logo
ಕನ್ನಡ ಸುದ್ದಿ  /  ಮನರಂಜನೆ  /  ಪ್ರೀತಿಸುತ್ತಿರುವ ಹುಡುಗನೊಂದಿಗೆ ಮದುವೆಯಾಗಲಿದ್ದಾರೆ ಕೀರ್ತಿ ಸುರೇಶ್‌; ಮುಂದಿನ ತಿಂಗಳೇ ಗೋವಾದಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್‌

ಪ್ರೀತಿಸುತ್ತಿರುವ ಹುಡುಗನೊಂದಿಗೆ ಮದುವೆಯಾಗಲಿದ್ದಾರೆ ಕೀರ್ತಿ ಸುರೇಶ್‌; ಮುಂದಿನ ತಿಂಗಳೇ ಗೋವಾದಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್‌

Suma Gaonkar HT Kannada

Nov 19, 2024 03:03 PM IST

google News

ಪ್ರೀತಿಸುತ್ತಿದ್ದ ಹುಡುಗನನ್ನು ಮದುವೆಯಾಗಲಿದ್ದಾರೆ ಕೀರ್ತಿ ಸುರೇಶ್‌

    • ಕೀರ್ತಿ ಸುರೇಶ್‌ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ಮುಂದಿನ ತಿಂಗಳೇ ಅವರು ತಮ್ಮ ಪ್ರಿಯತಮನೊಂದಿಗೆ ಮದುವೆಯಾಗಲಿದ್ದಾರೆ. ಡಿಸೆಂಬರ್ 11ರಂದು ಗೋವಾದಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್‌ ಮಾಡಿಕೊಳ್ಳಲಿದ್ದಾರೆ. 
ಪ್ರೀತಿಸುತ್ತಿದ್ದ ಹುಡುಗನನ್ನು ಮದುವೆಯಾಗಲಿದ್ದಾರೆ ಕೀರ್ತಿ ಸುರೇಶ್‌
ಪ್ರೀತಿಸುತ್ತಿದ್ದ ಹುಡುಗನನ್ನು ಮದುವೆಯಾಗಲಿದ್ದಾರೆ ಕೀರ್ತಿ ಸುರೇಶ್‌

ದಕ್ಷಿಣ ಭಾರತದ ಸ್ಟಾರ್ ಹೀರೋಯಿನ್ ಕೀರ್ತಿ ಸುರೇಶ್ ಅವರು ಗುಡ್‌ ನ್ಯೂಸ್‌ ನೀಡಿದ್ದಾರೆ. 'ಮಹಾನಟಿ' ಚಿತ್ರದ ಮೂಲಕ ಭಾರತದಾದ್ಯಂತ ಜನಪ್ರಿಯರಾದ ರಾಷ್ಟ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡು ಕೀರ್ತಿ ಸುರೇಶ್‌ ಮದುವೆಯಾಗಲಿದ್ದಾರೆ. ಕೀರ್ತಿ ಸುರೇಶ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕ್ರೇಜಿ ಸುದ್ದಿಯೊಂದು ಹರಿದಾಡುತ್ತಿದೆ. ಆ ಸುದ್ದಿ ಪ್ರಕಾರ ಅವರ ಮದುವೆ ಶೀಘ್ರದಲ್ಲೇ ನಡೆಯಲಿದೆ. ಇನ್ನು ಕೆಲವೇ ದಿನಗಳಲ್ಲಿ ಕೀರ್ತಿ ಸುರೇಶ್ ಮದುವೆಯಾಗಲಿದ್ದಾರೆ. ಕೀರ್ತಿ ಸುರೇಶ್ ತಮ್ಮ ಗೆಳೆಯ ಆಂಟೋನಿ ಎಂಬುವವರನ್ನು ವಿವಾಹವಾಗಲಿದ್ದಾರೆ ಎಂಬ ಮಾತು ಕಾಲಿವುಡ್ ಇಂಡಸ್ಟ್ರಿಯಲ್ಲಿ ಕೇಳಿಬರುತ್ತಿದೆ.

ಅವರಿಬ್ಬರಿಗೂ 14 ವರ್ಷಗಳಿಂದ ಲವ್ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಹಾಗಾಗಿ ಕೀರ್ತಿ ಸುರೇಶ್ ತನ್ನಿಷ್ಟದ ಹುಡುಗನನ್ನು ತಾವೇ ಆಯ್ಕೆ ಮಾಡಿಕೊಂಡಿದ್ದಾರೆ. ಇದೀಗ ಅವರ ಮುಂದಿನ ಜೀವನವನ್ನು ತಮ್ಮ ಗೆಳೆಯನೊಟ್ಟಿಗೆ ಕಳೆಯಲು ನಿರ್ಧರಿಸಿದ್ದಾರೆ. ಈ ಜೋಡಿ ಡಿಸೆಂಬರ್ 11 ರಂದು ಗೋವಾದಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್ ಮಾಡಿಕೊಳ್ಳಲಿದ್ದಾರೆ.

ಈ ಚೆಲುವೆಯ ಮದುವೆಯ ಬಗ್ಗೆ ಈ ಹಿಂದೆಯೂ ಹಲವು ಬಾರಿ ಸುದ್ದಿ ಹಬ್ಬಿತ್ತು. ಉದ್ಯಮಿ, ಕುಟುಂಬದ ಗೆಳೆಯ, ಸಂಗೀತ ನಿರ್ದೇಶಕ, ನಿರ್ಮಾಪಕ ಹೀಗೆ ಹಲವು ಹೆಸರುಗಳು ಆಗಾಗ ಕೀರ್ತಿ ಸುರೇಶ್‌ ಹೆಸರಿನೊಂದಿಗೆ ಜೋಡಿಯಾಗಿತ್ತು. ಆದರೆ ಇದೀಗ ಅವರು ತಮ್ಮ ಬಹುಕಾಲದ ಗೆಳೆಯನನ್ನೇ ಮದುವೆಯಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಹಿಂದೆ ಕೀರ್ತಿ ಸುರೇಶ್ ತಮ್ಮ ಪ್ರೀತಿ ಮತ್ತು ಮದುವೆ ಬಗ್ಗೆ ಎಷ್ಟು ಬಾರಿ ಟ್ರೋಲ್ ಆದರೂ ಆ ಬಗ್ಗೆ ಹೆಚ್ಚಿನ ಗಮನಕೊಡುತ್ತಿರಲಿಲ್ಲ. ಆದರೆ ಇದೀಗ ಮತ್ತೊಮ್ಮೆ ಕೀರ್ತಿ ಅವರ ಮದುವೆಯ ವದಂತಿಗಳು ಮುನ್ನೆಲೆಗೆ ಬಂದಿವೆ. ಈ ಬಾರಿ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕು. ಈ ಬಾರಿ ಕೀರ್ತಿ ಸುರೇಶ್‌ ತಾನು ಮದುವೆ ಆಗುತ್ತಿರುವುದು ಹೌದು ಎಂದು ಹೇಳುತ್ತಾರಾ ಎಂದು ಕಾದು ನೋಡಬೇಕಿದೆ. ಯಾವಾಗ ಮದುವೆ ವಿಚಾರ ಬಂದರೂ ಸರಿಯಾದ ಸಮಯ ಬಂದಾಗ ನಾನು ಹೇಳುತ್ತೇನೆ ಎಂಬುದು ಅವರ ಉತ್ತರವಾಗಿತ್ತು.

ಕೀರ್ತಿ ಸುರೇಶ್‌ ವೃತ್ತಿ ಜೀವನ

ಕೀರ್ತಿ ಸುರೇಶ್‌ ಅವರು 2000ರ ದಶಕದ ಆರಂಭದಲ್ಲಿ ಬಾಲನಟಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು 2013ರ ಮಲಯಾಳಂ ಚಲನಚಿತ್ರ ಗೀತಾಂಜಲಿಯೊಂದಿಗೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಆ ನಂತರ ಅವರು ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಾ ಬಂದರು. ಜನಪ್ರಿಯ ನಟಿಯಾದರು. , ನೇನು ಸೈಲಜಾ, ರಜಿನಿಮುರುಗನ್ ಮತ್ತು ರೆಮೋ ಬೈರವಾ ಹೀಗೆ ಹತ್ತಾರು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಸರ್ಕಾರ್, ತಾನಾ ಸೇರ್ದ ಕೂಟಂ ಮತ್ತು ಮಹಾನಟಿ ಸಿನಿಮಾಗಳಲ್ಲೂ ನಟಿಸಿದ್ದಾರೆ. ಮಹಾನಟಿ ಸಿನಿಮಾದಲ್ಲಿ ಅಭಿನಯಿಸಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ