logo
ಕನ್ನಡ ಸುದ್ದಿ  /  ಮನರಂಜನೆ  /  Amaran Ott Release : ಡಿಸೆಂಬರ್‌ 5ರಂದು ಈ ಒಟಿಟಿಯಲ್ಲಿ ಅಮರನ್‌ ಬಿಡುಗಡೆ, ಮನೆಯಲ್ಲೇ ನೋಡಿ ಸಾಯಿ ಪಲ್ಲವಿ, ಶಿವಕಾರ್ತಿಕೇಯನ್‌ ಸಿನಿಮಾ

Amaran OTT release : ಡಿಸೆಂಬರ್‌ 5ರಂದು ಈ ಒಟಿಟಿಯಲ್ಲಿ ಅಮರನ್‌ ಬಿಡುಗಡೆ, ಮನೆಯಲ್ಲೇ ನೋಡಿ ಸಾಯಿ ಪಲ್ಲವಿ, ಶಿವಕಾರ್ತಿಕೇಯನ್‌ ಸಿನಿಮಾ

Praveen Chandra B HT Kannada

Dec 04, 2024 11:56 AM IST

google News

Amaran OTT release: ಡಿಸೆಂಬರ್‌ 5ರಂದು ಒಟಿಟಿಯಲ್ಲಿ ಅಮರನ್‌ ಬಿಡುಗಡೆ

    • Amaran OTT release: ಇತ್ತೀಚೆಗೆ ಚಿತ್ರಮಂದಿರಗಳಲ್ಲಿ ಬ್ಲಾಕ್‌ಬಸ್ಟರ್‌ ಹಿಟ್‌ ಆಗಿದ್ದ ತಮಿಳು ಸಿನಿಮಾ ಅಮರನ್ ಕೊನೆಗೂ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ಶಿವಕಾರ್ತಿಕೇಯನ್‌ ಮತ್ತು ಸಾಯಿ ಪಲ್ಲವಿ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
Amaran OTT release: ಡಿಸೆಂಬರ್‌ 5ರಂದು ಒಟಿಟಿಯಲ್ಲಿ ಅಮರನ್‌ ಬಿಡುಗಡೆ
Amaran OTT release: ಡಿಸೆಂಬರ್‌ 5ರಂದು ಒಟಿಟಿಯಲ್ಲಿ ಅಮರನ್‌ ಬಿಡುಗಡೆ

Amaran OTT:ನಟ ಶಿವಕಾರ್ತಿಕೇಯನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 2024ರ ಬ್ಲಾಕ್ಬಸ್ಟರ್ ತಮಿಳು ಚಲನಚಿತ್ರ ಅಮರನ್ ಅನ್ನು ನಾಳೆಯಿಂದ (ಡಿಸೆಂಬರ್‌ 5) ಮನೆಯಲ್ಲೇ ನೋಡಬಹುದಾಗಿದೆ. ಸಾಯಿ ಪಲ್ಲವಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಬಹುನಿರೀಕ್ಷಿತ ಚಿತ್ರವು ಡಿಸೆಂಬರ್ 5 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ. ತಮಿಳು ಮಾತ್ರವಲ್ಲದೆ, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರವನ್ನು ವೀಕ್ಷಿಸಬಹುದು. ನೆಟ್‌ಫ್ಲಿಕ್ಸ್‌ ಈ ಸಿನಿಮಾವನ್ನು ಕನ್ನಡದಲ್ಲೂ ವೀಕ್ಷಿಸುವ ಅವಕಾಶ ನೀಡಿದೆ. ಹಿಂದೆ ಬಹುತೇಕ ಸಿನಿಮಾಗಳು ಭಾರತದ ಇತರೆ ಭಾಷೆಗಳಿಗೆ ಡಬ್‌ ಆಗುತ್ತಿದ್ದರೂ, ಕನ್ನಡದಲ್ಲಿ ಲಭ್ಯವಿರುತ್ತಿರಲಿಲ್ಲ. ಈಗ ನೆಟ್‌ಫ್ಲಿಕ್ಸ್‌ ಕನ್ನಡ ಭಾಷೆಯನ್ನೂ ಪರಿಗಣಿಸಿದ್ದು, ಸಿನಿಮಾಗಳನ್ನು ಕನ್ನಡದಲ್ಲಿ ನೀಡಲು ಆರಂಭಿಸಿರುವುದು ಒಳ್ಳೆಯ ಬೆಳವಣಿಗೆ.

ಅಮರನ್‌ ಸಿನಿಮಾವನ್ನು ಮನೆಯಲ್ಲೇ ನೋಡಿ

2024ರಲ್ಲಿ ತಮಿಳು ಚಿತ್ರರಂಗದಲ್ಲಿ ಬಿಗ್‌ ಸ್ಟಾರ್‌ಗಳ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್‌ ಕಂಡಿಲ್ಲ. ಈ ಸಂದರ್ಭದಲ್ಲಿ ಶಿವಕಾರ್ತಿಕೇಯನ್ ಮತ್ತು ಸಾಯಿ ಪಲ್ಲವಿ ಅಭಿನಯದ ಅಮರನ್ ಥಿಯೇಟರ್ ಮಾಲೀಕರಿಗೆ ಖುಷಿ ನೀಡಿದ್ದು ಸುಳ್ಳಲ್ಲ ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಯಶಸ್ಸು ಪಡೆದ ಮತ್ತು ಅನೇಕರ ಹೃದಯವನ್ನು ಗೆದ್ದ ಅಮರನ್ ಸಿನಿಮಾವು ಡಿಸೆಂಬರ್ 5 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರಥಮ ಪ್ರದರ್ಶನ ಮಾಡಲಿದೆ.

ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಫಸಲು ಪಡೆದ ಚಿತ್ರ

ಶಿವ ಕಾರ್ತಿಕೇಯನ್ ಮತ್ತು ಸಾಯಿ ಪಲ್ಲವಿ ಅಭಿನಯದ ಅಮರನ್ ಸಿನಿಮಾ ದೀಪಾವಳಿ ಉಡುಗೊರೆಯಾಗಿ ಅಕ್ಟೋಬರ್ 31ರಂದು ತಮಿಳು, ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ರಿಲೀಸ್‌ ಆಗಿತ್ತು. ಬಾಕ್ಸ್‌ ಆಫೀಸ್‌ನಲ್ಲೂ ಚಿತ್ರದ ಗಳಿಕೆ ಉತ್ತಮವಾಗಿತ್ತು. ಜನರ ಬಾಯ್ಮಾತಿನ ಪ್ರಚಾರ, ಮಾಧ್ಯಮಗಳ ಪ್ರಚಾರದ ನೆರವಿನಿಂದ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಈವರೆಗೂ 300 ಕೋಟಿಗೂ ಅಧಿಕ ಗಳಿಕೆ ಕಂಡಿದೆ.

ಒಟಿಟಿ ಹಕ್ಕು ಪಡೆದ ನೆಟ್‌ಫ್ಲಿಕ್ಸ್‌

ವರದಿಗಳ ಪ್ರಕಾರ ಅಮರನ್‌ ಸಿನಿಮಾದ ಒಟಿಟಿ ಹಕ್ಕುಗಳನ್ನು ನೆಟ್‌ಫ್ಲಿಕ್ಸ್‌ ದೊಡ್ಡ ಮೊತ್ತಕ್ಕೆ ಪಡೆದಿದೆ. ಕೆಲವು ವರದಿಗಳ ಪ್ರಕಾರ ಒಟಿಟಿ ಡೀಲ್‌ ಮೊತ್ತ 60 ಕೋಟಿ ರೂಪಾಯಿ. ಈ ಸಿನಿಮಾ ತಮಿಳುನಾಡಿನಿಂದಲೇ 150 ಕೋಟಿ ಗಳಿಕೆ ಮಾಡಿತ್ತು. ಅಮರನ್ ಸಿನಿಮಾವನ್ನು ಕಮಲ್ ಹಾಸನ್ ಅವರು ತಮ್ಮ ರಾಜ್ ಕಮಲ್ ಇಂಟರ್ ನ್ಯಾಷನಲ್ ಬ್ಯಾನರ್‌ನಲ್ಲಿ 120 ಕೋಟಿ ಬಜೆಟ್‌ನಲ್ಲಿ ನಿರ್ಮಾಣ ಮಾಡಿದ್ದಾರೆ.

ಅಮರನ್ ಸೇನಾ ಮೇಜರ್ ಮುಕುಂದ್ ವರದರಾಜನ್ ಅವರ ಜೀವನವನ್ನು ಆಧರಿಸಿದ ಸಿನಿಮಾ. ಶಿವಕಾರ್ತಿಕೇಯನ್ ಈ ಚಿತ್ರದಲ್ಲಿ ಮುಕುಂದ್ ಪಾತ್ರವನ್ನು ನಿರ್ವಹಿಸಿದ್ದಾರೆ. ಸಾಯಿ ಪಲ್ಲವಿ ಅವರ ಪತ್ನಿ ರೆಬೆಕಾ ಪಾತ್ರದಲ್ಲಿದ್ದಾರೆ. ರಾಜ್ ಕುಮಾರ್ ಪೆರಿಯಸಾಮಿ ನಿರ್ದೇಶನದ ಈ ಚಿತ್ರವನ್ನು ಕಮಲ್ ಹಾಸನ್ ನಿರ್ಮಿಸಿದ್ದಾರೆ. ಡಿಸೆಂಬರ್‌ 5ರಂದು ಚಿತ್ರಮಂದಿರಗಳಲ್ಲಿ ಪುಷ್ಪ 2 ಬಿಡುಗಡೆಯಾಗುವ ಸಮಯದಲ್ಲಿ ಒಟಿಟಿಯಲ್ಲಿ ಅಮರನ್‌ ಸೇರಿದಂತೆ ಹಲವು ಸಿನಿಮಾಗಳು ಬಿಡುಗಡೆಯಾಗುತ್ತಿವೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ