logo
ಕನ್ನಡ ಸುದ್ದಿ  /  ಮನರಂಜನೆ  /  ಕೇಸರಿ ದಿರಿಸಿನಲ್ಲಿ ಉಜ್ಜೈನಿಯ ಮಹಾಕಾಲನ ಮೊರೆ ಹೋದ ಅಕ್ಷಯ್‌ ಕುಮಾರ್‌; ಮುಂದಿನ ಚಿತ್ರಗಳಾದರೂ ಗೆಲ್ಲಲಿ ಎಂದ ನೆಟ್ಟಿಗರು

ಕೇಸರಿ ದಿರಿಸಿನಲ್ಲಿ ಉಜ್ಜೈನಿಯ ಮಹಾಕಾಲನ ಮೊರೆ ಹೋದ ಅಕ್ಷಯ್‌ ಕುಮಾರ್‌; ಮುಂದಿನ ಚಿತ್ರಗಳಾದರೂ ಗೆಲ್ಲಲಿ ಎಂದ ನೆಟ್ಟಿಗರು

Sep 09, 2023 03:04 PM IST

google News

ಕೇಸರಿ ದಿರಿಸಿನಲ್ಲಿ ಉಜ್ಜೈನಿಯ ಮಹಾಕಾಲನ ಮೊರೆ ಹೋದ ಅಕ್ಷಯ್‌ ಕುಮಾರ್‌; ಮುಂದಿನ ಚಿತ್ರಗಳಾದರೂ ಗೆಲ್ಲಲಿ ಎಂದ ನೆಟ್ಟಿಗರು

    • ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ತಮ್ಮ ಬರ್ತ್‌ಡೇ ಪ್ರಯುಕ್ತ ಉಜ್ಜೈನಿಯ ಮಹಾಕಾಳೇಶ್ವರನ ದರ್ಶನ ಪಡೆದಿದ್ದಾರೆ. ಕುಟುಂಬದ ಹಲವರು ವಿಶೇಷ ಪೂಜೆಯಲ್ಲಿ ಭಾಗವಹಿಸಿದ್ದರು. ಕ್ರಿಕೆಟರ್‌ ಶಿಖರ್‌ ಧವನ್‌ ಸಹ ಅಕ್ಷಯ್‌ ಜತೆಗಿದ್ದರು. 
ಕೇಸರಿ ದಿರಿಸಿನಲ್ಲಿ ಉಜ್ಜೈನಿಯ ಮಹಾಕಾಲನ ಮೊರೆ ಹೋದ ಅಕ್ಷಯ್‌ ಕುಮಾರ್‌; ಮುಂದಿನ ಚಿತ್ರಗಳಾದರೂ ಗೆಲ್ಲಲಿ ಎಂದ ನೆಟ್ಟಿಗರು
ಕೇಸರಿ ದಿರಿಸಿನಲ್ಲಿ ಉಜ್ಜೈನಿಯ ಮಹಾಕಾಲನ ಮೊರೆ ಹೋದ ಅಕ್ಷಯ್‌ ಕುಮಾರ್‌; ಮುಂದಿನ ಚಿತ್ರಗಳಾದರೂ ಗೆಲ್ಲಲಿ ಎಂದ ನೆಟ್ಟಿಗರು

Akshay Kumar: ಬಾಲಿವುಡ್‌ ಕಿಲಾಡಿ ಅಕ್ಷಯ್‌ ಕುಮಾರ್‌ ಬರ್ತ್‌ಡೇ ಖುಷಿಯಲ್ಲಿದ್ದಾರೆ. ಸಹಜವಾಗಿ ಬರ್ತ್‌ಡೇ ದಿನ ಪಾರ್ಟಿಗಳಲ್ಲಿ ಭಾಗವಹಿಸಿ, ಆಪ್ತರಿಗೆ ಆಹ್ವಾನಿಸುವುದು ಸಹಜ. ಆದರೆ, ನಟ ಅಕ್ಷಯ್‌ ಕುಮಾರ್‌ ಆ ಥರದ ಮೋಜು ಮಸ್ತಿಯಲ್ಲಿ ಕಾಣಿಸಿಕೊಂಡವರಲ್ಲ. ಬಾಲಿವುಡ್‌ನ ಆಪ್ತರ ಕಾರ್ಯಕ್ರಮಗಳಲ್ಲಿಯೇ ಅಕ್ಷಯ್‌ ಕಾಣಿಸಿಕೊಳ್ಳುವುದು ತೀರಾ ಅಪರೂಪ. ನಟನೆ ಜತೆಗೆ ಅವರಿಗೆ ಅಪಾರ ದೇಶ ಭಕ್ತಿ ಮತ್ತು ದೈವ ಭಕ್ತಿ. ಇದೀಗ ಬರ್ತ್‌ಡೇ ಪ್ರಯುಕ್ತ ಮಧ್ಯ ಪ್ರದೇಶದ ಉಜ್ಜೈನಿ ಮಹಾಕಾಲೇಶ್ವರನ ದರ್ಶನ ಪಡೆದಿದ್ದಾರೆ.

ದೇಶದಲ್ಲಿನ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಉಜ್ಜೈನಿಯ ಶ್ರೀ ಮಹಾಕಾಳೇಶ್ವರ ದೇವಸ್ಥಾನವೂ ಒಂದು. ಇದೇ ದೇಗುಲಕ್ಕೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಭೇಟಿ ನೀಡಿ ಬರ್ತ್‌ಡೇ ದಿನವನ್ನು ವಿಶೇಷವಾಗಿ ಕಳೆದಿದ್ದಾರೆ. ದೇಗುಲಕ್ಕೆ ಕೇವಲ ಅಕ್ಷಯ್‌ ಕುಮಾರ್‌ ಮಾತ್ರವಲ್ಲದೆ, ಅವರ ಜೊತೆಗೆ ಮಗ ಆರವ್, ಸಹೋದರಿ ಅಲ್ಕಾ ಹಿರಾನಂದಾನಿ ಮತ್ತು ಸೊಸೆ ಸಿಮಾರ್ ಕೂಡ ಮಹಾಕಾಲನ ದರ್ಶನ ಪಡೆದರು. ಹಣೆಗೆ ಮಹಾಕಾಲನ ಭಸ್ಮ ಧರಿಸಿ, ಕೇಸರಿ ದಿರಿಸಿನಲ್ಲಿ ಕಾಣಿಸಿಕೊಂಡಿ ಅಕ್ಷಯ್‌, ದೇಶ, ಧಾರ್ಮಿಕ ವಿಚಾರಗಳಲ್ಲಿ ಒಂದು ಹೆಜ್ಜೆ ಸದಾ ಮುಂದೆ. ಇದೀಗ ತಮ್ಮ ಬರ್ತ್‌ಡೇ ಪ್ರಯುಕ್ತ ಮಹಾಕಾಳೇಶ್ವರನ ಸನ್ನಿಧಾನದಲ್ಲಿ ವಿಶೇಷ ಪೂಜೆ ನೆರವೇರಿಸಿದ್ದಾರೆ.

ಶನಿವಾರದ ಮಧ್ಯರಾತ್ರಿ 2 ಗಂಟೆಗೆ ನಂದಿ ಹಾಲ್‌ನಲ್ಲಿ ಕುಳಿತು ಅಕ್ಷಯ್ ಕುಟುಂಬ ಧ್ಯಾನದಲ್ಲಿ ತೊಡಗಿಸಿಕೊಂಡಿತು. ಭಸ್ಮ ಆರತಿಯಲ್ಲಿಯೂ ಭಾಗವಹಿಸಿತು. ಇನ್ನು ಇದೇ ವೇಳೆ ನಟ ಅಕ್ಷಯ್‌ ಕುಮಾರ್‌ ಜತೆಯಲ್ಲಿ ಕ್ರಿಕೆಟಿಗ ಶಿಖರ್‌ ಧವನ್‌ ಸಹ ಭಾಗವಹಿಸಿದರು. ಮಹಾಕಾಲನ ದರ್ಶನದ ಬಳಿಕ ಮಾಧ್ಯಮಗಳ ಜತೆಗೆ ಮಾತನಾಡಿದ ಅಕ್ಷಯ್‌ ಕುಮಾರ್‌, ದೇಶದ ಕಲ್ಯಾಣಕ್ಕಾಗಿ ಬಾಬಾ ಮಹಾಕಾಲೇಶ್ವರನಲ್ಲಿ ಪ್ರಾರ್ಥಿಸಿದ್ದೇನೆ ಎಂದು ಹೇಳಿದರು. ಭಾರತ-ಪಾಕಿಸ್ತಾನ ಪಂದ್ಯ ಮತ್ತು ವಿಶ್ವಕಪ್ ಬಗ್ಗೆಯೂ ಮಾತನಾಡಿ, ಈ ಸಲ ಭಾರತ ವಿಶ್ವಕಪ್‌ ಗೆಲ್ಲಲಿದೆ ಎಂದರು.

ಟೀಕೆಗೂ ಗುರಿಯಾದ ಅಕ್ಷಯ್‌ ಕುಮಾರ್‌

ಸೋಷಿಯಲ್‌ ಮೀಡಿಯಾದಲ್ಲಿ ಸಿನಿಮಾ ಮಂದಿ ಟ್ರೋಲ್‌ ಆಗುವುದು ತೀರಾ ಸಹಜ. ಇದೀಗ ಮಹಾಕಾಲನ ಸನ್ನಿಧಿಯಲ್ಲಿ ಕಾಣಿಸಿಕೊಂಡ ಅಕ್ಷಯ್‌ ಕುಮಾರ್‌ ಅವರನ್ನು ಕಂಡ ಕೆಲವರು, ನಿಮ್ಮ ಮುಂದಿನ ಸಿನಿಮಾಗಳಾದರೂ ಗೆಲ್ಲಲಿ, ಮಹಾಕಾಲನ ಆಶೀರ್ವಾದ ನಿಮಗೆ ಸಿಗಲಿ ಎಂದಿದ್ದಾರೆ. ಮತ್ತೆ ಕೆಲವರು ಇದೆಲ್ಲವೂ ಬೂಟಾಟಿಕೆ ಎಂದೂ ಜರಿದಿದ್ದಾರೆ.

ಸರಣಿ ಸೋಲುಗಳಿಂದ ಸಿಗಲಿದೆಯೇ ಮುಕ್ತಿ?

ನಟ ಅಕ್ಷಯ್‌ ಕುಮಾರ್‌ಗೆ ಇತ್ತೀಚಿನ ಕೆಲ ವರ್ಷಗಳಿಂದ ನಿರೀಕ್ಷಿತ ಸಿನಿಮಾಗಳ ಗೆಲುವು ದಕ್ಕಿಲ್ಲ. ಈ ಹಿಂದೆ ಬಿಡುಗಡೆಯಾದ ಓ ಮೈ ಗಾಡ್‌ 2 ಸಿನಿಮಾ ಹೇಳಿಕೊಳ್ಳುವಂತ ಯಶಸ್ಸು ತಂದುಕೊಡಲಿಲ್ಲ. 2022ರಲ್ಲಿ ಅಕ್ಷಯ್‌ ಅವರ ಐದು ಸಿನಿಮಾಗಳು ಬಿಡುಗಡೆ ಆಗಿವೆ. ಎಲ್ಲ ಸಿನಿಮಾಗಳೂ ಪ್ಲಾಪ್‌ ಪಟ್ಟಿ ಸೇರಿವೆ. ಈ ವರ್ಷದ ಸೆಲ್ಫಿ ಸಿನಿಮಾ ಹೇಳಿಕೊಳ್ಳುವ ಗಳಿಕೆ ಕಾಣಲಿಲ್ಲ. ಇದೀಗ ಮಿಷನ್‌ ರಾಣಿಗಂಜ್‌ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಬಹುತೇಕ ಕೆಲಸಗಳನ್ನು ಮುಗಿಸಿಕೊಂಡಿರುವ ಅವರು, ಅಕ್ಟೋಬರ್‌ 6ರಂದು ಈ ಸಿನಿಮಾ ಬಿಡುಗಡೆಗೆ ದಿನಾಂಕವೂ ನಿಗದಿಯಾಗಿದೆ.

ಮನರಂಜನೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ