logo
ಕನ್ನಡ ಸುದ್ದಿ  /  ಮನರಂಜನೆ  /  Jayatheertha On Kaiva Movie: ಫಾರೆನ್ಸಿಕ್‌ ಡಿಪಾರ್ಟ್ಮೆಂಟ್‌ ಟೇಬಲ್‌ ಮೇಲಿತ್ತು 'ಕೈವ' ಕಥೆ; ನಿರ್ದೇಶಕ ಜಯತೀರ್ಥ ಹೇಳಿಕೊಂಡಿದ್ದಿಷ್ಟು..

Jayatheertha on Kaiva Movie: ಫಾರೆನ್ಸಿಕ್‌ ಡಿಪಾರ್ಟ್ಮೆಂಟ್‌ ಟೇಬಲ್‌ ಮೇಲಿತ್ತು 'ಕೈವ' ಕಥೆ; ನಿರ್ದೇಶಕ ಜಯತೀರ್ಥ ಹೇಳಿಕೊಂಡಿದ್ದಿಷ್ಟು..

Sep 08, 2022 05:15 PM IST

google News

ಫಾರೆನ್ಸಿಕ್‌ ಡಿಪಾರ್ಟ್ಮೆಂಟ್‌ ಟೇಬಲ್‌ ಮೇಲಿತ್ತು 'ಕೈವ' ಕಥೆ; ನಿರ್ದೇಶಕ ಜಯತೀರ್ಥ ಹೇಳಿಕೊಂಡಿದ್ದಿಷ್ಟು..

    • 1983ರ ಸೆಪ್ಟೆಂಬರ್ 13ರ ಮಧ್ಯಾಹ್ನ 3.20ಕ್ಕೆ ಒಂದು ದುರಂತ ನಡೆದಿತ್ತು. ಆಗ ಇಡೀ ಬೆಂಗಳೂರು ಬೆಚ್ಚಿ ಬಿದ್ದಿತ್ತು. ಆದರೆ ಕೈವ ಬಂದೇ ಬರುತ್ತಾನೆ ಎಂದು ಅವಳು ಕಾದಿದ್ದಳು. ಸತ್ಯಘಟನೆ.. ಪ್ರೇಮಕಥೆ..
ಫಾರೆನ್ಸಿಕ್‌ ಡಿಪಾರ್ಟ್ಮೆಂಟ್‌ ಟೇಬಲ್‌ ಮೇಲಿತ್ತು 'ಕೈವ' ಕಥೆ; ನಿರ್ದೇಶಕ ಜಯತೀರ್ಥ ಹೇಳಿಕೊಂಡಿದ್ದಿಷ್ಟು..
ಫಾರೆನ್ಸಿಕ್‌ ಡಿಪಾರ್ಟ್ಮೆಂಟ್‌ ಟೇಬಲ್‌ ಮೇಲಿತ್ತು 'ಕೈವ' ಕಥೆ; ನಿರ್ದೇಶಕ ಜಯತೀರ್ಥ ಹೇಳಿಕೊಂಡಿದ್ದಿಷ್ಟು.. (Twitter)

ಬೆಂಗಳೂರು: ಸ್ಯಾಂಡಲ್‌ವುಡ್‌ ಕಂಡ ಸೂಕ್ಷ್ಮಸಂವೇದಿ ನಿರ್ದೇಶಕರಲ್ಲಿ ಜಯತೀರ್ಥ ಸಹ ಕಾಣಸಿಗುತ್ತಾರೆ. ಈವರೆಗೂ ಅವರ ಸಿನಿಮಾ ಪ್ರಯತ್ನಗಳು ಒಂದಕ್ಕಿಂತ ಒಂದು ಹೊಸದು. ಇದೀಗ ಅದೇ ಪಟ್ಟಿಗೆ ಸೇರುತ್ತಿದೆ 'ಕೈವ' ಸಿನಿಮಾ. ಈ ಚಿತ್ರದಲ್ಲಿ ಧನ್‌ವೀರ್‌ ಗೌಡ ನಾಯಕನಾಗಿ ನಟಿಸಿದ್ದಾರೆ. ಅವರ ಬರ್ತ್‌ಡೇ ಪ್ರಯುಕ್ತ ಈ ಚಿತ್ರದ ನಾಯಕ ಫಸ್ಟ್‌ ಲುಕ್‌ ಬಿಡುಗಡೆಯಾಗಿದ್ದು, ಹೊಸ ಗೆಟಪ್‌ನಲ್ಲಿ ಎದುರಾಗಿದ್ದಾರೆ ಧನ್‌ವೀರ್‌. ಇದೇ ಸಿನಿಮಾದ ಬಗ್ಗೆ ನಿರ್ದೇಶಕ ಜಯತೀರ್ಥ Hindustan Times kannadaದ ಜತೆಗೆ ಮಾತನಾಡಿದ್ದಾರೆ.

ಇದೊಂದು ಪಿರಿಯಾಡಿಕ್‌ ಸಿನಿಮಾ...

1983ರ ಸೆಪ್ಟೆಂಬರ್ 13ರ ಮಧ್ಯಾಹ್ನ 3.20ಕ್ಕೆ ಒಂದು ದುರಂತ ನಡೆದಿತ್ತು. ಆಗ ಇಡೀ ಬೆಂಗಳೂರು ಬೆಚ್ಚಿ ಬಿದ್ದಿತ್ತು. ಆದರೆ ಕೈವ ಬಂದೇ ಬರುತ್ತಾನೆ ಎಂದು ಅವಳು ಕಾದಿದ್ದಳು. ಸತ್ಯಘಟನೆ.. ಪ್ರೇಮಕಥೆ.. ಮಾಸಿಗೆ ಮಾಸ್... ಕ್ಲಾಸಿಗೆ ಕ್ಲಾಸ್..' ಸೋಷಿಯಲ್‌ ಮೀಡಿಯಾದಲ್ಲಿ ಹೀಗೊಂದು ಸಣ್ಣ ಸುಳಿವು ನೀಡಿದ್ದ ನಿರ್ದೇಶಕರು ಇದೀಗ ಈ ಸಿನಿಮಾದ ವಿಶೇಷತೆ ಬಗ್ಗೆ ಮಾತನಾಡಿದ್ದಾರೆ. "1983ರಲ್ಲಿ ಬೆಂಗಳೂರಿನಲ್ಲಿಯೇ ನಡೆದ ನೈಜ ಘಟನೆ ಇದು. ಒಂದಷ್ಟು ಬದಲಾವಣೆ ಮಾಡಿಕೊಂಡು, ಆ ವ್ಯಕ್ತಿಯ ವೈಯಕ್ತಿಕ ಬದುಕಿಗೆ ಎಲ್ಲಿಯೂ ಚ್ಯುತಿ ಬರದಂತೆ, ಸಿನಿಮಾ ರೂಪಕ್ಕೆ ಬದಲಾವಣೆ ಮಾಡಿಕೊಂಡು ಸಿನಿಮಾ ಕಥೆಯನ್ನು ಹೇಳಲು ಹೊರಟಿದ್ದೇವೆ" ಎನ್ನುತ್ತಾರೆ.

"ಇಲ್ಲಿ ಲವ್‌ ಇದೆ. ಕ್ರೈಂ ಸ್ಟೋರಿ ಇದೆ. ಇವೆರಡು ಮಿಳಿತ ಇಲ್ಲಾಗಿದೆ. ನನ್ನ ಇಲ್ಲಿಯವರೆಗಿನ ಸಿನಿಮಾಗಳಿಗೆ ಹೋಲಿಕೆ ಮಾಡಿದರೆ, ಈ ಥರದ ಒಂದು ಪ್ರಯತ್ನ ಆಗಿರಲಿಲ್ಲ. ಹೊಸ ಥರದ ಕ್ರೈಂ ಇಲ್ಲಿ ಅನಾವರಣವಾಗಲಿದೆ. ಕ್ರೈಂನ ವೈಭವೀಕರಣವಲ್ಲ, ಕ್ರೈಂನ ನೈಜತೆ ಈ ಸಿನಿಮಾದಲ್ಲಿರಲಿದೆ" ಎನ್ನುತ್ತಾರೆ ಜಯತೀರ್ಥ.

ಫಾರೆನ್ಸಿಕ್‌ ಡಿಪಾರ್ಟ್ಮೆಂಟ್‌ ಟೇಬಲ್‌ ಮೇಲಿತ್ತು ಈ ಕಥೆ

"ಬೆಲ್‌ಬಾಟಂ ಸಿನಿಮಾದ ಶೂಟಿಂಗ್‌ ಸಂದರ್ಭದಲ್ಲಿ ಸಿಕ್ಕ ಕಥೆಯಿದು. ಬೆಲ್‌ಬಾಟಂ ಚಿತ್ರದ ಫಾರೆನ್ಸಿಕ್‌ ಶೂಟಿಂಗ್‌ ಸಲುವಾಗಿ, ನಾನು ಬೆಂಗಳೂರಿನಲ್ಲಿನ ಫಾರೆನ್ಸಿಕ್‌ ಡಿಪಾರ್ಟ್ಮೆಂಟ್‌ಗೆ ಭೇಟಿ ಕೊಟ್ಟಿದ್ದೆ. ಆ ಬಗ್ಗೆ ಮಾಹಿತಿಯ ಜೊತೆಗೆ ಅಲ್ಲಿನ ಟೇಬಲ್‌ ಮೇಲೆ ಈ ಮರ್ಡರ್‌ ಹಿಸ್ಟರಿ ಕಥೆ ಇತ್ತು. ಅದನ್ನು ನೋಡಿ ತುಂಬ ಥ್ರಿಲ್‌ ಆದೆ. ಓ ಓಹ್..‌ ಇಲ್ಲೊಂದು ಕಥೆ ಅಡಗಿದೆಯಲ್ಲ ಎಂದು ಅರಿತೆ.. ಆ ಪಾಯಿಂಟ್‌ ಎತ್ತಿಕೊಂಡೆ.. ಇದೀಗ ಅದೇ ಸಿನಿಮಾ ರೂಪದಲ್ಲಿ ಸಿದ್ಧವಾಗಿದೆ.

ಶೂಟಿಂಗ್‌ ಮುಕ್ತಾಯ..

"ಚಿತ್ರದ ಬಹುಪಾಲು ಶೂಟಿಂಗ್‌ ಮುಕ್ತಾಯವಾಗಿದೆ. ಇನ್ನೇನು ನಾಲ್ಕು ದಿನದ ಶೂಟಿಂಗ್‌ ಮುಗಿದರೆ ಸಿನಿಮಾ ಮುಗಿದಂತೆ. ಇತ್ತ ಇದರ ಜತೆಗೆ ಪೋಸ್ಟ್‌ ಪ್ರೊಡಕ್ಷನ್‌ ಕೆಲಸವೂ ಶುರುವಾಗಿದೆ. ಡಿಸೆಂಬರ್‌ ಅಥವಾ ಜನವರಿಯಲ್ಲಿ ಸಿನಿಮಾ ಬಿಡುಗಡೆ ಮಾಡುವ ಪ್ಲಾನ್‌ ಇದೆ" ಎನ್ನುತ್ತಾರೆ ಜಯತೀರ್ಥ.

ನಿರ್ದೇಶಕರು ದಂಡು...

ಧನ್‌ವೀರ್‌ ಗೌಡ ನಾಯಕನಾಗಿ ಕಾಣಿಸಿಕೊಂಡರೆ, ಜೊತೆಜೊತೆಯಲಿ ಧಾರಾವಾಹಿ ಖ್ಯಾತಿಯ ಮೇಘಾ ಶೆಟ್ಟಿ ನಾಯಕಿ. ಇವರಷ್ಟೇ ಅಲ್ಲದೆ ನಿರ್ದೇಶಕರ ದೊಡ್ಡ ಬಳಗವೇ ಈ ಸಿನಿಮಾದಲ್ಲಿ ನಟಿಸಿದೆ, ದಿನಕರ್‌ ತೂಗುದೀಪ್‌, ಗಿರಿರಾಜ್‌, ರಾಘು ಶಿವಮೊಗ್ಗ, ರಮೇಶ್‌ ಇಂದಿರಾ ಸೇರಿ ನಂದಕುಮಾರ್‌, ಉಗ್ರಂ ಮಂಜು, ಶಿವಾಜಿ ಜಾಧವ್‌ ಸಹ ನಟಿಸಿದ್ದಾರೆ. ಅಜನೀಶ್‌ ಲೋಕನಾಥ್‌ ಮ್ಯೂಸಿಕ್‌, ಶ್ವೇತ ಪ್ರಿಯ ಹೆಸರಿನ ಲೇಡಿ ಛಾಯಾಗ್ರಾಹಕಿಯೂ ಈ ಸಿನಿಮಾದಲ್ಲಿ ಪರಿಚಿತಗೊಳ್ಳಲಿದ್ದಾರೆ..

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ