logo
ಕನ್ನಡ ಸುದ್ದಿ  /  ಮನರಂಜನೆ  /  ಹಾರರ್‌ನಿಂದ ಹಿಡಿದು ಆಕ್ಷನ್‌ವರೆಗೆ.. ಈ ವಾರ ಒಟಿಟಿಗೆ ಬಂದಿವೆ ನಾಲ್ಕು ಬಾಲಿವುಡ್‌ ಸಿನಿಮಾಗಳು, ಇಲ್ಲಿದೆ ಡಿಟೇಲ್ಸ್‌

ಹಾರರ್‌ನಿಂದ ಹಿಡಿದು ಆಕ್ಷನ್‌ವರೆಗೆ.. ಈ ವಾರ ಒಟಿಟಿಗೆ ಬಂದಿವೆ ನಾಲ್ಕು ಬಾಲಿವುಡ್‌ ಸಿನಿಮಾಗಳು, ಇಲ್ಲಿದೆ ಡಿಟೇಲ್ಸ್‌

Oct 11, 2024 07:09 PM IST

google News

ಈ ವಾರ ಒಟಿಟಿಗೆ ಬಂದಿವೆ ನಾಲ್ಕು ಬಾಲಿವುಡ್‌ ಸಿನಿಮಾಗಳು, ಇಲ್ಲಿದೆ ಡಿಟೇಲ್ಸ್‌

    • OTT Bollywood Movies: ಈ ವಾರ ಒಟ್ಟು ನಾಲ್ಕು ಹಿಂದಿ ಸಿನಿಮಾಗಳು ಒಟಿಟಿ ಅಂಗಳ ಪ್ರವೇಶಿಸಿವೆ. ಒಂದು ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹಲವು ದಾಖಲೆಗಳನ್ನು ಮುರಿದರೆ, ಇನ್ನೂ ಮೂರು ಸಿನಿಮಾಗಳು, ಹೇಳಿಕೊಳ್ಳುವಂಥ ಯಶಸ್ಸು ಪಡೆದುಕೊಂಡಿಲ್ಲ. ಈ ಸಿನಿಮಾಗಳು ಯಾವ ಒಟಿಟಿಗಳಲ್ಲಿ ಬಂದಿವೆ? ಇಲ್ಲಿದೆ ವಿವರ.
ಈ ವಾರ ಒಟಿಟಿಗೆ ಬಂದಿವೆ ನಾಲ್ಕು ಬಾಲಿವುಡ್‌ ಸಿನಿಮಾಗಳು, ಇಲ್ಲಿದೆ ಡಿಟೇಲ್ಸ್‌
ಈ ವಾರ ಒಟಿಟಿಗೆ ಬಂದಿವೆ ನಾಲ್ಕು ಬಾಲಿವುಡ್‌ ಸಿನಿಮಾಗಳು, ಇಲ್ಲಿದೆ ಡಿಟೇಲ್ಸ್‌

OTT Bollywood Movies: ನೀವು ಹೊಸ ಬಾಲಿವುಡ್ ಸಿನಿಮಾಗಳನ್ನು ಒಟಿಟಿಗಳಲ್ಲಿ ವೀಕ್ಷಿಸಲು ಕಾತರದಲ್ಲಿದ್ದೀತಾ? ಈ ವಾರ ಒಂದಲ್ಲ ಎರಡಲ್ಲ ನಾಲ್ಕು ಸಿನಿಮಾಗಳು ಒಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿವೆ. ಈ ಚಿತ್ರಗಳು ದಸರಾ ಹಬ್ಬದ ಪ್ರಯುಕ್ತ ಒಟಿಟಿಗೆ ಆಗಮಿಸಿವೆ. ಬಾಲಿವುಡ್ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆದ 'ಸ್ತ್ರೀ' ಸಿನಿಮಾ ಬಾಡಿಗೆ ಆಧಾರದ ಮೇಲೆ ಸ್ಟ್ರೀಮಿಂಗ್‌ ಕಾಣುತ್ತಿತ್ತು. ಇದೀಗ ಈ ಚಿತ್ರ ಎಲ್ಲರಿಗೂ ವೀಕ್ಷಣೆಗೆ ಲಭ್ಯವಿದೆ. ಈ ಹಾರರ್ ಕಾಮಿಡಿ ಸಿನಿಮಾದ ಜೊತೆಗೆ ಇನ್ನೂ ಮೂರು ಸಿನಿಮಾಗಳು ಲಭ್ಯ. ಈ ವಾರ (ಅಕ್ಟೋಬರ್ 2 ನೇ ವಾರ) ಒಟಿಟಿಗೆ ಬಂದ ನಾಲ್ಕು ಹಿಂದಿ ಸಿನಿಮಾಗಳು ಎಲ್ಲಿ ಸ್ಟ್ರೀಮ್ ಆಗುತ್ತಿವೆ ನೋಡೋಣ ಬನ್ನಿ.

ವೇದ

ಬಾಲಿವುಡ್‌ ನಟ ಜಾನ್ ಅಬ್ರಹಾಂ ಅಭಿನಯದ ಆಕ್ಷನ್ ಡ್ರಾಮಾ ಚಿತ್ರ ವೇದ ಬಾಕ್ಸ್ ಆಫೀಸ್‌ನಲ್ಲಿ ಅಷ್ಟೇನೂ ಹೇಳಿಕೊಳ್ಳುವಂಥ ಕಮಾಯಿ ಮಾಡಿಲ್ಲ. ಸುಮಾರು ರೂ.26 ಕೋಟಿ ಕಲೆಕ್ಷನ್ ಮಾಡಿ ನಿರಾಸೆ ಮೂಡಿಸಿದೆ. ನಿಖಿಲ್ ಅಡ್ವಾಣಿ ನಿರ್ದೇಶನದ ಈ ಚಿತ್ರವು ಆಗಸ್ಟ್ 15 ರಂದು ಥಿಯೇಟರ್‌ಗೆ ಅಪ್ಪಳಿಸಿತು. ಮಿಶ್ರ ಪ್ರತಿಕ್ರಿಯೆ ಪಡೆದ ಈ ಸಿನಿಮಾ ಇದೀಗ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಜೀ5 ಒಟಿಟಿಯಲ್ಲಿಅಕ್ಟೋಬರ್ 10ರಿಂದ ಸ್ಟ್ರೀಮಿಂಗ್ ಆರಂಭಿಸಿದೆ.

ಖೇಲ್ ಖೇಲ್ ಮೇ

ಕಾಮಿಡಿ ಸಿನಿಮಾ 'ಖೇಲ್ ಖೇಲ್ ಮೇ' ಅಕ್ಟೋಬರ್ 10 ರಂದು ನೆಟ್‌ಫ್ಲಿಕ್ಸ್ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ಮುದಾಸರ್ ಅಲಿ ನಿರ್ದೇಶನದ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್, ತಾಪ್ಸಿ ಪನ್ನು, ಫರ್ದೀನ್ ಖಾನ್ ಮತ್ತು ಪ್ರಜ್ಞಾ ಜೈಸ್ವಾಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವು ಆಗಸ್ಟ್ 15 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ, ಮಿಶ್ರ ವಿಮರ್ಶೆಗಳನ್ನು ಪಡೆಯಿತು. ರೂ. 100 ಕೋಟಿ ಬಜೆಟ್‌ನಲ್ಲಿ ತಯಾರಾದ ಖೇಲ್ ಖೇಲ್ ಮೇ ಚಿತ್ರವು 56 ಕೋಟಿ ಗಳಿಸಿ ಬಾಕ್ಸ್ ಆಫೀಸ್‌ನಲ್ಲಿ ವಿಫಲವಾಯಿತು.

ಸ್ತ್ರೀ 2

ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಮತ್ತು ನಟ ರಾಜ್‌ಕುಮಾರ್ ರಾವ್ ಅಭಿನಯದ ಹಾರರ್ ಕಾಮಿಡಿ ಚಿತ್ರ 'ಸ್ತ್ರೀ 2' ಕಲೆಕ್ಷನ್‌ ವಿಚಾರದಲ್ಲಿ ಹಲವು ದಾಖಲೆ ಬರೆದಿದೆ. ಆಗಸ್ಟ್ 15 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರವು ರೂ. 860 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ಸಂಚಲನ ಮೂಡಿಸಿದೆ. ಸ್ತ್ರೀ 2 ಸಿನಿಮಾ ಗುರುವಾರ (ಅಕ್ಟೋಬರ್ 10) ಅಮೆಜಾನ್‌ ಪ್ರೈಂ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಆರಂಭದಲ್ಲಿ ಒಟಿಟಿಗೆ ಬಂದಾಗ ಈ ಸಿನಿಮಾವನ್ನು ಬಾಡಿಗೆ ಆಧಾರದ ಮೇಲೆ ವೀಕ್ಷಣೆ ಮಾಡಬಹುದಿತ್ತು. ಇದೀಗ ಎಲ್ಲ ಪ್ರೈಂ ಚಂದಾದಾರರೂ ವೀಕ್ಷಿಸಬಹುದು. ಈ ಚಿತ್ರವನ್ನು ಅಮರ್ ಕೌಶಿಕ್ ನಿರ್ದೇಶಿಸಿದ್ದಾರೆ.

ಸರ್ಫಿರಾ

ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ತಮಿಳಿನ ಸೂರರೈ ಪೊಟ್ರು ಚಿತ್ರದ ಹಿಂದಿ ರಿಮೇಕ್ ಸರ್ಫಿರಾ. ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್, ಪರೇಶ್ ರಾವಲ್ ಮತ್ತು ರಾಧಿಕಾ ಮದನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ತಮಿಳಿನಲ್ಲಿ ನಿರ್ದೇಶಿಸಿದ್ದ ನಿರ್ದೇಶಕಿ ಸುಧಾ ಕೊಂಗಾರ ಅವರೇ ಹಿಂದಿಯಲ್ಲೂ ಸರ್ಫಿರಾ ಸಿನಿಮಾ ನಿರ್ದೇಶಿಸಿದ್ದಾರೆ. ಜುಲೈ 12 ರಂದು ಚಿತ್ರ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿತ್ತು. ಈ ಸಿನಿಮಾ ಕೇವಲ 30 ಕೋಟಿ ಕಲೆಕ್ಷನ್ ಮಾಡಿ ಸೋಲನುಭವಿಸಿತ್ತು. ಸರ್ಫಿರಾ ಸಿನಿಮಾ ಇಂದಿನಿಂದ (ಅಕ್ಟೋಬರ್ 11) Disney+ Hotstar OTTಯಲ್ಲಿ ಸ್ಟ್ರೀಮ್ ಆಗುತ್ತಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ