Bagheera X Review: ಬಘೀರ ಸಿನಿಮಾದ ಪಬ್ಲಿಕ್ ರಿವ್ಯೂ- ಸೂಪರ್ ಬ್ಲಾಕ್‌ಬಸ್ಟರ್, ಇದ್ರ ಲೆವೆಲ್ಲೇ ಬೇರೆ, ಚರಿತ್ರೆ ಬರೆಯುತ್ತೆ ಕರಿಚಿರತೆ
Oct 31, 2024 02:59 PM IST
Bagheera X Review: ಬಘೀರ ಸಿನಿಮಾದ ಪಬ್ಲಿಕ್ ರಿವ್ಯೂ
- Bagheera Movie Review: ಶ್ರೀಮುರಳಿ, ರುಕ್ಮಿಣಿ ವಸಂತ್, ಪ್ರಕಾಶ್ ರಾಜ್, ರಂಗಾಯಣ ರಘು ಮುಂತಾದವರು ನಟಿಸಿದ ಬಘೀರ ಸಿನಿಮಾದ ಶೋ ನೋಡಿರುವ ಪ್ರೇಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾದ ವಿಮರ್ಶೆ ನೀಡುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್‌ನ ಈ ಸಿನಿಮಾ ಹೇಗಿದೆ ತಿಳಿಯೋಣ ಬನ್ನಿ.
Bagheera Movie Review: ಸಮಾಜವು ಕ್ರೂರ ಪ್ರಾಣಿಗಳ ಕಾಡು ಆಗಿದೆ. ಈ ಸಮಯದಲ್ಲಿ ಒಬ್ಬ ನ್ಯಾಯಕ್ಕಾಗಿ ಘರ್ಜಿಸುತ್ತಾನೆ. ಆತನೇ ಬಘೀರ. ಕೆಜಿಎಫ್ 1, ಕಾಂತಾರ ಮತ್ತು ಸಲಾರ್ ನಿರ್ಮಾಪಕರ ಬಘೀರ ಸಿನಿಮಾದ ಫಸ್ಟ್ ಶೋ ನೋಡಿರುವ ಅಭಿಮಾನಿಗಳು ಹೊಂಬಾಳೆ ಫಿಲ್ಮ್ಸ್‌ನ ಈ ಸಿನಿಮಾದ ಕುರಿತು ಸಕಾರಾತ್ಮಕ ಮಾತುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಲು ಆರಂಭಿಸಿದ್ದಾರೆ. ಇದು ಡಾ ಸೂರಿ ನಿರ್ದೇಶನದ ಸಿನಿಮಾ. ನಿರ್ದೇಶಕ ಪ್ರಶಾಂತ್ ನೀಲ್ ಬಘೀರ ಸಿನಿಮಾದ ಕಥೆ ಬರೆದಿದ್ದಾರೆ. ಬಿ. ಅಜನೀಶ್ ಲೋಕನಾಥ್ ಸಂಗೀತ ಮತ್ತು ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ್ದಾರೆ. . ದೀಪಾವಳಿ ಹಬ್ಬದ ಬೆಳಕಿನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿರುವ ಬಘೀರ ಸಿನಿಮಾದ ಪಬ್ಲಿಕ್ ರಿವ್ಯೂ ಇಲ್ಲಿದೆ.
ಸಿನಿಮಾದ ಹೆಸರು: ಬಘೀರ
ಭಾಷೆ: ಕನ್ನಡ, ತೆಲುಗು
ತಾರಾಗಣ: ಶ್ರೀಮುರಳಿ. ರುಕ್ಮಿಣಿ ವಸಂತ್. ಪ್ರಕಾಶ್ ರಾಜ್. ರಂಗಾಯಣ ರಘು. ಅಚ್ಯುತ್ ಕುಮಾರ್. ಗರುಡ ರಾಮ
ನಿರ್ಮಾಣ: ವಿಜಯ್ ಕಿರಗಂದೂರು.
ಕಥೆ: ಪ್ರಶಾಂತ್ ನೀಲ್.
ಚಿತ್ರಕಥೆ : ಸಂಭಾಷಣೆ -ನಿರ್ದೇಶನ : ಡಾ. ಸೂರಿ.
ಛಾಯಾಗ್ರಹಣ ನಿರ್ದೇಶಕ: ಎ.ಜೆ.ಶೆಟ್ಟಿ.
ಸಂಗೀತ-ಹಿನ್ನೆಲೆ-ಧ್ವನಿ ವಿನ್ಯಾಸ : ಬಿ. ಅಜನೇಶ್ ಲೋಕಂತ್.
ಸಂಕಲನ: ಪ್ರಣವ್ ಶ್ರೀ ಪ್ರಸಾದ್.
ಆಕ್ಷನ್ : ಚೇತನ್.ಡಿ.ಸೋಜಾ
ಕಾರ್ಯನಿರ್ವಾಹಕ ನಿರ್ಮಾಪಕ: ಯೋಗಿ.ಜಿ.ರಾಜ್-ಅಭಿಜೀತ್.
ಬಘೀರ ಸಿನಿಮಾ ವಿಮರ್ಶೆ: ಯಾರು ಏನಂದ್ರು?
ಬಘೀರ ತೆಲುಗು ಭಾಷೆಯ ಸಿನಿಮಾವನ್ನು ನೋಡಿರುವವರು ಈಗಾಗಲೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ಇದು ಸೂಪರ್ ಸಿನಿಮಾ, ಬ್ಲಾಕ್‌ಬಸ್ಟರ್ ಗ್ಯಾರಂಟಿ, ಗೂಸ್‌ಬಂಪ್ಸ್ ಇದೆ, ಒಳ್ಳೆಯ ಆಕ್ಷನ್ ಸಿನಿಮಾ” ಎಂದೆಲ್ಲ ಅಭಿಪ್ರಾಯಪಟ್ಟಿದ್ದಾರೆ.
ಬಘೀರ ಮೊದಲಾರ್ಧ ಉತ್ತಮವಾಗಿದೆ. ಎಲ್ಲೂ ನಿಧಾನ ಅನಿಸಲಿಲ್ಲ. ಖುಷಿ ಕೊಟ್ಟಿದೆ ಎಂದು ಸಾಕಷ್ಟು ಜನರು ವಿಮರ್ಶೆ ಬರೆದಿದ್ದಾರೆ.
ಬಘೀರ ಸಿನಿಮಾದ ಇನ್ನಷ್ಟು ವಿಮರ್ಶೆ ಅಪ್‌ಡೇಟ್ ಆಗುತ್ತಿದೆ, ಈ ಪುಟ ರಿಫ್ರೆಶ್ ಮಾಡುತ್ತ ಇರಿ.
ಬಘೀರ ಎಂಬುಂದು ಸೂಪರ್‌ಹೀರೋ ಸಿನಿಮಾವೂ ಹೌದು. ಇಲ್ಲಿ ಖಾಕಿ ಉಡುಗೆಯಲ್ಲಿರುವ ನಾಯಕ, ಬಘೀರ ಅವತಾರದಲ್ಲಿ ಶತ್ರುಗಳ ಸದೆ ಬಡಿಯುತ್ತಾನೆ. ಡಿಸೆಂಬರ್ 2020ರಲ್ಲಿ ಘೋಷಣೆಯಾದ ಈ ಸಿನಿಮಾದ ಮುಹೂರ್ತ ಬೆಂಗಳೂರಿನಲ್ಲಿ 2022ರ ಮೇ 20ರಂದು ನಡೆದಿತ್ತು. ಈ ಸಿನಿಮಾದ ಶೂಟಿಂಗ್ ಅನ್ನು ಹೈದರಾಬಾದ್, ಬೆಂಗಳೂರು, ಮೈಸೂರಿನಲ್ಲಿ ಶೂಟಿಂಗ್ ಮಾಡಲಾಗಿದೆ. ಕೆಲವೊಂದು ದೃಶ್ಯಗಳನ್ನು ಗೋವಾದಲ್ಲೂ ಚಿತ್ರೀಕರಿಸಲಾಗಿದೆ. ಈ ಸಿನಿಮಾಕ್ಕಾಗಿ ಶ್ರೀ ಮುರಳಿ ಮೂರು ವರ್ಷದಿಂದ ತನ್ನ ದೇಹವನ್ನು ಹುರಿಗಟ್ಟಿಸಿದ್ದಾರೆ. ಈ ಸಿನಿಮಾದ ಸಾಹಸ ದೃಶ್ಯಗಳಲ್ಲಿ ನಟಿಸುವ ಸಂದರ್ಭದಲ್ಲಿ ಶ್ರೀಮುರಳಿಯ ಎಲುಬು ಮುರಿತವೂ ಆಗಿತ್ತು. ಈಗಾಗಲೇ ಈ ಸಿನಿಮಾದ ರುಧೀರ ಧಾರ ಮತ್ತು ಪರಿಚಯವಾದೆ ಎಂಬ ಹಾಡುಗಳನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಗಿದೆ.