Horror OTT Movies: ಈ ವಾರ ಒಟಿಟಿಯಲ್ಲಿ ರಿಲೀಸ್ ಆಗಿರುವ ಟಾಪ್ ರೇಟೆಡ್ ಹಾರರ್ ಸಿನಿಮಾಗಳಿವು, ಒಬ್ಬರೇ ನೋಡಲೇಬೇಡಿ
OTT Horror Movies Release This Week: ಈ ವಾರ ಒಟಿಟಿಯಲ್ಲಿ 7 ಹಾರರ್ ಸಿನಿಮಾಗಳು ಡಿಜಿಟಲ್ ಸ್ಟ್ರೀಮಿಂಗ್ ಆರಂಭಿಸಿವೆ. ಅವುಗಳಲ್ಲಿ ನಾಲ್ಕು ಸಿನಿಮಾಗಳು ಒಂದೇ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ರಿಲೀಸ್ ಆಗಿವೆ. ಹಾರರ್ ಮಿಶ್ರಿತ ಸೈನ್ಸ್ ಫಿಕ್ಷನ್, ಟ್ರೈಮ್ ಟ್ರಾವೆಲಿಂಗ್ ಎಳೆಯ ಸಿನಿಮಾಗಳೂ ಈ ವಾರ ನಿಮ್ಮನ್ನು ಹಿಡಿದಿಟ್ಟುಕೊಳ್ಳಲಿವೆ.
OTT Horror Movies Release This Week: ಒಟಿಟಿಯಲ್ಲಿ ಈ ವಾರ ಸಾಲು ಸಾಲು ಹಾರರ್ ಜಾನರ್‌ನ ಸಿನಿಮಾಗಳು ಸ್ಟ್ರೀಮಿಂಗ್ ಆರಂಭಿಸಲಿವೆ. ಅದರಲ್ಲೂ ಹಾರರ್ ಸಿನಿಮಾ ಇಷ್ಟಪಡುವವರಿಗೆ ಈ ವಾರ ದೀಪಾವಳಿ ಧಮಾಕಾ. ಅದರಂತೆ ಈ ವಾರ ಒಂದಲ್ಲ ಎರಡಲ್ಲ ಒಟ್ಟು ಏಳು ಹಾರರ್ ಸಿನಿಮಾಗಳು ಒಟಿಟಿ ಅಂಗಳ ಪ್ರವೇಶಿಸಲಿವೆ. ಆ ಸಿನಿಮಾಗಳನ್ನು ಯಾವ ಒಟಿಟಿಯಲ್ಲಿ ವೀಕ್ಷಣೆ ಮಾಡಬಹುದು? ಇಲ್ಲಿದೆ ವಿವರ.
ಟೈಮ್ ಕಟ್
ಟೈಮ್ ಕಟ್ ಚಿತ್ರವು ಟೈಮ್ ಟ್ರಾವೆಲ್ ಪರಿಕಲ್ಪನೆಯೊಂದಿಗೆ ಸಮಯಕ್ಕೆ ಹಿಂತಿರುಗುವ ಐದು ಕಾಲೇಜು ಹುಡುಗಿಯರ ಕೊಲೆ ರಹಸ್ಯದ ಕಥೆಯಾಗಿದೆ. ಲೇಡಿ ನಿರ್ದೇಶಕಿ ಹನ್ನಾ ಮ್ಯಾಕ್‌ಫರ್ಸನ್ ಈ ಹಾರರ್ ಜಾನರ್‌ನ ಟೈಮ್ ಕಟ್ ಸಿನಿಮಾವನ್ನು ಕ್ರೈಂ, ಮಿಸ್ಟರಿ ಮತ್ತು ಟೈಮ್ ಟ್ರಾವೆಲ್ ಮೂಲಕ ಹೊರತಂದಿದ್ದಾರೆ. ಈ ಕಥೆಯು ಮ್ಯಾಡಿಸನ್ ಬೈಲಿ ಎಂಬ ಯುವತಿಯ ಸುತ್ತ ಸುತ್ತುತ್ತದೆ. ಅವಳು ತನ್ನ ಸಹೋದರಿಯ ಕೊಲೆಯ ಬಗ್ಗೆ ತಿಳಿದುಕೊಳ್ಳಲು 2003ಕ್ಕೆ ಹಿಂದಿರುಗುತ್ತಾಳೆ. ಟೈಮ್ ಕಟ್ ಸಿನಿಮಾ ಅಕ್ಟೋಬರ್ 31ರಿಂದಲೇ ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಡಿಜಿಟಲ್ ಆಗಿ ಸ್ಟ್ರೀಮ್ ಆಗುತ್ತಿದೆ.
ದಿ ಸಬ್‌ಸ್ಟಾನ್ಸ್
ದಿ ಸಬ್‌ಸ್ಟೆನ್ಸ್ ಸೈನ್ಸ್ ಮತ್ತು ಫಿಕ್ಷನ್ ಅಂಶಗಳನ್ನು ಹೊಂದಿರುವ ಹಾರರ್ ಸಿನಿಮಾ. ಸಬ್‌ಸ್ಟೆನ್ಸ್ ಸಿನಿಮಾ IMDBಯಲ್ಲಿ 7.6 ರೇಟಿಂಗ್ ಪಡೆದುಕೊಂಡಿದೆ. ಈ ಸಿನಿಮಾ Mubi OTTಯಲ್ಲಿ ಸ್ಟ್ರೀಮ್ ಆಗುತ್ತಿದೆ. ಎರಡು ಗಂಟೆ 20 ನಿಮಿಷಗಳ ಅವಧಿಯ ಹಾರರ್ ಸೈನ್ಸ್ ಥ್ರಿಲ್ಲರ್ ದಿ ಸಬ್‌ಸ್ಟೆನ್ಸ್‌ನಲ್ಲಿ ಡೆಮಿ ಮೂರ್, ಮಾರ್ಗರೇಟ್ ಕ್ವಾಲಿ, ಡೆನ್ನಿಸ್ ಕ್ವೈಡ್, ಆಸ್ಕರ್ ಲೆಸೇಜ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಅಪೋಕ್ಯಾಲಿಪ್ಸ್ ಜುಡ್ ದಿ ಬಿಗಿನಿಂಗ್ ಆಫ್ ದಿ ಎಂಡ್
ಅಪೋಕ್ಯಾಲಿಪ್ಸ್ ಜುಡ್ ದಿ ಬಿಗಿನಿಂಗ್ ಆಫ್ ದಿ ಎಂಡ್ ಜೊಂಬಿ ಪ್ರಕಾರದ ಒಂದು ಹಾರರ್ ಥ್ರಿಲ್ಲರ್ ಸಿನಿಮಾ. ಅಪೋಕ್ಯಾಲಿಪ್ಸ್ ಜುಡ್ ದಿ ಬಿಗಿನಿಂಗ್ ಆಫ್ ದಿ ಎಂಡ್ ಸಿನಿಮಾ ಒಬ್ಬ ಯುವಕ ಮತ್ತು ವೈರಸ್ ನಡುವಿನ ಕಥೆಯಾಗಿದೆ. ಆ ವೈರಸ್‌ನಿಂದ ಆತ ಹೇಗೆ ಬದುಕುಳಿಯುತ್ತಾನೆ ಎಂಬುದೇ ಈ ಚಿತ್ರದ ಕಥೆ. ಅಕ್ಟೋಬರ್ 31ರಿಂದ ಅಮೆಜಾನ್ ಪ್ರೈಮ್ ಒಟಿಟಿಯಲ್ಲಿ ಈ ಸಿನಿಮಾ 15 ಭಾಷೆಗಳಲ್ಲಿ ಸ್ಟ್ರೀಮ್ ಆಗುತ್ತಿದೆ.
ಸ್ಟ್ರೇಂಜ್ ಡಾರ್ಲಿಂಗ್
ಸ್ಟ್ರೇಂಜ್ ಡಾರ್ಲಿಂಗ್ 2023ರಲ್ಲಿ ತೆರೆಕಂಡ ಹಾರರ್ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಈ ಸಿನಿಮಾಕ್ಕೆ ಐಎಂಡಿಬಿಯಲ್ಲಿ 10ಕ್ಕೆ 7.2 ರೇಟಿಂಗ್ ಸಿಕ್ಕಿದೆ. ಸ್ಟ್ರೇಂಜ್ ಡಾರ್ಲಿಂಗ್ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ. ಸ್ಟ್ರೇಂಜ್ ಡಾರ್ಲಿಂಗ್ OTT ನವೆಂಬರ್ 1 ರಿಂದ ಅಮೆಜಾನ್ ಪ್ರೈಂನಲ್ಲಿ ಸ್ಟ್ರೀಮ್ ಆಗುತ್ತಿದೆ. ಒಂದು ಗಂಟೆ 36 ನಿಮಿಷಗಳ ಅವಧಿಯ ಸ್ಟ್ರೇಂಜ್ ಡಾರ್ಲಿಂಗ್ ಸಿನಿಮಾ ಭಾರತದ ಹಲವು ಭಾಷೆಗಳಿಗೂ ಡಬ್ ಆಗಿದೆ.
ನಾಕ್ಟರ್ನೊ OTT ಆಗಿದೆ
ನಾಕ್ಟರ್ನೊ ಫಿಲಿಪೈನ್ಸ್‌ನ ಹಾರರ್ ಸಿನಿಮಾ. ತಂಗಿಯ ಅನುಮಾನಾಸ್ಪದ ಸಾವಿನ ನಂತರ ಜೈಮಿ ಎಂಬ ಯುವತಿ ಮನೆಗೆ ಬರುತ್ತಾಳೆ. ಅದರ ನಂತರ, ಆ ಮನೆಯಲ್ಲಿ ಜೈಮಿಗೆ ವಿಚಿತ್ರವಾದ ಭಯಾನಕ ಘಟನೆಗಳು ಸಂಭವಿಸುತ್ತವೆ. ಬಳಿಕ ಇದೊಂದು ಭೂತದ ಕಾಟ ಎಂದೂ ಆಕೆಯ ಅರಿವಿಗೆ ಬರುತ್ತದೆ. ಅದಾದ ಮೇಲೆ ಹೇಗೆ ಆ ಪ್ರೇತದಿಂದ ಪಾರಾಗುತ್ತಾಳೆ ಎಂಬುದೇ ಈ ಸಿನಿಮಾದ ಕಥೆ. ಅಕ್ಟೋಬರ್ 31 ರಿಂದ ಅಮೆಜಾನ್ ಪ್ರೈಂ ಒಟಿಟಿಯಲ್ಲಿ ಈ ಸಿನಿಮಾ ಡಿಜಿಟಲ್ ಸ್ಟ್ರೀಮ್ ಆಗುತ್ತಿದೆ.
ಅಜ್ರೇಲ್ ಮತ್ತು ಜಂಜಿ ದಾರಾ
ಇಂಗ್ಲಿಷ್ ಹಾರರ್ ಮತ್ತು ಆಕ್ಷನ್ ಅಜ್ರೇಲ್ ಸಿನಿಮಾ ಅಮೆಜಾನ್ ಪ್ರೈಮ್ ಒಟಿಟಿಯಲ್ಲಿ ಡಿಜಿಟಲ್ ಸ್ಟ್ರೀಮ್ ಆಗುತ್ತಿದೆ. ಇದರ ಜತೆಗೆ ಇಂಡೋನೇಷಿಯಾದ ಹಾರರ್ ಜಂಜಿ ದಾರಾ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಈ ವಾರ, ಒಟ್ಟು ಏಳು ಹಾರರ್ ಸಿನಿಮಾಗಳು ಒಟಿಟಿ ಪ್ರವೇಶಿಸಿವೆ. ಅವುಗಳಲ್ಲಿ ನಾಲ್ಕು ಸಿನಿಮಾ ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗುತ್ತಿವೆ.