ಆಲ್​ರೌಂಡರ್​ಗಳಾದ ಪೂನಂ ಖೆನ್ನಾರ್​ ಮತ್ತು ಸೈಮಾ ಠಾಕೂರ್​ಗೆ ತಲಾ 10 ಲಕ್ಷ ನೀಡಲಾಗಿದೆ. 1.90 ಲಕ್ಷ ತಂಡದ ಪರ್ಸ್​ನಲ್ಲಿ ಉಳಿದಿದೆ.

ಯುಪಿ ಸಂಪೂರ್ಣ ತಂಡ: ಅಲಿಸ್ಸಾ ಹೀಲಿ, ಅಂಜಲಿ ಸರ್ವಾಣಿ, ದೀಪ್ತಿ ಶರ್ಮಾ, ಗ್ರೇಸ್ ಹ್ಯಾರಿಸ್, ಕಿರಣ್ ನವಗಿರೆ, ಲಾರೆನ್ ಬೆಲ್, ಲಕ್ಷ್ಮಿ ಯಾದವ್, ಪಾರ್ಶವಿ ಚೋಪ್ರಾ, ರಾಜೇಶ್ವರಿ ಗಾಯಕ್ವಾಡ್, ಎಸ್ ಯಶಸ್ರಿ, ಶ್ವೇತಾ ಸೆಹ್ರಾವತ್, ಸೋಫಿ ಎಕ್ಲೆಸ್ಟೋನ್, ತಹ್ಲಿಯಾ ಮೆಗ್ರಾತ್. ಖರೀದಿಸಿದ ಆಟಗಾರ್ತಿಯರು: ವೃಂದಾ ದಿನೇಶ್, ಡೇನಿಯಲ್ ವ್ಯಾಟ್, ಗೌಹರ್ ಸುಲ್ತಾನ, ಪೂನಂ ಖೆನ್ನಾರ್, ಸೈಮಾ ಠಾಕೂರ್​.

ರಾಯಲ್ ಚಾಲೆಂಜರ್ಸ್ ಬೆಂಗಳೂರು

ಸ್ಮೃತಿ ಮಂಧಾನ ಕ್ಯಾಪ್ಟನ್ಸಿಯ ಆರ್​ಸಿಬಿಯಲ್ಲಿ 3.35 ಕೋಟಿ ಬಜೆಟ್ ಉಳಿದಿತ್ತು. ಈ ಹಣದಲ್ಲಿ ಮೂವರು ವಿದೇಶಿಯರು, ನಾಲ್ವರು ಭಾರತದ ಆಟಗಾರ್ತಿಯರನ್ನು ಖರೀದಿಸಿದೆ. ಭಾರತದ ಬೌಲರ್​ ಏಕ್ತಾ ಬಿಷ್ಟ್​ಗೆ 60 ಲಕ್ಷ ನೀಡಿರುವುದೇ ಅಧಿಕ ಮೊತ್ತವಾಗಿದೆ. ಜಾರ್ಜಿಯಾ ವೇರ್ಹ್ಯಾಮ್​ಗೆ 40 ಲಕ್ಷ, ಕೇಟ್ ಕ್ರಾಸ್​, ಸಬ್ಬಿನೇನಿ ಮೇಘನಾ, ಸೋಫಿ ಮೊಲಿನೆಕ್ಸ್, ಸಿಮ್ರಾನ್ ಬಹದ್ದೂರ್​ಗೆ ತಲಾ 30 ಲಕ್ಷ ನೀಡಿ ಖರೀದಿಸಲಾಗಿದೆ. ಕರ್ನಾಟಕದ ಶುಭಾ ಸತೀಶ್​ಗೆ 10 ಲಕ್ಷ ನೀಡಿದೆ. ಪರ್ಸ್​​ನಲ್ಲಿ 1.05 ಕೋಟಿ ಉಳಿದಿದೆ.

ಆರ್​ಸಿಬಿ ಪೂರ್ಣ ತಂಡ: ಆಶಾ ಶೋಭನಾ, ದಿಶಾ ಕಸತ್, ಎಲ್ಲಿಸ್ ಪೆರ್ರಿ, ಹೀದರ್ ನೈಟ್, ಇಂದ್ರಾಣಿ ರಾಯ್, ಕನಿಕಾ ಅಹುಜಾ, ರೇಣುಕಾ ಸಿಂಗ್, ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್, ಸ್ಮೃತಿ ಮಂಧಾನ, ಸೋಫಿ ಡಿವೈನ್. ಖರೀದಿಸಿದ ಆಟಗಾರ್ತಿಯರು: ಏಕ್ತಾ ಬಿಷ್ಟ್, ಕೇಟ್ ಕ್ರಾಸ್, ಜಾರ್ಜಿಯಾ ವೇರ್ಹ್ಯಾಮ್, ಸಬ್ಬಿನೇನಿ ಮೇಘನಾ, ಸೋಫಿ ಮೊಲಿನೆಕ್ಸ್, ಸಿಮ್ರಾನ್ ಬಹದ್ದೂರ್, ಶುಭಾ ಸತೀಶ್.

ಗುಜರಾತ್ ಜೈಂಟ್ಸ್​

ಗುಜರಾತ್ ಪರ್ಸ್​​ನಲ್ಲಿ 5.95 ಕೋಟಿ ಇತ್ತು. ಈ ಮೊತ್ತದಲ್ಲಿ ಮೂವರು ವಿದೇಶಿಯರು ಸೇರಿ 10 ಆಟಗಾರ್ತಿಯರನ್ನು ಖರೀದಿಸಿದೆ. ಅನ್​ಕ್ಯಾಪ್ಡ್ ಪ್ಲೇಯರ್​ ಕಾಶ್ವೀ ಗೌತಮ್​ಗೆ 2 ಕೋಟಿ ಸುರಿಯಲಾಗಿದೆ. ಉಳಿದಂತೆ ಫೋಬಿ ಲಿಚ್ಫೀಲ್ಡ್​ಗೆ 1 ಕೋಟಿ, ಮೇಘನಾ ಸಿಂಗ್​, ಲಾರೆನ್ ಚೀಟಲ್, ವೇದಾ ಕೃಷ್ಣಮೂರ್ತಿ ತಲಾ 30 ಲಕ್ಷ ಪಡೆದಿದ್ದಾರೆ. ಪ್ರಿಯಾ ಮಿಶ್ರಾ 20 ಲಕ್ಷ, ತ್ರಿಶಾ ಪೂಜಿತಾ, ಕ್ಯಾಥರಿನ್ ಬ್ರೈಸ್, ಮನ್ನತ್ ಕಶ್ಯಪ್, ತರನ್ನುಮ್ ಪಠಾಣ್ ತಲಾ 10 ಲಕ್ಷಕ್ಕೆ ಸೇಲ್ ಆಗಿದ್ದಾರೆ. ಇನ್ನೂ ಪರ್ಸ್​​ನಲ್ಲಿ 1.45 ಕೋಟಿ ಇದೆ.

ಗುಜರಾತ್ ಪೂರ್ಣ ತಂಡ: ಆ್ಯಶ್ಲೆ ಗಾರ್ಡ್ನರ್, ಬೆತ್ ಮೂನಿ, ದಯಾಲನ್ ಹೇಮಲತಾ, ಹರ್ಲೀನ್ ಡಿಯೋಲ್, ಲಾರಾ ವೊಲ್ವಾರ್ಡ್, ಶಬ್ನಮ್ ಶಕಿಲ್, ಸ್ನೇಹ ರಾಣಾ, ತನುಜಾ ಕನ್ವರ್. ಖರೀದಿಸಿದ ಆಟಗಾರ್ತಿಯರು: ಕಾಶ್ವೀ ಗೌತಮ್, ಫೋಬಿ ಲಿಚ್ಫೀಲ್ಡ್, ಮೇಘನಾ ಸಿಂಗ್​, ಲಾರೆನ್ ಚೀಟಲ್, ವೇದಾ ಕೃಷ್ಣಮೂರ್ತಿ, ಪ್ರಿಯಾ ಮಿಶ್ರಾ, ತ್ರಿಶಾ ಪೂಜಿತಾ, ಕ್ಯಾಥರಿನ್ ಬ್ರೈಸ್, ಮನ್ನತ್ ಕಶ್ಯಪ್, ತರನ್ನುಮ್ ಪಠಾಣ್.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ