ಏನ್ ಸರ್ ಮಾಲ್ಡೀವ್ಸ್‌ನಲ್ಲಿ ತಮನ್ನಾ ಜತೆ ಫುಲ್ ಜಾಲೀನಾ ಎಂದಿದ್ದಕ್ಕೆ ವಿಜಯ್ ವರ್ಮಾ ಸಿಡಿಮಿಡಿ! VIDEO
Sep 01, 2023 06:39 PM IST
Tamannah Bhatia: ಏನ್ ಗುರೂ ಮಾಲ್ಡೀವ್ಸ್‌ನಲ್ಲಿ ತಮನ್ನಾ ಜತೆ ಫುಲ್ ಜಾಲೀನಾ ಎಂದಿದ್ದಕ್ಕೆ ವಿಜಯ್ ವರ್ಮಾ ಸಿಡಿಮಿಡಿ!
- ಗುಟ್ಟಾಗಿ ಮಾಲ್ಡೀವ್ಸ್ ಪ್ರವಾಸ ಮುಗಿಸಿಕೊಂಡು ಬಂದ ತಮನ್ನಾ ಮತ್ತು ವಿಜಯ್ ವರ್ಮಾ ಜೋಡಿ, ಏರ್‌ಪೋರ್ಟ್‌ನಲ್ಲಿ ಫೋಟೋಗ್ರಾಫರ್ಸ್ ಕಡೆ ಸಿಕ್ಕಿಹಾಕಿಕೊಂಡಿದೆ. ತಮನ್ನಾ ಬಗ್ಗೆ ಕೇಳಿದ ಪ್ರಶ್ನೆಗೆ ವಿಜಯ್ ಕೊಂಚ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.
Tamannah Bhatia: ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಸೌತ್ ಸಿನಿಮಾಗಳ ಮೂಲಕವೇ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡವರು. ಸಾಲು ಸಾಲು ಸಿನಿಮಾಗಳಲ್ಲಿ ನಟನೆಯ ಜತೆಗೆ ಸೌಂದರ್ಯದ ಮೂಲಕವೂ ಯುವಕರ ಹಾಟ್ ಫೇವರಿಟ್ ಎನಿಸಿಕೊಂಡವರು. ಇದೀಗ ಇದೇ ಚಿತ್ರೋದ್ಯಮದಲ್ಲಿ 18 ವರ್ಷ ಪೂರೈಸಿದ್ದಾರೆ. ಕೇವಲ ಸೌತ್ ಮಾತ್ರವಲ್ಲದೆ, ಬಾಲಿವುಡ್‌ನಲ್ಲೂ ಹವಾ ಸೃಷ್ಟಿಸಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾ ನೀಡುತ್ತ ಯಶಸ್ಸಿನ ಓಟವನ್ನು ಮುಂದುವರಿಸಿದ್ದಾರೆ. ಸಿನಿಮಾ ಮಾತ್ರವಲ್ಲದೆ, ವೆಬ್ ಸಿರೀಸ್ ಮೂಲಕ ಗಮನ ಸೆಳೆದಿದ್ದಾರೆ ತಮನ್ನಾ.
ಇತ್ತ ಹೈದರಾಬಾದ್ ಮೂಲದ ನಟ ವಿಜಯ್ ವರ್ಮಾ ಸಹ ತಮನ್ನಾ ಜತೆಗೆ ಸುದ್ದಿಯಲ್ಲಿರುತ್ತಾರೆ. ಬಾಲಿವುಡ್‌ನಲ್ಲಿಯೇ ಹೆಸರು ಮಾಡಿರುವ ಈ ನಟ, ಸಿನಿಮಾಗಳಿಗಿಂತ ವೆಬ್‌ಸಿರೀಸ್‌ಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ತಮನ್ನಾ ಜತೆಗಿನ ಲಸ್ಟ್ ಸ್ಟೋರಿಸ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಸದ್ಯ ದಹದ್, ಕಲ್ಕಟ್ ವೆಬ್‌ಸರಣಿಗಳಲ್ಲೂ ಬಿಜಿಯಾಗಿದ್ದಾರೆ. ಹೀಗಿರುವಾಗಲೇ ಲಸ್ಟ್ ಸ್ಟೋರೀಸ್ ಬಿಡುಗಡೆ ಸಂದರ್ಭದಲ್ಲಿ ವಿಜಯ್ ವರ್ಮಾ ಮೇಲಿನ ಪ್ರೀತಿಯನ್ನು ಹೇಳಿಕೊಂಡಿದ್ದರು ತಮನ್ನಾ. ಅದಾದ ಬಳಿಕ ಇಬ್ಬರೂ ಒಟ್ಟಿಗೆ ಹಲವು ಕಡೆಗಳಲ್ಲಿ ಕಾಣಿಸಿಕೊಂಡಿದ್ದರು ವದಂತಿಗೆ ಸೊಪ್ಪು ಹಾಕಿದ್ದರು.
ಇದೀಗ ಇದೇ ಜೋಡಿ ಸದ್ದಿಲ್ಲದೆ, ಮಾಲ್ಡೀವ್ಸ್ ಪ್ರವಾಸ ಮುಗಿಸಿಕೊಂಡು ಬಂದಿದೆ. ಅಚ್ಚರಿಯ ವಿಚಾರ ಏನೆಂದರೆ, ತಮನ್ನಾ ಮಾತ್ರ ಮಾಲ್ಡೀವ್ಸ್‌ನ ಸುತ್ತಾಟದ ಫೋಟೋಗಳನ್ನು ಸೋಷಿಯಲ್ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಫೋಟೋದಲ್ಲಿ ಎಲ್ಲಿಯೂ ವಿಜಯ್ ವರ್ಮಾ ಕಾಣಿಸಿಕೊಂಡಿಲ್ಲ. ನೆಟ್ಟಿಗರು ಮಾತ್ರ ಫೋಟೋ ಕ್ಲಿಕ್ ಮಾಡಿದ್ದು ವಿಜಯ್ ಅಲ್ಲವೇ ಎಂದು ಕಾಲೆಳೆಯುತ್ತಿದ್ದಾರೆ. ಇದೆಲ್ಲದರ ನಡುವೆ ಮಾಲ್ಡೀವ್ಸ್ ಪ್ರವಾಸ ಮುಗಿಸಿ ಮರಳುವಾಗ ಏರ್‌ಪೋರ್ಟ್‌ನಲ್ಲಿ ಈ ಜೋಡಿ ಫೋಟೋಗ್ರಾಫರ್ ಕೈಯಲ್ಲಿ ಸಿಕ್ಕಿಹಾಕಿಕೊಂಡಿದೆ.
ಮೊದಲಿಗೆ ವಿಮಾನ ನಿಲ್ದಾಣದಿಂದ ಬಂದ ತಮನ್ನಾ ಕಂಡ ಏರ್‌ಪೋರ್ಟ್‌ನಲ್ಲಿ ಪಾಪರಾಜಿಗಳು, ವಿಜಯ್ ಸರ್ ಬರಲಿಲ್ಲವೇ? ಎಂದಿದ್ದಾರೆ. ಇದಕ್ಕೆ ಏನೂ ಉತ್ತರ ನೀಡದ ತಮನ್ನಾ ಹುಸಿ ಮುಗುಳ್ನಗೆಯಿಂದ ಅಲ್ಲಿಂದ ಪಾರಾಗಿದ್ದಾರೆ. ತಮನ್ನಾ ಹೋದ ಬಳಿಕ ಸ್ವಲ್ಪ ಸಮಯದ ನಂತರ ವಿಜಯ್ ವರ್ಮಾ ಸಹ ಆಗಮಿಸಿದ್ದಾರೆ. ಅವರನ್ನು ನೋಡಿದ ಫೋಟೋಗ್ರಾಫರ್, "ತಮನ್ನಾ ಅವರೊಂದಿಗೆ ಮಾಲ್ಡೀವ್ಸ್ ಬೀಚ್ ಆನಂದಿಸಿದ್ದೀರಾ ಸರ್? ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಕೋಪಗೊಂಡ ವಿಜಯ್, ಯಾವ ರೀತಿಯ ಪ್ರಶ್ನೆಗಳನ್ನು ಕೇಳುತ್ತಿದ್ದೀರಿ, ಈ ರೀತಿ ಕೇಳಬೇಡಿ ಎಂದು ವಿಜಯ್ ವರ್ಮ ಎಚ್ಚರಿಸಿದ್ದಾರೆ. ಈ ಇಬ್ಬರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿಯೂ ವೈರಲ್ ಆಗಿದೆ.
ಮನರಂಜನೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ