logo
ಕನ್ನಡ ಸುದ್ದಿ  /  ಮನರಂಜನೆ  /  Sarath Babu: ಅಮೃತವರ್ಷಿಣಿ ಖ್ಯಾತಿಯ ನಟ ಶರತ್‌ ಬಾಬು ಆರೋಗ್ಯ ಸ್ಥಿತಿ ಗಂಭೀರ

Sarath Babu: ಅಮೃತವರ್ಷಿಣಿ ಖ್ಯಾತಿಯ ನಟ ಶರತ್‌ ಬಾಬು ಆರೋಗ್ಯ ಸ್ಥಿತಿ ಗಂಭೀರ

HT Kannada Desk HT Kannada

May 03, 2023 09:58 PM IST

ಶರತ್‌ ಬಾಬು

    • ಕನ್ನಡದ ʼಅಮೃತವರ್ಷಿಣಿʼ ಸಿನಿಮಾ ಖ್ಯಾತಿಯ ನಟ ಶರತ್‌ಬಾಬು ಆರೋಗ್ಯ ವಿಷಮಿಸಿದೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಅವರು ಹಲವು ದಿನಗಳಿಂದ ಆಸ್ಪತ್ರೆಯಲ್ಲಿದ್ದಾರೆ.
ಶರತ್‌ ಬಾಬು
ಶರತ್‌ ಬಾಬು

'ಅಮೃತವರ್ಷಿಣಿʼ ಸಿನಿಮಾ ಖ್ಯಾತಿಯ ನಟ ಶರತ್‌ಬಾಬು ಆರೋಗ್ಯ ವಿಷಮಿಸಿದೆ. ಹೈದರಾಬಾದ್‌ನ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ದಕ್ಷಿಣ ಭಾರತ ಸಿನಿಮಾರಂಗದಲ್ಲಿ ಹೆಸರು ಗಳಿಸಿದ್ದ ಇವರು ಕನ್ನಡ ಸೇರಿದಂತೆ ಹಲವು ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದರು. ಇವರಿಗೆ 72 ವರ್ಷ ವಯಸ್ಸಾಗಿದೆ.

ಟ್ರೆಂಡಿಂಗ್​ ಸುದ್ದಿ

Deepfake: ತಲೆ ಆಲಿಯಾ ಭಟ್‌ರದ್ದು, ದೇಹ ಯಾರದ್ದು? ಆಲಿಯಾ ಭಟ್‌ರ ಮತ್ತೊಂದು ಡೀಫ್‌ಫೇಕ್‌ ವಿಡಿಯೋ ವೈರಲ್‌, ಅಸಲಿ- ನಕಲಿ ವಿಡಿಯೋ ನೋಡಿ

ದ ಸೂಟ್‌ ಕನ್ನಡ ಸಿನಿಮಾ ಮೇ 17ರಂದು ಬಿಡುಗಡೆ; ಟ್ರೇಲರ್‌ ನೋಡಿ ಖುಷಿಪಟ್ಟ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

Choo Mantar: ಶರಣ್‌ ಲಕ್‌ ಬದಲಾಯಿಸಬಹುದೇ ಛೂ ಮಂತರ್‌? ಬಹುನಿರೀಕ್ಷಿತ ಸಿನಿಮಾ ರಿಲೀಸ್‌ ಮುಂದೂಡಿಕೆ

Tejasswi Prakash: ಉರ್ಫಿ ಹಾಕುವ ಬಟ್ಟೆಗಳು ಇದಕ್ಕಿಂತಲೂ ಚೆನ್ನಾಗಿರುತ್ವೆ: ತೇಜಸ್ವಿ ಪ್ರಕಾಶ್‌ ಎದೆಗಾರಿಕೆಗೆ ನೆಟ್ಟಿಗರಿಂದ ಕ್ಲಾಸ್‌

ಶರತ್ ಬಾಬು ಅವರಿಗೆ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಅಭಿಮಾನಿಗಳಿದ್ದಾರೆ. ಅನಾರೋಗ್ಯದ ಕಾರಣದಿಂದ ಏಪ್ರಿಲ್‌ ಮೊದಲ ವಾರ ಇವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿಂದ ಹೈದರಾಬಾದಿಗೆ ಕರೆದೊಯ್ಯಲಾಗಿತ್ತು. ಹಲವು ದಿನಗಳಿಂದ ಶರತ್‌ಬಾಬು ಅವರನ್ನು ಐಸಿಯುನಲ್ಲಿ ಇರಿಸಲಾಗಿದೆ.

1973ರಲ್ಲಿ ಸಿನಿಮಾ ರಂಗ ಪ್ರವೇಶಿಸಿದ ಈ ನಟ ತಮಿಳು, ತೆಲುಗು, ಕನ್ನಡ, ಹಿಂದಿ, ಮಲಯಾಳಂ ಸೇರಿದಂತೆ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು 1973ರಲ್ಲಿ ತೆಲುಗಿನ ರಾಮರಾಜ್ಯಂ ಚಿತ್ರ ಮೂಲಕ ಸಿನಿಮಾ ರಂಗಕ್ಕೆ ಕಾಲಿರಿಸಿದ್ದರು.

ಕನ್ನಡದಲ್ಲಿ ಇವರು ನಟಿಸಿದ್ದ ಅಮೃತವರ್ಷಿಣಿ ಚಿತ್ರ ಇವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತ್ತು. ಕನ್ನಡದಲ್ಲಿ ತುಳಸಿದಳ, ರಣಚಂಡಿ, ಶಕ್ತಿ, ಕಂಪನ, ಗಾಯ, ಹೃದಯ-ಹೃದಯ, ನೀಲ, ನಮ್ಮೆಜಮಾನ್ರು ಸಿನಿಮಾಗಳಲ್ಲಿ ಇವರು ನಟಿಸಿದ್ದರು.

ಇವರು ಕೊನೆಯದಾಗಿ ಕಾಣಿಸಿಕೊಂಡ ಸಿನಿಮಾ ತೆಲುಗಿನ ʼವಕೀಲ್‌ ಸಾಬ್‌ʼ.

ವಿಭಾಗ

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು