logo
ಕನ್ನಡ ಸುದ್ದಿ  /  ಮನರಂಜನೆ  /  Hema Malini: ಹೇಮಾ ಮಾಲಿನಿಗೆ ಹುಟ್ಟುಹಬ್ಬದ ಸಂಭ್ರಮ, ನರ್ವಸ್‌ ಆಗಿದ್ದ ಶಾರೂಖ್‌ ಖಾನ್‌ರನ್ನು ರಿಜೆಕ್ಟ್‌ ಮಾಡಿದ್ರಂತೆ ಕನಸಿನ ಕನ್ಯೆ

Hema Malini: ಹೇಮಾ ಮಾಲಿನಿಗೆ ಹುಟ್ಟುಹಬ್ಬದ ಸಂಭ್ರಮ, ನರ್ವಸ್‌ ಆಗಿದ್ದ ಶಾರೂಖ್‌ ಖಾನ್‌ರನ್ನು ರಿಜೆಕ್ಟ್‌ ಮಾಡಿದ್ರಂತೆ ಕನಸಿನ ಕನ್ಯೆ

Praveen Chandra B HT Kannada

Oct 16, 2023 08:23 AM IST

google News

Hema Malini: ಹೇಮಾ ಮಾಲಿನಿಗೆ ಹುಟ್ಟುಹಬ್ಬದ ಸಂಭ್ರಮ

    • Hema Malini birthday: ಇಂದು (ಅಕ್ಟೋಬರ್‌ 16) ಕನಸಿನ ಕನ್ಯೆ ಹೇಮಾ ಮಾಲಿನಿ ಹುಟ್ಟುಹಬ್ಬ. ಹೇಮಾ ಮಾಲಿನಿಯವರ ಕುರಿತು ಒಂದಿಷ್ಟು ಮಾಹಿತಿಯೊಂದಿಗೆ ಶಾರೂಖ್‌ ಖಾನ್‌ ಜತೆ ಇವರು ಮೊದಲ ಬಾರಿಗೆ ನಟಿಸಿದ್ದು ಯಾವಾಗ ಎಂಬ ವಿವರವೂ ಇಲ್ಲಿದೆ.
Hema Malini: ಹೇಮಾ ಮಾಲಿನಿಗೆ ಹುಟ್ಟುಹಬ್ಬದ ಸಂಭ್ರಮ
Hema Malini: ಹೇಮಾ ಮಾಲಿನಿಗೆ ಹುಟ್ಟುಹಬ್ಬದ ಸಂಭ್ರಮ

ಇಂದು ಹೇಮಾ ಮಾಲಿನಿ ಅವರ 75ನೇ ಹುಟ್ಟುಹಬ್ಬ. 1948ರ ಅಕ್ಟೋಬರ್‌ 16ರಂದು ಜನಿಸಿದ ಇವರು ಡ್ರೀಮ್‌ ಗರ್ಲ್‌ ಅಥವಾ ಕನಸಿನ ಕನ್ಯೆ ಎಂದೇ ಫೇಮಸ್‌. ಭಾರತೀಯ ಚಿತ್ರರಂಗದ ಕನಸಿನ ಕನ್ಯೆ ಮೊದಲ ಬಾರಿಗೆ ಶಾರೂಖ್‌ ಖಾನ್‌ಗೆ ತನ್ನ ಚಿತ್ರವೊಂದರಲ್ಲಿ ನಟಿಸಲು ಅವಕಾಶ ನೀಡಿದ್ದರು. 75ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಹೇಮಾ ಮಾಲಿನಿಯವರ ಮೊದಲ ನಿರ್ದೇಶನದ ದಿಲ್‌ ಆಶ್ನಾ ಹೈ ಚಿತ್ರದಲ್ಲಿ ಶಾರೂಖ್‌ ಖಾನ್‌ ಅವರಿಗೆ ಅವಕಾಶ ನೀಡಿರುವ ಕುರಿತು ಮಾಹಿತಿ ಇಲ್ಲಿದೆ.

ಹೇಮಾ ಮಾಲಿನಿ ಅವರು ನಟಿಯಾಗಿ, ನಿರ್ದೇಶಕಿಯಾಗಿ, ನಿರ್ಮಾಪಕಿಯಾಗಿ ಜನಪ್ರಿಯತೆ ಪಡೆದಿದ್ದಾರೆ. ಇವರು ರಾಜಕಾರಣಿಯೂ ಹೌದು. 2014ರಿಂದ ಮಥುರಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಇವರು ಬಿಜೆಪಿ ಆಡಳಿತದಲ್ಲಿ ಲೋಕಸಭೆ ಸದಸ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2011ರಿಂದ 2012ರವರೆಗೆ ಕರ್ನಾಟಕ ರಾಜ್ಯಸಭೆಯ ಸದಸ್ಯೆಯಾಗಿದ್ದರು. 1963ರಲ್ಲಿ ತಮಿಳು ಚಿತ್ರ ಇಧು ಸತ್ಯಂ ಮೂಲಕ ಹೇಮಾ ಮಾಲಿನಿಯವರು ಚಿತ್ರರಂಗಕ್ಕೆ ಕಾಲಿಟ್ಟರು. ಬಳಿಕ ಸಪ್ನೋ ಕಾ ಸೌದಾಗರ್ (1968)ನಲ್ಲಿ ಪ್ರಮುಖ ಪಾತ್ರ ಮಾಡಿದರು. ಇವರು ಧರ್ಮೇಂದ್ರರನ್ನು 1980ರಲ್ಲಿ ವಿವಾಹವಾದರು. ಡ್ರೀಮ್‌ ಗರ್ಲ್‌, ಸೀತಾ ಔರ್ ಗೀತಾ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದರು. ಇವರಿಗೆ ಹಲವು ಫಿಲ್ಮ್‌ಫೇರ್‌ ಪ್ರಶಸ್ತಿಗಳು ದೊರಕಿವೆ. 2000ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದರು.

ಹೇಮಾ ಮಾಲಿನಿಯವರು ಶಾರೂಖ್‌ ಖಾನ್‌ ಅವರನ್ನು ದಿಲ್‌ ಆಶ್ನಾ ಹೈ ಚಿತ್ರದ ಮೊದಲ ಅಡಿಷನ್‌ನಲ್ಲಿ ರಿಜೆಕ್ಟ್‌ ಮಾಡಿದ್ದರು. ಆದರೆ, ಎರಡನೇ ಅಡಿಷನ್‌ನಲ್ಲಿ ಅನುಮತಿ ನೀಡಿದ್ದರು. ಹೇಮಾ ಮಾಲಿನಿಯವರ ಪ್ರಾಜೆಕ್ಟ್‌ ಸಿಕ್ಕಿದ್ದೇ ತಡ ಶಾರೂಖ್‌ ಖಾನ್‌ ಅವರಿಗೆ ಅವಕಾಶದ ಬಾಗಿಲು ತೆರೆಯಿತು. ಅದೇ ಸಮಯದಲ್ಲಿ ಶಾರೂಖ್‌ ಖಾನ್‌ ಮೂರು ಇತರೆ ಚಿತ್ರಗಳಲ್ಲಿ ನಟಿಸುವ ಅವಕಾಶವನ್ನೂ ಪಡೆದರು. ಅವುಗಳಲ್ಲಿ ದಿವಾನ ಚಿತ್ರ ಪ್ರಮುಖವಾದದ್ದು. ದಿವಾನ ಚಿತ್ರ ಶಾರೂಖ್‌ ಖಾನ್‌ಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತ್ತು.

ಶಾರೂಖ್‌ ಖಾನ್‌ ನಟರಾಗುವ ಮುನ್ನ ಟೆಲಿವಿಷನ್‌ನಲ್ಲಿ ತನ್ನ ಕರಿಯರ್‌ ಆರಂಭಿಸಿದರು. 1988ರಲ್ಲಿ ಇವರು ಟೀವಿ ಶೋ ಫೌಜಿಯಲ್ಲಿ ನಟಿಸಿದ್ದರು. ದಿಲ್‌ ಧರಿಯಾ, ಸರ್ಕಸ್‌, ದೂಸ್ತಾ ಮುಂತಾದ ಟೀವಿ ಶೋಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಸಿನಿಮಾ ಕ್ಷೇತ್ರಕ್ಕೆ ಆಗಮಿಸುವ ಮೊದಲು ಈಡಿಯೇಟ್‌ ಎಂಬ ಮಿನಿ ಟೀವಿ ಸೀರಿಸ್‌ನಲ್ಲೂ ನಟಿಸಿದ್ದರು.

ಹೇಮಾ ಮಾಲಿನಿಯವರು ತಮ್ಮ ಆತ್ಮಚರಿತ್ರೆ "ಹೇಮಾ ಮಾಲಿನಿ: ಬಿಯಾಂಡ್‌ ದಿ ಡ್ರೀಮ್‌ ಗರ್ಲ್‌ನಲ್ಲಿ ಶಾರೂಖ್‌ ಖಾನ್‌ ಅಡಿಷನ್‌ ಕುರಿತು ಬರೆದಿದ್ದಾರೆ. ದಿಲ್‌ ಆಶ್ನಾ ಹೈ ಚಿತ್ರದ ಮೊದಲ ಆಡಿಷನ್‌ನಲ್ಲಿ ಇವರಿಗೆ ಶಾರೂಖ್‌ ಖಾನ್‌ ಇಷ್ಟವಾಗಿರಲಿಲ್ಲವಂತೆ. ಆದರೆ, ಆತನ ಹೇರ್‌ಸ್ಟೈಲ್‌ ಮತ್ತು ಲುಕ್‌ ನೋಡಿ ಎರಡನೇ ಅಡಿಷನ್‌ನಲ್ಲಿ ಒಂದು ಅವಕಾಶ ನೀಡಿದೆ ಎಂದು ಬರೆದುಕೊಂಡಿದ್ದಾರೆ.

ಮೊದಲ ಬಾರಿ ಭೇಟಿಯಾದ ಸಂದರ್ಭದಲ್ಲಿ ಶಾರೂಖ್‌ ಖಾನ್‌ ತುಂಬಾ ನರ್ವಸ್‌ ಆಗಿದ್ದರು ಎಂದು ಹೇಮಾ ಮಾಲಿನಿ ಹೇಳಿದ್ದಾರೆ. ಹೇಮಾ ಮಾಲಿನಿ ಕೇಳುತ್ತಿದ್ದ ಪ್ರತಿಪ್ರಶ್ನೆಗೂ ಶಾರೂಖ್‌ ಖಾನ್‌ ನರ್ವಸ್‌ ಆಗಿ ಅಸ್ಪಷ್ಟ ಉತ್ತರ ನೀಡುತ್ತಿದ್ದರಂತೆ. ಇದರಿಂದ ಮೊದಲ ಅಡಿಷನ್‌ನಲ್ಲಿ ಶಾರೂಖ್‌ ಖಾನ್‌ ಇಷ್ಟವಾಗಲಿಲ್ಲ. ಮತ್ತೆ ಮತ್ತೆ ಪ್ರಯತ್ನಿಸುವಂತೆ ಶಾರೂಖ್‌ಗೆ ಹೇಮಾ ಮಾಲಿನಿ ತಿಳಿಸಿದ್ದರು. ಬಳಿಕ ಆತನ ಕೂದಲನ್ನು ಹಿಂದಕ್ಕೆ ಮಾಡಿ, ವರ್ಣರಂಜಿತ ಜಾಕೆಟ್‌ ಬದಲು ಸರಳ ಟೀಶರ್ಟ್‌ ಹಾಕಲು ಸೂಚಿಸಿದರು. ಬಳಿಕದ ಫಲಿತಾಂಶಗಳು ಉತ್ತಮವಾಗಿದ್ದವು. ಇದಾದ ಬಳಿಕ ಧರ್ಮೇಂದ್ರ ಅವರನ್ನು ಭೇಟಿಯಾಗುವಂತೆ ಶಾರೂಖ್‌ ಖಾನ್‌ಗೆ ತಿಳಿಸಲಾಯಿತು. ಧರ್ಮೇಂದ್ರ ಅವರಿಗೆ ಮೊದಲ ನೋಟದಲ್ಲಿಯೇ ಶಾರೂಖ್‌ ಇಷ್ಟವಾಗಿದ್ದರು ಎಂದು ಹೇಮಾ ಮಾಲಿನಿ ತನ್ನ ಆತ್ಮಚರಿತ್ರೆಯಲ್ಲಿ ಬರೆದಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ