logo
ಕನ್ನಡ ಸುದ್ದಿ  /  ಮನರಂಜನೆ  /  Darshan: ದರ್ಶನ್‌ "ಕ್ರಾಂತಿ" ಚಿತ್ರದ ಫೋಟೋ ಲೀಕ್;‌ ಅಭಿಮಾನಿಗಳ ಸಂಭ್ರಮ...

Darshan: ದರ್ಶನ್‌ "ಕ್ರಾಂತಿ" ಚಿತ್ರದ ಫೋಟೋ ಲೀಕ್;‌ ಅಭಿಮಾನಿಗಳ ಸಂಭ್ರಮ...

Jul 16, 2022 01:46 PM IST

google News

ದರ್ಶನ್‌ "ಕ್ರಾಂತಿ"ಯ ಫೋಟೋ ಲೀಕ್;‌ ಅಭಿಮಾನಿಗಳ ಸಂಭ್ರಮ...

    • "ಕ್ರಾಂತಿ" ಸಿನಿಮಾ ವಿದೇಶದಲ್ಲಿ ಚಿತ್ರೀಕರಣ ಮಾಡಿಕೊಳ್ಳುತ್ತಿದೆ. ಚಿತ್ರದ ಪ್ರಮುಖ ಘಟ್ಟ ಇದಾಗಿದ್ದು, ಈ ಶೂಟಿಂಗ್‌ ಫೋಟೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.
ದರ್ಶನ್‌ "ಕ್ರಾಂತಿ"ಯ ಫೋಟೋ ಲೀಕ್;‌ ಅಭಿಮಾನಿಗಳ ಸಂಭ್ರಮ...
ದರ್ಶನ್‌ "ಕ್ರಾಂತಿ"ಯ ಫೋಟೋ ಲೀಕ್;‌ ಅಭಿಮಾನಿಗಳ ಸಂಭ್ರಮ...

ಬೆಂಗಳೂರು: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಸದ್ಯ "ಕ್ರಾಂತಿ" ಸಿನಿಮಾ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. "ರಾಬರ್ಟ್‌" ಬಳಿಕ ಕೆಲ ಸಮಯ ಬಿಡುವು ಪಡೆದಿದ್ದ ದರ್ಶನ್‌, ಇದೀಗ ಸದ್ದಿಲ್ಲದೆ, "ಕ್ರಾಂತಿ" ಚಿತ್ರದ ಬಹುಪಾಲು ಶೂಟಿಂಗ್‌ ಮುಗಿಸಿದ್ದಾರೆ. ಇತ್ತೀಚೆಗಷ್ಟೇ ವಿದೇಶಕ್ಕೂ ಹಾರಿದ್ದೂ ಅಲ್ಲಿಯೂ ಭರದಿಂದ ಶೂಟಿಂಗ್‌ನಲ್ಲಿ ದರ್ಶನ್‌ ಭಾಗವಹಿಸಿದ್ದಾರೆ.

ಪೊಲೆಂಡ್‌ನಲ್ಲಿ ಶೂಟಿಂಗ್‌..

"ಕ್ರಾಂತಿ" ಸಿನಿಮಾ ವಿದೇಶದಲ್ಲಿ ಚಿತ್ರೀಕರಣ ಮಾಡಿಕೊಳ್ಳುತ್ತಿದೆ. ಚಿತ್ರದ ಪ್ರಮುಖ ಘಟ್ಟ ಇದಾಗಿದ್ದು, ಈ ಶೂಟಿಂಗ್‌ ಫೋಟೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಇದಕ್ಕೂ ಮೊದಲು ನಿಂತ ಭಂಗಿಯಲ್ಲಿನ ಫೋಟೋ ಹಂಚಿಕೊಳ್ಳುವ ಮೂಲಕ ದರ್ಶನ್‌, ಅಭಿಮಾನಿಗಳಿಗೆ ಉಡುಗೊರೆ ನೀಡಿದ್ದರು. ಇದೀಗ ಅಲ್ಲಿನ ಹೊಸ ಫೋಟೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಕುತೂಹಲ ಮೂಡಿಸಿದೆ.

ಅದ್ಯಾವ ಮಾಯದಿಂದ ಪೋಟೋ ಹೊರಬಿತ್ತೋ...

ಇತ್ತೀಚಿನ ದಿನಗಳಲ್ಲಿ ಚಿತ್ರೀಕರಣದ ವಿಚಾರದಲ್ಲಿ ಚಿತ್ರತಂಡಗಳು ಹೆಚ್ಚಿನ ಮುತುವರ್ಜಿ ವಹಿಸುತ್ತವೆ. ಶೂಟಿಂಗ್‌ ಸೆಟ್‌ನಲ್ಲಿ ಮೊಬೈಲ್‌ ಫೋನ್‌ ಬಳಕೆಯನ್ನೇ ನಿಷೇಧಿಸುತ್ತವೆ. ಅದೇ ರೀತಿಯ ಬೆಳವಣಿಗೆ ದರ್ಶನ್‌ ಅವರ ಕ್ರಾಂತಿ ಶೂಟಿಂಗ್‌ ಸಮಯದಲ್ಲಿಯೂ ಆಗಿತ್ತು. ಚಿತ್ರದ ಸಣ್ಣ ಫೋಟೋ ಸಹ ಹೊರ ಹೀಗಬಾರದೆಂದು ಇಡೀ ತಂಡಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿತ್ತು. ಇದೀಗ ಅದೆಲ್ಲದರ ನಡುವೆಯೇ ವಿದೇಶದಲ್ಲಿ ನಡೆಯುತ್ತಿರುವ ಶೂಟಿಂಗ್‌ನ ಫೋಟೋವೊಂದು ಹೊರಬಂದು ಹಲ್‌ಚಲ್‌ ಸೃಷ್ಟಿಸಿದೆ. ಇತ್ತ ಅಭಿಮಾನಿಗಳೂ ಸಹ ಪುಳಕದಲ್ಲಿದ್ದಾರೆ.

<p>ದರ್ಶನ್‌ "ಕ್ರಾಂತಿ"ಯ ಫೋಟೋ ಲೀಕ್</p>

ಇದು ಅಕ್ಷರ ಕ್ರಾಂತಿ

"ಕ್ರಾಂತಿ" ಸಿನಿಮಾ ಅಕ್ಷರ ಕ್ರಾಂತಿ ಕುರಿತಾದ ಚಿತ್ರ ಎಂಬುದನ್ನು ಈಗಾಗಲೇ ಬಿಡುಗಡೆಯಾದ ಪೋಸ್ಟರ್‌ ಮತ್ತು ಟೀಸರ್‌ನಲ್ಲಿ ನಿರ್ದೇಶಕರು ತೋರಿಸಿದ್ದಾರೆ. ವಿ. ಹರಿಕೃಷ್ಣ ನಿರ್ದೇಶನದ 'ಕ್ರಾಂತಿ' ಚಿತ್ರದಲ್ಲಿ "ಬುಲ್‌ ಬುಲ್‌" ಬೆಡಗಿ ರಚಿತಾ ರಾಮ್ ದರ್ಶನ್‌ಗೆ ಜೋಡಿಯಾಗಿದ್ದು, ಇನ್ನುಳಿದಂತೆ ದೊಡ್ಡ‌ತಾರಾಗಣವಿದೆ. ಈ ಚಿತ್ರದಲ್ಲಿ ರವಿಚಂದ್ರನ್‌ ಸಹ ಪ್ರಮುಖ ಪಾತ್ರದಲ್ಲಿದ್ದಾರೆ. ಈಗಾಗಲೇ ಶೂಟಿಂಗ್‌ನಲ್ಲಿಯೂ ಅವರು ಭಾಗವಹಿಸಿ, ಅವರ ಭಾಗದ ಚಿತ್ರೀಕರಣ ಮುಗಿಸಿದ್ದಾರೆ. ಅವರ ಲುಕ್‌ ಹೇಗಿರಲಿದೆ ಎಂಬುದಕ್ಕೂ ಇತ್ತೀಚೆಗಷ್ಟೇ ಉತ್ತರ ಸಿಕ್ಕಿತ್ತು. ಚಿತ್ರದಲ್ಲಿ ರವಿಚಂದ್ರನ್‌ ಪಾತ್ರವೇನು? ಮೋಲ್ನೋಟಕ್ಕೆ ಅಪ್ಪನ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದು ಎನ್ನಲಾಗುತ್ತಿದೆ. ಶೈಲಜಾ ನಾಗ್ ಮತ್ತು ಬಿ. ಸುರೇಶ್ 'ಕ್ರಾಂತಿ' ಚಿತ್ರವನ್ನು ನಿರ್ಮಾಣ ಮಾಡ್ತಿದ್ದಾರೆ.

ಕಾಟೇರ ಸಿನಿಮಾ ವದಂತಿ..

"ಕ್ರಾಂತಿ" ಸಿನಿಮಾ ಮುಗಿಯುವ ಮುನ್ನವೇ ದರ್ಶನ್ ಅವರ 56ನೇ ಸಿನಿಮಾ ಸುದ್ದಿ ಮುನ್ನೆಲೆಗೆ ಬಂದಿದೆ. ದರ್ಶನ್ ಮುಂದಿನ ಸಿನಿಮಾಗೆ, ಅಂದರೆ 56ನೇ ಸಿನಿಮಾಗೆ "ಕಾಟೇರ" ಎಂದು ಹೆಸರಿಟ್ಟಿರುವುದಾಗಿ ದರ್ಶನ್ ಆಪ್ತ ವಲಯ ಹೇಳುತ್ತಿದೆ. ಆದರೆ ಈ ವಿಚಾರದ ಬಗ್ಗೆ ದರ್ಶನ್ ಆಗಲೀ, ಚಿತ್ರತಂಡವಾಗಲೀ ಅಧಿಕೃತ ಘೋಷಣೆ ಮಾಡಿಲ್ಲ. ತರುಣ್ ಸುಧೀರ್, ಈ ಚಿತ್ರಕ್ಕಾಗಿ ಗಧೆ, ಚೌಡಯ್ಯ, ಕಾಟೇರ ಎಂಬ ಮೂರು ಟೈಟಲ್​​​ಗಳನ್ನು ಆಯ್ದುಕೊಂಡಿದ್ದು ಕಡೆಗೂ ಕಾಟೇರ ಎಂಬ ಟೈಟಲ್ ಫೈನಲ್ ಆಗಿದೆ ಎನ್ನಲಾಗುತ್ತಿದೆ. ಕಳೆದ ವರ್ಷ ತೆರೆ ಕಂಡ ರಾಬರ್ಟ್ ಚಿತ್ರವನ್ನು ತರುಣ್ ಸುಧೀರ್ ನಿರ್ದೇಶಿಸಿದ್ದರು. ಈ ಸಿನಿಮಾ ನಂತರ ಇದೀಗ ಮತ್ತೆ ತರುಣ್ ಸುಧೀರ್ ಹಾಗೂ ದರ್ಶನ್ ಕಾಂಬಿನೇಶನ್​​​​​​ನಲ್ಲಿ ಮತ್ತೊಂದು ಸಿನಿಮಾ ಬರುತ್ತಿದೆ. ತರುಣ್ ಸುಧೀರ್ ಜೊತೆಗಿನ ಸಿನಿಮಾವನ್ನು ಫೆಬ್ರವರಿ 16 ದರ್ಶನ್ ಹುಟ್ಟುಹಬ್ಬದಂದು ಘೋಷಣೆ ಮಾಡಲಾಗಿತ್ತು. ಈ ಚಿತ್ರವನ್ನು ರಾಕ್​​ಲೈನ್ ವೆಂಕಟೇಶ್ ನಿರ್ಮಿಸುತ್ತಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ