logo
ಕನ್ನಡ ಸುದ್ದಿ  /  ಮನರಂಜನೆ  /  ಸಲ್ಮಾನ್‌ ಖಾನ್‌ ನಡೆಸಿಕೊಡುತ್ತಿರುವ ಹಿಂದಿ ಬಿಗ್‌ಬಾಸ್‌ ಶೋನಲ್ಲಿ ಕತ್ತೆಯೂ ಸ್ಪರ್ಧಿ; ಮನರಂಜನೆಗೆ ಪ್ರಾಣಿಗಳ ಬಳಕೆ ಬೇಡ ಎಂದ Peta

ಸಲ್ಮಾನ್‌ ಖಾನ್‌ ನಡೆಸಿಕೊಡುತ್ತಿರುವ ಹಿಂದಿ ಬಿಗ್‌ಬಾಸ್‌ ಶೋನಲ್ಲಿ ಕತ್ತೆಯೂ ಸ್ಪರ್ಧಿ; ಮನರಂಜನೆಗೆ ಪ್ರಾಣಿಗಳ ಬಳಕೆ ಬೇಡ ಎಂದ PETA

Rakshitha Sowmya HT Kannada

Oct 10, 2024 01:09 PM IST

google News

ಸಲ್ಮಾನ್‌ ಖಾನ್‌ ನಡೆಸಿಕೊಡುತ್ತಿರುವ ಹಿಂದಿ ಬಿಗ್‌ಬಾಸ್‌ ಶೋನಲ್ಲಿ ಲಾಯರ್‌ ಗುಣರತ್ನ ಸದಾವರ್ತೆ ಜೊತೆ ಕತ್ತೆಯೂ ಸ್ಪರ್ಧಿಯಾಗಿ ಬಂದಿದೆ. ಇದನ್ನು ಗಮನಿಸಿದ PETA ಮನರಂಜನೆಗೆ ಪ್ರಾಣಿಗಳ ಬಳಕೆ ಬೇಡ ಎಂದು ಕಾರ್ಯಕ್ರಮದ ಆಯೋಜಕರಿಗೆ ಪತ್ರ ಬರೆದಿದೆ. (ಸಾಂದರ್ಭಿಕ ಚಿತ್ರ)

  • ಸಲ್ಮಾನ್‌ ಖಾನ್‌ ನಡೆಸಿಕೊಡುತ್ತಿರುವ ಹಿಂದಿ ಬಿಗ್‌ಬಾಸ್‌ ಶೋ ಅಕ್ಟೋಬರ್‌ 6 ರಿಂದ ಆರಂಭವಾಗಿದೆ. ಕಾರ್ಯಕ್ರಮದ ಸ್ಪರ್ಧಿ ವಕೀಲ ಗುಣರತ್ನ ಸದಾವರ್ತೆ ಜೊತೆ ಅವರ ಪ್ರೀತಿಯ ಕತ್ತೆ ಮ್ಯಾಕ್ಸ್‌ ಕೂಡಾ ಬಂದಿದೆ. ಆದರೆ ಮನರಂಜೆಗೆ ಪ್ರಾಣಿಗಳ ಬಳಕೆ ಬೇಡ ಎಂದು ಬಿಗ್‌ಬಾಸ್‌ ಆಯೋಜಕರಿಗೆ PETA ಪತ್ರ ಬರೆದಿದೆ. 

ಸಲ್ಮಾನ್‌ ಖಾನ್‌ ನಡೆಸಿಕೊಡುತ್ತಿರುವ ಹಿಂದಿ ಬಿಗ್‌ಬಾಸ್‌ ಶೋನಲ್ಲಿ ಲಾಯರ್‌ ಗುಣರತ್ನ ಸದಾವರ್ತೆ ಜೊತೆ ಕತ್ತೆಯೂ ಸ್ಪರ್ಧಿಯಾಗಿ ಬಂದಿದೆ. ಇದನ್ನು ಗಮನಿಸಿದ PETA ಮನರಂಜನೆಗೆ ಪ್ರಾಣಿಗಳ ಬಳಕೆ ಬೇಡ ಎಂದು ಕಾರ್ಯಕ್ರಮದ ಆಯೋಜಕರಿಗೆ ಪತ್ರ ಬರೆದಿದೆ. (ಸಾಂದರ್ಭಿಕ ಚಿತ್ರ)
ಸಲ್ಮಾನ್‌ ಖಾನ್‌ ನಡೆಸಿಕೊಡುತ್ತಿರುವ ಹಿಂದಿ ಬಿಗ್‌ಬಾಸ್‌ ಶೋನಲ್ಲಿ ಲಾಯರ್‌ ಗುಣರತ್ನ ಸದಾವರ್ತೆ ಜೊತೆ ಕತ್ತೆಯೂ ಸ್ಪರ್ಧಿಯಾಗಿ ಬಂದಿದೆ. ಇದನ್ನು ಗಮನಿಸಿದ PETA ಮನರಂಜನೆಗೆ ಪ್ರಾಣಿಗಳ ಬಳಕೆ ಬೇಡ ಎಂದು ಕಾರ್ಯಕ್ರಮದ ಆಯೋಜಕರಿಗೆ ಪತ್ರ ಬರೆದಿದೆ. (ಸಾಂದರ್ಭಿಕ ಚಿತ್ರ)

ಒಂದೆಡೆ ಕನ್ನಡದಲ್ಲಿ ಸುದೀಪ್‌ ಸಾರಥ್ಯದಲ್ಲಿ ಬಿಗ್‌ಬಾಸ್‌ ಸೀಸನ್‌ 11 ನಡೆಯುತ್ತಿದ್ದರೆ ಅತ್ತ ಮುಂಬೈನಲ್ಲಿ ಬಾಲಿವುಡ್‌ ಬ್ಯಾಚುಲರ್‌ ಸಲ್ಮಾನ್‌ ಖಾನ್‌ ನಿರೂಪಣೆಯಲ್ಲಿ ಸೀಸನ್‌ 18 ನಡೆಯುತ್ತಿದೆ. ಅಕ್ಟೋಬರ್‌ 6ರಿಂದ ಸೀಸನ್‌ ಆರಂಭವಾಗಿದೆ. 18 ಸ್ಪರ್ಧಿಗಳು ಈ ಬಾರಿ ದೊಡ್ಮನೆ ಪ್ರವೇಶಿಸಿದ್ದಾರೆ. ಜೊತೆಗೆ ಕತ್ತೆಯೂ ಸ್ಪರ್ಧಿಯಾಗಿ ಹೋಗಿದೆ.

ಕಾರ್ಯಕ್ರಮ ಅಯೋಜಕರಿಗೆ ಪತ್ರ ಬರೆದ PETA

ಬಿಗ್‌ಬಾಸ್‌ ಮನೆಗೆ ಕತ್ತೆ ಎಂಟ್ರಿ ಆಗುತ್ತಿದ್ದಂತೆ ಕೆಲವರು ಈ ಬಾರಿ ಪಕ್ಕಾ ಮನರಂಜನೆ ಇದೆ ಎಂದರೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದೇ ಮೊದಲ ಬಾರಿಗೆ ಪ್ರಾಣಿಯೊಂದನ್ನು ಬಿಗ್‌ಬಾಸ್‌ ಮನೆಯೊಳಗೆ ಕರೆದೊಯ್ಯಲಾಗಿತ್ತು. ಆದರೆ ಕತ್ತೆಯನ್ನು ಮನರಂಜನೆ ಕಾರ್ಯಕ್ರಮದಲ್ಲಿ ಬಳಸಿಕೊಂಡಿರುವುದಕ್ಕೆ ಪ್ರಾಣಿ ದಯಾ ಸಂಘ ಆಕ್ಷೇಪ ವ್ಯಕ್ತಪಡಿಸಿದೆ. People for the Ethical Treatment of Animals (PETA) India ಸಲ್ಮಾನ್‌ ಖಾನ್‌ ವಿರುದ್ಧವೂ ಬೇಸರ ವ್ಯಕ್ತಪಡಿಸಿದೆ, ಸೆಲೆಬ್ರಿಟಿಯಾಗಿರುವ ನೀವು ಇಂತದ್ದಕ್ಕೆಲ್ಲಾ ಅವಕಾಶ ನೀಡಬಾರದು, ಅಂತದರಲ್ಲಿ ನಿಮ್ಮ ವಾಹಿನಿಯ ಟಿಆರ್‌ಪಿಗಾಗಿ ಕತ್ತೆಯನ್ನು ಬಳಸಿಕೊಳ್ಳುತ್ತಿರುವುದು ಎಷ್ಟು ಸರಿ ಎಂದು ಕೇಳಿದೆ. ಅಷ್ಟೇ ಅಲ್ಲ, ಕೂಡಲೇ ಕತ್ತೆಯನ್ನು ಹೊರಗೆ ಕಳಿಸುವಂತೆ ಸೂಚಿಸಲಾಗಿದೆ.

ಟಿಆರ್‌ಪಿಗಾಗಿ ಪ್ರಾಣಿಗಳ ಬಳಕೆ ಬೇಡ

ವಕೀಲ ಗುಣರತ್ನ ಸದಾವರ್ತೆ, ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಡುವಾಗ ತಮ್ಮೊಂದಿಗೆ ಕತ್ತೆ ಮ್ಯಾಕ್ಸ್‌ ಕೂಡಾ ಕರೆತಂದಿದ್ದರು. ಇದಕ್ಕೆ ಗಧಾರಾಜ್‌ ಎಂಬ ಮತ್ತೊಂದು ಹೆಸರು ಇದೆ. ಮ್ಯಾಕ್ಸ್‌ಗೆ ಗಾರ್ಡನ್‌ ಏರಿಯಾದಲ್ಲಿ ಸ್ಥಳ ನೀಡಲಾಗಿದೆ. ಅಲ್ಲದೆ ಮ್ಯಾಕ್ಸ್‌ನನ್ನು ನೋಡಿಕೊಳ್ಳುವಂತೆ ಮನೆಯ ಎಲ್ಲಾ ಸ್ಪರ್ಧಿಗಳಿಗೂ ಸೂಚನೆ ನೀಡಲಾಗಿತ್ತು. ಬಿಗ್‌ಬಾಸ್‌ ಶೋ ಗಮನಿಸಿದ ಭಾರತದ PETA ತಂಡ, ಬಿಗ್‌ಬಾಸ್‌ ಟೀಮ್‌ಗೆ ಪತ್ರ ಬರೆದಿದ್ದು ಇಂತಹ ಕಾರ್ಯಕ್ರಮಗಳಲ್ಲಿ ಕೇವಲ ಮನರಂಜನೆ ಉದ್ದೇಶಕ್ಕಾಗಿ ಪ್ರಾಣಿಗಳನ್ನು ಬಳಸದಂತೆ ಮನವಿ ಮಾಡಿದೆ.

ವಕೀಲ ಗುಣರತ್ನ ಸದಾವರ್ತೆಗೆ ಸಲಹೆ

ಹೀಗೆ ಮಾಡುವುದರಿಂದ ಪ್ರಾಣಿಗಳಿಗೆ ಸಮಸ್ಯೆ ಆಗುತ್ತದೆ. ನೋಡುಗರಿಗೂ ಕಿರಿಕಿರಿಯಾಗಬಹುದು. ಅಲ್ಲದೆ ಕತ್ತೆಯನ್ನು PETAಗೆ ನೀಡುವಂತೆ ಗುಣರತ್ನ ಅವರಲ್ಲೂ ಮನವಿ ಮಾಡುತ್ತೇವೆ. ಅವರು ತಮ್ಮ ಮಾತನ್ನು ಮನ್ನಿಸಿ ಮ್ಯಾಕ್ಸನ್ನು ಒಪ್ಪಿಸಿದರೆ ಅವರು ಖಂಡಿತ ಇನ್ನಷ್ಟು ವೀಕ್ಷಕರ ಮನಸ್ಸನ್ನು ಗೆಲ್ಲುತ್ತಾರೆ. ಬಿಗ್‌ಬಾಸ್‌ ಒಂದು ಮನರಂಜನಾ ಕಾರ್ಯಕ್ರಮ. ಆದರೆ ಕಾರ್ಯಕ್ರಮದಲ್ಲಿ ಪ್ರಾಣಿಗಳನ್ನು ಬಳಸುವುದು ತಮಾಷೆಯ ವಿಚಾರವಲ್ಲ, ಕತ್ತೆಗೆ ನೀಡಿರುವ ಜಾಗ ಕೂಡಾ ಬಹಳ ಚಿಕ್ಕದು. ಆ ಚಿಕ್ಕ ಸ್ಥಳದಲ್ಲಿ ಆ ಲೈಟಿಂಗ್‌, ಸ್ಪರ್ಧಿಗಳ ಅರಚಾಟದಿಂದ ಅದಕ್ಕೆ ಸಮಸ್ಯೆ ಉಂಟಾಗಬಹುದು ಎಂದು PETA, ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಪ್ರಾಣಿ ದಯಾಸಂಘದ ಸೂಚನೆಯನ್ನು ಮನ್ನಿಸಿ ಬಿಗ್‌ಬಾಸ್‌ ತಂಡ, ಕತ್ತೆಯನ್ನು ಕಾರ್ಯಕ್ರಮದಿಂದ ಹೊರ ಕಳಿಸಲಿದೆಯಾ ಕಾದು ನೋಡಬೇಕು.

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ