logo
ಕನ್ನಡ ಸುದ್ದಿ  /  ಮನರಂಜನೆ  /  ಅಮೃತಧಾರೆ ಧಾರಾವಾಹಿ ಅಪರ್ಣಾ ಪಾತ್ರಧಾರಿ ನಟಿ ಸ್ವಾತಿ ರಿಯಲ್‌ ಪತಿ ಕೂಡ ನಟ ಅನ್ನೋದು ಅನೇಕರಿಗೆ ಗೊತ್ತೇ ಇಲ್ಲ

ಅಮೃತಧಾರೆ ಧಾರಾವಾಹಿ ಅಪರ್ಣಾ ಪಾತ್ರಧಾರಿ ನಟಿ ಸ್ವಾತಿ ರಿಯಲ್‌ ಪತಿ ಕೂಡ ನಟ ಅನ್ನೋದು ಅನೇಕರಿಗೆ ಗೊತ್ತೇ ಇಲ್ಲ

Nov 26, 2024 01:11 PM IST

google News

ನಟಿ ಸ್ವಾತಿ ರಿಯಲ್‌ ಪತಿ ಕೂಡ ನಟ ಅನ್ನೋದು ಅನೇಕರಿಗೆ ಗೊತ್ತೇ ಇಲ್ಲ

    • Amruthadhaare Serial‌ Aparna: ಅಮೃತಧಾರೆ ಧಾರಾವಾಹಿಯಲ್ಲಿ ಆನಂದ್‌ ಪತ್ನಿ ಅಪರ್ಣಾ ಪಾತ್ರದಲ್ಲಿ ನಟಿ ರಾಯಲ್‌ ಸ್ವಾತಿ ಅಭಿನಯಿಸುತ್ತಿದ್ದಾರೆ. ಸ್ವಾತಿಯ ಲವ್‌, ಮದುವೆ, ಪತಿ ಅನಿಲ್‌ ಉದ್ಯೋಗದ ಜೊತೆಗೆ ರಿಯಲ್‌ ಲೈಫ್‌ನ ಅನೇಕ ವಿಚಾರಗಳು ಇಲ್ಲಿವೆ. -ಪದ್ಮಶ್ರೀ ಭಟ್
ನಟಿ ಸ್ವಾತಿ ರಿಯಲ್‌ ಪತಿ ಕೂಡ ನಟ ಅನ್ನೋದು ಅನೇಕರಿಗೆ ಗೊತ್ತೇ ಇಲ್ಲ
ನಟಿ ಸ್ವಾತಿ ರಿಯಲ್‌ ಪತಿ ಕೂಡ ನಟ ಅನ್ನೋದು ಅನೇಕರಿಗೆ ಗೊತ್ತೇ ಇಲ್ಲ (Zee5)

Amruthadhaare Serial: ಕೆಲವರದ್ದು ಸಿನಿಮೀಯ ಸ್ಟೈಲ್‌ನ ಲವ್‌ಸ್ಟೋರಿ ಅಂತ ಆಡುಭಾಷೆಯಲ್ಲಿ ಹೇಳೋದುಂಟು. ಆದರೆ ʼಅಮೃತಧಾರೆʼ ಧಾರಾವಾಹಿ ನಟಿ ರಾಯಲ್ ಸ್ವಾತಿ ಸ್ವತಃ ನಟಿಯಾದ್ರೂ ಕೂಡ ಸಿನಿಮಾ-ಸೀರಿಯಲ್‌ ಕಥೆಯನ್ನೂ ಮೀರಿಸುವಷ್ಟರ ಮಟ್ಟಿಗೆ ಲವ್‌ ಮ್ಯಾರೇಜ್‌ ಮಾಡಿಕೊಂಡಿದ್ದಾರೆ. ಇದ್ದರೆ ಇಂಥ ಪ್ರೀತಿ ಇರಬೇಕು ಅಂತ ಅನಿಸುವಷ್ಟರ ಮಟ್ಟಿಗೆ ಸ್ವಾತಿ- ಅನಿಲ್‌ ಲವ್‌ಸ್ಟೋರಿ ಸ್ಪೂರ್ತಿಯಾಗುವುದು. ತಮ್ಮ ಸೀರಿಯಲ್‌, ಲವ್‌, ಮದುವೆ ವಿಚಾರವಾಗಿ ಸ್ವಾತಿ ಅವರು ಪಂಚಮಿ ಟಾಕ್ಸ್‌ ಯುಟ್ಯೂಬ್‌ ಚಾನೆಲ್‌ ಜೊತೆ ಮಾತನಾಡಿದ್ದಾರೆ.

ಅಮೃತಧಾರೆ ಧಾರಾವಾಹಿಯಲ್ಲಿ ಅಪರ್ಣಾ ಪಾತ್ರದಲ್ಲಿ ನಟಿ ಸ್ವಾತಿ ಅಭಿನಯಿಸುತ್ತಿದ್ದಾರೆ.‌ ಸ್ವಾತಿ ಅವರೇ ತಮ್ಮ ಹೆಸರಿನ ಮುಂದೆ ರಾಯಲ್‌ ಎಂಬುದನ್ನು ಸೇರಿಸಿಕೊಂಡಿದ್ದಾರಂತೆ. ಇದರ ಹಿಂದೆ ವಿಶೇಷವಾದ ಕಾರಣ ಇಲ್ವಂತೆ. ಈ ಹಿಂದೆ ಅವರು ಅಮೃತವರ್ಷಿಣಿ, ಕ್ಲಾಸ್‌ಮೇಟ್ಸ್ʼ ಧಾರಾವಾಹಿಯಲ್ಲಿ ನಟಿಸಿದ್ದರು. ಸ್ವಾತಿ ಅವರದ್ದು ಲವ್‌ ಮ್ಯಾರೇಜ್.‌ ಸ್ವಾತಿ ಪತಿ ಅನಿಲ್‌ ಕೂಡ ಅಮೃತವರ್ಷಿಣಿ ಧಾರಾವಾಹಿಯಲ್ಲಿ ನಟಿಸಿದ್ದರು. ಸ್ವಾತಿ ಬಣ್ಣದ ಲೋಕಕ್ಕೆ ಕಾಲಿಟ್ಟು ಹದಿನಾಲ್ಕು ವರ್ಷಗಳು ಉರುಳಿದವು.

ಸ್ಕೂಲ್‌ ಲವ್‌ಸ್ಟೋರಿ

ನಟಿ ಸ್ವಾತಿ ಮೂಲತಃ ಕನ್ನಡದವರಲ್ಲ. ಸ್ವಾತಿ ಅವರು ಬೆಂಗಳೂರಿನಲ್ಲೇ ಹುಟ್ಟಿ ಬೆಳೆದರು. ಆದರೆ ಇಲ್ಲಿಯವರೇ ಅನಿಸುವಷ್ಟರಮಟ್ಟಿಗೆ ಕನ್ನಡದಲ್ಲಿ ಮಾತನಾಡುತ್ತಾರೆ, ಕನ್ನಡದ ಜೊತೆಗೆ ತೆಲುಗು ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ಸ್ವಾತಿ, ಅನಿಲ್‌ ಅವರು ಅಕ್ಕ-ಪಕ್ಕದ ಮನೆಯವರು. ಆಗ ಇವರಿಬ್ಬರು ಹೈಸ್ಕೂಲ್‌ನಲ್ಲಿ ಓದುತ್ತಿದ್ದರು. ಆಗ ಈ ಜೋಡಿ ಮಧ್ಯೆ ಸ್ನೇಹ ಶುರು ಆಗಿ, ಲವ್‌ ಆಗಿದೆ. ಆರಂಭದಲ್ಲಿ ಇವರ ಪ್ರೀತಿಯನ್ನು ಸ್ವಾತಿ ತಂದೆ ಒಪ್ಪಿರಲಿಲ್ಲ.‌

ಕಾಡಿದ ಅನಾರೋಗ್ಯ!

ಇನ್ನೊಮ್ಮೆ ನಟಿ ಸ್ವಾತಿಗೆ ಅನಾರೋಗ್ಯ ಉಂಟಾಗಿತ್ತು. ನಿತ್ಯವೂ ಬಿಸಿಲಿನಲ್ಲಿ ಓಡಾಡಿಕೊಂಡಿರೋದಿಕ್ಕೆ ತಲೆಸುತ್ತು ಬಂದಿದೆ, ಸುಸ್ತಾಗಿದೆ ಅಂತ ಸ್ವಾತಿ ಅಂದುಕೊಂಡಿದ್ದರು. ಆಮೇಲೆ ಕೆಲವು ಗಂಟೆಗಳ ಕಾಲ ಸ್ವಾತಿ ಪ್ರಜ್ಞೆ ಕಳೆದುಕೊಂಡಿದ್ದರು. ಇದನ್ನು ನೋಡಿ ಸ್ವಾತಿ ತಾಯಿ ಅವರು ಅನಿಲ್‌ ಹಾಗೂ ಅನಿಲ್‌ ತಾಯಿಯನ್ನು ಕರೆದಿದ್ದರು. ಯಾರು ಎಷ್ಟೇ ಕರೆದರೂ ಸ್ವಾತಿ ಎಚ್ಚರಗೊಂಡಿರಲಿಲ್ಲ. ಆಮೇಲೆ ಸ್ವಾತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯ್ತು. ಸ್ವಾತಿಯನ್ನು ಆಸ್ಪತ್ರೆಗೆ ಸೇರಿಸಲೂ ಕೂಡ ಅವರ ಮನೆಯವರ ಬಳಿ ಹಣ ಇರಲಿಲ್ಲ. ಅಪ್ಪನ ಉದ್ಯಮ ನಷ್ಟದಲ್ಲಿದ್ದರೆ, ತಾಯಿ ಪ್ರೈವೇಟ್‌ ಸ್ಕೂಲ್‌ನಲ್ಲಿ ಟೀಚರ್‌ ಆಗಿದ್ದರು. ಆಗ ಅನಿಲ್‌ ತಾಯಿ ತಮ್ಮ ಕಿವಿಓಲೆಯನ್ನು ಅಡವಿಟ್ಟು ಹಣ ಕೊಟ್ಟಿದ್ದರು. ಸ್ವಾತಿಗೆ ಬ್ರೇನ್‌ ಇನ್‌ಫೆಕ್ಷನ್‌ ಆಗಿತ್ತು, ಆ ರೀತಿ ಆದವರು ಮೂಕ ಆಗ್ತಾರೆ ಅಥವಾ ಕಿವುಡ ಆಗ್ತಾರೆ ಅಂತ ವೈದ್ಯರು ಹೇಳಿದ್ದರಂತೆ. ಸ್ವಾತಿ ಕೋಮಾದಲ್ಲಿದ್ದಾಗ ಅನಿಲ್‌ ನೋಡಿಕೊಂಡ ಬಗೆ ನೋಡಿ ಸ್ವಾತಿ ತಂದೆ ಈ ಮದುವೆಗೆ ಒಪ್ಪಿದ್ದರು.

ಅನಿಲ್‌ ಉದ್ಯೋಗ ಏನು?

ಬಹಳ ಸಿಂಪಲ್‌ ಆಗಿ ಸ್ವಾತಿ- ಅನಿಲ್‌ ಮದುವೆ ಆದರು. ತಾವು ದುಡಿದ ಹಣದಲ್ಲಿ ಸ್ವಾತಿ-ಅನಿಲ್‌ ಮದುವೆಯಾಗಿರೋದು ನಿಜಕ್ಕೂ ಹೆಮ್ಮೆಯ ವಿಷಯ. ಇನ್ನು ಅನಿಲ್‌ ಈಗ ಇಂಟಿರಿಯರ್‌ ಡಿಸೈನ್‌ ಕಂಪೆನಿಯನ್ನು ನಡೆಸುತ್ತಿದ್ದಾರೆ. ಒಮ್ಮೆ ಸ್ವಾತಿ ಅವರಿಗೆ ಯಾವುದೇ ಪ್ರಾಜೆಕ್ಟ್‌ ಇಲ್ಲದಿದ್ದಾಗ ಅನಿಲ್‌ ಉದ್ಯಮ ಚೆನ್ನಾಗಿ ನಡೆಯುತ್ತಿರುತ್ತದೆ, ಅನಿಲ್‌ ಅವರ ಉದ್ಯಮ ನಷ್ಟದಲ್ಲಿದ್ದಾಗ ಸ್ವಾತಿ ಅವರ ಸೀರಿಯಲ್‌ ಚೆನ್ನಾಗಿ ಹೋಗುತ್ತಿರುತ್ತದೆ. ಒಟ್ಟಿನಲ್ಲಿ ಇವರಿಬ್ಬರು ಕರಿಯರ್‌ ವಿಚಾರದಲ್ಲಿ ತುಂಬ ಸಪೋರ್ಟಿವ್‌ ಆಗಿದ್ದು ಜೀವನವನ್ನು ನಡೆಸುತ್ತಿದ್ದಾರೆ.

ಅಮೃತವರ್ಷಿಣಿ ಧಾರಾವಾಹಿಯಲ್ಲಿ ನಟನೆ

ಅನಿಲ್‌ ಅವರು ಅಮೃತವರ್ಷಿಣಿ ಧಾರಾವಾಹಿಯಲ್ಲಿ ನಟಿಸಿದ್ದರು. ಅನಿಲ್‌ಗೂ ಕೂಡ ನಟಿಸುವ ಆಸೆ. ತನಗೆ ಅವಕಾಶ ಇಲ್ಲದಿದ್ರೂ ಸ್ವಾತಿ ನಟಿಸ್ತಿದ್ದಾಳೆ ಅಂತ ಅವರಿಗೆ ತುಂಬ ಖುಷಿಯಂತೆ. ಅಂದಹಾಗೆ ಈ ಜೋಡಿ ʼಸೂಪರ್‌ ಜೋಡಿʼ ಶೋನಲ್ಲಿ ಭಾಗವಹಿಸಿತ್ತು. ಸ್ವಾತಿಗೂ ಡ್ಯಾನ್ಸ್‌ಗೂ ಆಗಿಬರೋದಿಲ್ಲ. ಆ ಶೋನಲ್ಲಿ ಡ್ಯಾನ್ಸ್‌ ಮಾಡಬೇಕಾದ ಪರಿಸ್ಥಿತಿ ಬಂದಾಗಲೂ ಸ್ವಾತಿ ಕಷ್ಟಪಟ್ಟಿದ್ದರು. ಡ್ಯಾನ್ಸ್‌ ಕಲಿ ಅಂತ ಅನಿಲ್‌ ಹೇಳಿದ್ರೆ ಸ್ವಾತಿ, ನಾವು ಗೊತ್ತಲ್ವಾ? ಡಿ ಬಾಸ್‌ ಫ್ಯಾನ್‌ ಅಂತ ಹೇಳ್ತಾರಂತೆ. ಸ್ವಾತಿ ಅವರಿಗೆ ಜೋಶ್‌ ಬರಲಿ ಅಂತ ಆ ರಿಯಾಲಿಟಿ ಶೋನಲ್ಲಿ ದರ್ಶನ್‌ ಸಿನಿಮಾದ ಹಾಡುಗಳನ್ನು ಹಾಕುತ್ತಿದ್ದರಂತೆ.

ಬರಹ: ಪದ್ಮಶ್ರೀ ಭಟ್

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ