logo
ಕನ್ನಡ ಸುದ್ದಿ  /  ಚುನಾವಣೆಗಳು  /  ದಕ್ಷಿಣ ಭಾರತದಲ್ಲಿ ಯಾರತ್ತ ಮತದಾರರ ಒಲವು, ಕೇರಳದಲ್ಲಿ ಖಾತೆ ತೆರೆಯುತ್ತದೆಯಂತೆ ಬಿಜೆಪಿ; ಚುನಾವಣಾ ಮತಗಟ್ಟೆ ಸಮೀಕ್ಷೆ ಅವಲೋಕನ

ದಕ್ಷಿಣ ಭಾರತದಲ್ಲಿ ಯಾರತ್ತ ಮತದಾರರ ಒಲವು, ಕೇರಳದಲ್ಲಿ ಖಾತೆ ತೆರೆಯುತ್ತದೆಯಂತೆ ಬಿಜೆಪಿ; ಚುನಾವಣಾ ಮತಗಟ್ಟೆ ಸಮೀಕ್ಷೆ ಅವಲೋಕನ

Praveen Chandra B HT Kannada

Jun 01, 2024 10:01 PM IST

google News

ದಕ್ಷಿಣ ಭಾರತದಲ್ಲಿ ಯಾರತ್ತ ಮತದಾರರ ಒಲವು, ಕೇರಳದಲ್ಲಿ ಖಾತೆ ತೆರೆಯುತ್ತದೆಯಂತೆ ಬಿಜೆಪಿ

    • ಕರ್ನಾಟಕ, ತಮಿಳುನಾಡು, ಕೇರಳ, ತೆಲಂಗಾಣ, ಆಂಧ್ರ ಪ್ರದೇಶ, ಪುದುಚೇರಿ ಸೇರಿದಂತೆ ದಕ್ಷಿಣ ಭಾರತದ ಚುನಾವಣಾ ಮತಗಟ್ಟೆ ಸಮೀಕ್ಷೆ ಪ್ರಕಟಗೊಂಡಿದೆ. ದಕ್ಷಿಣ ಭಾರತದಲ್ಲಿ ಈ ಬಾರಿ ಮತದಾರರ ಒಲವು ಯಾರ ಕಡೆಗೆ ಇರಬಹುದು? ಕೇರಳದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆಯಬಹುದೇ? ತಿಳಿದುಕೊಳ್ಳೋಣ ಬನ್ನಿ.
ದಕ್ಷಿಣ ಭಾರತದಲ್ಲಿ ಯಾರತ್ತ ಮತದಾರರ ಒಲವು, ಕೇರಳದಲ್ಲಿ ಖಾತೆ ತೆರೆಯುತ್ತದೆಯಂತೆ ಬಿಜೆಪಿ
ದಕ್ಷಿಣ ಭಾರತದಲ್ಲಿ ಯಾರತ್ತ ಮತದಾರರ ಒಲವು, ಕೇರಳದಲ್ಲಿ ಖಾತೆ ತೆರೆಯುತ್ತದೆಯಂತೆ ಬಿಜೆಪಿ

ಬೆಂಗಳೂರು: ಲೋಕಸಭಾ ಚುನಾವಣೆಯ ಮತಗಟ್ಟೆ ಸಮೀಕ್ಷೆ ಪ್ರಕಟಗೊಂಡಿದೆ. ದೇಶದಲ್ಲಿ ಈ ಬಾರಿಯೂ ಬಿಜೆಪಿ ಸರಕಾರ ರಚಿಸುವ ಸೂಚನೆಯನ್ನು ಮತಗಟ್ಟೆ ಸಮೀಕ್ಷೆಗಳು ನೀಡಿವೆ. ಇದೇ ಸಮಯದಲ್ಲಿ ಕರ್ನಾಟಕ, ತಮಿಳುನಾಡು, ಕೇರಳ, ತೆಲಂಗಾಣ, ಆಂಧ್ರ ಪ್ರದೇಶ, ಪುದುಚೇರಿ ಸೇರಿದಂತೆ ದಕ್ಷಿಣ ಭಾರತದಲ್ಲಿ ಮತದಾರರ ಒಲವು ಯಾರ ಕಡೆ ಇರಲಿದೆ? ಮೋದಿ ಹವಾ ದಕ್ಷಿಣ ಭಾರತದಲ್ಲಿ ಇನ್ನೂ ಇದೆಯೇ? ಕೇರಳದಲ್ಲಿ ಮೊದಲ ಬಾರಿಗೆ ಖಾತೆ ತೆರೆಯಲಿದೆಯೇ?

ಕರ್ನಾಟಕದಲ್ಲಿ ಬಿಜೆಪಿ 20-22, ಜೆಡಿಎಸ್‌ 2-3, ಕಾಂಗ್ರೆಸ್‌ 3-5, ಇತರರು 0 ಸ್ಥಾನಗಳನ್ನು ಗಳಿಸಬಹುದು ಎಂದು ಇಂಡಿಯಾ ಟುಡೇ, ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಮುನ್ಸೂಚನೆಯಲ್ಲಿ ಅಂದಾಜಿಸಿದೆ. ಇನ್ನಿತರ ಸಮೀಕ್ಷೆಗಳ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನಗಳು ದೊರಕಲಿವೆ. ಟಿವಿ9 ಪೋಲ್‌ಸ್ಟ್ರಾಟ್‌ ಪೀಪಲ್ಸ್ ಇನ್‌ಸೈಟ್‌ ಪ್ರಕಾರ ಬಿಜೆಪಿಗೆ 18 ಸ್ಥಾನಗಳು ದೊರಕಲಿವೆ. ಕಾಂಗ್ರೆಸ್‌ಗೆ ಎಂಟು ಸೀಟು ದೊರಕಲಿವೆ. ನ್ಯೂಸ್‌ 18 ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿಗೆ 21-24 ಸೀಟುಗಳು ದೊರಕಲಿವೆ. ಇಂಡಿಯಾ ಟೀವಿ ಪ್ರಕಾರ ಬಿಜೆಪಿಗೆ 18-22, ಸಿ ವೋಟರ್‌ ಪ್ರಕಾರ ಬಿಜೆಪಿಗೆ 23 ಸೀಟುಗಳು ದೊರಕಲಿವೆ. ಹೀಗೆ ಕರ್ನಾಟಕದಲ್ಲಿ ಮತದಾರರ ಬಹುತೇಕ ಒಲವು ಬಿಜೆಪಿ ಕಡೆಗೆ ಇರುವುದನ್ನು ಮತಗಟ್ಟೆ ಸಮೀಕ್ಷೆಗಳು ತೋರಿಸಿವೆ.

ಕೇರಳದಲ್ಲಿ ಖಾತೆ ತೆರೆಯುವುದೇ ಬಿಜೆಪಿ?

ಕರ್ನಾಟಕದಂತೆ ಕೇರಳ ಬಿಜೆಪಿಗೆ ಸರಳವಲ್ಲ. ಅಲ್ಲಿ ಒಂದು ಸ್ಥಾನ ಗೆಲ್ಲುವುದು ಕೂಡ ಸವಾಲಿನ ಸಂಗತಿ ಎನ್ನುವಂತೆ ಇದೆ. ಆದರೆ, ಈ ಬಾರಿ ಖಾತೆ ತೆರೆಯುವ ಸೂಚನೆ ಮತಗಟ್ಟೆ ಸಮೀಕ್ಷೆಗಳಿಂದ ತಿಳಿದುಬಂದಿದೆ. ವಿಎಂಆರ್‌ ಪ್ರಕಾರ ಕೇರಳದಲ್ಲಿ ಎನ್‌ಡಿಎ 1 ಸ್ಥಾನ ಗೆಲ್ಲುವ ಸೂಚನೆ ಇದೆ. ಕೇರಳದಲ್ಲಿ ಮತದಾರರ ಒಲವು ಕಾಂಗ್ರೆಸ್‌ ನೇತೃತ್ವದ ಯುನೈಟೆಡ್‌ ಡೆಮೊಕ್ರಾಟಿಕ್‌ ಫ್ರಂಟ್‌ (ಯುಡಿಎಫ್‌) ಕಡೆ ಇದೆ. ಯುಡಿಎಫ್‌ ಸುಮಾರು 19 ಸ್ಥಾನಗಳನ್ನು ಗೆಲ್ಲುವ ಸೂಚನೆ ಇದೆ. ಇದೇ ಸಮಯದಲ್ಲಿ ಸಿ ವೋಟರ್‌ ಕೂಡ ಯುಡಿಎಫ್‌ 17-19 ಸೀಟು ಗೆಲ್ಲುವ ಸೂಚನೆ ನೀಡಿದೆ. ಸಿ ವೋಟರ್‌ ಪ್ರಕಾರ ಬಿಜೆಪಿಯು 1-3 ಸೀಟುಗಳನ್ನು ಗೆಲ್ಲಬಹುದಂತೆ. ಇದು ಬಿಜೆಪಿಗೆ ತುಸು ಆಶಾದಾಯಕ ಸಮೀಕ್ಷೆ. ಆಕ್ಸಿಸ್‌ ಮೈ ಇಂಡಿಯಾದ ಪ್ರಕಾರ ಬಿಜೆಪಿಗೆ 2-3 ಸೀಟುಗಳು ದೊರಕಲಿದೆ. ಕಾಂಗ್ರೆಸ್‌ಗೆ 13-14 ಸೀಟುಗಳು ದೊರಕಲಿವೆಯಂತೆ.

ಆಂಧ್ರ- ತೆಲಂಗಾಣದಲ್ಲಿ ಪರಿಸ್ಥಿತಿ ಹೇಗೆ?

ಆಂಧ್ರಪ್ರದೇಶದಲ್ಲಿ ಮತದಾರರ ಹೆಚ್ಚಿನ ಒಲವು ವೈಎಸ್‌ಆರ್‌ ಪಕ್ಷದ ಕಡೆಗೆ ಇರುವಂತೆ ಇದೆ. ವೈಎಸ್‌ಆರ್‌ ಪಕ್ಷವು ಇಂದಿನ ಎಕ್ಸಿಟ್‌ ಪೋಲ್‌ ಫಲಿತಾಂಶದ ಪ್ರಕಾರ ವೈಎಸ್‌ಆರ್‌ ಪಕ್ಷ 13 ಸ್ಥಾನ ಗಳಿಸುವ ಮೇಲುಗೈ ಸಾಧಿಸಿದೆ. ಎರಡನೇ ಸ್ಥಾನದಲ್ಲಿರುವ ಟಿಡಿಪಿ 12 ಸ್ಥಾನ ಗಳಿಸಬಹುದು ಎಂದು ಅಂದಾಜಿಸಲಾಗಿದೆ. ಸೀ-ವೋಟರ್‌ ಸಮೀಕ್ಷೆ ಪ್ರಕಾರ ಎನ್‌ಡಿಎ 21-25, ವೈಎಸ್‌ಆರ್‌ಪಿಸಿ 0-4 ಸ್ಥಾನ ಗಳಿಸಲಿದೆಯಂತೆ. ಜನ್‌ ಕೀ ಬಾತ್‌ ಸಮೀಕ್ಷೆಯ ಪ್ರಕಾರ ಆಂಧ್ರಪ್ರದೇಶದಲ್ಲಿ ಬಿಜೆಪಿ 2-3, ಟಿಡಿಪಿ 10-14 ಹಾಗೂ ವೈಎಸ್‌ಆರ್‌ಸಿಪಿ 13-8 ಸೀಟುಗಳು ಗಳಿಸಲಿವೆ. ಇನ್ನೊಂದೆಡೆ ತೆಲಂಗಾಣದಲ್ಲಿ ಮತದಾರರ ಒಲವು ಫಿಫ್ಟಿ ಫಿಫ್ಟಿ ರೀತಿ ಇದೆ. ಅಂದರೆ, ಬಿಜೆಪಿ ಮತ್ತು ಕಾಂಗ್ರೆಸ್‌ಗಳ ನಡುವೆ ತೆಲಂಗಾಣದಲ್ಲಿ ತೀವ್ರ ಪೈಪೋಟಿ ಇರಲಿದೆ. ಕಾಂಗ್ರೆಸ್‌-ಬಿಜೆಪಿಗಳು ತಲಾ 7-9 ಸೀಟುಗಳನ್ನು ಗೆಲ್ಲುವ ಸೂಚನೆಯನ್ನು ಚುನಾವಣಾ ಮತಗಟ್ಟೆ ಸಮೀಕ್ಷೆಗಳು ನೀಡಿವೆ.

ಗೋವಾದಲ್ಲಿ ಇರೋದೇ ಎರಡು ಲೋಕಸಭಾ ಸ್ಥಾನಗಳು. ದಕ್ಷಿಣ ಗೋವಾ ಮತ್ತು ಉತ್ತರ ಗೋವಾದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ತಲಾ ಒಂದೊಂದು ಸ್ಥಾನಗಳನ್ನು ಭದ್ರಪಡಿಸುವ ಸೂಚನೆ ದೊರಕಿದೆ. ಇವೆರಡು ಪಕ್ಷಗಳ ನಡುವೆ ಪ್ರಬಲ ಪೈಪೋಟಿ ಇರಲಿವೆ.

ತಮಿಳುನಾಡಿನಲ್ಲಿ ಮತದಾರರ ಒಲವು ಯಾರ ಕಡೆ?

ಚಾಣಕ್ಯ ಸಮೀಕ್ಷೆ ಪ್ರಕಾರ ಡಿಎಂಕೆ ಕಡೆಗೆ ಹೆಚ್ಚಿನ ಮತದಾರರ ಒಲವು ಇರಲಿದೆ. ಡಿಎಂಕೆ 29 (5 ಪ್ಲಸ್‌ ಅಥವಾ ಮೈನಸ್‌) ಸ್ಥಾನಗಳನ್ನು ಪಡೆಯಲಿವೆ. ಎನ್‌ಡಿಟಿವಿ ಜನ್‌ ಕಿ ಬಾತ್‌ ಬಿಜೆಪಿಯು 1-3 ಸೀಟು ಗೆಲ್ಲಲಿದೆ. ಇಂಡಿಯಾ ಒಕ್ಕೂಟವು 36-38 ಸೀಟುಗಳನ್ನು ಗೆಲ್ಲಲಿದೆ. ಬಹುತೇಕ ಸಮೀಕ್ಷೆಗಳು ಹೆಚ್ಚಿನ ಮತದಾರರ ಒಲವು ಇಂಡಿಯಾ ಒಕ್ಕೂಟದ ಕಡೆಗೆ ಇರುವ ಸೂಚನೆ ನೀಡಿವೆ.

ಗಮನಿಸಿ: ಚುನಾವಣೆ ಫಲಿತಾಂಶ ಎಕ್ಸಿಟ್‌ ಪೋಲ್ ಸಂಖ್ಯೆಗಳಿಗಿಂತ ಭಿನ್ನವಾಗಿ ಇರಬಹುದು

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ