OTTಯಲ್ಲಿ ಮತ್ತೊಂದು ಸೂಪರ್ ಹಿಟ್ ಹಾರರ್ ಕಾಮಿಡಿ ಚಲನಚಿತ್ರ; ಸ್ತ್ರೀ 2 ನೋಡಲು ಕಾದವರಿಗೆ ಇಲ್ಲಿದೆ ಗುಡ್ ನ್ಯೂಸ್
Oct 09, 2024 09:25 AM IST
OTTಯಲ್ಲಿ ಮತ್ತೊಂದು ಸೂಪರ್ ಹಿಟ್ ಹಾರರ್ ಕಾಮಿಡಿ ಚಲನಚಿತ್ರ
- ಸ್ತ್ರೀ 2 ಚಿತ್ರವು ಇತ್ತೀಚೆಗೆ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಕಲೆಕ್ಷನ್ ಮಾಡಿದೆ. ಸುಮಾರು ರೂ.60 ಕೋಟಿ ಬಜೆಟ್‌ನಲ್ಲಿ ಈ ಸಿನಿಮಾ ತಯಾರಾಗಿದೆ. ಇದೇ ವರ್ಷ ಆಗಸ್ಟ್ 15 ರಂದು ಬಿಡುಗಡೆಯಾಗಿ ಪಾಸಿಟಿವ್ ಟಾಕ್ ಮೂಲಕ ಆರಂಭದಿಂದಲೂ ಭರ್ಜರಿ ಕಲೆಕ್ಷನ್ ಮಾಡಿದೆ.
ಬಾಲಿವುಡ್ ತಾರೆಗಳಾದ ಶ್ರದ್ಧಾ ಕಪೂರ್ ಮತ್ತು ರಾಜ್‌ಕುಮಾರ್ ರಾವ್ ಅಭಿನಯಿಸಿದ 2018 ರಲ್ಲಿ ತೆರೆಕಂಡು ಸೂಪರ್ ಹಿಟ್ ಆದ ಸ್ತ್ರೀ ಚಿತ್ರ ಭಾರಿ ಸದ್ದು ಮಾಡಿತ್ತು. ಈ ಹಾರರ್ ಕಾಮಿಡಿ ಚಿತ್ರವನ್ನು ಅಮರ್ ಕೌಶಿಕ್ ನಿರ್ದೇಶಿಸಿದ್ದಾರೆ. ಈ ಚಿತ್ರದ ಮುಂದುವರಿದ ಭಾಗವಾಗಿ, 'ಸ್ತ್ರೀ 2' ಈ ವರ್ಷದ ಆಗಸ್ಟ್ 15 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಯಿತು. ಈ ಚಿತ್ರ ಸೆನ್ಸೇಷನಲ್ ಬ್ಲಾಕ್‌ಬಸ್ಟರ್ ಆಯಿತು. ಇದು ರೂ.850 ಕೋಟಿಗೂ ಅಧಿಕ ಹಣ ಗಳಿಸಿದೆ. OTTಗೆ ಇತ್ತೀಚಿನ ದಿನಗಳಲ್ಲಿ ಬಂದಿದೆ. ಮೊದಲ ಭಾಗ 'ಸ್ತ್ರೀ' ಇದೀಗ ಮತ್ತೊಂದು OTTಯಲ್ಲಿ ಅಂದರೆ ಅಮೇಜಾನ್ ಹೊರತುಪಡಿಸಿ ಡಿಸ್ನಿಯಲ್ಲಿ ಸ್ಟ್ರೀಮ್ ಆಗುತ್ತಿದೆ. ಎರಡನೇ ಭಾಗ ನೋಡುವ ಮೊದಲು ಒಮ್ಮೆ ಹಳೆಯ ಭಾಗವನ್ನು ನೋಡೋಣ ಎಂದು ಜನರು ಮನಸು ಮಾಡುತ್ತಾರೆ.
ಡಿಸ್ನಿ+ ಹಾಟ್‌ಸ್ಟಾರ್ OTTಯಲ್ಲಿ ತುಂಬಾ ವಾಚ್‌ಅವರ್ ಪಡೆದುಕೊಂಡಿದೆ. ಇತ್ತೀಚೆಗೆ ಈ ಚಲನಚಿತ್ರವು ಸ್ತ್ರೀ 2 ಬಿಡುಗಡೆಯ ಸಮಯದಲ್ಲಿ ಹಾಟ್‌ಸ್ಟಾರ್ OTTಯಲ್ಲಿ ಟ್ರೆಂಡಿಂಗ್‌ನಲ್ಲಿತ್ತು. ಈಗ ಇದು ಅಮೆಜಾನ್ ಪ್ರೈಮ್ ವೀಡಿಯೊ OTTಯಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯವಿದೆ. ಇದು ಈಗಾಗಲೇ ಹಾಟ್‌ಸ್ಟಾರ್‌ನಲ್ಲಿರುವಾಗ ಫ್ರೈಮ್‌ನಲ್ಲೂ ಸ್ಟ್ರೀಮಿಂಗ್‌ಗೆ ಪ್ರವೇಶಿಸಿದೆ.
Amazon Prime Video OTT ಪ್ಲಾಟ್‌ಫಾರ್ಮ್ 'ಸ್ತ್ರೀ 2' ನ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಪಡೆದುಕೊಂಡಿದೆ. ಪ್ರೈಮ್ ವಿಡಿಯೋ ‘ಸ್ತ್ರೀ’ ಚಿತ್ರದ ಮೊದಲ ಭಾಗ ಲಭ್ಯವಾಗುವಂತೆ ಮಾಡಿದೆ. ಹಾಟ್‌ಸ್ಟಾರ್ ಮತ್ತು ಪ್ರೈಮ್ ವಿಡಿಯೋದಲ್ಲಿ ಎಲ್ಲಿ ಬೇಕಾದರೂ ನೀವು ಇದನ್ನು ನೋಡಬಹುದು. ಅಂದರೆ ಸ್ತ್ರೀ ಚಿತ್ರದ ಮೊದಲ ಭಾಗವನ್ನು ನೋಡಬಹುದು.
ಅಕ್ಟೋಬರ್ 10 ರಂದು ಅಮೆಜಾನ್ ಪ್ರೈಮ್ ವಿಡಿಯೋ ಒಟಿಟಿಯಲ್ಲಿ ನಿಯಮಿತ ಸ್ಟ್ರೀಮಿಂಗ್‌ಗಾಗಿ ಸ್ತ್ರೀ 2 ಕೂಡ ಬಿಡುಗಡೆಯಾಗಲಿದೆ. ಪ್ರೈಮ್ ವೀಡಿಯೋ ಕೂಡ 'ಸ್ತ್ರೀ 2' ಅನ್ನು ಲಭ್ಯವಾಗುವಂತೆ ಮಾಡಿದೆ ಏಕೆಂದರೆ ಮೊದಲ ಭಾಗವನ್ನು ಸಹ ಅವರ ಪ್ಲ್ಯಾಟ್‌ಪಾರಮ್‌ನಲ್ಲೇ ನೋಡಬಹುದಾಗಿದೆ. ಸ್ತ್ರಿ ಆಗಸ್ಟ್ 2018 ರಲ್ಲಿ ಬಿಡುಗಡೆ ಕಂಡು ಈಗ ಮತ್ತೆ ಸದ್ದು ಮಾಡುತ್ತಿದೆ.
ಜನರು ಹಿಂದೆ ಇದನ್ನು ಯಾವ ರೀತಿ ಮೆಚ್ಚಿಕೊಂಡಿದ್ದರೋ ಈಗಲೂ ಈ ಚಿತ್ರವನ್ನು ಅದೇ ರೀತಿ ಮೆಚ್ಚಿಕೊಂಡಿದ್ದಾರೆ. ಇದಕ್ಕೆ ಜನರ ಕಾತುರತೆಯೇ ಉದಾಹರಣೆಯಾಗಿದೆ. ಹಾರರ್ ಕಾಮಿಡಿ ಸಿನಿಮಾಗಳನ್ನು ಇತ್ತೀಚಿಗೆ ಜನ ಮತ್ತೆ ಹೆಚ್ಚಾಗಿ ಇಷ್ಟಪಡಲು ಆರಂಭಿಸಿದ್ದಾರೆ. ಒಂದೇ ರೀತಿಯ ಸಿನಿಮಾಗಳನ್ನು ಜನರು ಎಂದಿಗೂ ನೋಡಲು ಬಯಸುವುದಿಲ್ಲ. ಆಗಾಗ ಬದಲಾವಣೆ ಬಯಸುತ್ತಲೇ ಇರುತ್ತಾರೆ.
ಈ ಚಿತ್ರವನ್ನು ಪ್ರೇಕ್ಷಕರಿಗೆ ಇಷ್ಟವಾಗುವಂತೆ ನಿರ್ದೇಶಿಸಿದ್ದಾರೆ. ಶ್ರದ್ಧಾ, ರಾಜ್‌ಕುಮಾರ್ ರಾವ್ ತಮ್ಮ ನಟನೆಯಿಂದ ಮನ ಗೆದ್ದಿದ್ದಾರೆ. ಮಾರು ರೂ.25 ಕೋಟಿ ವೆಚ್ಚದಲ್ಲಿ ತಯಾರಾದ ಸಿನಿಮಾ ರೂ.180 ಕೋಟಿ ಗಳಿಸಿ ಬ್ಲಾಕ್ ಬಸ್ಟರ್ ಆಗಿದೆ. ಈ ವರ್ಷದ ಸೀಕ್ವೆಲ್ 'ಸ್ತ್ರೀ 2' ದಾಖಲೆಗಳನ್ನು ಮುರಿದು ಬಂಪರ್ ಹಿಟ್ ಆಯಿತು.ಸ್ತ್ರೀ 2 ಸುಮಾರು ರೂ.60 ಕೋಟಿ ಬಜೆಟ್‌ನಲ್ಲಿ ತಯಾರಾಗಿದೆ. ಇದೇ ವರ್ಷ ಆಗಸ್ಟ್ 15 ರಂದು ಬಿಡುಗಡೆಯಾಗಿ ಪಾಸಿಟಿವ್ ಟಾಕ್ ಮೂಲಕ ಆರಂಭದಿಂದಲೂ ಭರ್ಜರಿ ಕಲೆಕ್ಷನ್ ಮಾಡಿದೆ.
ವಿಭಾಗ