logo
ಕನ್ನಡ ಸುದ್ದಿ  /  ಮನರಂಜನೆ  /  Annayya Serial: ಬೆಳದಿಂಗಳಲ್ಲಿ ಕಳೆದೋದ ಶಿವು, ಪಾರು; ಸಿದ್ದಾರ್ಥ್‌ ವಿಚಾರ ಹೇಳಲಾಗದೆ ಮನಸಲ್ಲೇ ಕೊರಗಿದ ಅಣ್ಣಯ್ಯ

Annayya Serial: ಬೆಳದಿಂಗಳಲ್ಲಿ ಕಳೆದೋದ ಶಿವು, ಪಾರು; ಸಿದ್ದಾರ್ಥ್‌ ವಿಚಾರ ಹೇಳಲಾಗದೆ ಮನಸಲ್ಲೇ ಕೊರಗಿದ ಅಣ್ಣಯ್ಯ

Suma Gaonkar HT Kannada

Nov 20, 2024 02:39 PM IST

google News

ಬೆಳದಿಂಗಳಲ್ಲಿ ಕಳೆದೋದ ಶಿವು, ಪಾರು

    • ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ಹಾಗೂ ಶಿವು ಇಬ್ಬರು ರಾತ್ರಿ ಕತ್ತಲಲ್ಲಿ ತೋಟಕ್ಕೆ ಹೋಗಿದ್ದಾರೆ. ಅವರ ಜೊತೆಗೆ ತಂಗಿಯರೂ ಬಂದಿದ್ದಾರೆ. ಆದರೆ ಅಲ್ಲಿ ನಡೆದದ್ದೇ ಬೇರೆ. ಪಾರುಗೆ ಸತ್ಯ ಹೇಳಬೇಕು ಎಂದು ಶಿವು ಅಂದುಕೊಂಡಿದ್ದಾನೆ. 
ಬೆಳದಿಂಗಳಲ್ಲಿ ಕಳೆದೋದ ಶಿವು, ಪಾರು
ಬೆಳದಿಂಗಳಲ್ಲಿ ಕಳೆದೋದ ಶಿವು, ಪಾರು

ಅಣ್ಣಯ್ಯ ಧಾರಾವಾಹಿಯಲ್ಲಿ ಪಾರುಗೆ ಶಿವು ಹಾಗೂ ಅವರ ಮನೆಯವರು ನೀಡುತ್ತಿರುವ ಪ್ರೀತಿಯನ್ನು ನೋಡಿ ಕಣ್ತುಂಬಿ ಬಂದಿದೆ. ಈ ಮನೆಯಲ್ಲಿ ಎಷ್ಟೆಲ್ಲ ಪ್ರೀತಿ ಸಿಕ್ಕಿದೆ ನನಗೆ ಎಷ್ಟೊಳ್ಳೆ ನಾದ್ನಿಯರಿದ್ದಾರೆ ಎಂದು ಅವಳು ಅಂದುಕೊಳ್ಳುತ್ತಾಳೆ. ಹಾಗೇ ಮನೆಯಿಂದ ಬರುವಾಗ ತೋಟದಲ್ಲಿ ಕತ್ತಲಾಗಿರುವ ಕಾರಣ ನೆಲ ಕಾಣದೆ ಪಾರು ಜಾರಿ ಬೀಳುತ್ತಾಳೆ. ಆಗ ಶಿವುನೇ ಅವಳನ್ನು ಹಿಡಿದು ಎತ್ತುತ್ತಾನೆ. ತುಂಬಾ ಚೆನ್ನಾಗಿ ಅವಳನ್ನು ಕೇರ್ ಮಾಡುತ್ತಾನೆ. ಆ ರಾತ್ರಿ ದೀಪದ ಬೆಳಕಿನಲ್ಲಿ ಅವಳ ಮುಖ ನೋಡುತ್ತಾನೆ.

ಪಾರು ಕೂಡ ಒಂದು ಕ್ಷಣ ಕಳೆದು ಹೋಗುತ್ತಾಳೆ. ಆಗ ತಂಗಿಯರು “ಬೆಳದಿಂಗ್ಳು ನೀನೇನಮ್ಮಿ” ಅಂತ ಹಾಡೇಳುತ್ತಾರೆ. ನಾವಿಬ್ರು ಯಾರೀಗ್ ಕಮ್ಮಿ ಎಂದು ನಗಾಡುತ್ತಾರೆ. ನಂತರ ಅಲ್ಲೇ ಊಟ ಮಾಡುವ ವ್ಯವಸ್ಥೆಯನ್ನೂ ಸಹ ಮಾಡಿರುತ್ತಾರೆ. ಅಲ್ಲೇ ಊಟ ಮಾಡಬೇಕು ಎಂದು ಅವರು ಅಂದುಕೊಂಡ ಕಾರಣ ಚಾಪೆ ಹಾಗೇ ಅಡುಗೆ ಮಾಡಿದ್ದನ್ನೆಲ್ಲ ಹಿಡಿದುಕೊಂಡೇ ಹೋಗಿರುತ್ತಾರೆ. ಅವರ ಸತ್ಕಾರ ನೋಡಿ ಪಾರು ಮನಸು ಕರಗುತ್ತದೆ. ಸಿದ್ದಾರ್ಥ್ ನೆನಪೂ ಅವಳಿಗೆ ಆಗುತ್ತದೆ.

ಅಣ್ಣಯ್ಯ ಪಾರು ಒಬ್ಬಳನ್ನೇ ಪಕ್ಕಕ್ಕೆ ಕರೆದುಕೊಂಡು ಹೋಗುತ್ತಾನೆ. ಅವಳ ಕಣ್ಣು ಮುಚ್ಚುತ್ತಾನೆ. ನಂತರ ನಿಧಾನವಾಗಿ ಕಣ್ಣು ತೆಗೆಯಲು ಹೇಳುತ್ತಾನೆ. ಆಗ ಪಾರು ಕಣ್ಣು ತೆಗೆದು ನೋಡಿದರೆ ಮಿಂಚು ಹುಳುಗಳು ಕಾಣಿಸುತ್ತವೆ. ಮತ್ತೆ ಅವರು ಊಟ ಮಾಡುವ ಸಂದರ್ಭದಲ್ಲಿ ಆತಿತ್ಯ ಮಾಡಿದ್ದನ್ನು ನೆನಪಿಸಿಕೊಂಡು. ನಿನ್ನ ಹೆಂಡತಿ ಪುಣ್ಯ ಮಾಡಿದಾಳೆ, ಆದರೆ ನನಗೆ ಆ ಭಾಗ್ಯ ಇಲ್ಲ, ಸಿದ್ದಾರ್ಥ್‌ ಸಿಕ್ಕ ತಕ್ಷಣ ನಾನು ಇಲ್ಲಿಂದ ಹೋಗ್ತೀನಿ ಎಂದು ಹೇಳುತ್ತಾಳೆ. ಆ ಮಾತನ್ನು ಕೇಳಿ ಸಿದ್ದಾರ್ಥ್‌ ಬಗ್ಗೆ ನಿಜ ಹೇಳಬೇಕು ಎಂದು ಅಣ್ಣಯ್ಯನಿಗೆ ಅನಿಸುತ್ತದೆ. ಆದರೆ ಹೇಳೋದಿಲ್ಲ.

ಅಣ್ಣಯ್ಯ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ.

ಅಣ್ಣಯ್ಯ ಸೀರಿಯಲ್‌ ಪಾತ್ರವರ್ಗ

ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್‌ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.

ವಿಕಾಸ್‌ ಉತ್ತಯ್ಯ - ಶಿವು

ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ.

ನಿಶಾ ರವಿಕೃಷ್ಣನ್‌ - ಪಾರು

ಅಂಕಿತಾ ಗೌಡ, ನಾಗಶ್ರೀ ಬೇಗಾರ್‌, ಪ್ರತೀಕ್ಷಾ ಶರೀನಾಥ್‌ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ