logo
ಕನ್ನಡ ಸುದ್ದಿ  /  ಮನರಂಜನೆ  /  ಕರ್ನಾಟಕ ಬಜೆಟ್ 2024; ಆಗದು ಎಂದು ಕೈ ಕಟ್ಟಿ ಕುಳಿತರೆ ಎನ್ನುತ್ತ ಸಿಎಂ ಸಿದ್ದರಾಮಯ್ಯ ಬಜೆಟ್ ಭಾಷಣ ಶುರು; ಇಲ್ಲಿದೆ ಹಾಡಿನ ಸಾಹಿತ್ಯ, ವಿಡಿಯೋ

ಕರ್ನಾಟಕ ಬಜೆಟ್ 2024; ಆಗದು ಎಂದು ಕೈ ಕಟ್ಟಿ ಕುಳಿತರೆ ಎನ್ನುತ್ತ ಸಿಎಂ ಸಿದ್ದರಾಮಯ್ಯ ಬಜೆಟ್ ಭಾಷಣ ಶುರು; ಇಲ್ಲಿದೆ ಹಾಡಿನ ಸಾಹಿತ್ಯ, ವಿಡಿಯೋ

Umesh Kumar S HT Kannada

Feb 16, 2024 04:16 PM IST

ಕರ್ನಾಟಕ ಬಜೆಟ್ 2024; ಆಗದು ಎಂದು ಕೈ ಕಟ್ಟಿ ಕುಳಿತರೆ ಎನ್ನುತ್ತ ಸಿಎಂ ಸಿದ್ದರಾಮಯ್ಯ ಬಜೆಟ್ ಭಾಷಣ ಶುರು ಮಾಡಿದರು. ಇಲ್ಲಿದೆ ಆ ಹಾಡಿನ ಸಾಹಿತ್ಯ, ವಿಡಿಯೋ ವಿವರ ಈ ವರದಿಯಲ್ಲಿದೆ.

  • ಕರ್ನಾಟಕ ಬಜೆಟ್ 2024; ಆಗದು ಎಂದು ಕೈ ಕಟ್ಟಿ ಕುಳಿತರೆ ಎನ್ನುತ್ತ ಸಿಎಂ ಸಿದ್ದರಾಮಯ್ಯ ಬಜೆಟ್ ಭಾಷಣ ಶುರು ಮಾಡಿದರು. ಸಿದ್ದರಾಮಯ್ಯ ಅವರು ಪ್ರಸ್ತಾಪಿಸಿದ ಹಾಡಿನ ಸಾಹಿತ್ಯ, ವಿಡಿಯೋ ಇಲ್ಲಿದೆ.

ಕರ್ನಾಟಕ ಬಜೆಟ್ 2024; ಆಗದು ಎಂದು ಕೈ ಕಟ್ಟಿ ಕುಳಿತರೆ ಎನ್ನುತ್ತ ಸಿಎಂ ಸಿದ್ದರಾಮಯ್ಯ ಬಜೆಟ್ ಭಾಷಣ ಶುರು ಮಾಡಿದರು. ಇಲ್ಲಿದೆ ಆ ಹಾಡಿನ ಸಾಹಿತ್ಯ, ವಿಡಿಯೋ ವಿವರ ಈ ವರದಿಯಲ್ಲಿದೆ.
ಕರ್ನಾಟಕ ಬಜೆಟ್ 2024; ಆಗದು ಎಂದು ಕೈ ಕಟ್ಟಿ ಕುಳಿತರೆ ಎನ್ನುತ್ತ ಸಿಎಂ ಸಿದ್ದರಾಮಯ್ಯ ಬಜೆಟ್ ಭಾಷಣ ಶುರು ಮಾಡಿದರು. ಇಲ್ಲಿದೆ ಆ ಹಾಡಿನ ಸಾಹಿತ್ಯ, ವಿಡಿಯೋ ವಿವರ ಈ ವರದಿಯಲ್ಲಿದೆ.

ಬೆಂಗಳೂರು: ಕರ್ನಾಟಕ ಬಜೆಟ್ 2024 ಮಂಡನೆ ಶುರುಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರಂಭದಲ್ಲಿ ಶರಣರ ವಚನ ಹೇಳಿದರು. ಕೂಡಲೇ ಕನ್ನಡದ ವರನಟ ಡಾ.ರಾಜ್ ಕುಮಾರ್ ಅಭಿನಯದ ಬಂಗಾರದ ಮನುಷ್ಯ ಚಿತ್ರದ ಹಾಡನ್ನು ಉಲ್ಲೇಖಿಸಿದರು.

ಟ್ರೆಂಡಿಂಗ್​ ಸುದ್ದಿ

ಗಾಯಗೊಂಡ ನಟಿ ಐಶ್ವರ್ಯಾ ರೈ ಕೈಬಿಟ್ಟು ನಡೆಯಲೊಪ್ಪದ ಆರಾಧ್ಯ ಬಚ್ಚನ್‌; ಮಗಳೆಂದರೆ ಹೀಗಿರಬೇಕು ಅಂದ್ರು ಫ್ಯಾನ್ಸ್‌

Cannes: ಚಿನ್ನದ ಬಣ್ಣದ ಉಡುಗೆಯಲ್ಲಿ ಆಸ್ಕರ್‌ ಟ್ರೋಫಿ ರೀತಿ ಕಾಣಿಸ್ತಾರಂತೆ ಶೋಭಿತಾ ಧೂಳಿಪಾಲ, ನಿಮಗೂ ಹಾಗೇ ಕಾಣಿಸ್ತಾರ ನೋಡಿ

ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅದೃಷ್ಟ ಕಣ್ರೋ, ಅಪಶಕುನ ಅಲ್ಲ; ಐಪಿಎಲ್‌ನಲ್ಲಿ ಆರ್‌ಸಿಬಿ ಹೊಸ ಅಧ್ಯಾಯ, ತುಚ್ಛ ಪದ ಬಳಸಿದವರಿಗೆ ಚಾಟಿಯೇಟು

Bhagyalakshmi Serial: 10ನೇ ತರಗತಿ ಪಾಸ್‌ ಆದ ಖುಷಿಗೆ ಮೊದಲ ದಿನವೇ ಕೆಲಸಕ್ಕೆ ತಡವಾಗಿ ಹೊರಟ ಭಾಗ್ಯಾ, ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ

“ಆಗದು ಎಂದು; ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ ಮನಸೊಂದಿದ್ದರೆ ಮಾರ್ಗವು ಉಂಟು ಕೆಚ್ಚೆದೆ ಇರಬೇಕೆಂದು…”

ವರನಟ ಡಾ|| ರಾಜ್‌ಕುಮಾರ್‌ ಅಭಿನಯದ ಹಾಗೂ ಆರ್.ಎನ್.ಜಯಗೋಪಾಲ್‌ ರಚಿಸಿದ ಬಂಗಾರದ ಮನುಷ್ಯ ಚಿತ್ರದ ಈ ಹಾಡಿನಂತೆ ದೇಶದ ಯಾವುದೇ ಸರ್ಕಾರ ಜಾರಿಗೊಳಿಸದ ಅತ್ಯಂತ ಬೃಹತ್‌ ಪ್ರಮಾಣದ ನೇರ ನೆರವು ನೀಡುವ ಗ್ಯಾರಂಟಿ ಯೋಜನೆಗಳನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ಶ್ರೇಯ ನಮ್ಮದಾಗಿದೆ. ನಮ್ಮ ಮಹತ್ವಾಕಾಂಕ್ಷೆಯ ಗ್ಯಾರಂಟಿಗಳು ಜನರ ಆಶೋತ್ತರಗಳನ್ನು ಆಧರಿಸಿವೆ ಎಂದು ಹೇಳುತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬಜೆಟ್ ಭಾಷಣ ಶುರುಮಾಡಿದರು.

ಬಂಗಾರದ ಮನುಷ್ಯ ಸಿನಿಮಾದ “ಮನಸೊಂದಿದ್ದರೆ ಮಾರ್ಗವು ಉಂಟು ಕೆಚ್ಚೆದೆ ಇರಬೇಕೆಂದು” ಹಾಡಿನ ಸಾಹಿತ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಭಾಷಣದಲ್ಲಿ ಈ ಹಾಡನ್ನು ಉಲ್ಲೇಖಿಸಿದ್ದು ಎಲ್ಲರ ಗಮನವೂ ಡಾ. ರಾಜ್ ಅಭಿನಯದ ಬಂಗಾರದ ಮನುಷ್ಯ ಸಿನಿಮಾದ ಹಾಡಿಗಾಗಿ ಹುಡುಕಾಡುವಂತಾಯಿತು.

ಮನಸೊಂದಿದ್ದರೆ ಮಾರ್ಗವು ಉಂಟು

ಕೆಚ್ಚೆದೆ ಇರಬೇಕೆಂದು ಕೆಚ್ಚೆದೆ ಇರಬೇಕೆಂದೆಂದು

ಕೆತ್ತಲಾಗದು ಕಗ್ಗಲ್ಲೆಂದು

ಎದೆಗುಂದಿದ್ದರೆ ಶಿಲ್ಪಿ ಆಗುತಿತ್ತೆ

ಕಲೆಗಳ ಬೀಡು ಗೊಮ್ಮಟೇಶನ ನೆಲೆನಾಡು

ಬೇಲೂರು ಹಳೆಬೀಡು ಬೇಲೂರು ಹಳೆಬೀಡು

ಆಗದು ಎಂದು ಕೈಲಾಗದು ಎಂದು ಕೈ ಕಟ್ಟಿ ಕುಳಿತರೆ

ಸಾಗದು ಕೆಲಸವು ಮುಂದೆ ಸಾಗದು ಕೆಲಸವು ಮುಂದೆ

ಕಾವೇರಿಯನು ಹರಿಯಲು ಬಿಟ್ಟು

ಕಾವೇರಿಯನು ಹರಿಯಲು ಬಿಟ್ಟು

ವಿಶ್ವೇಶ್ವರಯ್ಯ ಶ್ರಮ ಪಡದಿದ್ದರೆ

ಕನ್ನಂಬಾಡಿಯ ಕಟ್ಟದಿದ್ದರೆ

ಬಂಗಾರ ಬೆಳೆವ ಹೊನ್ನಾಡು

ಆಹಾ ಬಂಗಾರ ಬೆಳೆವ ಹೊನ್ನಾಡು

ಆಗುತಿತ್ತೆ ಈ ನಾಡು ಕನ್ನಡ ಸಿರಿನಾಡು

ನಮ್ಮ ಕನ್ನಡ ಸಿರಿನಾಡು

ಆಗದು ಎಂದು ಕೈಲಾಗದು ಎಂದು ಕೈ ಕಟ್ಟಿ ಕುಳಿತರೆ

ಸಾಗದು ಕೆಲಸವು ಮುಂದೆ ಸಾಗದು ಕೆಲಸವು ಮುಂದೆ

ಕೈಕೆಸರಾದರೆ ಬಾಯಿ ಮೊಸರೆಂಬ ಹಿರಿಯರ ಅನುಭವ ಸತ್ಯ

ಇದ ನೆನಪಿಡಬೇಕು ನಿತ್ಯ

ದುಡಿಮೆಯ ನಂಬಿ ಬದುಕು

ಅದರಲೆ ದೇವರ ಹುಡುಕು

ಬಾಳಲಿ ಬರುವುದು ಬೆಳಕು

ನಮ್ಮ ಬಾಳಲಿ ಬರುವುದು ಬೆಳಕು

ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ

ಮನಸೊಂದಿದ್ದರೆ ಮಾರ್ಗವು ಉಂಟು

ಕೆಚ್ಚೆದೆ ಇರಬೇಕೆಂದು ಕೆಚ್ಚೆದೆ ಇರಬೇಕೆಂದೆಂದು

ಈ ಹಾಡಿನ ಸಾಹಿತ್ಯ ಬರೆದವರು ಆರ್.ಎನ್.ಜಯಗೋಪಾಲ್‌. ಸಂಗೀತ ನೀಡಿದ್ದು ಜಿ.ಕೆ.ವೆಂಕಟೇಶ್‌ ಮತ್ತು ಹಾಡಿದ್ದು ಪಿ.ಬಿ.ಶ್ರೀನಿವಾಸ್.

ಇಲ್ಲಿದೆ ಬಂಗಾರದ ಮನುಷ್ಯ ಸಿನಿಮಾದ “ಮನಸೊಂದಿದ್ದರೆ ಮಾರ್ಗವು ಉಂಟು” ಹಾಡಿನ ವಿಡಿಯೋ

ಸದ್ಯದ ರಾಜಕೀಯ ಸನ್ನಿವೇಶಗಳಿಗೆ ಸರಿ ಹೊಂದುವಂತೆ ಬಜೆಟ್ ಭಾಷಣದಲ್ಲಿ ಹಾಡುಗಳನ್ನು ಜೋಡಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಂಗಾರದ ಮನುಷ್ಯ ಸಿನಿಮಾವನ್ನು ಮತ್ತೆ ನೆನಪಿಗೆ ಬರುವಂತೆ ಮಾಡಿದ್ದಾರೆ.

ವಿಪಕ್ಷ ನಾಯಕರ, ಸದಸ್ಯರ ಟೀಕೆಗಳನ್ನು ಎದುರಿಸುತ್ತ ಐದು ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಜೆಟ್ ಭಾಷಣದಲ್ಲೂ ಆ ಟೀಕೆಗಳಿಗೆ ಉತ್ತರ ನೀಡಲು ಹಲವು ಹಾಡಿನ ಸಾಲುಗಳನ್ನು ಬಳಸಿಕೊಂಡಿದ್ದಾರೆ. ಅದರಲ್ಲಿ ಈ ಹಾಡು ಕೂಡ ಒಂದಾಗಿತ್ತು.

(This copy first appeared in Hindustan Times Kannada website. To read more like this please logon to kannada.hindustantimes.com)

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ