Devara Part 1 OTT Release: ಜೂ. ಎನ್‌ಟಿಆರ್ ದೇವರ ಸಿನಿಮಾ ಒಟಿಟಿ ಬಿಡುಗಡೆಗೆ ದಿನಾಂಕ ನಿಗದಿ, ಇನ್ನೊಂದೇ ವಾರದೊಳಗೆ ಸ್ಟ್ರೀಮಿಂಗ್ ಶುರು
Nov 02, 2024 03:08 PM IST
ಜೂ. ಎನ್‌ಟಿಆರ್ ದೇವರ ಸಿನಿಮಾ ಒಟಿಟಿ ಬಿಡುಗಡೆಗೆ ದಿನಾಂಕ
- Devara OTT Streaming Update: ಜೂನಿಯರ್ ಎನ್‌ಟಿಆರ್ ನಟನೆಯ ದೇವರ ಸಿನಿಮಾ ಒಟಿಟಿ ಬಿಡುಗಡೆ ಯಾವಾಗ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಆದರೆ, ಇನ್ನಷ್ಟೇ ಅದು ಅಧಿಕೃತವಾಗಬೇಕಿದ್ದು, ಕೊರಟಾಲ ಶಿವ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದೆ.
Devara Part 1 OTT release: ಟಾಲಿವುಡ್ ಸ್ಟಾರ್ ನಟ ಜೂನಿಯರ್ ಎನ್‌ಟಿಆರ್ ನಟನೆಯ ದೇವರ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷೆ ಮಟ್ಟ ತಲುಪಲಿಲ್ಲ. ದೊಡ್ಡ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಕೊರಟಾಲ ಶಿವ ನಿರ್ದೇಶನದಲ್ಲಿ ಮೂಡಿಬಂದಿದ್ದ ದೇವರ ಸಿನಿಮಾ, ಸೆಪ್ಟೆಂಬರ್ 27ರಂದು ತೆರೆಗೆ ಬಂದಿತ್ತು. ಮೂಲ ತೆಲುಗಿನ ಜತೆಗೆ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು. ಈಗ ಇದೇ ಸಿನಿಮಾ ಸಲುವಾಗಿ ಒಟಿಟಿ ವೀಕ್ಷಕರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಹೀಗಿರುವಾಗಲೇ ಎನ್‌ಟಿಆರ್ ಫ್ಯಾನ್ಸ್‌ಗೆ ಇದೀಗ ಶುಭ ಸುದ್ದಿಯೊಂದು ತೇಲಿಬಂದಿದೆ.
ಮೊದಲ ದಿನವೇ ದಾಖಲೆಯ ಓಪನಿಂಗ್ ಕಂಡಿದ್ದ ದೇವರ ಚಿತ್ರ ಐದು ವಾರಗಳನ್ನು ಪೂರೈಸಿದ ಬಳಿಕ 400 ಕೋಟಿ ರೂ ಗಳಿಕೆ ಮಾಡಿತು. ಸೋಲೋ ಹೀರೋ ಆಗಿ ಎನ್‌ಟಿಆರ್ ಕೆರಿಯರ್‌ನಲ್ಲಿ ಈ ಸಿನಿಮಾ ದೊಡ್ಡ ಬ್ಲಾಕ್ ಬಸ್ಟರ್ ಆಯಿತು. ಈಗ ಇದೇ ಸಿನಿಮಾದ ಒಟಿಟಿ ಅಪ್‌ಡೇಟ್ ಹೊರಬಿದ್ದಿದೆ. ಸಾಮಾನ್ಯವಾಗಿ, ಇತ್ತೀಚಿನ ದಿನಗಳಲ್ಲಿ ತೆಲುಗು ಸಿನಿಮಾಗಳು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ನಾಲ್ಕು ವಾರಗಳಲ್ಲಿ OTT ಮೂಲಕ ಬಿಡುಗಡೆಯಾಗುತ್ತವೆ. ಆದರೆ ದೇವರ ಚಿತ್ರ ಐದು ವಾರ ಕಳೆದರೂ ಇನ್ನೂ ಒಟಿಟಿ ಸ್ಟ್ರೀಮಿಂಗ್ ಆಗಿಲ್ಲ.
ಕೊರಟಾಲ ಶಿವ ನಿರ್ದೇಶನದ ‘ದೇವರ’ ಸಿನಿಮಾವನ್ನು ಸುಧಾಕರ್ ಮಿಕ್ಕಿಲಿನೇನಿ ಮತ್ತು ನಂದಮೂರಿ ಕಲ್ಯಾಣ್ ರಾಮ್ ನಿರ್ಮಿಸಿದ್ದಾರೆ. ಅನಿರುದ್ಧ್ ಅವರ ಸಂಗೀತ ಸಿನಿಮಾದ ಹೈಲೈಟ್. ಕೊರಟಾಲ ಶಿವ ಈ ಸಿನಿಮಾವನ್ನು ಎರಡು ಭಾಗಗಳಲ್ಲಿ ಪ್ಲಾನ್ ಮಾಡಿದ್ದಾರೆ. ಮುಂದಿನ ವರ್ಷ ಎರಡನೇ ಭಾಗದ ಚಿತ್ರೀಕರಣ ಆರಂಭವಾಗಲಿದೆ. ಎನ್‌ಟಿಆರ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದ ದೇವರ ಚಿತ್ರದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸಿದ್ದರು. ಈಗ ಇದೇ ಸಿನಿಮಾ ನವೆಂಬರ್ 2ನೇ ವಾರದಲ್ಲಿ ಒಟಿಟಿಗೆ ಆಗಮಿಸಲಿದೆ ಎಂಬ ಟಾಕ್ ಜೋರಾಗಿದೆ.
ಸುಮಾರು ಆರು ವರ್ಷಗಳ ನಂತರ ದೇವರ ಚಿತ್ರದ ಮೂಲಕ ಎನ್‌ಟಿಆರ್ ಸೋಲೋ ಹಿಟ್ ಪಡೆದಿದ್ದಾರೆ. ಮೊದಲ ದಿನವೇ ದಾಖಲೆಯ ಓಪನಿಂಗ್ ಪಡೆದ ದೇವರ ಚಿತ್ರ ಐದು ವಾರಗಳನ್ನು ಪೂರೈಸಿದ ಬಳಿಕವೂ 400 ಕೋಟಿ ಕಲೆಕ್ಷನ್ ದಾಟಿದೆ. ಇನ್ನೇನು ಇದೇ ವಾರದ ಬಳಿಕ ಥಿಯೇಟರ್ ರನ್ ಮುಕ್ತಾಯವಾಗಲಿದೆ. ಅದಾದ ಬಳಿಕ ನವೆಂಬರ್ 8ರಿಂದ ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ದೇವರ ಚಿತ್ರ ಸ್ಟ್ರೀಮ್ ಆಗಲಿದೆ ಎಂದೇ ಹೇಳಲಾಗುತ್ತಿದೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಘೋಷಣೆ ಹೊರಬೀಳಬೇಕಿದೆ.