logo
ಕನ್ನಡ ಸುದ್ದಿ  /  Entertainment  /  It's A Wrap For Vijay Raghavendra's Upcoming Movie Raaghu

Raaghu Movie Update: ‘ರಾಘು’ ಕೆಲಸ ಮುಗಿಸಿದ ವಿಜಯ್‌ ರಾಘವೇಂದ್ರ; ಇನ್ನೇನಿದ್ದರೂ ಆಗಮನವಷ್ಟೇ ಬಾಕಿ..

HT Kannada Desk HT Kannada

Oct 03, 2022 11:47 AM IST

‘ರಾಘು’ ಕೆಲಸ ಮುಗಿಸಿದ ವಿಜಯ್‌ ರಾಘವೇಂದ್ರ; ಇನ್ನೇನಿದ್ದರೂ ಆಗಮನವಷ್ಟೇ ಬಾಕಿ..

    • ನಟ ವಿಜಯ ರಾಘವೇಂದ್ರ ಅಭಿನಯದ ‘ರಾಘು’ ಸಿನಿಮಾ ಫೋಸ್ಟರ್ ಮೂಲಕ ಸಖತ್ ಕ್ಯೂರಿಯಾಸಿಟಿ ಬಿಲ್ಡ್ ಮಾಡಿತ್ತು. ಅಣ್ಣನ ಚಿತ್ರಕ್ಕೆ ಶ್ರೀಮುರಳಿ ಕ್ಲ್ಯಾಪ್ ಮಾಡಿ ಶುಭ ಹಾರೈಸಿದ್ದರು. ಇದೀಗ ಚಿತ್ರತಂಡ ‘ರಾಘು’ ಸಿನಿಮಾ ಶೂಟಿಂಗ್ ಕಂಪ್ಲೀಟ್ ಮಾಡಿದೆ.
‘ರಾಘು’ ಕೆಲಸ ಮುಗಿಸಿದ ವಿಜಯ್‌ ರಾಘವೇಂದ್ರ; ಇನ್ನೇನಿದ್ದರೂ ಆಗಮನವಷ್ಟೇ ಬಾಕಿ..
‘ರಾಘು’ ಕೆಲಸ ಮುಗಿಸಿದ ವಿಜಯ್‌ ರಾಘವೇಂದ್ರ; ಇನ್ನೇನಿದ್ದರೂ ಆಗಮನವಷ್ಟೇ ಬಾಕಿ..

ನಟ ವಿಜಯ ರಾಘವೇಂದ್ರ ಅಭಿನಯದ ‘ರಾಘು’ ಸಿನಿಮಾ ಫೋಸ್ಟರ್ ಮೂಲಕ ಸಖತ್ ಕ್ಯೂರಿಯಾಸಿಟಿ ಬಿಲ್ಡ್ ಮಾಡಿತ್ತು. ಅಣ್ಣನ ಚಿತ್ರಕ್ಕೆ ಶ್ರೀಮುರಳಿ ಕ್ಲ್ಯಾಪ್ ಮಾಡಿ ಶುಭ ಹಾರೈಸಿದ್ದರು. ಇದೀಗ ಚಿತ್ರತಂಡ ‘ರಾಘು’ ಸಿನಿಮಾ ಶೂಟಿಂಗ್ ಕಂಪ್ಲೀಟ್ ಮಾಡಿ ಚಿತ್ರೀಕರಣಕ್ಕೆ ಕುಂಬಳಕಾಯಿ ಒಡೆದಿದೆ.

ಟ್ರೆಂಡಿಂಗ್​ ಸುದ್ದಿ

ವಿಶೇಷ ಸೂಚನೆ; ರಕ್ಷಿತ್‌ ಶೆಟ್ಟಿಯ ‘ರಿಚರ್ಡ್‌ ಆಂಟನಿ’ ಚಿತ್ರದಲ್ಲಿ ಕರಾವಳಿ ಭಾಗದ ಕಲಾವಿದರಿಗಷ್ಟೇ ಅವಕಾಶ!

Vidya Balan: ಪಾರ್ನ್‌ ವಿಡಿಯೋ ವೀಕ್ಷಣೆ ಮತ್ತು ಲೈಂಗಿಕತೆಯ ಬಗ್ಗೆ ಮುಕ್ತವಾಗಿ ಮಾತನಾಡಿದ ನಟಿ ವಿದ್ಯಾ ಬಾಲನ್‌

Ranneeti Review: ಒಂದು ಯುದ್ಧದ ಹಿಂದಿನ ಹಲವು ಯುದ್ಧಗಳ ಕಥೆ; ದೇಶದೇಶಗಳ ರಾಜಕೀಯ ಚದುರಂಗದಲ್ಲಿ ಸುದ್ದಿಯೂ ಅಸ್ತ್ರ -ರಣ್‌ನೀತಿ ವೆಬ್‌ಸೀರೀಸ್

Seetha Rama Serial: ಮಾವಯ್ಯನ ಬಾಯಿಂದ ಬಂತು ಆ ಮಾತು; ಹಾಲು ಕುಡಿದಷ್ಟೇ ಖುಷಿಯಲ್ಲಿದ್ದಾಳೆ ಭಾರ್ಗವಿ

ನವ ನಿರ್ದೇಶಕ ಎಂ ಆನಂದ್ ರಾಜ್ ನಿರ್ದೇಶನದ ‘ರಾಘು’ ಚಿತ್ರದಲ್ಲಿ ಡಿಫರೆಂಟ್‌ ಲುಕ್ ಹಾಗೂ ಡಿಫರೆಂಟ್‌ ರೋಲ್ ನಲ್ಲಿ ವಿಜಯ ರಾಘವೇಂದ್ರ ಕಾಣಿಸಿಕೊಂಡಿದ್ದಾರೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಿರುವ ಚಿತ್ರತಂಡ ಶೂಟಿಂಗ್ ಕಂಪ್ಲೀಟ್ ಮಾಡಿ ಕೊನೆಯ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿಯುತ್ತಿದ್ದಂತೆ ಟ್ರೇಲರ್ ಬಿಡುಗಡೆ ಮಾಡಲು ‘ರಾಘು’ ಟೀಂ ಪ್ಲ್ಯಾನ್ ಮಾಡಿಕೊಂಡಿದ್ದು, ಶೀಘ್ರದಲ್ಲೇ ಟ್ರೇಲರ್ ಕೂಡ ಬಿಡುಗಡೆಯಾಗಲಿದೆ. ಹಾಗೆಯೇ ಇದೇ ವರ್ಷ ಸಿನಿಮಾ ತೆರೆಗೆ ತರಲು ಕೂಡ ತಯಾರಿ ನಡೆಯುತ್ತಿದೆ.

‘ರಾಘು’ ಎಂ ಆನಂದ್ ರಾಜ್ ನಿರ್ದೇಶನದ ಮೊದಲ ಸಿನಿಮಾ. ಆನ ಹಾಗೂ ಬ್ಯಾಂಗ್ ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ದುಡಿದಿರುವ ಆನಂದ್ ರಾಜ್ ಈ ಚಿತ್ರಕ್ಕೆ ಕಥೆ ಬರೆದು ಆಕ್ಷನ್ ಕಟ್ ಹೇಳುವ ಮೂಲಕ ಸ್ವತಂತ್ರ ನಿರ್ದೇಶಕನಾಗಿ ಬಡ್ತಿ ಪಡೆದಿದ್ದಾರೆ. ಕನ್ನಡದ ಮಟ್ಟಿಗೆ ಇದು ಹೊಸ ಪ್ರಯತ್ನ ಇರುವ ಸಿನಿಮಾ. ವಿಜಯ ರಾಘವೇಂದ್ರ ಹಿಂದೆಂದೂ ಕಾಣದ ಪಾತ್ರವನ್ನು ಇಲ್ಲಿ ನಿರ್ವಹಿಸಿದ್ದಾರೆ. ಅಡ್ವಾನ್ಸ್ ಟೆಕ್ನಾಲಜಿ ಇರುವ ಕ್ಯಾಮೆರಾಗಳನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗಿದ್ದು, ದೊಡ್ಡ ಸೆಟ್ ಗಳನ್ನು ನಿರ್ಮಾಣ ಮಾಡಿ ಅದ್ದೂರಿಯಾಗಿ ಸಿನಿಮಾವನ್ನು ಸೆರೆ ಹಿಡಿಯಲಾಗಿದೆ ಎನ್ನುತ್ತಾರೆ ಚಿತ್ರದ ನಿರ್ದೇಶಕರು.

ಡಿ ಕೆ ಎಸ್ ಸ್ಟುಡಿಯೋ, ಕೋಟಾ ಫಿಲಂ ಫ್ಯಾಕ್ಟರಿ ಪ್ರೊಡಕ್ಷನ್ ಹೌಸ್ ನಡಿ ಸಿನಿಮಾ ನಿರ್ಮಾಣವಾಗಿದ್ದು, ರಣ್ವಿತ್ ಶಿವಕುಮಾರ್, ಅಭಿಷೇಕ್ ಕೋಟ ಇಬ್ಬರು ನಿರ್ಮಾಪಕರು ಬಂಡವಾಳ ಹೂಡಿದ್ದಾರೆ. ವಿಜೇತ್ ಚಂದ್ರ ಸಂಕಲನ, ಉದಯ್ ಲೀಲಾ ಕ್ಯಾಮೆರಾ ವರ್ಕ್, ಸೂರಜ್ ಜೋಯಿಸ್ ಸಂಗೀತ ನಿರ್ದೇಶನ, ರಿತ್ವಿಕ್ ಮುರಳಿಧರ್ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು