logo
ಕನ್ನಡ ಸುದ್ದಿ  /  ಮನರಂಜನೆ  /  Simhapriya Instagram Post: ಸಿಂಹಪ್ರಿಯಾ ಮದುವೆಗೆ 2 ತಿಂಗಳ ಸಂಭ್ರಮ.. ಹಿಂದಿನ ದಿನಗಳನ್ನು ಮೆಲುಕು ಹಾಕಿದ ಜೋಡಿ

Simhapriya Instagram Post: ಸಿಂಹಪ್ರಿಯಾ ಮದುವೆಗೆ 2 ತಿಂಗಳ ಸಂಭ್ರಮ.. ಹಿಂದಿನ ದಿನಗಳನ್ನು ಮೆಲುಕು ಹಾಕಿದ ಜೋಡಿ

HT Kannada Desk HT Kannada

Mar 27, 2023 08:14 AM IST

ವಸಿಷ್ಠಸಿಂಹ ಇನ್‌ಸ್ಟಾಗ್ರಾಮ್‌ ಪೋಸ್ಟ್‌

  • ವಸಿಷ್ಠಸಿಂಹ ಹಂಚಿಕೊಂಡಿರುವ ಪೋಸ್ಟ್‌ಗೆ ಹರಿಪ್ರಿಯಾ 'ಮಿಸ್‌ ಯೂ' ಎಂದು ಕಮೆಂಟ್‌ ಮಾಡಿದ್ದಾರೆ. ಇದಕ್ಕೆ ಮತ್ತೆ ಪ್ರತಿಕ್ರಿಯಿಸಿರುವ ವಸಿಷ್ಠ ನಾನೂ ಕೂಡಾ ಎಂದು ಲವ್‌ ಎಮೋಜಿಯೊಂದಿಗೆ ರಿಪ್ಲೇ ಮಾಡಿದ್ದಾರೆ. ಸಿಂಹಪ್ರಿಯ ಅಭಿಮಾನಿಗಳು ಕೂಡಾ ಈ ಪೋಸ್ಟ್‌ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ವಸಿಷ್ಠಸಿಂಹ ಇನ್‌ಸ್ಟಾಗ್ರಾಮ್‌ ಪೋಸ್ಟ್‌
ವಸಿಷ್ಠಸಿಂಹ ಇನ್‌ಸ್ಟಾಗ್ರಾಮ್‌ ಪೋಸ್ಟ್‌ (PC: Vasishta Simha Instagram)

ಸ್ಯಾಂಡಲ್‌ವುಡ್‌ ಕ್ಯೂಟ್‌ ಕಪಲ್‌, ವಸಿಷ್ಠಸಿಂಹ ಹಾಗೂ ಹರಿಪ್ರಿಯಾ ಕಳೆದ ಜನವರಿ 26 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಜೋಡಿ ಸತಿ-ಪತಿಗಳಾಗಿ ಎರಡು ತಿಂಗಳು ಕಳೆದಿದೆ. ಇದಕ್ಕೆ ಸಂಬಂಧಿಸಿದಂತೆ ಸಿಂಹಪ್ರಿಯಾ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

‘ಪ್ರಜ್ವಲ್‌ ರೇವಣ್ಣರ ಅಶ್ಲೀಲ ವಿಡಿಯೋವನ್ನು ನಾನು ನೋಡುವ ಧೈರ್ಯ ಮಾಡಿಲ್ಲ’; ನಟ ನಿಖಿಲ್‌ ಕುಮಾರಸ್ವಾಮಿ ಫಸ್ಟ್‌ ರಿಯಾಕ್ಷನ್‌

Grey Games Trailer: ‘ಗ್ರೇ ಗೇಮ್ಸ್‌’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ವಿಜಯ್‌ ರಾಘವೇಂದ್ರ ಅಕ್ಕನ ಮಗ ಜೈ ಎಂಟ್ರಿ

ಜೂನಿಯರ್ ಎನ್‌ಟಿಆರ್‌ ಬರ್ತ್‌ಡೇಗೆ ಬಿಗ್‌ ಬ್ಯಾಂಗ್‌! ಪ್ರಶಾಂತ್‌ ನೀಲ್‌ ಸಿನಿಮಾ ಘೋಷಣೆ ಸಾಧ್ಯತೆ

‘ನಮ್ಮಿಬ್ಬರ ನಡುವಿನ ಸಿನಿ ಕಾಂಪಿಟೇಷನ್‌ ಆರೋಗ್ಯಕರವಾಗಿರಲಿಲ್ಲ!’ ರಮ್ಯಾ ಜತೆಗಿನ ದುಷ್ಮನಿ ಬಗ್ಗೆ ರಕ್ಷಿತಾ ಪ್ರೇಮ್‌ ಏನಂದ್ರು?

ಒಟ್ಟಿಗೆ ಕುಳಿದು ಬ್ರೇಕ್‌ಫಾಸ್ಟ್‌ ಮಾಡುತ್ತಿರುವ ಫೋಟೋಗಳನ್ನು ಈ ಜೋಡಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ವಸಿಷ್ಠ, ಈ ಪೋಸ್ಟನ್ನು ಪತ್ನಿ ಹರಿಪ್ರಿಯಾಗೆ ಟ್ಯಾಗ್‌ ಮಾಡಿದ್ದಾರೆ. ''ಆಗಲೇ ಎರಡು ತಿಂಗಳು ಕಳೆಯಿತು. ಎಷ್ಟು ಬೇಗ ಸಮಯ ಕಳೆಯುತ್ತದೆ ಗೊತ್ತೇ ಆಗುವುದಿಲ್ಲ. ನಮ್ಮ ಮದುವೆಯ ದಿನಗಳು ಅದರ ಹಿಂದಿನ ದಿನಗಳನ್ನು ನೆನಪು ಮಾಡಿಕೊಳ್ಳಲು ಬಹಳ ಖುಷಿಯಾಗುತ್ತದೆ. ಈ ಸಮಯದಲ್ಲಿ ನನಗೆ ಇಷ್ಟವಾದ ಹಳೆಯ ಫೋಟೋಗಳನ್ನು ಹಂಚಿಕೊಳ್ಳಲು ಇಷ್ಟಪಡುತ್ತೇನೆ. ತೆಲಂಗಾಣದಲ್ಲಿ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾಗ ನನ್ನನ್ನು ನೋಡಲು ಬಂದ ನೀನು, ನನಗಾಗಿ ಮತ್ತು ನನ್ನ ಸಿಬ್ಬಂದಿಗೆ ಅಡುಗೆ ಮಾಡಿಕೊಟ್ಟೆ. ಮನೆಯಿಂದ ದೂರ ಇದ್ದ ಕಾರಣ ನಾನು ಹೋಂ ಫುಡ್‌ ಮಿಸ್‌ ಮಾಡಿಕೊಳ್ಳುತ್ತಿದ್ದೆ. ಆದರೆ ನೀನು ಆ ಕೊರತೆ ನೀಗಿಸಿದೆ. ಜೊತೆಗೆ ನಿನ್ನನ್ನು ನೋಡಿದ್ದು ಬಹಳ ಸಂತೋಷ ಆಯ್ತು'' ಎಂದು ವಸಿಷ್ಠ ಬರೆದುಕೊಂಡಿದ್ದಾರೆ.

ಈ ಪೋಸ್ಟ್‌ಗೆ ಹರಿಪ್ರಿಯಾ 'ಮಿಸ್‌ ಯೂ' ಎಂದು ಕಮೆಂಟ್‌ ಮಾಡಿದ್ದಾರೆ. ಇದಕ್ಕೆ ಮತ್ತೆ ಪ್ರತಿಕ್ರಿಯಿಸಿರುವ ವಸಿಷ್ಠ ನಾನೂ ಕೂಡಾ ಎಂದು ಲವ್‌ ಎಮೋಜಿಯೊಂದಿಗೆ ರಿಪ್ಲೇ ಮಾಡಿದ್ದಾರೆ. ಸಿಂಹಪ್ರಿಯ ಅಭಿಮಾನಿಗಳು ಕೂಡಾ ಈ ಪೋಸ್ಟ್‌ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 2 ತಿಂಗಳು ಅಲ್ಲ, ಇನ್ನೂ 100 ವರ್ಷಗಳ ಕಾಲ ನೀವಿಬ್ಬರೂ ಹೀಗೆ ನಗುತ್ತಾ ಪ್ರೀತಿಯಿಂದ ಬಾಳಿ ಎಂದು ಕಮೆಂಟ್‌ ಮಾಡುತ್ತಿದ್ದಾರೆ. ಇನ್ನೂ ಕೆಲವರು ಕಮೆಂಟ್‌ ಮಾಡಿ ಆದಷ್ಟು ಬೇಗ ಗುಡ್‌ ನ್ಯೂಸ್‌ ಕೊಡಿ ಎನ್ನುತ್ತಿದ್ದಾರೆ.

ಮದುವೆಗೆ ಕೆಲವು ದಿನಗಳ ಮುನ್ನ ಪ್ರೀತಿ ವಿಚಾರವನ್ನು ರಿವೀಲ್‌ ಮಾಡಿದ್ದ ಜೋಡಿ

ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದರೂ ಸಿಂಹಪ್ರಿಯಾ ತಮ್ಮ ಪ್ರೀತಿ ವಿಚಾರವನ್ನು ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಆದರೆ ಒಮ್ಮೆ ಹರಿಪ್ರಿಯಾ ಮೂಗು ಚುಚ್ಚಿಸಿಕೊಳ್ಳುತ್ತಿರುವ ವಿಡಿಯೋ ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ವಸಿಷ್ಠಸಿಂಹ ಕೂಡಾ ಇರುವುದನ್ನು ಹಲವರು ಗಮನಿಸಿದ್ದಾರೆ. ನಂತರ ಇಬ್ಬರೂ ಕೈ ಕೈ ಹಿಡಿದು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಈ ಜೋಡಿ ಪ್ರೀತಿಯಲ್ಲಿದ್ದು ಶೀಘ್ರದಲ್ಲೇ ಮದುವೆಯಾಗುತ್ತಿದ್ದಾರೆ ಎಂದು ತಿಳಿದದ್ದು ಆಗಲೇ.

ಸುದ್ದಿಗೋಷ್ಠಿ ನಡೆಸಿ ಪ್ರೀತಿ, ಮದುವೆ ವಿಚಾರ ಹಂಚಿಕೊಂಡಿದ್ದ ಸಿಂಹಪ್ರಿಯಾ

ನಮ್ಮಿಬ್ಬರಿಗೂ 2016ರಿಂದ ಪರಿಚಯ. ಅದಕ್ಕೂ ಮುನ್ನ ನಾನು ಅವರ ಅಭಿಮಾನಿಯಾಗಿದ್ದೆ. ನನ್ನ 'ಗೋಧಿ ಬಣ್ಣ ಸಾಧಾರಣ ಮೈ ಕಟ್ಟು' ಸಿನಿಮಾ ನೋಡಿ ಅವರೇ ನನ್ನನ್ನು ಮಾತನಾಡಿಸಿ ನನ್ನ ಆಕ್ಟಿಂಗ್‌ ಬಗ್ಗೆ ಕಾಂಪ್ಲಿಮೆಂಟ್ಸ್‌ ಕೊಟ್ಟಿದ್ದರು. ಆಗಿನಿಂದ ಇಬ್ಬರೂ ಮಾತಾಡುತ್ತಿದ್ದೆವು. ಚಿತ್ರರಂಗದಲ್ಲಿ ಆಕೆ ನನಗಿಂತ ಸೀನಿಯರ್‌ ಆಗಿದ್ರೂ ನನಗೆ ವಿಶ್‌ ಮಾಡಿದ್ದು ಬಹಳ ಖುಷಿಯಾಯ್ತು. ನಮ್ಮಿಬ್ಬರ ಪರಿಚಯ, ಸ್ನೇಹಕ್ಕೆ ತಿರುಗಿ, ನಂತರ ಲವ್‌ ಆಯ್ತು. ಹರಿಪ್ರಿಯಾಗೆ ಶ್ವಾನಗಳು ಎಂದರೆ ಬಹಳ ಇಷ್ಟ. ಅವರ ಮನೆಯಲ್ಲಿ ಲಕ್ಕಿ ಎಂಬ ನಾಯಿ ಕ್ಯಾನ್ಸರ್‌ನಿಂದ ಸಾವನ್ನಪ್ಪಿತ್ತು. ಅದರಿಂದ ಆಕೆಗೆ ಬಹಳ ನೋವಾಗಿತ್ತು. ಬೇರೆ ನಾಯಿ ಕೊಟ್ಟರೆ ಆಕೆಯ ದು:ಖ ಕಡಿಮೆಯಾಗಬಹುದು ಎಂದುಕೊಂಡು ನಾನು ಒಂದು ನಾಯಿಮರಿ ಗಿಫ್ಟ್‌ ಮಾಡಿದ್ದೆ, ಆದರೆ ಅದಕ್ಕೂ ಮುನ್ನವೇ ಇಬ್ಬರಿಗೂ ಲವ್‌ ಆಗಿತ್ತು.'' ಎಂದು ವಸಿಷ್ಠ ಹೇಳಿಕೊಂಡಿದ್ದರು. ಜನವರಿ 26 ರಂದು ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಸಿಂಹಪ್ರಿಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಚಿತ್ರರಂಗದ ಗಣ್ಯರು ಈ ಮದುವೆಗೆ ಸಾಕ್ಷಿಯಾಗಿದ್ದರು.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು