logo
ಕನ್ನಡ ಸುದ್ದಿ  /  ಮನರಂಜನೆ  /  Actor Ajay Rao: 'ಕಟಿಂಗ್‌ ಶಾಪ್‌' ತೆರೆದವರ ಜತೆ ನಿಂತ ನಟ ಅಜಯ್‌ ರಾವ್!‌

Actor Ajay Rao: 'ಕಟಿಂಗ್‌ ಶಾಪ್‌' ತೆರೆದವರ ಜತೆ ನಿಂತ ನಟ ಅಜಯ್‌ ರಾವ್!‌

HT Kannada Desk HT Kannada

Oct 06, 2022 05:59 PM IST

google News

'ಕಟಿಂಗ್‌ ಶಾಪ್‌' ತೆರೆದವರ ಜತೆ ನಿಂತ ನಟ ಅಜಯ್‌ ರಾವ್!‌

    • ಏಳು ವರ್ಷಗಳ ಕೃಷ್ಣಲೀಲಾ ಸಿನಿಮಾ ನಿರ್ಮಾಣ ಮಾಡಿದ್ದ ಅಜಯ್‌ ರಾವ್‌, ಇದೀಗ ಅದೇ ನಿರ್ಮಾಣ ಸಾಹಸಕ್ಕೆ ಮರಳಿದ್ದಾರೆ.  
'ಕಟಿಂಗ್‌ ಶಾಪ್‌' ತೆರೆದವರ ಜತೆ ನಿಂತ ನಟ ಅಜಯ್‌ ರಾವ್!‌
'ಕಟಿಂಗ್‌ ಶಾಪ್‌' ತೆರೆದವರ ಜತೆ ನಿಂತ ನಟ ಅಜಯ್‌ ರಾವ್!‌

ಸ್ಯಾಂಡಲ್‌ವುಡ್‌ ನಟ ಕೃಷ್ಣ ಅಜಯ್‌ ರಾವ್‌ ನಾಯಕನಾಗಿ ನಟಿಸುವುದರ ಜತೆಗೆ ನಿರ್ಮಾಣದಲ್ಲಿಯೂ ತೊಡಗಿಸಿಕೊಂಡಿರುವುದು ಗೊತ್ತಿರುವ ಸಂಗತಿ. ಕಳೆದ ಏಳು ವರ್ಷಗಳ ಹಿಂದೆ 'ಕೃಷ್ಣ ಲೀಲಾ' ಸಿನಿಮಾದಲ್ಲಿ ನಾಯಕನಾಗಿ ನಟಿಸುವುದರ ಜತೆಗೆ ನಿರ್ಮಾಣವನ್ನೂ ಮಾಡಿದ್ದರು. ಇದೀಗ ಆ ಏಳು ವರ್ಷಗಳ ಬಳಿಕ ಮತ್ತೆ ನಿರ್ಮಾಣದ ಸಾಹಸಕ್ಕೆ ಮರಳಲು ಅಜಯ್‌ ಮುಂದೆ ಬಂದಿದ್ದಾರೆ.

ಹೌದು, ನಟ ಅಜಯ್ ರಾವ್ ಹೊಸದೊಂದು ಸಿನಿಮಾಕ್ಕೆ ಸಜ್ಜಾಗುತ್ತಿದ್ದಾರೆ. ಪವನ್ ಭಟ್ ನಿರ್ದೇಶನದ ಚಿತ್ರದಲ್ಲಿ ನಾಯಕ ನಟರಾಗಿ ನಟಿಸುತ್ತಿದ್ದು, ಈ ಚಿತ್ರದ ನಿರ್ಮಾಣವನ್ನು ಅಜಯ್ ರಾವ್ ಮಾಡುತ್ತಿದ್ದಾರೆ.

ನಿರ್ದೇಶಕ ಪವನ್ ಭಟ್ ಕಥೆ ಕೇಳಿ ಇಂಪ್ರೆಸ್ ಆಗಿರುವ ಅಜಯ್ ರಾವ್ ತಮ್ಮದೇ ಶ್ರೀಕೃಷ್ಣ ಆರ್ಟ್ಸ್ ಅಂಡ್ ಕ್ರಿಯೇಷನ್ಸ್ ಬ್ಯಾನರ್ ನಡಿ ಸಿನಿಮಾ ನಿರ್ಮಾಣ ಮಾಡಲು ಡಿಸೈಡ್ ಮಾಡಿದ್ದಾರೆ. ‘ಕಟಿಂಗ್ ಶಾಪ್’ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಅಂಗಳದಲ್ಲಿ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ಪವನ್ ಭಟ್ ಅವರಿಗಿದು ಎರಡನೇ ಸಿನಿಮಾ.

ಸದ್ಯ ಪ್ರಿ ಪ್ರೊಡಕ್ಷನ್ ಕೆಲಸದಲ್ಲಿ ಇಡೀ ಚಿತ್ರತಂಡ ಬಿಜಿಯಾಗಿದ್ದು ಹೊಸ ಕಲಾವಿದರಿಗಾಗಿ ಹುಡುಕಾಟ ನಡೆಸುತ್ತಿದೆ. ಸದ್ಯದಲ್ಲೇ ಟೈಟಲ್ ಹಾಗೂ ಚಿತ್ರದ ಬಗೆಗಿನ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲಿದೆ ಚಿತ್ರತಂಡ. ಮೊದಲಾರ್ಥವಾಗಿ ನಿರ್ಮಾಣದ ಬಗ್ಗೆ ತಂಡ ಮಾಹಿತಿ ಹೊರಹಾಕಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ