logo
ಕನ್ನಡ ಸುದ್ದಿ  /  ಮನರಂಜನೆ  /  ಯುಟ್ಯೂಬ್‌ನಲ್ಲಿ 5 ಕೋಟಿಗೂ ಅಧಿಕ ವೀಕ್ಷಣೆ ಪಡೆದ ‘ದ್ವಾಪರ ದಾಟುತ’ ಹಾಡು; ನಿಮ್ಮಿಷ್ಟದ ಹಾಡುಗಳ ಪಟ್ಟಿಯಲ್ಲಿನ ಟಾಪ್‌ ಸಾಂಗ್‌ ಇದೇನಾ

ಯುಟ್ಯೂಬ್‌ನಲ್ಲಿ 5 ಕೋಟಿಗೂ ಅಧಿಕ ವೀಕ್ಷಣೆ ಪಡೆದ ‘ದ್ವಾಪರ ದಾಟುತ’ ಹಾಡು; ನಿಮ್ಮಿಷ್ಟದ ಹಾಡುಗಳ ಪಟ್ಟಿಯಲ್ಲಿನ ಟಾಪ್‌ ಸಾಂಗ್‌ ಇದೇನಾ

Suma Gaonkar HT Kannada

Oct 14, 2024 03:52 PM IST

google News

ಯುಟ್ಯೂಬ್‌ನಲ್ಲಿ 5 ಕೋಟಿಗೂ ಅಧಿಕ ವೀಕ್ಷಣೆ ದಾಟಿದ ದ್ವಾಪರ ದಾಟುತ ಹಾಡು

    • ನೀವು ದಿನಾ ಗುನುಗುವ ಹಾಡು ‘ದ್ವಾಪರ ದಾಟುತ’ ಈಗ ಯುಟ್ಯೂಬ್‌ನಲ್ಲಿ ಭರ್ಜರಿ ವೀವ್ಸ್‌ ಪಡೆದುಕೊಂಡಿದೆ. ಸಿನಿಮಾ ಬಿಡುಗಡೆಯಾಗುವುದಕ್ಕಿಂತಲೂ ಮೊದಲೇ ಈ ಹಾಡು ವೈರಲ್ ಆಗಿತ್ತು. ನಿಹಾರಿಕಾ, ಅನಾಮಿಕ, ವೆರೋನಿಕಾ, ಆಕರ್ಷಿಕಾ ಅನ್ನೋ ಸಾಲುಗಳಂತು ಜನರಿಗೆ ಹುಚ್ಚೆಬ್ಬಿಸಿದೆ. 
ಯುಟ್ಯೂಬ್‌ನಲ್ಲಿ 5 ಕೋಟಿಗೂ ಅಧಿಕ ವೀಕ್ಷಣೆ ದಾಟಿದ ದ್ವಾಪರ ದಾಟುತ ಹಾಡು
ಯುಟ್ಯೂಬ್‌ನಲ್ಲಿ 5 ಕೋಟಿಗೂ ಅಧಿಕ ವೀಕ್ಷಣೆ ದಾಟಿದ ದ್ವಾಪರ ದಾಟುತ ಹಾಡು

ಸದ್ಯ ಎಲ್ಲರ ಬಾಯಲ್ಲೂ ಗುನುಗೋದು 'ದ್ವಾಪರ ದಾಟುತ' ಇದೇ ಹಾಡು. ಕೃಷ್ಣ ಪ್ರಣಯ ಸಖಿ ಸಿನಿಮಾ ರಿಲೀಸ್‌ ಆಗುವುದಕ್ಕಿಂತಲೂ ಮೊದಲಿನಿಂದ ಈ ಹಾಡು ಜನರ ಮನ ಗೆದ್ದು ಎಷ್ಟೋ ಜನರ ರಿಂಗ್‌ ಟೋನ್ ಆಗಿದೆ. ಸ್ಯಾಂಡಲ್‌ವುಡ್‌ನಲ್ಲಿ ದ್ವಾಪರ ದಾಟುತ ಹಾಡು ಸೃಷ್ಟಿ ಮಾಡಿದ ಅಲೆ ತುಂಬಾ ದೊಡ್ಡದು. ಈ ಹಾಡಿನಲ್ಲಿ ಬರುವ ಸಾಲುಗಳು ತುಂಬಾ ವಿಶೇ‍ಷವಾಗಿದೆ. ಡಾ. ವಿ. ನಾಗೇಂದ್ರ ಪ್ರಸಾದ್‌ ಈ ಹಾಡಿನ ಸಾಹಿತ್ಯ ಬರೆದಿದ್ದಾರೆ. ಜಸ್‌ಕರಣ್‌ ಸಿಂಗ್‌ ತುಂಬಾ ಸುಂದರವಾಗಿ ಹಾಡಿ ಈ ಹಾಡಿಗೆ ನ್ಯಾಯ ಒದಗಿಸಿದ್ದಾರೆ.

ನಿಹಾರಿಕಾ, ಅನಾಮಿಕ, ವೆರೋನಿಕಾ, ಆಕರ್ಷಿಕಾ ಅನ್ನೋ ಪದಗಳಂತು ಜನ ಹುಚ್ಚೆದ್ದು ಕೇಳುತ್ತಿದ್ದಾರೆ. ಆಗ ಬರುವ ದಾಟಿ ಹಾಗೂ ಆ ಸಾಲುಗಳು ಜನರನ್ನು ಮೋಡಿ ಮಾಡಿದೆ. ಎಷ್ಟೋ ಜನ ಇದೇ ಸಾಲುಗಳಿಗಾಗಿ ಮತ್ತೆ ಮತ್ತೆ ಹಾಡನ್ನು ಕೇಳುತ್ತಿದ್ದಾರೆ. ಈ ಹಾಡಿನ ಪ್ರತಿ ಸಾಲುಗಳು ಅಷ್ಟು ಅರ್ಥಪೂರ್ಣವೇ ಆಗಿದೆ. ಇನ್ನು ಯುಟ್ಯೂಬ್‌ನಲ್ಲಂತೂ ಎಲ್ಲರೂ ಸರ್ಚ್ ಮಾಡಿ ಮಾಡಿ ನೋಡುತ್ತಿರುವ ಹಾಡು ಇದಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಈ ಹಾಡು 55 ಕೋಟಿಗೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.

ಅದೆಷ್ಟೋ ರೀಲ್ಸ್‌ಗೆ ಸಾಥ್‌ ನೀಡಿದ್ದು ಇದೇ ಮೂರು ಸಾಲು

ಜೇನ ದನಿಯೋಳೆ ಮೀನ ಕಣ್ಣೋಳೆ

ಸೊಬಗೆ ಮೈತುಂಬಿದೆ ಹಂಸ ನಡೆಯೋಳೆ

ಎದೆಗೆ ಇಳಿದೋಳೆ ಜೀವ ಝಲ್ ಎಂದಿದೆ

ದ್ವಾಪರ ದಾಟುತ ಹಾಡಿನ ಈ ಮೂರು ಸಾಲುಗಳಂತು ರೀಲ್ಸ್‌ ಜಗತ್ತಿನಲ್ಲಿ ಸಂಚಲನ ಸೃಷ್ಟಿ ಮಾಡಿದೆ. ನಿದ್ದೆಗಣ್ಣಿನಲ್ಲಿ ಎಬ್ಬಿಸಿ ಕೇಳಿದರೂ ಈ ಮೂರು ಸಾಲುಗಳನ್ನು ಅದೆಷ್ಟೋ ಜನ ಈಗಲೂ ಹೇಳುತ್ತಾರೆ.

ಅರ್ಜುನ್‌ ಜನ್ಯ ಅವರ ಸಂಗೀತ ಸಂಯೋಜನೆ, ಡಾ. ವಿ. ನಾಗೇಂದ್ರ ಪ್ರಸಾದ್‌ ಅವರ ಸಾಹಿತ್ಯ ಮತ್ತು ಗಾಯಕ ಜಸ್‌ಕರಣ್‌ ಸಿಂಗ್‌ ಅವರ ಧ್ವನಿ ಈ ಮೂರು ಕೂಡ ತುಂಬಾ ಚೆನ್ನಾಗಿ ಈ ಹಾಡಿನಲ್ಲಿ ಮೂಡಿ ಬಂದಿದೆ.

5 ಕೋಟಿಗೂ ಅಧಿಕ ವೀಕ್ಷಣೆಯಾದ ದಾಟಿದ ದ್ವಾಪರ ದಾಟುತ ಹಾಡು

ದ್ವಾಪರ ಹಾಡಿಗೆ ಅಭಿಮಾನಿಗಳು ಖುಷಿಗೊಂಡಿದ್ದಾರೆ. ವಿಶೇಷವಾಗಿ ಈ ಹಾಡಿನ ಸಾಹಿತ್ಯ ಇಷ್ಟಪಟ್ಟಿದ್ದಾರೆ. "ಒಂದೇ ಒಂದು ಪರ ಬಾಷೆ ಬಳಸದೆ ಬಂದಂತ ಅದ್ಬುತ ಕನ್ನಡ ಸಾಹಿತ್ಯದ ಹಾಡು" "ನಮ್ಮ" ಕನ್ನಡ ಭಾಷೆ, ಶಬ್ದ ಸಂಪತ್ತಿನ ಗಣಿ". ಬಗೆದಷ್ಟು ಬಂಗಾರ, ಕೇಳಿದಷ್ಟು ಇಂಚರ, ಸಾಹಿತ್ಯ ಸಾಗರ" "ಬಹಳ ದಿನಗಳ ನಂತರ ಒಂದೊಳ್ಳೆ ಹಾಡು ಕನ್ನಡಕ್ಕೆ ಸಿಕ್ಕಿದೆ.. 100 ಬಾರಿ ಕೇಳಿರಬಹುದು ಅನ್ಸುತ್ತೆ ಗುರು" "ಬಹಳ ದಿನಗಳ ನಂತರ ಕನ್ನಡ ಸಿನಿಮಾದಲ್ಲಿ ಇಂತಹ ಅದ್ಬುತ ಸಾಹಿತ್ಯ ಕೇಳಿ ಬಹಳ ರೋಮಾಂಚನವಾಯಿತು" ಎಂದೆಲ್ಲ ಅಭಿಮಾನಿಗಳು ಈ ಹಾಡನ್ನು ಮೆಚ್ಚಿ ಯೂಟ್ಯೂಬ್‌ನಲ್ಲಿ ಕಾಮೆಂಟ್‌ ಮಾಡಿದ್ದಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ