ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ವಾರೇವ್ಹಾ ಸಂಜಿತ್ ಹೆಗ್ಡೆ, ಕಲ್ಕಿ 2898 ಎಡಿ ಸಿನಿಮಾದಲ್ಲಿ ಟ ಟಕ್ಕರ ಹಾಡಿನ ಮೂಲಕ 5 ಭಾಷೆಯ ಪ್ರೇಕ್ಷಕರನ್ನು ಮೋಡಿ ಮಾಡಿದ ಕನ್ನಡ ಗಾಯಕ

ವಾರೇವ್ಹಾ ಸಂಜಿತ್ ಹೆಗ್ಡೆ, ಕಲ್ಕಿ 2898 ಎಡಿ ಸಿನಿಮಾದಲ್ಲಿ ಟ ಟಕ್ಕರ ಹಾಡಿನ ಮೂಲಕ 5 ಭಾಷೆಯ ಪ್ರೇಕ್ಷಕರನ್ನು ಮೋಡಿ ಮಾಡಿದ ಕನ್ನಡ ಗಾಯಕ

  • Sanjith Hegde Kalki 2898 AD Song: ಪ್ರಭಾಸ್‌ ಮತ್ತು ದೀಪಿಕಾ ಪಡುಕೋಣೆ ಪ್ರಮುಖ ಪಾತ್ರದಲ್ಲಿ ನಟಿಸಿರುವ ಕಲ್ಕಿ 2898 ಎಡಿ ಸಿನಿಮಾದಲ್ಲಿ ಕನ್ನಡ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡಿಲ್ಲ ಎಂಬ ಕೊರತೆಯನ್ನು ಯುವ ಗಾಯಕ ಸಂಜಿತ್‌ ಹೆಗ್ಡೆ ಹೋಗಲಾಡಿಸಿದ್ದಾರೆ. ಕಲ್ಕಿ 2898 ಎಡಿ ಸಿನಿಮಾದ ಟ ಟಕ್ಕರ ಎಂಬ ಹಾಡನ್ನು ಕನ್ನಡ ಗಾಯಕ ಸಂಜಿತ್‌ ಹೆಗ್ಡೆ ಹಾಡಿದ್ದಾರೆ. 

ಪ್ರಭಾಸ್‌ ಮತ್ತು ದೀಪಿಕಾ ಪಡುಕೋಣೆ ಪ್ರಮುಖ ಪಾತ್ರದಲ್ಲಿ ನಟಿಸಿರುವ ಕಲ್ಕಿ  2898 ಎಡಿ ಸಿನಿಮಾದಲ್ಲಿ ಕನ್ನಡ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡಿಲ್ಲ ಎಂಬ ಕೊರತೆಯನ್ನು ಯುವ ಗಾಯಕ ಸಂಜಿತ್‌ ಹೆಗ್ಡೆ ಹೋಗಲಾಡಿಸಿದ್ದಾರೆ. ಕಲ್ಕಿ  2898 ಎಡಿ ಸಿನಿಮಾದ ಟ ಟಕ್ಕರ ಎಂಬ ಹಾಡನ್ನು ಕನ್ನಡ ಗಾಯಕ ಸಂಜಿತ್‌ ಹೆಗ್ಡೆ ಹಾಡಿದ್ದಾರೆ. ಸಂಚಿತ್‌ ಹೆಗ್ಡೆ ಜತೆಗೆ ದೀ, ಸಂತೋಷ್‌ ನಾರಾಯಣ್‌ ಜತೆಯಾಗಿದ್ದಾರೆ.
icon

(1 / 10)

ಕಲ್ಕಿ  2898 ಎಡಿ ಸಿನಿಮಾದಲ್ಲಿ ಹೆಚ್ಚು ಹಾಡುಗಳಿಲ್ಲ. ಇರೋ ಪ್ರಮುಖ ಒಂದು ಹಾಡಿನಲ್ಲಿ "ಟ ಟಕ್ಕರ" ಎಂಬ ಹಾಡು ಅತ್ಯುತ್ತಮವಾಗಿದೆ. ಕಾಂಪ್ಲೆಕ್ಸ್‌ ಒಳಗೆ ಸುಂದರ ಪ್ರಪಂಚವಿರುವ, ಹಣ್ಣುಗಳು, ಸಮುದ್ರ, ಸುಂದರ ಪರಿಸರ ಇರುವ ಸ್ಥಳಕ್ಕೆ ಪ್ರಭಾಸ್‌ ಮತ್ತು ದಿಶಾ ಪಟಾನಿ  ಎಂಟ್ರಿ ನೀಡುವಾಗ ಬರುವ ಹಾಡಿದು. 
icon

(2 / 10)

ಕಲ್ಕಿ ಸಿನಿಮಾದ ಬರಡು ಜಗತ್ತು ನೋಡಿ ಬೇಸೆತ್ತ ಪ್ರೇಕ್ಷಕರ ಕಣ್ಣಿಗೆ ಮುದ ನೀಡುವಂತಹ ದೃಶ್ಯವದು. ಕೆಳಭಾಗದಲ್ಲಿ ಕಾಶಿ ಎಂಬ ಬರಡು  ಸ್ಥಳ. ಮೇಲ್ಭಾಗದಲ್ಲಿ ಕಾಂಪ್ಲೆಕ್ಸ್‌ ಎಂಬ ಯಾಂತ್ರಿಕ ಲೋಕ. ಈ ಲೋಕದಲ್ಲೂ ಅದ್ಭುತ ಕೃತಕ ಪ್ರಕೃತಿ ಲೋಕವಿದೆ ಎಂದು ತಿಳಿಸುವಂತಹ ಸುಂದರ ದೃಶ್ಯಗಳಿಗೆ ಕನ್ನಡ ಗಾಯಕ ಸಂಜಿತ್‌ ಹೆಗ್ಡೆ ಧ್ವನಿಯಾಗಿದ್ದಾರೆ.
icon

(3 / 10)

ವಿಶೇಷವೆಂದರೆ, ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಹಿಂದಿ, ಮಲಯಾಳಂ ಸೇರಿದಂತೆ ಎಲ್ಲಾ ಭಾರತೀಯ ಭಾಷೆಗಳಲ್ಲಿಯೂ ಸಂಚಿತ್‌ ಹೆಗ್ಡೆ ಹಾಡಿದ್ದಾರೆ. ಈ ಮೂಲಕ 5 ಭಾಷೆಯ ಕಲ್ಕಿ ಸಿನಿಮಾ ಪ್ರೇಕ್ಷಕರನ್ನು ತನ್ನ ಮಧುರ ಕಂಠದಿಂದ ಮೋಡಿ ಮಾಡಿದ್ದಾರೆ.
icon

(4 / 10)

ಒಟ್ಟಾರೆ ಭಾರತದ ಪ್ರಮುಖ ಚಿತ್ರವೊಂದಕ್ಕೆ ಹಾಡುವ ಅವಕಾಶವನ್ನು ಸಂಚಿತ್‌ ಹೆಗಡೆ ಪಡೆದುಕೊಂಡಿರುವುದು ಕನ್ನಡಿಗರಿಗೆ ಖುಷಿಯ ವಿಚಾರ. ಈ ಸಿನಿಮಾದಲ್ಲಿ ಹೆಚ್ಚು ಹಾಡು ಇಲ್ಲದ ಕಾರಣ ಚಿತ್ರ ಬಿಡುಗಡೆಗೆ ಮುನ್ನ ಸಿನಿಮಾದ ಸಿಂಗಲ್ಸ್‌ಗೆ ಹೆಚ್ಚು ಪ್ರಚಾರ ಕೊಟ್ಟಿರಲಿಲ್ಲ. ಚಿತ್ರ ಬಿಡುಗಡೆಯಾದ ಬಳಿಕ ಈ ಹಾಡು ವೈರಲ್‌ ಆಗುತ್ತಿದೆ.
icon

(5 / 10)

ಸರಿಗಮಪ ಶೋನಲ್ಲಿ ಸಂಜಿತ್‌ ಹೆಗ್ಡೆ ಭಾಗವಹಿಸಿದ್ದರು. ಇದಾದ ಬಳಿಕ ಇವರಿಗೆ ಸಾಕಷ್ಟು ಅವಕಾಶ ದೊರಕಿತ್ತು. ಮೊದಲ ಬಾರಿಗೆ ದಳಪತಿ ಎಂಬ ಕನ್ನಡ ಸಿನಿಮಾದಲ್ಲಿ ಹಾಡಿದ್ದರು. 
icon

(6 / 10)

ಇದಾದ ಬಳಿಕ ಪರಭಾಷೆಯ ಚಿತ್ರಗಳಿಂದಲೂ ಸಂಜಿತ್‌ ಹೆಗ್ಡೆಗೆ ಅವಕಾಶಗಳು ಹೆಚ್ಚಾದವು. ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ ಸಿನಿಮಾಗಳ ಹಾಡುಗಳಿಗೂ ಧ್ವನಿಯಾಗಿದ್ದಾರೆ. 
icon

(7 / 10)

ಡಾಂಗೆ, ಪೋರ್‌, ಪಿಟ್ಟ ಕಥಲು ಎಂಬ ಸಿನಿಮಾಗಳಿಗೆ ಮ್ಯೂಸಿಕ್‌ ಕಂಪೋಸ್‌ ಮಾಡಿದ್ದಾರೆ. ಆದರೆ, ಕಲ್ಕಿ ಸಿನಿಮಾದ ಹಾಡಿಗೆ ಸಂತೋಷ್‌ ನಾರಾಯಣ್‌ ಸಂಗೀತ ಸಂಯೋಜನೆ ಮಾಡಿದ್ದಾರೆ.
icon

(8 / 10)

ಕಲ್ಕಿ  2898 ಎಡಿ ಸಿನಿಮಾದ ಈ ಹಾಡು ಕನ್ನಡದಲ್ಲೂ ಬಿಡುಗಡೆಯಾಗಿದೆ. ಸ್ವರ್ಗವೇ ನನ್ನ ಬಾ ಎಂದಿದೆ ಎಂಬ ಹಾಡು ಜನಪ್ರಿಯವಾಗಿದೆ. ಈ ಹಾಡಿಗೆ ರಾಮಜೋಗಯ್ಯ ಶಾಸ್ತ್ರಿ ಸಾಹಿತ್ಯವಿದೆ. ಸಂತೋಷ್‌ ನಾರಾಯಣ್‌ ಸಂಗೀತವಿದೆ.  
icon

(9 / 10)

ಕಲ್ಕಿ  2898 ಎಡಿ  ಸಿನಿಮಾದ ವಿಮರ್ಶೆ, ಇತ್ತೀಚಿನ ಸುದ್ದಿಗಳು, ಬಾಕ್ಸ್‌ ಆಫೀಸ್‌ ವರದಿ, ಕಲ್ಕಿ ನಟರು, ನಟಿಯರ ಕುರಿತಾದ ಅಪ್‌ಡೇಟ್‌ಗಳನ್ನು ಪಡೆಯಲು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದ ಮನರಂಜನೆ ವಿಭಾಗಕ್ಕೆ ಭೇಟಿ ನೀಡಲು ಮರೆಯಬೇಡಿ.  
icon

(10 / 10)

ಇತರ ಗ್ಯಾಲರಿಗಳು