Goa Exit Poll: ಗೋವಾದಲ್ಲಿ ಬಿಜೆಪಿ-ಕಾಂಗ್ರೆಸ್‌ಗೆ ಸಮಬಲ ಸಾಧ್ಯತೆ; ಶ್ರೀಪಾದ್, ಫ್ರಾನ್ಸಿಸ್ ಗೆಲುವಿನ ಸೂಚನೆ ನೀಡಿದ ಚುನಾವಣಾ ಸಮೀಕ್ಷೆಗಳು
Jun 01, 2024 08:35 PM IST
Goa Exit Poll: ಉತ್ತರ-ದಕ್ಷಿಣ ಗೋವಾದಲ್ಲಿ ಬಿಜೆಪಿ-ಕಾಂಗ್ರೆಸ್‌ಗೆ ಸಮಬಲ
- Goa Exit Poll 2024: ಗೋವಾದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪ್ರಬಲ ಪೈಪೋಟಿ ಇರಲಿದೆ. ಉತ್ತರ ಮತ್ತು ದಕ್ಷಿಣ ಗೋವಾದಲ್ಲಿ ಒಂದೊಂದು ಸ್ಥಾನಗಳನ್ನು ಬಿಜೆಪಿ ಮತ್ತು ಕಾಂಗ್ರೆಸ್ ಪಡೆಯುವ ಸೂಚನೆಯನ್ನು ಚುನಾವಣಾ ಮತಗಟ್ಟೆ ಸಮೀಕ್ಷೆಗಳು ನೀಡಿವೆ.
ಬೆಂಗಳೂರು: ಗೋವಾದಲ್ಲಿ ಮೇ 7ರಂದು ಚುನಾವಣೆ ನಡೆದಿದೆ. ಉತ್ತರ ಮತ್ತು ದಕ್ಷಿಣ ಗೋವಾದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸ್ಪರ್ಧೆ ನಡೆಯುತ್ತಿದೆ.. ಬಿಜೆಪಿಯ ಶ್ರೀಪಾದ್ ನಾಯಕ್ ಅವರು ಉತ್ತರ ಗೋವಾವನ್ನು ಪ್ರತಿನಿಧಿಸಿದ್ದಾರೆ. ದಕ್ಷಿಣ ಗೋವಾದಲ್ಲಿ ಕಾಂಗ್ರೆಸ್‌ನ ಫ್ರಾನ್ಸಿಸ್ಕೊ ಸಾರ್ಡಿನ್ಹಾ ಇದ್ದಾರೆ. ಉತ್ತರ ಗೋವಾದಲ್ಲಿ ಸಂಸದ ಶ್ರೀಪಾದ್ ನಾಯಕ್ ಅವರು ಕಾಂಗ್ರೆಸ್‌ನ ರಮಕಾಂತ್ ಖಲಾಪ್ ಜತೆ ಸ್ಪರ್ಧಿಸಿದ್ದಾರೆ. ದಕ್ಷಿಣ ಗೋವಾದಲ್ಲಿ ಫ್ರಾನ್ಸಿಸ್ಕೊ ಎದುರಾಗಿ ಬಿಜೆಪಿಯು ಪಲ್ಲವಿ ಡೆಂಪೊ ಅವರನ್ನು ನಿಲ್ಲಿಸಿದೆ. ಸದ್ಯ ಚುನಾವಣಾ ಪೂರ್ವ ಮತಗಟ್ಟೆ ಸಮೀಕ್ಷೆಗಳು ಹೊರಬಿದ್ದಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪ್ರಬಲ ಪೈಪೋಟಿ ಇರುವ ಸೂಚನೆ ನೀಡಿದೆ.
ಗೋವಾದಲ್ಲಿ ಒಟ್ಟು 11,79,644 ಮತದಾರರಿದ್ದಾರೆ. ಉತ್ತರ ಗೋವಾದಲ್ಲಿ 5,80,710 ಮತದಾರರು ಮತ್ತು ದಕ್ಷಿಣ ಗೋವಾದಲ್ಲಿ 5,98,934 ಮತದಾರರಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಉತ್ತರ ಗೋವಾವನ್ನು ಗೆದ್ದಿತ್ತು. ದಕ್ಷಿಣದಲ್ಲಿ ಕಾಂಗ್ರೆಸ್ ಗೆಲುವು ಪಡೆದಿತ್ತು. ಗೋವಾದಲ್ಲಿ ಕೇವಲ ಎರಡು ಲೋಕಸಭಾ ಕ್ಷೇತ್ರಗಳಿವೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯು ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲಿ ಗೆಲುವು ಪಡೆದಿದೆ. ಇದೇ ಮೋದಿ ಹವಾ ಈ ಚುನಾವಣೆಯಲ್ಲೂ ಇರುವ ನಿರೀಕ್ಷೆಯಲ್ಲಿದೆ. ಇದೇ ಸಮಯದಲ್ಲಿ ಗೋವಾದಲ್ಲಿ ಈ ಬಾರಿ ಯಾರಿಗೆ ಎಷ್ಟು ಸೀಟು ದೊರಕಲಿದೆ ಎಂಬ ಕುತೂಹಲವಿದೆ.
ಗೋವಾ ಮತಗಟ್ಟೆ ಚುನಾವಣಾ ಫಲಿತಾಂಶ
ಆಕ್ಸಿಸ್ ಮೈ ಇಂಡಿಯಾದ ಪ್ರಕಾರ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪ್ರಬಲ ಪೈಪೋಟಿ ಇರಲಿದೆ. ಎರಡೂ ಪಕ್ಷಗಳೂ ಒಂದೊಂದು ಕ್ಷೇತ್ರಗಳಲ್ಲಿ ಗೆಲುವು ಪಡೆಯುವ ಸಾಧ್ಯತೆಯಿದೆ. ಸಿ ವೋಟರ್ ಪ್ರಕಾರ ಬಿಜೆಪಿಯು ಗೋವಾದಲ್ಲಿ ಗೆಲುವು ಪಡೆಯಲಿದೆ. ಕಾಂಗ್ರೆಸ್‌ಗೆ ತುಸು ಹಿನ್ನಡೆಯಾಗುವ ಸಾಧ್ಯತೆಯಿದೆ.
ಗಮನಿಸಿ: ಚುನಾವಣೆ ಫಲಿತಾಂಶ ಎಕ್ಸಿಟ್ ಪೋಲ್ ಸಂಖ್ಯೆಗಳಿಗಿಂತ ಭಿನ್ನವಾಗಿ ಇರಬಹುದು