logo
ಕನ್ನಡ ಸುದ್ದಿ  /  ಮನರಂಜನೆ  /  Kannada Ott Releases: ಒಟಿಟಿಯಲ್ಲಿ ಈ ವಾರ ಕನ್ನಡದ ದೊಡ್ಡ ಸಿನಿಮಾಗಳ ದಂಡು; ಯಾವ ಒಟಿಟಿಯಲ್ಲಿ, ಯಾವ ಸಿನಿಮಾ?

Kannada OTT Releases: ಒಟಿಟಿಯಲ್ಲಿ ಈ ವಾರ ಕನ್ನಡದ ದೊಡ್ಡ ಸಿನಿಮಾಗಳ ದಂಡು; ಯಾವ ಒಟಿಟಿಯಲ್ಲಿ, ಯಾವ ಸಿನಿಮಾ?

Nov 22, 2024 11:20 AM IST

google News

ಒಟಿಟಿಯಲ್ಲಿ ಈ ವಾರ ಕನ್ನಡದ ಈ ಎರಡು ಬಿಗ್ ಸಿನಿಮಾಗಳನ್ನು ವೀಕ್ಷಿಸಬಹುದು.

    • Kannada OTT Releases: ಒಟಿಟಿಯ ವೀಕ್ಷಕರಿಗೆ ಈ ವಾರ ಬ್ಲಾಕ್‌ ಬಸ್ಟರ್‌ ವೀಕ್‌ ಆಗಿರಲಿದೆ. ಈಗಾಗಲೇ ಮಾರ್ಟಿನ್‌ ಸಿನಿಮಾ ಚಿತ್ರಮಂದಿರದ ಬಳಿಕ ಒಟಿಟಿ ಅಂಗಳ ಪ್ರವೇಶಿಸಿದೆ. ಅದೇ ರೀತಿ ಮೂರೇ ವಾರಕ್ಕೆ ಒಟಿಟಿಗೆ ಬಂದಿದೆ ಶ್ರೀಮುರಳಿಯ ಬಘೀರ ಸಿನಿಮಾ. ಈ ಎರಡು ಚಿತ್ರಗಳ ಜತೆಗೆ ಇನ್ನೆರಡು ಸಿನಿಮಾಗಳ ಒಟಿಟಿ ರಿಲೀಸ್‌ ಕುರಿತ ಮಾಹಿತಿ ಇಲ್ಲಿದೆ. 
ಒಟಿಟಿಯಲ್ಲಿ ಈ ವಾರ ಕನ್ನಡದ ಈ ಎರಡು ಬಿಗ್  ಸಿನಿಮಾಗಳನ್ನು ವೀಕ್ಷಿಸಬಹುದು.
ಒಟಿಟಿಯಲ್ಲಿ ಈ ವಾರ ಕನ್ನಡದ ಈ ಎರಡು ಬಿಗ್ ಸಿನಿಮಾಗಳನ್ನು ವೀಕ್ಷಿಸಬಹುದು.

OTT Kannada Movies This Week: ನಿತ್ಯ ಒಟಿಟಿ ವೇದಿಕೆಯಲ್ಲಿ ಬೇರೆ ಭಾಷೆಗಳ ಒಂದಲ್ಲ ಒಂದು ಸಿನಿಮಾಗಳು ಸ್ಟ್ರೀಮಿಂಗ್‌ ಆರಂಭಿಸುತ್ತಲೇ ಇರುತ್ತವೆ. ಆದರೆ, ಪರಭಾಷೆಗೆ ಹೋಲಿಕೆ ಮಾಡಿದರೆ, ಕನ್ನಡದಲ್ಲಿ ಆ ಪ್ರಮಾಣ ತುಸು ಕಡಿಮೆ. ಅದರಲ್ಲೂ ದೊಡ್ಡ ಸಿನಿಮಾಗಳು ಒಟಿಟಿ ಪ್ರವೇಶಿಸುವುದೇ ತಡವಾಗಿ. ಈಗ ಒಂದೇ ವಾರದ ಗ್ಯಾಪ್‌ನಲ್ಲಿ ಕನ್ನಡದ ಸ್ಟಾರ್‌ ಹೀರೋಗಳ ಎರಡು ಸಿನಿಮಾಗಳು ಒಟಿಟಿ ಅಂಗಳ ಪ್ರವೇಶಿಸಿವೆ. ಹಾಗಾದರೆ ಆ ಸಿನಿಮಾಗಳು ಯಾವವು? ಯಾವ ಒಟಿಟಿಯಲ್ಲಿ ಆ ಸಿನಿಮಾಗಳನ್ನು ವೀಕ್ಷಣೆ ಮಾಡಬಹುದು? ಇಲ್ಲಿದೆ ಮಾಹಿತಿ.

ಬಘೀರ

ಅಕ್ಟೋಬರ್‌ 31ರಂದು ಬಘೀರ ಸಿನಿಮಾ ಚಿತ್ರಮಂದಿರಗಳಲ್ಲಿ ಅಬ್ಬರಿಸಿತ್ತು. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಮೂಡಿಬಂದಿದ್ದ ಈ ಸಿನಿಮಾ ಕಲೆಕ್ಷನ್‌ ವಿಚಾರದಲ್ಲಿಯೂ ಮೋಡಿ ಮಾಡಿತ್ತು. ಹೊಂಬಾಳೆ ಫಿಲಂಸ್‌ ಬಂಡವಾಳ ಹೂಡಿದ್ದ ಈ ಸಿನಿಮಾವನ್ನು ಡಾ. ಸೂರಿ ನಿರ್ದೇಶನ ಮಾಡಿದ್ದರು. ಹೀಗೆ ಚಿತ್ರಮಂದಿರಗಳಲ್ಲಿ ತೆರೆಕಂಡ ಈ ಸಿನಿಮಾ ಕೇವಲ ಮೂರೇ ವಾರಕ್ಕೆ ಒಟಿಟಿಗೆ ಆಗಮಿಸಿತ್ತು. ನವೆಂಬರ್‌ 21ರಿಂದ ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಈ ಸಿನಿಮಾ ಸ್ಟ್ರೀಮಿಂಗ್‌ ಆಗುತ್ತಿದೆ. ರುಕ್ಮಿಣಿ ವಸಂತ್, ಪ್ರಕಾಶ್ ರಾಜ್, ರಂಗಾಯಣ ರಘು, ಅಚ್ಯುತ್ ಕುಮಾರ್, ಗರುಡ ರಾಮ್ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಎ.ಜೆ ಶೆಟ್ಟಿ ಛಾಯಾಗ್ರಹಣದಲ್ಲಿ ಬಘೀರ ಸಿನಿಮಾ ಮೂಡಿಬಂದರೆ, ಅಜನೀಶ್‌ ಲೋಕನಾಥ್‌ ಸಂಗೀತ ನೀಡಿದ್ದಾರೆ.

ಮಾರ್ಟಿನ್‌

ಧ್ರುವ ಸರ್ಜಾ ದ್ವಿಪಾತ್ರದಲ್ಲಿ ನಟಿಸಿರುವ ಮಾರ್ಟಿನ್‌ ಸಿನಿಮಾ ಅಕ್ಟೋಬರ್‌ 11ರಂದು ಹಲವು ಭಾಷೆಗಳಲ್ಲಿ ಬಿಡುಗಡೆ ಆಗಿತ್ತು. ಎ.ಪಿ ಅರ್ಜುನ್‌ ನಿರ್ದೇಶನದ ಈ ಸಿನಿಮಾವನ್ನು, ನಿರ್ಮಾಪಕ ಉದಯ್‌ ಕೆ ಮೆಹ್ತಾ ನಿರ್ಮಾಣ ಮಾಡಿದ್ದರು. ಕನ್ನಡದ ಜತೆಗೆ ತೆಲುಗು, ತಮಿಳು, ಹಿಂದಿ, ಮಲಯಾಳಂ ಸೇರಿ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಿತ್ತು. ಬಾಕ್ಸ್‌ ಆಫೀಸ್‌ನಲ್ಲಿ ಹೀನಾಯ ಸೋಲುಂಡಿದ್ದ ಈ ಸಿನಿಮಾ ಈಗ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಿದೆ. ಅಮೆಜಾನ್‌ ಪ್ರೈಂನಲ್ಲಿ ಕನ್ನಡದ ಜತೆಗೆ ಇತರ ಭಾಷೆಗಳಲ್ಲಿಯೂ ಈ ಸಿನಿಮಾವನ್ನು ವೀಕ್ಷಣೆ ಮಾಡಬಹುದು.

ಭೈರತಿ ರಣಗಲ್‌

ಗೀತಾ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಗೀತಾ ಶಿವರಾಜಕುಮಾರ್ ನಿರ್ಮಿಸಿರುವ, ನರ್ತನ್ ನಿರ್ದೇಶನದ ಸಿನಿಮಾ ಭೈರತಿ ರಣಗಲ್, ನವೆಂಬರ್ 15ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಿತ್ತು. ಈ ನಡುವೆ ಪ್ರೇಕ್ಷಕರಿಂದಲೂ ಮೆಚ್ಚುಗೆ ಪಡೆದು, ಕಲೆಕ್ಷನ್‌ ವಿಚಾರದಲ್ಲಿಯೂ ಮುಂದಡಿ ಇರಿಸಿದೆ ಈ ಸಿನಿಮಾ. ಈಗ ಇದೇ ಚಿತ್ರದ ಒಟಿಟಿ ಬಿಡುಗಡೆ ಯಾವಾಗ ಮತ್ತು ಯಾವ ಒಟಿಟಿಯಲ್ಲಿ ಪ್ರಸಾರ ಎಂಬ ಬಗ್ಗೆಯೂ ಒಂದಷ್ಟು ಸುದ್ದಿ ಓಡಾಡುತ್ತಿವೆ. ಮಫ್ತಿ ಸಿನಿಮಾದ ಪ್ರಿಕ್ವೆಲ್‌ ಆಗಿರುವ ಭೈರತಿ ರಣಗಲ್ ‌ಸಿನಿಮಾದ ಡಿಜಿಟಲ್‌ ಹಕ್ಕನ್ನು ಜೀ 5 ಪಡೆದುಕೊಂಡಿದೆ. ಅದರಂತೆ ಡಿಸೆಂಬರ್‌ ಕೊನೆ ವಾರ ಅಥವಾ ಸಂಕ್ರಾಂತಿಗೆ ಈ ಸಿನಿಮಾ ಸ್ಟ್ರೀಮಿಂಗ್‌ ಆರಂಭಿಸಲಿದೆ.

ಕೃಷ್ಣಂ ಪ್ರಣಯ ಸಖಿ

ತ್ರಿಶೂಲ್ ಎಂಟರ್ಟೈನ್ಮೆಂಟ್ ಬ್ಯಾನರ್‌ನಲ್ಲಿ ಪ್ರಶಾಂತ್ ಜಿ ರುದ್ರಪ್ಪ ನಿರ್ಮಿಸಿರುವ, ನಿರ್ದೇಶಕ ಶ್ರೀನಿವಾಸರಾಜು ನಿರ್ದೇಶನದಲ್ಲಿ ಕೃಷ್ಣಂ ಪ್ರಣಯ ಸಖಿ ಸಿನಿಮಾ ಶತದಿನೋತ್ಸವದ ಸಂಭ್ರಮದಲ್ಲಿದೆ. ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ಸಿನಿಮಾ ಈ ವರೆಗೂ ಒಟಿಟಿಯತ್ತ ಆಗಮಿಸಿಲ್ಲ. ಆದರೆ, ಈ ಚಿತ್ರದ ಡಿಜಿಟಲ್‌ ಮತ್ತು ಸ್ಯಾಟಲೈಟ್‌ ಹಕ್ಕನ್ನು ಉದಯ ಟಿವಿ ಖರೀದಿಸಿದೆ. ಅದರಂತೆ, ಕ್ರಿಸ್‌ಮಸ್‌ ಅಥವಾ ಸಂಕ್ರಾಂತಿಗೆ ಈ ಸಿನಿಮಾ ಉಡಯ ಟಿವಿಯಲ್ಲಿ ಪ್ರಸಾರವಾಗುವ ಸಾಧ್ಯತೆ ಇದೆ. ಅದಾದ ಬಳಿಕ ಸನ್‌ ನೆಕ್ಸ್ಟ್‌ ಒಟಿಟಿಯಲ್ಲಿ ಈ ಸಿನಿಮಾ ಡಿಜಿಟಲ್‌ ಸ್ಟ್ರೀಮಿಂಗ್‌ ಆಗಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ