logo
ಕನ್ನಡ ಸುದ್ದಿ  /  ಚುನಾವಣೆಗಳು  /  Exit Poll Result: ಒಡಿಶಾದಲ್ಲಿ ಬಿಜೆಡಿಗೆ ಹಿನ್ನಡೆ, ಬಿಜೆಪಿ ಮುನ್ನಡೆ; ಪಟ್ನಾಯಕ್ ಅಧಿಕಾರ ಅಲುಗಾಡುವ ಸಾಧ್ಯತೆ ತೆರೆದಿಟ್ಟ ಎಕ್ಸಿಟ್ ಪೋಲ್‌

Exit Poll Result: ಒಡಿಶಾದಲ್ಲಿ ಬಿಜೆಡಿಗೆ ಹಿನ್ನಡೆ, ಬಿಜೆಪಿ ಮುನ್ನಡೆ; ಪಟ್ನಾಯಕ್ ಅಧಿಕಾರ ಅಲುಗಾಡುವ ಸಾಧ್ಯತೆ ತೆರೆದಿಟ್ಟ ಎಕ್ಸಿಟ್ ಪೋಲ್‌

Reshma HT Kannada

Jun 01, 2024 08:15 PM IST

google News

ಒಡಿಶಾದಲ್ಲಿ ಬಿಜೆಡಿಗೆ ಹಿನ್ನೆಡೆ; ಕಮಲಕ್ಕೆ ಜೈ ಅಂದ್ರ ಮತದಾರರು; ಚುನಾವಣೋತ್ತರ ಮತಗಟ್ಟೆ ಸಮೀಕ್ಷೆ

    • ಲೋಕಸಭಾ ಚುನಾವಣೆ 2024ರ ಅಂತಿಮ ಹಂತದ ಮತದಾನ ಮುಗಿದು ಇದೀಗ ಎಕ್ಸಿಟ್‌ ಪೋಲ್‌ ಫಲಿತಾಂಶ ಹೊರಬಿದಿದ್ದೆ. ಪ್ರಮುಖ ಎಕ್ಸಿಟ್‌ ಪೋಲ್‌ ಸಂಸ್ಥೆಗಳು ಒಡಿಶಾದಲ್ಲಿ ಬಿಜೆಪಿ ಪಕ್ಷವು ಮೇಲುಗೈ ಸಾಧಿಸಬಹುದು ಎಂದು ಭವಿಷ್ಯ ನುಡಿದಿವೆ. ಒಡಿಶಾದಲ್ಲಿ ಪ್ರಾಬಲ್ಯ ಹೊಂದಿರುವ ನವೀನ್‌ ಪಟ್ನಾಯಕ್‌ ನೇತೃತ್ವದ ಬಿಜೆಡಿಗೆ ಸೋಲು ಖಚಿತ ಎಂದು ಚುನಾವಣೋತ್ತರ ಸಮೀಕ್ಷೆಗಳು ತಿಳಿಸಿವೆ.
 ಒಡಿಶಾದಲ್ಲಿ ಬಿಜೆಡಿಗೆ ಹಿನ್ನೆಡೆ; ಕಮಲಕ್ಕೆ ಜೈ ಅಂದ್ರ ಮತದಾರರು; ಚುನಾವಣೋತ್ತರ ಮತಗಟ್ಟೆ ಸಮೀಕ್ಷೆ
ಒಡಿಶಾದಲ್ಲಿ ಬಿಜೆಡಿಗೆ ಹಿನ್ನೆಡೆ; ಕಮಲಕ್ಕೆ ಜೈ ಅಂದ್ರ ಮತದಾರರು; ಚುನಾವಣೋತ್ತರ ಮತಗಟ್ಟೆ ಸಮೀಕ್ಷೆ

ಒಡಿಶಾದಲ್ಲಿ 2024ರ ಲೋಕಸಭಾ ಚುನಾವಣೆ ಮೇ 13 ರಿಂದ ಜೂನ್‌ 1ರವರೆಗೆ 4 ಹಂತಗಳಲ್ಲಿ ನಡೆದಿತ್ತು. 21 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಡಿ, ಬಿಜೆಪಿ, ಕಾಂಗ್ರೆಸ್‌ ಸೇರಿದಂತೆ ಇತರ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಜೂನ್‌ 4 ರಂದು ಈ ರಾಜ್ಯದ ಫಲಿತಾಂಶ ಹೊರ ಬರಲಿದ್ದು, ಅದಕ್ಕೂ ಮುನ್ನ ಎಕ್ಸಿಲ್‌ ಪೋಲ್‌ ಫಲಿತಾಂಶ ಬಂದಿದೆ. ಆಕ್ಸಿಸ್‌ ಮೈ ಇಂಡಿಯಾ, ಸಿ ವೋಟರ್‌, ಇಂಡಿಯಾ ಟುಡೇ ಆಕ್ಸಿಸ್‌, ಎಬಿಪಿ ನ್ಯೂಸ್‌-ಸಿವೋಟರ್‌, ಟೈಮ್ಸ್‌ ನೌ, ನ್ಯೂಸ್‌ 18 ಐಬಿಎಸ್‌ಒಎಸ್‌, ರಿಪಬ್ಲಿಕ್‌ ಟಿವಿ ಜನ್‌ ಕೀ ಬಾತ್‌, ಟುಡೇಸ್‌ ಚಾಣಾಕ್ಯ ಚುನಾವಣಾ ಸಮೀಕ್ಷೆ ಹೊರಬಿದ್ದಿದೆ.

ಇಂದಿನ (ಜೂನ್‌ 1) ಚುನಾವಣೋತ್ತರ ಮತಗಟ್ಟೆ ಸಮೀಕ್ಷೆಯ ಪ್ರಕಾರ ಒಡಿಶಾದಲ್ಲಿ ಪ್ರಾಬಲ್ಯ ಹೊಂದಿರುವ ಬಿಜೆಡಿಗೆ ಹಿನ್ನಡೆಯಾಗಿದೆ. ಬಿಜೆಪಿ 15-18 ಸ್ಥಾನ ಗಳಿಸುವ ಸಾಧ್ಯತೆ ಇದ್ದು, ಬಿಜೆಡಿಗೆ ಕೇವಲ 3-7 ಸ್ಥಾನ ಸಿಗಲಿದೆ ಎನ್ನಲಾಗುತ್ತಿದೆ. ಜನ್‌ ಕೀ ಬಾತ್‌ ಈ ಸಮೀಕ್ಷೆಯನ್ನು ಹೊರ ಹಾಕಿದೆ.

ಚಾಣಕ್ಯ ಸಮೀಕ್ಷೆಯು ಬಿಜೆಪಿಗೆ ಬಹುಮತ ಸಿಗಲಿದೆ. ರಾಜ್ಯದಲ್ಲಿ ಬಿಜೆಪಿ 16 ಸ್ಥಾನಗಳಿಸಿದರೆ, ಪಟ್ನಾಯಕ್‌ ನೇತೃತ್ವದ ಬಿಜೆಡಿ 4 ಸ್ಥಾನ ಹಾಗೂ ಕಾಂಗ್ರೆಸ್‌ 1 ಸ್ಥಾನ ಗಳಿಸಲಿದೆ ಎಂದು ಭವಿಷ್ಯ ನುಡಿದಿದೆ.

ಕಳೆದ 5 ಚುನಾವಣೆಗಳಲ್ಲಿ ಮುನ್ನಡೆ ಸಾಧಿಸಿದ್ದ ನವೀನ್‌ ಪಟ್ನಾಯಕ್‌ ನೇತೃತ್ವದ ಬಿಜು ಜನತಾ ದಳ ಹಿನ್ನಡೆ ಗಳಿಸುವ ಎಲ್ಲಾ ಸಾಧ್ಯತೆಗಳನ್ನು ಚುನಾವಣೋತ್ತರ ಸಮೀಕ್ಷೆ ತೋರಿಸುತ್ತಿದೆ.

ಗಮನಿಸಿ: ಚುನಾವಣೆ ಫಲಿತಾಂಶ ಎಕ್ಸಿಟ್‌ ಪೋಲ್ ಸಂಖ್ಯೆಗಳಿಗಿಂತ ಭಿನ್ನವಾಗಿ ಇರಬಹುದು

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ