logo
ಕನ್ನಡ ಸುದ್ದಿ  /  ಮನರಂಜನೆ  /  ಗೌರವವನ್ನು ಹುಡುಕಿ ಅಲೆದಾಡುವ ಜೀವಗಳ ಕಥೆಯೇ ಅಗ್ನಿ; ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾದ ಪ್ರತೀಕ್‌ ಗಾಂಧಿ ಸಿನಿಮಾ

ಗೌರವವನ್ನು ಹುಡುಕಿ ಅಲೆದಾಡುವ ಜೀವಗಳ ಕಥೆಯೇ ಅಗ್ನಿ; ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾದ ಪ್ರತೀಕ್‌ ಗಾಂಧಿ ಸಿನಿಮಾ

Dec 08, 2024 12:44 PM IST

google News

ಗೌರವವನ್ನು ಹುಡುಕಿ ಅಲೆದಾಡುವ ಜೀವಗಳ ಕಥೆಯೇ ಅಗ್ನಿ

    • Agni Movie OTT: ಮಲಯಾಳಂನ ‘ಫೈರ್‌ಮ್ಯಾನ್‌’ ಸಿನಿಮಾ ಹೊರತುಪಡಿಸಿದರೆ ಅಗ್ನಿಶಾಮಕ ದಳದವರ ಕಥೆಗಳು ಹಿರಿತೆರೆಯಲ್ಲಿ ಹೆಚ್ಚು ಕಾಣಿಸಿಲ್ಲ. ಈ ಹಿಂದೆ ಬಾಲಿವುಡ್‌ನಲ್ಲಿ ನಿರ್ದೇಶಕ ರವಿ ಚೋಪ್ರಾ ‘ದಿ ಬರ್ನಿಂಗ್ ಟ್ರೈನ್’ ಸಿನಿಮಾ ಹೊರತಂದಿದ್ದರೂ, ಆ ಕಥೆಯಲ್ಲಿ ಅಗ್ನಿಶಾಮಕ ದಳದವರ ನೋವಿರಲಿಲ್ಲ. ಈಗ ಅಗ್ನಿ ಸಿನಿಮಾ ಒಟಿಟಿ ಅಂಗಳಕ್ಕೆ ಆಗಮಿಸಿದೆ. 
ಗೌರವವನ್ನು ಹುಡುಕಿ ಅಲೆದಾಡುವ ಜೀವಗಳ ಕಥೆಯೇ ಅಗ್ನಿ
ಗೌರವವನ್ನು ಹುಡುಕಿ ಅಲೆದಾಡುವ ಜೀವಗಳ ಕಥೆಯೇ ಅಗ್ನಿ

Agni Movie OTT: ಒಟಿಟಿನಲ್ಲಿ ನೇರವಾಗಿ ಮೂರು ರೀತಿಯ ಸಿನಿಮಾಗಳು ಬಿಡುಗಡೆಯಾಗುತ್ತವೆ. ಒಂದು ನೇರವಾಗಿ ಒಟಿಟಿಗಾಗಿ ಮಾಡಲ್ಪಟ್ಟ ಸಿನಿಮಾ. ಎರಡನೆಯದನ್ನು ಮೊದಲು ಥಿಯೇಟರ್‌ಗಳಲ್ಲಿ ಬಿಡುಗಡೆ ಆಗಿ ಬಳಿಕ ಒಟಿಟಿ ಅಂಗಳಕ್ಕೆ ಬರುತ್ತದೆ. ಮೂರನೆಯದನ್ನು ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡಲು ಸಾಧ್ಯವಾಗದಿದ್ದರೆ, ವಿತರಕರು ರಿಲೀಸ್‌ ಮಾಡಲು ಮುಂದೆ ಬಾರದಿದ್ದರೆ ಅಂತ ಸಿನಿಮಾಗಳು ಕೊನೆಗೆ ಬೇರೆ ದಾರಿಯಿಲ್ಲದೆ ಒಟಿಟಿಗೆ ಆಗಮಿಸುತ್ತವೆ. ಆ ಪೈಕಿ ನಿರ್ದೇಶಕ ರಾಹುಲ್ ಧೋಲಾಕಿಯಾ ಅವರ ಅಗ್ನಿ ಸಿನಿಮಾ ಇದರಲ್ಲಿ ಮೂರನೇ ವರ್ಗಕ್ಕೆ ಸೇರಿದ ಸಿನಿಮಾ ಆಗಿದೆ.

ಮಲಯಾಳಂನ ‘ಫೈರ್‌ಮ್ಯಾನ್‌’ ಸಿನಿಮಾ ಹೊರತುಪಡಿಸಿದರೆ ಅಗ್ನಿಶಾಮಕ ದಳದವರ ಕಥೆಗಳು ಹಿರಿತೆರೆಯಲ್ಲಿ ಹೆಚ್ಚು ಕಾಣಿಸಿಲ್ಲ. ಈ ಹಿಂದೆ ಬಾಲಿವುಡ್‌ನಲ್ಲಿ ನಿರ್ದೇಶಕ ರವಿ ಚೋಪ್ರಾ ‘ದಿ ಬರ್ನಿಂಗ್ ಟ್ರೈನ್’ ಸಿನಿಮಾ ಹೊರತಂದಿದ್ದರೂ, ಆ ಕಥೆಯಲ್ಲಿ ಅಗ್ನಿಶಾಮಕ ದಳದವರ ನೋವಿರಲಿಲ್ಲ. ಆದರೆ, ಈಗ ಆ ನೋವು ಎಂಥದ್ದು ಎಂಬುದನ್ನು ಅಗ್ನಿ ಸಿನಿಮಾ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ರಾಹುಲ್‌ ಧೋಲಾಕಿಯಾ. ನಿರ್ಲಕ್ಷಿಸಲ್ಪಟ್ಟ ಕ್ಷೇತ್ರವೊಂದರ ಅಂತರಾಳವನ್ನು ಕೆದಕಿದ್ದಾರೆ.

ಗೌರವವನ್ನು ಹುಡುಕಿ ಅಲೆದಾಡುವ ಪಾತ್ರಗಳು..

ಎಲ್ಲ ಅಂದುಕೊಂಡಂತೆ ಆಗಿದ್ದರೆ, ಜೂನ್‌ 25ರಂದು ಚಿತ್ರಮಂದಿರಗಳಲ್ಲಿ ಅಗ್ನಿ ಸಿನಿಮಾ ರಿಲೀಸ್‌ ಆಗಬೇಕಿತ್ತು. ಆದರೆ, ಈಗ ಒಟಿಟಿಯಲ್ಲಿ ನೇರವಾಗಿ ಬಿಡುಗಡೆ ಕಂಡಿದೆ. ‘ಜ್ವಾಲಾ ಮೇ ಜೋ ಜೀತೇ ಹೈಂ, ವೋ ಅಮರ್ ಹೋ ಜಾತೇಂ’ (ಬೆಂಕಿಯ ಜತೆ ಯಾರೂ ಜೀವಿಸುತ್ತಾರೋ, ಅವರು ಅಮರರಾಗಿರುತ್ತಾರೆ) ಎಂಬ ಸಾಲಿನೊಂದಿಗೆ ಈ ಸಿನಿಮಾ ತೆರೆದುಕೊಳ್ಳುತ್ತದೆ. ಅಗ್ನಿಶಾಮಕ ದಳದ ಸಿಬ್ಬಂದಿಯ ಏಳುಬೀಳಿನ ಜೀವನವೇ ಅಗ್ನಿ ಚಿತ್ರದ ಹೈಲೈಟ್.‌ ಪೊಲೀಸರೂ ಅಗ್ನಿಶಾಮಕ ದಳವನ್ನು ನಿರ್ಲಕ್ಷಿಸುವ, ಅಗೌರವದಿಂದ ಕಾಣುತ್ತಾರೆ ಎಂದೂ ಈ ಸಿನಿಮಾದಲ್ಲಿ ತೋರಿಸಿದ್ದಾರೆ.

ಯಾವ ಒಟಿಟಿಯಲ್ಲಿ ಅಗ್ನಿ ನೋಡಬಹುದು..

ಅಗ್ನಿ ಸಿನಿಮಾದ ಪ್ರಮುಖ ಆಕರ್ಷಣೆ ಎಂದರೆ ಅದು ಪ್ರತೀಕ್‌ ಗಾಂಧಿ, ಜಿತೇಂದ್ರ ಜೋಷಿ, ಸನ್ಯಾಮಿ ಖೇರ್. ಈ ಮೂವರು ಚಿತ್ರದಲ್ಲಿ ಅಗ್ನಿಶಾಮಕ ದಳದ ಉದ್ಯೋಗಿಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಮಾಜದಲ್ಲಿ ಎಲ್ಲೆ ಅಗ್ನಿ ಅವಘಡಗಳಾದರೂ ಇವರು ಬೇಕು. ಆದರೆ, ಈ ಜೀವಗಳಿಗೆ ಸಮಾಜ ನೀಡುವ ಗೌರವ ಎಂಥದ್ದು? ಆ ಗೌರವವನ್ನು ಹುಡುಕುತ್ತ ಅಲೆದಾಡುವ ಕಥೆಯೇ ಅಗ್ನಿ ಸಿನಿಮಾ. ನಿರ್ದೇಶಕ ರಾಹುಲ್‌ ಧೋಲಾಕಿಯಾ ನಿರ್ದೇಶನದಲ್ಲಿ ಮೂಡಿಬಂದ ಅಗ್ನಿ ಸಿನಿಮಾ ಸದ್ಯ ಒಟಿಟಿಯಲ್ಲಿ ವೀಕ್ಷಕರ ಗಮನ ಸೆಳೆಯುತ್ತಿದೆ. ಈ ಸಿನಿಮಾವನ್ನು ಅಮೆಜಾನ್‌ ಪ್ರೈಂನಲ್ಲಿ ವೀಕ್ಷಿಸಬಹುದು.

ಪ್ರತೀಕ್‌ ಗಾಂಧಿ ನಟನೆಯ ಸಿನಿಮಾಗಳು

ಅದೇ ರೀತಿ ನಟ ಪ್ರತೀಕ್‌ ಗಾಂಧಿ ಅವರನ್ನು ಚಿತ್ರಮಂದಿರದಲ್ಲಿ ಜನ ಸ್ವೀಕರಿಸುತ್ತಿಲ್ಲ. ನಟನೆ ಮೂಲಕ ಪೂರ್ಣಾಂಕ ಗಿಟ್ಟಿಸಿಕೊಂಡರೂ, ಅವರ ಸಿನಿಮಾಗಳು ಪ್ರೇಕ್ಷಕರನ್ನು ಥಿಯೇಟರ್‌ಗೆ ಕರೆತರುತ್ತಿಲ್ಲ. ‘ದೋ ಔರ್ ದೋ ಪ್ಯಾರ್’ ಸಿನಿಮಾ ಮೂಲಕ ಒಳ್ಳೆಯ ನಟ ಎಂಬ ಪಟ್ಟ ಪಡೆದ ಪ್ರತೀಕ್, ಅದಾದ ಮೇಲೆ ‘ಅತಿಥಿ ಭೂತೋ ಭಾವ’, ‘ಮಡ್‌ಗಾಂವ್ ಎಕ್ಸ್‌ಪ್ರೆಸ್’, ‘ದೇಧ್ ಬಿಘಾ ಜಮೀನ್’ ಸಿನಿಮಾಗಳು ಸೋಲುಂಡವು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ