logo
ಕನ್ನಡ ಸುದ್ದಿ  /  ಮನರಂಜನೆ  /  65th Annual Grammy Awards: ಗ್ರ್ಯಾಮಿ ಅವಾರ್ಡ್ಸ್‌ 2023: ಭಾರತದ ರಿಕ್ಕಿ ಕೇಜ್‌ಗೆ ಮೂರನೇ ಬಾರಿ ಒಲಿದ ಪ್ರತಿಷ್ಠಿತ ಪ್ರಶಸ್ತಿ

65th Annual Grammy Awards: ಗ್ರ್ಯಾಮಿ ಅವಾರ್ಡ್ಸ್‌ 2023: ಭಾರತದ ರಿಕ್ಕಿ ಕೇಜ್‌ಗೆ ಮೂರನೇ ಬಾರಿ ಒಲಿದ ಪ್ರತಿಷ್ಠಿತ ಪ್ರಶಸ್ತಿ

HT Kannada Desk HT Kannada

Feb 06, 2023 10:29 AM IST

2023ನೇ ಸಾಲಿನ 65ನೇ ಗ್ರ್ಯಾಮಿ ಪ್ರಶಸ್ತಿಯನ್ನು ಘೋಷಣೆ

    • ಮೂರನೇ ಬಾರಿ ರಿಕ್ಕಿ ಕೇಜ್‌ ಗ್ರ್ಯಾಮಿ ಪ್ರಶಸ್ತಿ ಪಡೆದಿರುವುದು ಭಾರತೀಯರಿಗೆ ಹೆಮ್ಮೆಯ ವಿಚಾರವಾಗಿದೆ. ರಿಕ್ಕಿ ಕೇಜ್‌ ಪಂಜಾಬ್‌ ಮೂಲದವರು. ಸದ್ಯಕ್ಕೆ ಅವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಸಂಗೀತ ಕ್ಷೇತ್ರದಲ್ಲಿನ ಸಾಧನೆಗಾಗಿ ಅವರಿಗೆ ಅನೇಕ ಪ್ರಶಸ್ತಿ ದೊರೆತಿದೆ.
2023ನೇ ಸಾಲಿನ 65ನೇ ಗ್ರ್ಯಾಮಿ ಪ್ರಶಸ್ತಿಯನ್ನು ಘೋಷಣೆ
2023ನೇ ಸಾಲಿನ 65ನೇ ಗ್ರ್ಯಾಮಿ ಪ್ರಶಸ್ತಿಯನ್ನು ಘೋಷಣೆ (PC: Ricky Kej )

2023ನೇ ಸಾಲಿನ 65ನೇ ಗ್ರ್ಯಾಮಿ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. ಸಂಗೀತ ಕ್ಷೇತ್ರದ ಸಾಧಕರಿಗೆ ಪ್ರತಿ ವರ್ಷ ನೀಡಲಾಗುತ್ತಿರುವ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಯಲ್ಲಿ ಭಾರತೀಯ ಸಂಗೀತ ಸಂಯೋಜಕ ರಿಕ್ಕಿ ಕೇಜ್‌, ಮೂರನೇ ಬಾರಿಯೂ ಅವಾರ್ಡ್‌ ಪಡೆದು ಗಮನ ಸೆಳೆದಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Manjummel Boys: ಮಂಜುಮ್ಮೆಲ್ ಬಾಯ್ಸ್‌ನ ಈ 2 ಸೀನ್‌ಗಳ ಕುರಿತು ನಡೆಯುತ್ತಿದೆ ಬಿಸಿಬಿಸಿ ಚರ್ಚೆ, ಅದ್ಭುತ ಅಂದ್ರು ಒಟಿಟಿ ಪ್ರೇಕ್ಷಕರು

Anjali Arora: ಸೀತೆ ಪಾತ್ರಕ್ಕೆ ಕಚ್ಚಾ ಬಾದಾಮ್ ಹುಡುಗಿ; 23ನೇ ವಯಸ್ಸಲ್ಲಿ 4 ಕೋಟಿಯ ಮನೆ ಖರೀದಿಸಿದ್ದ ಟಿಕ್‌ಟಾಕ್‌ ಸ್ಟಾರ್‌ಗೆ ಅದೃಷ್ಟ

Shobha Shetty: ಅಂಜನಿಪುತ್ರದಲ್ಲಿ ಅಪ್ಪು ಜತೆ ನಟಿಸಿದ್ದ ಶೋಭಾ ಶೆಟ್ಟಿಗೂ ತೆಲುಗು ನಟ ಯಶವಂತ್‌ ರೆಡ್ಡಿಗೂ ನಿಶ್ಚಿತಾರ್ಥ, ವಿಡಿಯೋ ನೋಡಿ

Babyshower Reels: ಈ ಸಾಧನೆಗೆ ನಾನಲ್ಲ, ನನ್ನ ಪತಿ ದರ್ಶಕ್‌ ಗೌಡ ಕಾರಣ; ಸೀಮಂತ ಸಂಭ್ರಮದಲ್ಲಿ ನಟಿ ಶಿಲ್ಪಾ ರವಿ ರೀಲ್ಸ್‌

ಗ್ರಾಮೊಪೋನ್‌ ಪ್ರಶಸ್ತಿಯನ್ನು ಗ್ರ್ಯಾಮಿ ಅವಾರ್ಡ್‌ ಎಂದು ಕರೆಯಲಾಗುತ್ತದೆ. ಅಮೆರಿಕದ ರೆಕಾರ್ಡಿಂಗ್‌ ಅಕಾಡೆಮಿ ಕೊಡ ಮಾಡುವ ಈ ಪ್ರಶಸ್ತಿಯನ್ನು 4 ಮೇ 1959 ರಂದು ಮೊದಲ ಬಾರಿಗೆ ಆರಂಭಿಸಲಾಯ್ತು. ಬೆಸ್ಟ್‌ ಆಲ್ಟರ್ನೇಟಿವ್‌ ಮ್ಯೂಸಿಕ್‌ ಪರ್ಫಾಮೆನ್ಸ್‌, ಬೆಸ್ಟ್‌ ಅಮೆರಿಕನ್‌ ಪರ್ಫಾಮೆನ್ಸ್‌, ಬೆಸ್ಟ್‌ ಸ್ಕೋರ್‌ ಸೌಂಡ್‌ ಟ್ರ್ಯಾಕ್‌ ಫಾರ್‌ ವಿಡಿಯೋ ಗೇಮ್ಸ್‌ , ಬೆಸ್ಟ್‌ ಸ್ಪೋಕನ್‌ ವರ್ಲ್ಡ್‌ ಪೊಯಟ್ರಿ ಆಲ್ಬಂ, ಸಾಂಗ್‌ ರೈಟರ್‌ ಆಫ್‌ ದಿ ಇಯರ್‌ ಸೇರಿ ವಿವಿಧ ವಿಭಾಗಗಳಲ್ಲಿ ಈ ಪ್ರಶಸ್ತಿ ನೀಡಲಾಗುತ್ತದೆ. ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಈ ಬಾರಿ ಅತ್ಯುತ್ತಮ ಮ್ಯೂಸಿಕ್‌ ವಿಡಿಯೋ ವಿಭಾಗದಲ್ಲಿ - ಆಲ್‌ ಟೂ ವೆಲ್‌: ದಿ ಶಾರ್ಟ್‌ ಫಿಲ್ಮ್‌ಗಾಗಿ ಟೈಲರ್‌ ಸ್ವಿಫ್ಟ್‌

ರ್ಯಾಪ್‌ ಆಲ್ಬಂ ವಿಭಾಗದಲ್ಲಿ - ಮಿಸ್ಟರ್‌ ಮಾರಲ್‌ ಅಯಂಡ್‌ ದಿ ಬಿಗ್‌ ಸ್ಟೆಪ್ಪರ್‌ಗಾಗಿ ಕೆಂಡ್ರಿಕ್‌ ಲ್ಯಾಮರ್‌

ರಾಕ್‌ ಆಲ್ಬಂ ವಿಭಾಗದಲ್ಲಿ - ಪೇಷಂಟ್‌ ನಂಬರ್‌ 9ಗಾಗಿ ಓಜಿ ಓಸ್ಬೋರ್ನ್‌ಗೆ ವಿಶೇಷ ಪ್ರಶಸ್ತಿ ದೊರೆತಿದೆ.

ಇನ್ನು ಮೂರನೇ ಬಾರಿ ರಿಕ್ಕಿ ಕೇಜ್‌ ಗ್ರ್ಯಾಮಿ ಪ್ರಶಸ್ತಿ ಪಡೆದಿರುವುದು ಭಾರತೀಯರಿಗೆ ಹೆಮ್ಮೆಯ ವಿಚಾರವಾಗಿದೆ. ರಿಕ್ಕಿ ಕೇಜ್‌ ಪಂಜಾಬ್‌ ಮೂಲದವರು. ಸದ್ಯಕ್ಕೆ ಅವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಸಂಗೀತ ಕ್ಷೇತ್ರದಲ್ಲಿನ ಸಾಧನೆಗಾಗಿ ಅವರಿಗೆ ಅನೇಕ ಪ್ರಶಸ್ತಿ ದೊರೆತಿದೆ. 9 ಹಾಡುಗಳ ಮ್ಯೂಸಿಕ್‌ ಆಲ್ಬಂ, 'ಡಿವೈನ್‌ ಟೈಡ್ಸ್‌' ಎಂಬ ಬೆಸ್ಟ್‌ ಇಮ್ಮರ್ಸಿವ್‌ ಆಡಿಯೋ ಆಲ್ಬಂ ವಿಭಾಗದಲ್ಲಿ ರಿಕ್ಕಿ ಕೇಜ್‌ ತಮ್ಮ ಸಹ ಸಂಗೀತಗಾರ ಸ್ಟೀವರ್ಟ್‌ ಕೋಪ್‌ಲ್ಯಾಂಡ್‌ ಜೊತೆಗೆ ಈ ಬಾರಿ ಪ್ರಶಸ್ತಿ ಹಂಚಿಕೊಂಡಿದ್ದಾರೆ. ಕಳೆದ ವರ್ಷ ಕೂಡಾ ಇದೇ ಜೋಡಿ ಪ್ರಶಸ್ತಿ ಹಂಚಿಕೊಂಡಿತ್ತು. 2015ರಲ್ಲಿ ಮೊದಲ ಬಾರಿಗೆ ಬೆಸ್ಟ್‌ ನ್ಯೂ ಏಜ್‌ ವಿಭಾಗದಲ್ಲಿ 'ವಿಂಡ್ಸ್‌ ಆಫ್‌ ಸಂಸಾರ್‌' ಆಲ್ಬಂಗೆ ರಿಕ್ಕಿ ಕೇಜ್‌ ಮೊದಲ ಬಾರಿ ಗ್ರ್ಯಾಮಿ ಪ್ರಶಸ್ತಿ ಪಡೆದಿದ್ದರು. ಪ್ರಶಸ್ತಿ ಪಡೆದು, ಸಂತೋಷ ಹಂಚಿಕೊಂಡಿರುವ ರಿಕ್ಕಿ ಕೇಜ್‌, ಡಿವೈನ್‌ ಟೈಡ್ಸ್‌ ಆಲ್ಬಂಗೆ ಪ್ರಶಸ್ತಿ ದೊರೆತಿರುವುದು ಸಂತೋಷ. ಮುಂದಿನ ದಿನಗಳಲ್ಲಿ ಸಂಗೀತ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡಲು ಇದು ಸ್ಫೂರ್ತಿಯಾಗಿದೆ ಎಂದು ಹೇಳಿದ್ದಾರೆ.

ರಿಕ್ಕಿ ಕೇಜ್‌, 30 ದೇಶಗಳಲ್ಲಿ ಸುಮಾರು 100 ಮ್ಯೂಸಿಕ್ ಅವಾರ್ಡ್‌ಗಳನ್ನು ಪಡೆದಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಕೂಡಾ ರಿಕ್ಕಿ ಕೇಜ್‌ ಸಂಗೀತವನ್ನು ಕೇಳಬಹುದು. ರಮೇಶ್ ಅರವಿಂದ್ ನಿರ್ದೇಶನದ 'ಆಕ್ಸಿಡೆಂಟ್', 'ವೆಂಕಟ ಇನ್ ಸಂಕಟ' ಹಾಗೂ ಬಿ ರಾಮಮೂರ್ತಿ ನಿರ್ದೇಶನದಲ್ಲಿ ರಮೇಶ್‌ ಅರವಿಂದ್‌ ನಟಿಸಿರುವ 'ಕ್ರೇಜಿ ಕುಟುಂಬ' ಚಿತ್ರದ ಹಾಡುಗಳಿಗೆ ರಿಕ್ಕಿ ಕೇಜ್‌ ಸಂಗೀತ ನೀಡಿರುವುದು ವಿಶೇಷ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು