ಅತ್ಯಧಿಕ ಸಂಭಾವನೆ ಪಡೆಯುವ ಭಾರತೀಯ ಗಾಯಕ ಇವ್ರೇ, 1 ಹಾಡಿಗೆ 3 ಕೋಟಿ ದರ, ಅರ್ಜಿತ್, ಶ್ರೇಯಾ ಘೋಷಾಲ್, ಸೋನು ನಿಗಮ್ ಅಲ್ಲ!
Nov 13, 2024 08:45 AM IST
ಅತ್ಯಧಿಕ ಸಂಭಾವನೆ ಪಡೆಯುವ ಭಾರತೀಯ ಗಾಯಕ
- ಭಾರತದಲ್ಲಿ ಒಂದು ಹಾಡಿಗೆ ಅತ್ಯಧಿಕ ಸಂಭಾವನೆ ಪಡೆಯುವ ಗಾಯಕ ಯಾರು? ಅದೂ ಪಾರ್ಟ್ ಟೈಮ್ ಸಿಂಗರ್!. ಒಂದು ಹಾಡಿಗೆ 3 ಕೋಟಿ ರೂಪಾಯಿ ಸಂಭಾವನೆ ಪಡೆಯುವ ಈ ಗಾಯಕನ ಹೆಸರು ಅರ್ಜಿತ್ ಸಿಂಗ್, ಶ್ರೇಯಾ ಘೋಆಷಲ್, ಸುನಿಧಿ ಚೌಹಾನ್, ಸೋನು ನಿಗಮ್ ಅಲ್ಲ. ಹಾಗಾದರೆ ಯಾರವರು?
ಬಾಲಿವುಡ್‌ನಲ್ಲಿ ಹಲವು ಜನಪ್ರಿಯ ಗಾಯಕರಿದ್ದಾರೆ. ಲತಾ ಮಂಗೇಶ್ಕರ್ ಅವರು 60 ರ ದಶಕದಲ್ಲಿ ಬಾಲಿವುಡ್‌ನಲ್ಲಿ ಸಂಗೀತದ ಮೋಡಿ ಸೃಷ್ಟಿಸಿದರು. ಆದರೆ, ಅವರಷ್ಟು ಜನಪ್ರಿಯತೆ ಪಡೆದಿದ್ದರೂ ಹೆಚ್ಚು ಸಂಭಾವನೆ ಪಡೆಯುತ್ತಿರಲಿಲ್ಲ. ಮೊಹಮ್ಮದ್ ರಫಿ ಮತ್ತು ಮನ್ನಾ ಡೇ ಅವರಂತಹವರ ಆ ಸಮಯದಲ್ಲಿ ಪ್ರತಿ ಹಾಡಿಗೆ 300 ರೂಪಾಯಿ ಪಡೆಯುತ್ತಿದ್ದರು. ಈಗ ಪರಿಸ್ಥಿತಿ ಹಾಗಿಲ್ಲ. ಆಲ್ಬಂಗಳು ಯೂಟ್ಯೂಬ್ ಚಾನೆಲ್‌ನಲ್ಲಿ ಜನಪ್ರಿಯತೆ ಪಡೆದು, ಅಂತಿಮವಾಗಿ ಚಲನಚಿತ್ರ ಥಿಯೇಟರ್‌ಗೆ ಬರುವ ತನಕ ಹಲವು ರೀತಿಯಲ್ಲಿ ಆದಾಯ ಗಳಿಸುತ್ತವೆ. ಇದೀಗ ಭಾರತದ ಪ್ರಮುಖ ಗಾಯಕರು ಪ್ರತಿಹಾಡಿಗೆ ಲವು ಲಕ್ಷ ರೂಪಾಯಿ ಪಡೆಯುತ್ತಾರೆ. ಆದರೆ, ಇವರಲ್ಲಿ ಒಬ್ಬರು ಪಾರ್ಟ್‌ಟೈಮ್ ಗಾಯಕರಿದ್ದಾರೆ. ಇವರು ಪ್ರತಿಹಾಡಿಗೆ ಪಡೆಯುವ ಸಂಭಾವನೆ ಬರೋಬ್ಬರಿ 3 ಕೋಟಿ ರೂಪಾಯಿ.
ಭಾರತದ ದುಬಾರಿ ಗಾಯಕ
ಸದ್ಯ ಭಾರತದಲ್ಲಿ ಅತ್ಯಧಿಕ ಸಂಭಾವನೆ ಪಡೆಯವ ಗಾಯಕರಾಗಿ ಎಆರ್ ರೆಹಮಾನ್ ಸ್ಥಾನ ಪಡೆದಿದ್ದಾರೆ. ಉದ್ಯಮದ ಮೂಲಗಳ ಪ್ರಕಾರ ರೆಹಮಾನ್ ಅವರು ಪ್ರತಿಹಾಡಿಗೆ ಸುಮಾರು 3 ಕೋಟಿ ರೂಪಾಯಿ ಪಡೆಯುತ್ತಾರಂತೆ. ಇದು ಭಾರತದಲ್ಲಿ ಯಾವುದೇ ಗಾಯಕ ಪಡೆಯುವ ಸಂಭಾವನೆಗಿಂತ 12-15 ಪಟ್ಟು ಹೆಚ್ಚು ದುಬಾರಿಯಾಗಿದೆ. ಮೂಲಗಳ ಪ್ರಕಾರ ಇವರು ಸಂಗೀತ ಸಂಯೋಜನೆಗೆ ಹೆಚ್ಚು ಸಮಯ ನೀಡುತ್ತಾರೆ. ರೆಹಮಾನ್ ತನ್ನ ಸ್ವಂತ ಹಾಡಿಗೆ ಮಾತ್ರ ಸಾಮಾನ್ಯವಾಗಿ ಧ್ವನಿ ನೀಡುತ್ತಾರೆ. ಬೇರೆ ಯಾವುದೇ ಸಂಯೋಜಕರ ಹಾಡಿಗೆ ಧ್ವನಿ ನೀಡಬೇಕೆಂದರೆ ಇವರಿಗೆ ದುಬಾರಿ ಮೊತ್ತ ಪಾವತಿಸಬೇಕಂತೆ.
ಅತಿಹೆಚ್ಚು ಸಂಭಾವನೆ ಪಡೆಯುವ ಗಾಯಕರ ಪಟ್ಟಿ
ಭಾರತದಲ್ಲಿ ಫುಲ್ ಟೈಮ್ ಸಿಂಗರ್‌ಗಳಾಗಿ ಅತಿಹೆಚ್ಚು ಸಂಭಾವನೆ ಪಡೆಯುವವರಲ್ಲಿ ಶ್ರೇಯಾ ಘೋಷಾಲ್ ಪ್ರಮುಖರು. 40ರ ಹರೆಯದ ಇವರು ರೆಕಾರ್ಡ್ ಮಾಡುವ ಪ್ರತಿ ಹಾಡಿಗೆ 25 ಲಕ್ಷ ರೂಪಾಯಿ ಶುಲ್ಕ ಪಡೆಯುತ್ತಾರೆ ಎಂದು ವರದಿಗಳು ತಿಳಿಸಿವೆ. ಶ್ರೇಯಾ ನಂತರದ ಸ್ಥಾನದಲ್ಲಿ ಅವರ ಸಮಕಾಲೀನ ಗಾಯಕ ಸುನಿಧಿ ಚೌಹಾಣ್ ಮೂರನೇ ಸ್ಥಾನದಲ್ಲಿದ್ದಾರೆ. ಇವರು ಪ್ರತಿ ಹಾಡಿಗೆ 18-20 ಲಕ್ಷ ರೂಪಾಯಿವರಗೆ ಶುಲ್ಕ ಪಡೆಯುತ್ತಾರೆ. ಕೆಲವು ಮೂಲಗಳ ಪ್ರಕಾರ ಅರಿಜಿತ್ ಸಿಂಗ್ ಕೂಡ ಇಷ್ಟೇ ಮೊತ್ತವನ್ನು ಪಡೆಯುತ್ತಾರೆ.
ಅತಿಹೆಚ್ಚು ಸಂಭಾವನೆ ಪಡೆಯುವವರಲ್ಲಿ ಸೋನು ನಿಗಮ್ ಅಗ್ರ ಐದನೇ ಸ್ಥಾನದಲ್ಲಿದ್ದಾರೆ. ಇವರು ಪ್ರತಿಹಾಡು ಹಾಡಲು 15-18 ಲಕ್ಷ ರೂಪಾಯಿ ಶುಲ್ಕ ಪಡೆಯುತ್ತಾರೆ ಎಂದು ವರದಿಗಳು ತಿಳಿಸಿವೆ.
ಎಆರ್ ರೆಹಮಾನ್ ಬಗ್ಗೆ
ಇವರ ಪೂರ್ಣ ಹೆಸರು: ಅಲ್ಲಾ ರಖಾ ರೆಹಮಾನ್. 1967 ಜನವರಿ 6ರಂದು ಜನಿಸಿದ ಇವರು ಸಂಗೀತ ಸಂಯೋಜಕ, ಧ್ವನಿಮುದ್ರಣ ನಿರ್ಮಾಪಕ, ಗಾಯಕ, ಗೀತರಚನೆಕಾರ, ಸಂಗೀತಗಾರರಾಗಿ ಜನಪ್ರಿಯತೆ ಪಡೆದಿದ್ದಾರೆ.ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ಎರಡು ಅಕಾಡೆಮಿ ಪ್ರಶಸ್ತಿಗಳು, ಎರಡು ಗ್ರ್ಯಾಮಿ ಪ್ರಶಸ್ತಿಗಳು, ಒಂದು ಬಿಎಎಫ್‌ಟಿಎ ಪ್ರಶಸ್ತಿ, ಒಂದು ಗೋಲ್ಡನ್ ಗ್ಲೋಬ್ ಪ್ರಶಸ್ತಿ, ಆರು ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಗಳು, ಹದಿನೈದು ಫಿಲ್ಮ್‌ಫೇರ್‌ಪ್ರಶಸ್ತಿಗಳು ಮತ್ತು ಹದಿನೆಂಟು ಫಿಲ್ಮ್‌ಫೇರ್ ದಕ್ಷಿಣ ಪ್ರಶಸ್ತಿಗಳನ್ನು ಪಡೆದಿದ್ದಾರೆ. 2010ರಲ್ಲಿಭಾರತ ಸರ್ಕಾರವು ರಾಷ್ಟ್ರದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಯನ್ನು ಇವರಿಗೆ ನೀಡಿ ಗೌರವಿಸಿದೆ.