logo
ಕನ್ನಡ ಸುದ್ದಿ  /  ಮನರಂಜನೆ  /  Hansika Motwani:ಪ್ಲಾಸ್ಟಿಕ್ ಸರ್ಜರಿ ಮೂಲಕ ಇಡೀ ದೇಹವನ್ನು ಬದಲಿಸಿಕೊಂಡಿದ್ದಾರೆ ಎಂದವರಿಗೆ ಹನ್ಸಿಕಾ ಮೋಟ್ವಾನಿ ನೀಡಿದ ಬಿಂದಾಸ್‌ ಉತ್ತರ ಇದು

Hansika Motwani:ಪ್ಲಾಸ್ಟಿಕ್ ಸರ್ಜರಿ ಮೂಲಕ ಇಡೀ ದೇಹವನ್ನು ಬದಲಿಸಿಕೊಂಡಿದ್ದಾರೆ ಎಂದವರಿಗೆ ಹನ್ಸಿಕಾ ಮೋಟ್ವಾನಿ ನೀಡಿದ ಬಿಂದಾಸ್‌ ಉತ್ತರ ಇದು

Rakshitha Sowmya HT Kannada

Jun 23, 2023 08:05 AM IST

google News

ಹನ್ಸಿಕಾ ಮೋಟ್ವಾನಿ

  • ಮದುವೆ ನಂತರ ಹನ್ಸಿಕಾ ಸರ್ಜರಿ ಮೂಲಕ ಇಡೀ ದೇಹವನ್ನು ಬದಲಿಸಿಕೊಂಡಿದ್ದು, ಯೋಗ ಮಾಡುವ ಡ್ರಾಮಾ ಮಾಡುತ್ತಿದ್ದಾರೆ ಎಂದು ನೆಟಿಜನ್ಸ್‌ ಒಬ್ಬರು ಕಾಮೆಂಟ್‌ ಮಾಡಿದ್ದಾರೆ.

ಹನ್ಸಿಕಾ ಮೋಟ್ವಾನಿ
ಹನ್ಸಿಕಾ ಮೋಟ್ವಾನಿ

ಬಾಲನಟಿಯಾಗಿ ಚಿತ್ರರಂಗಕ್ಕೆ ಆಗಮಿಸಿದ ಹನ್ಸಿಕಾ ಮೋಟ್ವಾನಿ ಹಿಂದಿ, ತೆಲುಗು, ತಮಿಳು ಹಾಗೂ ಕನ್ನಡ ಸಿನಿಮಾಗಳಲ್ಲಿ ಅನೇಕ ಸ್ಟಾರ್‌ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಹನ್ಸಿಕಾ ತಮ್ಮ ಬಾಲ್ಯದ ಗೆಳೆಯ ಸೊಹೆಲ್‌ ಕತುರಿಯಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇದನ್ನೂ ಓದಿ: ಮೋಸ ಮಾಡಿದ ಮ್ಯಾನೇಜರ್‌ನನ್ನು ಕೆಲಸದಿಂದ ವಜಾಗೊಳಿಸಿದ ವಿಚಾರವಾಗಿ ಸ್ಪಷ್ಟನೆ ನೀಡಿದ ರಶ್ಮಿಕಾ ಮಂದಣ್ಣ

ಹನ್ಸಿಕಾ ಮೋಟ್ವಾನಿ ಇತ್ತೀಚೆಗೆ ಕೆಲವೊಂದು ಫೋಟೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಈ ನಟಿ ಮದುವೆ ನಂತರ ತೂಕ ಇಳಿಸಿರುವುದು ಗೊತ್ತಾಗುತ್ತಿದೆ. 31 ವರ್ಷದ ಹನ್ಸಿಕಾ ಮೋಟ್ವಾನಿ ಜೂನ್‌ 21 ಅಂತಾರಾಷ್ಟ್ರೀಯ ಯೋಗ ದಿನದಂದು ಕೆಲವೊಂದು ಯೋಗ ಭಂಗಿಗಳ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು ''ಯೋಗ ದಿನವನ್ನು ಆಚರಿಸುತ್ತಿದ್ದೇನೆ, ಇಂದು ಹಾಗೂ ಪ್ರತಿದಿನ'' ಎಂದು ಬರೆದುಕೊಂಡಿದ್ದಾರೆ. ಹನ್ಸಿಕಾ ಪೋಸ್ಟ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮದುವೆ ನಂತರ ಹನ್ಸಿಕಾ ಸರ್ಜರಿ ಮೂಲಕ ಇಡೀ ದೇಹವನ್ನು ಬದಲಿಸಿಕೊಂಡಿದ್ದು, ಯೋಗ ಮಾಡುವ ಡ್ರಾಮಾ ಮಾಡುತ್ತಿದ್ದಾರೆ ಎಂದು ನೆಟಿಜನ್ಸ್‌ ಒಬ್ಬರು ಕಾಮೆಂಟ್‌ ಮಾಡಿದ್ದಾರೆ.

ಆದಿಪುರುಷ್‌ ಸಿನಿಮಾ ಬ್ಯಾನ್‌ ಅರ್ಜಿ ವಿಚಾರಣೆ ಜೂನ್‌ 30ಕ್ಕೆ ಮುಂದೂಡಿಕೆ; ದೆಹಲಿ ಹೈಕೋರ್ಟ್‌ ಬುಧವಾರ ಹೇಳಿದ್ದಿಷ್ಟು

ನೆಟಿಜನ್‌ ಕಾಮೆಂಟ್‌ಗೆ ಹನ್ಸಿಕಾ ಪ್ರತಿಕ್ರಿಯಿಸಿದ್ದಾರೆ. ''ನಾನು ಈಗ ಹೇಗೆ ಕಾಣುತ್ತಿದ್ದೇನೋ ಅದಕ್ಕಾಗಿ ಸಾಕಷ್ಟು ಶ್ರಮ ಪಟ್ಟಿದ್ದೇನೆ. ಅದರಲ್ಲಿ ಹೆಚ್ಚಾಗಿ ಯೋಗವೇ ಅಡಗಿದೆ. ಅಷ್ಟೇ ಅಲ್ಲ, ಯೋಗವು ದ್ವೇಷವನ್ನು ನಾಶ ಮಾಡಿ ಧನಾತ್ಮಕ ವಿಚಾರವನ್ನು ಹರಡಲು ಸಹಾಯ ಮಾಡುತ್ತದೆ'' ಎಂದು ಉತ್ತರಿಸಿದ್ದಾರೆ. ಇನ್ನೂ ಕೆಲವರು ಕಾಮೆಂಟ್‌ ಮಾಡಿ ಮದುವೆ ನಂತರ ಮಹಿಳೆಯರು ದಪ್ಪ ಆಗಬೇಕು ಎಂದೇನಿಲ್ಲ. ಮದುವೆ ಮೊದಲಾಗಲೀ ನಂತರ ಆಗಲಿ ವೇಟ್‌ ಮ್ಯಾನೇಜ್‌ಮೆಂಟ್‌ ಮಾಡುವತ್ತ ಗಮನ ಹರಿಸಿದರೆ ಸ್ಲಿಮ್‌ ಆಗುವುದು ದೊಡ್ಡ ವಿಚಾರವಲ್ಲ, ಹನ್ಸಿಕಾ ಯೋಗದತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ಆದ್ದರಿಂದಲೇ ಅವರು ಇಷ್ಟು ಫಿಟ್‌ ಆಗಿದ್ದಾರೆ ಎಂದು ಕಾಮೆಂಟ್‌ ಮಾಡಿದ್ದಾರೆ.

ಲವ್‌ ಗುರು ಕ್ರೇಜಿಸ್ಟಾರ್‌ಗೆ ಜತೆಯಾದ ಡ್ರೀಮ್‌ ಗರ್ಲ್‌ ರಚಿತಾ ರಾಮ್‌; ಜೀ ಕನ್ನಡದಲ್ಲಿ ಭರ್ಜರಿ ಬ್ಯಾಚುಲರ್ಸ್‌ ಶೋ

ಹನ್ಸಿಕಾಗೆ ಮದುವೆ ನಂತರ ಕೂಡಾ ಸಿನಿಮಾಗಳಲ್ಲಿ ಅವಕಾಶಗಳು ಕಡಿಮೆ ಆಗಿಲ್ಲ. ಪಾರ್ಟ್ನರ್‌, 105 ಮಿನಿಟ್ಸ್‌, ಮೈ ನೇಮ್‌ ಇಸ್‌ ಶ್ರುತಿ, ರೌಡಿ ಬೇಬಿ, ಗಾರ್ಡಿಯನ್‌, ಗಾಂಧಾರಿ, ಮಾನ್‌ ಸೇರಿ 10ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ವೆಬ್‌ ಸೀರೀಸ್‌ನಲ್ಲಿ ಕೂಡಾ ನಟಿಸುತ್ತಿದ್ದಾರೆ. ಕನ್ನಡದಲ್ಲಿ ಹನ್ಸಿಕಾ ಪುನೀತ್‌ ರಾಜ್‌ಕುಮಾರ್‌ ಜೊತೆ 'ಬಿಂದಾಸ್‌' ಸಿನಿಮಾದಲ್ಲಿ ನಟಿಸಿದ್ದಾರೆ.

800 ಸಂಚಿಕೆಗಳ ಸಂಭ್ರಮದಲ್ಲಿ ಸುವರ್ಣ ಸೂಪರ್ ಸ್ಟಾರ್ ರಿಯಾಲಿಟಿ ಶೋ

ಸಿಂಧಿ ಕುಟುಂಬಕ್ಕೆ ಸೇರಿದ ಹನ್ಸಿಕಾ ಮೋಟ್ವಾನಿ ಹುಟ್ಟಿ, ಬೆಳೆದದ್ದು ಮುಂಬೈನಲ್ಲಿ. ಈ ಸುಂದರಿಯ ತಂದೆ ಪ್ರದೀಪ್ ಮೋಟ್ವಾನಿ ಉದ್ಯಮಿಯಾಗಿ ,ತಾಯಿ ಮೋನಾ ಮೋಟ್ವಾನಿ ಚರ್ಮರೋಗ ತಜ್ಞೆಯಾಗಿ ಗುರುತಿಸಿಕೊಂಡಿದ್ದಾರೆ. ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ 'ಶಕಲಕ ಬೂಮ್ ಬೂಮ್' ಧಾರಾವಾಹಿ ಮೂಲಕ ಹನ್ಸಿಕಾ ಮೋಟ್ವಾನಿ ಬಾಲನಟಿಯಾಗಿ ನಟನೆ ಆರಂಭಿಸಿದರು. ನಂತರ 'ದೇಸ್ ಮೆ ನಿಕ್ಲಾ ಹೋಗಾ ಚಾಂದ್' ಧಾರಾವಾಹಿಯಲ್ಲಿ ನಟಿಸಿದರು. ಹೃತಿಕ್ ರೋಷನ್ ಹಾಗೂ ಪ್ರೀತಿ ಝಿಂಟಾ ಅಭಿನಯದ 'ಕೋಯಿ ಮಿಲ್​​​ಗಯಾ' ಸಿನಿಮಾದಲ್ಲಿ ಕೂಡಾ ಹನ್ಸಿಕಾ ನಟಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ