Kerala Exit Poll: ಕೇರಳದಲ್ಲಿ ಇಂಡಿಯಾ ಒಕ್ಕೂಟಕ್ಕೆ ಮುನ್ನಡೆ; ಭವಿಷ್ಯ ನುಡಿದ ಮತಗಟ್ಟೆ ಸಮೀಕ್ಷೆಗಳು, ಯಾರಿಗೆ ಎಷ್ಟು ಸೀಟು? ಇಲ್ಲಿದೆ ವಿವರ
Kerala Exit Poll Result: ಲೋಕಸಭಾ ಚುನಾವಣೆಯ ಎಕ್ಸಿಟ್ ಪೋಲ್ ಸಮೀಕ್ಷೆಗಳು ಹೊರಬೀಳುತ್ತಿವೆ. ಈ ಬಾರಿ ಕೇರಳದಲ್ಲಿ ಇಂಡಿಯಾ ಒಕ್ಕೂಟಕ್ಕೆ ಮುನ್ನಡೆ ದೊರಕಲಿದೆ ಎಂದು ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಭವಿಷ್ಯ ನುಡಿದಿದೆ. ರಾಹುಲ್ ಗಾಂಧಿ, ಶಶಿ ತರೂರು ಮುಂತಾದವರಿಗೆ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.
ಬೆಂಗಳೂರು: ಕೇರಳದಲ್ಲಿ ಏಪ್ರಿಲ್ 26ರಂದು ಲೋಕಸಭಾ ಸುನವಾಣೆ ನಡೆದಿತ್ತು. ಲೋಕಸಭೆಗೆ 20 ಸದಸ್ಯರು ಗೆಲುವಿನ ಹವಣಿಕೆಯಲ್ಲಿದ್ದಾರೆ. ಜೂನ್ 4, 2024ರಂದು ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳಲಿದೆ. ಇದೀಗ ವಿವಿಧ ಚುನಾವಣಾ ಮತಗಟ್ಟೆ ಸಮೀಕ್ಷೆಗಳು ಹೊರಬಿದ್ದಿವೆ. ಆಕ್ಸಿಸ್ ಮೈ ಇಂಡಿಯಾ, ಸಿ ವೋಟರ್, ಇಂಡಿಯಾ ಟುಡೇ ಆಕ್ಸಿಸ್, ಎಬಿಪಿ ನ್ಯೂಸ್-ಸಿವೋಟರ್, ಟೈಮ್ಸ್ ನೌ, ನ್ಯೂಸ್ 18 ಐಬಿಎಸ್‌ಒಎಸ್, ರಿಪಬ್ಲಿಕ್ ಟಿವಿ ಜನ್ ಕೀ ಬಾತ್, ಟುಡೇಸ್ ಚಾಣಾಕ್ಯ ಚುನಾವಣಾ ಸಮೀಕ್ಷೆ ಹೊರಬಿದ್ದಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಈ ಸಮೀಕ್ಷೆಗಳ ಪ್ರಕಾರ ಯಾರಿಗೆ ಎಷ್ಟು ಸ್ಥಾನ ದೊರಕಲಿದೆ ಎಂಬ ವಿವರ ಇಲ್ಲಿದೆ.
ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ
ದಕ್ಷಿಣ ಭಾರತದ ಪ್ರಮುಖ ರಾಜ್ಯವಾಗಿರುವ ಕೇರಳದಲ್ಲಿ ಇಂಡಿಯಾ ಒಕ್ಕೂಟ ನಿಚ್ಚಳ ಮೇಲುಗೈ ಸಾಧಿಸಲಿದೆ ಎಂದು ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಭವಿಷ್ಯ ನುಡಿದಿದೆ. ಕೇರಳದಲ್ಲಿ ಯುಡಿಎಫ್ ಶೇ 41, ಎನ್‌ಎ ಶೇ 27, ಎಲ್‌ಡಿಎಫ್ ಶೇ 29, ಇತರರು ಶೇ 3 ರಷ್ಟು ಮತ ಗಳಿಸಲಿದ್ದಾರೆ. ಯುಡಿಎಫ್- 17-19, ಎಲ್‌ಡಿಎಫ್ 0-1, ಎನ್‌ಡಿಎ 2-3 ಸ್ಥಾನ ಪಡೆಯಬಹುದು ಎಂದು ಅಂದಾಜಿಸಲಾಗಿದೆ. ಬಿಜೆಪಿಯು ಇದೇ ಮೊದಲ ಬಾರಿಗೆ ಕೇರಳದಲ್ಲಿ ಸ್ಥಾನಗಳಿಸಬಹುದು ಎಂದು ನಿರೀಕ್ಷಿಸಲಾಗಿದೆ.
ಉಳಿದ ಸಂಸ್ಥೆಗಳ ಸಮೀಕ್ಷೆಗಳು ಶೀಘ್ರದಲ್ಲಿ ಇಲ್ಲಿ ಅಪ್‌ಡೇಟ್ ಆಗಲಿವೆ.
ವಯನಾಡಿನಲ್ಲಿ ಕಾಂಗ್ರೆಸ್‌ನಿಂದ ರಾಹುಲ್, ಎಡಪಕ್ಷದಿಂದ ಅನ್ನಿ ರಾಜಾ, ಬಿಜೆಪಿಯಿಂದ ಕೆ ಸುರೇಂದ್ರನ್ ಸ್ಪರ್ಧಿಸಿದ್ದಾರೆ. ತ್ರಿಶೂರ್‌ನಲ್ಲಿ ಕಾಂಗ್ರೆಸ್‌ನ ಕೆ. ಮುರಳೀಧರನ್‌ಗೆ ಎದುರಾಗಿ ಎಡಪಕ್ಷದಿಂದ ವಿಎಸ್ ಸುನಿಲ್ ಕುಮಾರ್, ಬಿಜೆಪಿಯಿಂದ ಸುರೇಶ್ ಗೋಪಿ ಇದ್ದಾರೆ. ಅಟ್ನಿಗಲ್‌ನಲ್ಲಿ ಕಾಂಗ್ರೆಸ್‌ನ ಅಡೂರ್ ಪ್ರಕಾಶ್, ಸಿಪಿಐನ ವಿ ಜಾಯ್, ಬಿಜೆಪಿಯ ವಿ ಮುರಳೀಧರನ್ ಸ್ಪರ್ಧಿಸಿದ್ದಾರೆ. ಪಥನಮಿಟ್ಟದಲ್ಲಿ ಕಾಂಗ್ರಸ್‌ನ ಆಂಟೋ ಆಂಟೋನಿ, ಸಿಪಿಐನ ಥಾಮಸ್ ಐಸಾಕ್, ಬಿಜೆಪಿಯ ಅನಿಲ್ ಆಂಟೋನಿ ಸ್ಪರ್ಧಿಸಿದ್ದಾರೆ. ತಿರುವನಂತಪುರಂನಲ್ಲಿ ಕಾಂಗ್ರೆಸ್‌ನ ಶಶಿ ತರೂರು ಈ ಬಾರಿ ಸಿಪಿಐನ ಪನ್ನಿಯನ್ ರವೀಂದ್ರನ್ ಮತ್ತು ಬಿಜೆಪಿಯ ರಾಜೀವ್ ಚಂದ್ರಶೇಖರ್‌ರಿಂದ ತೀವ್ರ ಸ್ಪರ್ಧೆ ಎದುರಿಸುತ್ತಿದ್ದಾರೆ.
ಗಮನಿಸಿ: ಚುನಾವಣೆ ಫಲಿತಾಂಶ ಎಕ್ಸಿಟ್ ಪೋಲ್ ಸಂಖ್ಯೆಗಳಿಗಿಂತ ಭಿನ್ನವಾಗಿ ಇರಬಹುದು