logo
ಕನ್ನಡ ಸುದ್ದಿ  /  ಮನರಂಜನೆ  /  Sarath Babu: ಹಿರಿಯ ನಟ ಶರತ್‌ ಬಾಬು ಇನ್ನಿಲ್ಲ; ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅಮೃತವರ್ಷಿಣಿ ಸಿನಿಮಾ ನಾಯಕ

Sarath Babu: ಹಿರಿಯ ನಟ ಶರತ್‌ ಬಾಬು ಇನ್ನಿಲ್ಲ; ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅಮೃತವರ್ಷಿಣಿ ಸಿನಿಮಾ ನಾಯಕ

Rakshitha Sowmya HT Kannada

May 22, 2023 03:27 PM IST

ಶರತ್‌ ಬಾಬು ನಿಧನ

    • ಇದಕ್ಕೂ ಮುನ್ನ ಶರತ್‌ ಬಾಬು ಅವರಿಗೆ ಚೆನ್ನೈ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಅಲ್ಲಿಂದ ಡಿಸ್ಚಾರ್ಜ್‌ ಆಗಿ ಮನೆಗೆ ಬಂದ ಕೆಲವು ದಿನಗಳಲ್ಲಿ ಅವರ ಆರೋಗ್ಯ ಪರಿಸ್ಥಿತಿ ಮತ್ತೆ ಕ್ಷೀಣಿಸಿದ್ದರಿಂದ ಹೈದರಾಬಾದ್‌ಗೆ ಕರೆತರಲಾಗಿತ್ತು.
ಶರತ್‌ ಬಾಬು ನಿಧನ
ಶರತ್‌ ಬಾಬು ನಿಧನ

ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬಹುಭಾಷಾ ನಟ ಶರತ್‌ ಬಾಬು ಇಂದು ನಿಧನರಾಗಿದ್ದಾರೆ. ಶರತ್‌ ಬಾಬು ಕೆಲವು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿ ಆಗದೆ ಇಂದು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.

ಟ್ರೆಂಡಿಂಗ್​ ಸುದ್ದಿ

‘ಪ್ರಜ್ವಲ್‌ ರೇವಣ್ಣರ ಅಶ್ಲೀಲ ವಿಡಿಯೋವನ್ನು ನಾನು ನೋಡುವ ಧೈರ್ಯ ಮಾಡಿಲ್ಲ’; ನಟ ನಿಖಿಲ್‌ ಕುಮಾರಸ್ವಾಮಿ ಫಸ್ಟ್‌ ರಿಯಾಕ್ಷನ್‌

Grey Games Trailer: ‘ಗ್ರೇ ಗೇಮ್ಸ್‌’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ವಿಜಯ್‌ ರಾಘವೇಂದ್ರ ಅಕ್ಕನ ಮಗ ಜೈ ಎಂಟ್ರಿ

ಜೂನಿಯರ್ ಎನ್‌ಟಿಆರ್‌ ಬರ್ತ್‌ಡೇಗೆ ಬಿಗ್‌ ಬ್ಯಾಂಗ್‌! ಪ್ರಶಾಂತ್‌ ನೀಲ್‌ ಸಿನಿಮಾ ಘೋಷಣೆ ಸಾಧ್ಯತೆ

‘ನಮ್ಮಿಬ್ಬರ ನಡುವಿನ ಸಿನಿ ಕಾಂಪಿಟೇಷನ್‌ ಆರೋಗ್ಯಕರವಾಗಿರಲಿಲ್ಲ!’ ರಮ್ಯಾ ಜತೆಗಿನ ದುಷ್ಮನಿ ಬಗ್ಗೆ ರಕ್ಷಿತಾ ಪ್ರೇಮ್‌ ಏನಂದ್ರು?

ಶರತ್‌ ಬಾಬು ಅವರಿಗೆ 71 ವರ್ಷ ವಯಸ್ಸಾಗಿತ್ತು. ಕಳೆದ ತಿಂಗಳು ಶರತ್‌ ಬಾಬು, ಹೈದರಾಬಾದ್‌ ಆಸ್ಪತ್ರೆಯೊಂಕ್ಕೆ ದಾಖಲಾಗಿದ್ದರು. ಅವರ ಆರೋಗ್ಯ ಪರಿಸ್ಥಿತಿ ಬಹಳ ಗಂಭೀರವಾಗಿತ್ತು. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಶರತ್‌ ಬಾಬು ಅವರಿಗೆ ವೆಂಟಿಲೇಟರ್‌ ನೀಡಿ ಚಿಕಿತ್ಸೆ ನೀಡಲಾಗಿತ್ತು. ಇದಕ್ಕೂ ಮುನ್ನ ಶರತ್‌ ಬಾಬು ಅವರಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಅಲ್ಲಿಂದ ಡಿಸ್ಚಾರ್ಜ್‌ ಆಗಿ ಮನೆಗೆ ಬಂದ ಕೆಲವು ದಿನಗಳಲ್ಲಿ ಅವರ ಆರೋಗ್ಯ ಪರಿಸ್ಥಿತಿ ಮತ್ತೆ ಕ್ಷೀಣಿಸಿದ್ದರಿಂದ ಹೈದರಾಬಾದ್‌ಗೆ ಕರೆತಂದು ಗಚ್ಚಿಬೌಲಿಯ ಎಐಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶರತ್‌ ಬಾಬು ನಿಧನರಾಗಿದ್ದಾರೆ ಎಂದು ಕೆಲವು ದಿನಗಳ ಹಿಂದೆ ಸುದ್ದಿಯಾಗಿತ್ತು. ಆದರೆ ಅವರು ಸತ್ತಿಲ್ಲ, ಆಸ್ಪತ್ರೆಯಲ್ಲಿ ಚಿಕತ್ಸೆ ನೀಡಲಾಗುತ್ತಿದೆ ಎಂದು ಶರತ್‌ ಬಾಬು ಕುಟುಂಬದವರು ಸ್ಪಷ್ಟಪಡಿಸಿದ್ದರು.

ಆಂಧ್ರಪ್ರದೇಶಕ್ಕೆ ಸೇರಿದ ಶರತ್‌ ಬಾಬು

ಶರತ್‌ ಬಾಬು ಮೊದಲ ಹೆಸರು ಸತ್ಯಂ ಬಾಬು ದೀಕ್ಷಿತುಲು. ಆಂಧ್ರಕ್ಕೆ ಸೇರಿದ ಶರತ್‌ ಬಾಬು, 1973ರಲ್ಲಿ ತೆಲುಗಿನ ರಾಮರಾಜ್ಯಂ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದರು. ತೆಲುಗು ಮಾತ್ರವಲ್ಲದೆ ತಮಿಳು, ಕನ್ನಡ, ಮಲಯಾಳಂ ಸಿನಿಮಾಗಳಲ್ಲಿ ಕೂಡಾ ಶರತ್‌ ಬಾಬು ನಟಿಸಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ಶರತ್‌ ಬಾಬು ಸುಮಾರು 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಾಯಕ ನಟನಾಗಿ ಪೋಷಕ ನಟನಾಗಿ ಅನೇಕ ನಟಿಯರ ಜೊತೆ ಶರತ್‌ ಬಾಬು ಬೆಳ್ಳಿ ಪರದೆಯಲ್ಲಿ ಮಿಂಚಿದ್ದಾರೆ.

ಶರತ್‌ ಬಾಬು ಕನ್ನಡದಲ್ಲಿ ಮೊದಲು ನಟಿಸಿದ್ದು 1984ರಲ್ಲಿ ತೆರೆಕಂಡ ತುಳಸಿ ದಳ ಸಿನಿಮಾ ಮೂಲಕ. ರಣಚಂಡಿ, ಶಕ್ತಿ, ಕಂಪನ, ಗಾಯ, ಉಷಾ, ಅಮೃತ ವರ್ಷಿಣಿ, ಹೃದಯ ಹೃದಯ, ನೀಲ, ಓ ಪ್ರಿಯತಮ, ನಮ್ಮೆಜಮಾನ್ರು, ಆರ್ಯನ್‌ ಕನ್ನಡ ಸಿನಿಮಾಗಳಲ್ಲಿ ಶರತ್‌ ಬಾಬು ನಟಿಸಿದ್ದಾರೆ. ಕಿರುತೆರೆಯಲ್ಲಿ ಕೂಡಾ ಶರತ್‌ ಬಾಬು ಗುರುತಿಸಿಕೊಂಡಿದ್ದರು. ಶರತ್‌ ಬಾಬು ನಿಧನಕ್ಕೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಮತ್ತಷ್ಟು ಮನರಂಜನೆ ಸುದ್ದಿಗಳು

ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಗೆ ನಟ ಜಗ್ಗೇಶ್‌ ಐಷಾರಾಮಿ ಕಾರು ಮುಳುಗಡೆ; ಮಳೆ ಅವಾಂತರದ ಬಗ್ಗೆ ಟ್ವೀಟ್‌

ಸೋಷಿಯಲ್‌ ಮೀಡಿಯಾದಲ್ಲಿ ಸದಾ ಆಕ್ಟಿವ್‌ ಇರುವ ರಾಜ್ಯಸಭೆ ಸದಸ್ಯ, ನಟ ಜಗ್ಗೇಶ್‌ ತಮ್ಮ ಸಿನಿಮಾಗಳು ಹಾಗೂ ರಾಜಕೀಯ ಜೀವನದ ಅನೇಕ ವಿಚಾರಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ಬಂದಿದ್ದಾರೆ. ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಆ ವಿಚಾರವನ್ನು ಕೂಡಾ ಜಗ್ಗೇಶ್‌ ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಪೂರ್ತಿ ಸ್ಟೋರಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ಪೊಲೀಸ್‌ ಠಾಣೆ ಮೆಟ್ಟಿಲೇರಿದ ಲವ್‌ ಬರ್ಡ್ಸ್‌ ವಿವಾದ; ಸಂಭಾವನೆ ಕೊಟ್ಟಿಲ್ಲ ಎಂದು ದೂರಿದ ನಿರ್ದೇಶಕ ಪಿಸಿ ಶೇಖರ್‌

ಸಂಭಾವನೆ, ಕೃತಿ ಚೌರ್ಯ ಸೇರಿದಂತೆ ಇನ್ನಿತರ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡ ಚಿತ್ರರಂಗದಲ್ಲಿ ಅನೇಕ ಪ್ರಕರಣಗಳು ಕೋರ್ಟ್‌ ಮೆಟ್ಟಿಲೇರಿವೆ. ಕೆಲವು ಪ್ರಕರಣಗಳು ಫಿಲ್ಮ್‌ ಚೇಂಬರ್‌ನಲ್ಲಿ ಸಿನಿ ಗಣ್ಯರ ಸಮ್ಮುಖದಲ್ಲಿ ಇತ್ಯರ್ಥವಾಗಿವೆ. ಇದೀಗ ಡಾರ್ಲಿಂಗ್‌ ಕೃಷ್ಣ ಹಾಗೂ ಮಿಲನಾ ನಾಗರಾಜ್‌ ಅಭಿನಯದ ಲವ್‌ ಬರ್ಡ್ಸ್‌ ಸಿನಿಮಾ ಪ್ರಕರಣ ಕೂಡಾ ಪೊಲೀಸ್‌ ಠಾಣೆ ಮೆಟ್ಟಿಲೇರಿದೆ. ಪೂರ್ತಿ ಸ್ಟೋರಿಗೆ ಈ ಲಿಂಕ್‌ ಒತ್ತಿ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು