logo
ಕನ್ನಡ ಸುದ್ದಿ  /  ಮನರಂಜನೆ  /  ಕನ್ನಡದ ಕಂಗುವಾ ಆವೃತ್ತಿಗೆ ಸಂಭಾಷಣೆ, ಲಿರಿಕ್ಸ್ ಬರೆದ ವರದರಾಜ್‌ ಚಿಕ್ಕಬಳ್ಳಾಪುರ; ಸಾಲು ಸಾಲು ಹಿಟ್ ಕೊಟ್ಟ ಡಬ್ಬಿಂಗ್ ಬರಹಗಾರ

ಕನ್ನಡದ ಕಂಗುವಾ ಆವೃತ್ತಿಗೆ ಸಂಭಾಷಣೆ, ಲಿರಿಕ್ಸ್ ಬರೆದ ವರದರಾಜ್‌ ಚಿಕ್ಕಬಳ್ಳಾಪುರ; ಸಾಲು ಸಾಲು ಹಿಟ್ ಕೊಟ್ಟ ಡಬ್ಬಿಂಗ್ ಬರಹಗಾರ

Suma Gaonkar HT Kannada

Nov 13, 2024 05:03 PM IST

google News

ಕನ್ನಡದ ಕಂಗುವಾ ಆವೃತ್ತಿಗೆ ಸಂಭಾಷಣೆ, ಲಿರಿಕ್ಸ್ ಬರೆದ ವರದರಾಜ್‌ ಚಿಕ್ಕಬಳ್ಳಾಪುರ

    • ಪರಭಾಷೆಗಳಿಂದ ಕನ್ನಡಕ್ಕೆ ಡಬ್ ಆಗಿ ಬರುವ ಚಿತ್ರಗಳಲ್ಲಿ ಒಂದು ಹೆಸರು ಬಹಳ ಕಾಮನ್ ಆಗಿರುತ್ತದೆ. ಅದು ವರದರಾಜ್ ಚಿಕ್ಕಬಳ್ಳಾಪುರ. ನಟ ಸೂರ್ಯ ಅಭಿನಯದ 'ಕಂಗುವಾ' ಸಿನಿಮಾ ಇದೇ ವಾರ ನವೆಂಬರ್ 14ರದು ಬಿಡುಗಡೆಯಾಗಲಿದೆ
ಕನ್ನಡದ ಕಂಗುವಾ ಆವೃತ್ತಿಗೆ ಸಂಭಾಷಣೆ, ಲಿರಿಕ್ಸ್ ಬರೆದ ವರದರಾಜ್‌ ಚಿಕ್ಕಬಳ್ಳಾಪುರ
ಕನ್ನಡದ ಕಂಗುವಾ ಆವೃತ್ತಿಗೆ ಸಂಭಾಷಣೆ, ಲಿರಿಕ್ಸ್ ಬರೆದ ವರದರಾಜ್‌ ಚಿಕ್ಕಬಳ್ಳಾಪುರ

ನಟ ಸೂರ್ಯ ಅಭಿನಯದ 'ಕಂಗುವಾ' ಸಿನಿಮಾ ಇದೇ ವಾರ ನವೆಂಬರ್ 14ರಂದು ಬಿಡುಗಡೆಯಾಗಲಿದೆ. ಈ ಸಿನಿಮಾ ಬಿಗ್‌ ಬಜೆಟ್‌ ಸಿನಿಮಾ ಆಗಿದ್ದು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಕನ್ನಡದಲ್ಲೂ ನೀವು ಕಂಗುವಾ ಸಿನಿಮಾವನ್ನು ನೋಡಬಹುದು. ಪರಭಾಷೆಗಳಿಂದ ಕನ್ನಡಕ್ಕೆ ಡಬ್ ಆಗಿ ಬರುವ ಚಿತ್ರಗಳಲ್ಲಿ ಒಂದು ಹೆಸರು ಬಹಳ ಕಾಮನ್ ಆಗಿರುತ್ತದೆ. ಅದು ವರದರಾಜ್ ಚಿಕ್ಕಬಳ್ಳಾಪುರ. ಇವರು  ‘ಕಂಗುವಾ’ ಸಿನಿಮಾಗೆ ಕನ್ನಡದ ಸಂಭಾಷಣೆ ಮತ್ತು ಹಾಡನ್ನು ಬರೆದಿದ್ದು ಈಗಾಗಲೇ ಇವರ ರಚನೆ ಸಾಕಷ್ಟು ಸದ್ದು ಮಾಡುತ್ತಿದೆ.

ಮೂಲತಃ ಚಿಕ್ಕಬಳ್ಳಾಪುರದವರಾದ ವರದರಾಜ್ , ಬೆಂಗಳೂರಿನ ಆರ್ .ಸಿ. ಕಾಲೇಜಿನಲ್ಲಿ ಓದಿದವರು. ಬಿ.ಬಿ.ಎಂ, ಎಂ.ಬಿ.ಎ ಪದವೀಧರರು. ಚಿಕ್ಕಂದಿನಿಂದಲೂ ಕವನ, ಕಥೆಗಳನ್ನು ಬರೆಯುತ್ತಿದ್ದ ಅವರು, ಕಾಲೇಜಿನಲ್ಲಿ ತಮ್ಮದೇ ರಚನೆಯ ನಾಟಕಗಳನ್ನೂ ಆಡಿಸಿದ್ದಾರೆ. ಗಡಿ ಭಾಗದವರದ್ದಾರಿಂದ ಕನ್ನಡದ ಜೊತೆಗೆ ತೆಲುಗಿನಲ್ಲೂ ಹಿಡಿತ ಚೆನ್ನಾಗಿತ್ತು. ಕನ್ನಡ ಸಾಹಿತ್ಯವಲ್ಲದೆ, ತೆಲುಗು ಸಾಹಿತ್ಯವನ್ನೂ ಚೆನ್ನಾಗಿ ಓದಿ ಅರ್ಥ ಮಾಡಿಕೊಂಡವರಾಗಿದ್ದಾರೆ.

ಎಂಟು ಭಾಷೆಗಳಲ್ಲಿ ಬರ್ತಿದೆ ಕಂಗುವ

ನವೆಂಬರ್ 14 ರಂದು ತಮಿಳುನಾಡಿನಲ್ಲಿ ಕಂಗುವ ಸೋಲೋ ಬಿಡುಗಡೆಯಾಗಲಿ ಎಂದು ಚಿತ್ರತಂಡ ಆಶಿಸಿತ್ತು. ಅದರಂತೆ ಈಗ ನವೆಂಬರ್ 14ರಂದೇ ಈ ಚಿತ್ರ ತೆರೆಕಾಣುತ್ತಿದೆ. ಚಲನಚಿತ್ರವು ಪ್ರಪಂಚದಾದ್ಯಂತ 11,000 ಕ್ಕೂ ಹೆಚ್ಚು ಪರದೆಗಳಲ್ಲಿ ಪ್ರದರ್ಶನಗೊಳ್ಳಲಿದೆ. ತಮಿಳು, ಮಲಯಾಳಂ, ತೆಲುಗು, ಕನ್ನಡ, ಹಿಂದಿ, ಇಂಗ್ಲಿಷ್, ಫ್ರೆಂಚ್ ಮತ್ತು ಸ್ಪ್ಯಾನಿಷ್ ಸೇರಿದಂತೆ ಎಂಟು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ವರದರಾಜ್ ಅವರು ತೆಲುಗು, ತಮಿಳು ಮಲಯಾಳಂ ಮತ್ತು ಹಿಂದಿಯಿಂದ ಕನ್ನಡಕ್ಕೆ ಡಬ್ ಆದ 'ಮಾಸ್ಟರ್ ', 'ಗೀತ ಗೋವಿಂದಂ', 'RRR', 'ಮಗಧೀರ', 'ಬೃಂದಾವನಂ', 'ಮಿಥುನಂ', 'ವಡ ಚೆನ್ನೈ', 'ಇಮೈಕ್ಕ ನೋಡಿಗಳ್ ', 'ಕಾತುವಾಕ್ಕುಲ ರೆಂಡು ಕಾದಲ್', 'ಬೀಸ್ಟ್ ', 'ವಿಕ್ರಮ್ ', 'ಪೊನ್ನಿಯನ್ ಸೆಲ್ವನ್ 1', 'ಪಾಲಾರ್' 'ಪುಷ್ಪ' ಮುಂತಾದ ಬೇರೆ ಭಾಷೆಯಿಂದ ಕನ್ನಡಕ್ಕೆ ಡಬ್ ಆದ ಚಿತ್ರಗಳ ಜತೆಗೆ, ಕನ್ನಡದಿಂದ ಬೇರೆ ಭಾಷೆಗಳಿಗೆ ಡಬ್ ಆಗಿರುವ 'ಕೆಂಪೇಗೌಡ 2', 'ಪೊಗರು', 'ಕಿಸ್ ', 'ವಂಚನ' 'ರೆಮೋ', 'ಉಗ್ರಾವತಾರಂ', ' ಅನಗನಗಾ ಓಕ ಅಡವಿ ', 'ಕಬ್ಜ' ಮತ್ತು 'ಟೆರರ್ ' ಮುಂತಾದ ಚಿತ್ರಗಳಿಗೆ ವರದರಾಜು ಸಾಹಿತ್ಯ ಮತ್ತು ಸಂಭಾಷಣೆ ರಚಿಸಿದ್ದಾರೆ. ವರದರಾಜು ಬರೆದಿರುವ 'ಮಾಸ್ಟರ್ ' ಚಿತ್ರದ 'ಮನಸೇ ಕರಗದಾ ಲೋಕವೀ ಲೋಕವು', 'ಪುಷ್ಪ' ಚಿತ್ರದಲ್ಲಿ 'ಶ್ರೀವಲ್ಲಿ', 'ಸಾಮಿ ಸಾಮಿ', 'ಹೂಂ ಅಂತೀಯ ಮಾಮ ಉಹೂಂ ಅಂತೀಯ ಮಾಮ', 'RRR' ಚಿತ್ರದ 'ಹಳ್ಳಿನಾಟು', 'ದೋಸ್ತಿ', 'ಜನನಿ', 'ಕೊಮರಂ ಭೀಮ್ ಉಧೋ' ಮುಂತಾದ ಹಾಡುಗಳು ಸಾಕಷ್ಟು ಯಶಸ್ವಿಯಾಗಿವೆ.

ಕನ್ನಡದಲ್ಲಿ ಕಂಗುವಾ

ಕನ್ನಡದಲ್ಲಿ ಕಂಗುವಾ ಸಿನಿಮಾ ಹಕ್ಕುಗಳನ್ನು ಕೆವಿಎನ್‌ ಪ್ರೊಡಕ್ಷನ್ಸ್‌ ಖರೀದಿಸಿದೆ. ಚಿತ್ರದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ದಕ್ಷಿಣದಲ್ಲಿ ಅಮೆಜಾನ್‌ ಪ್ರೈಂ ಪಡೆದುಕೊಂಡಿದೆ. ಕಂಗುವಾ ಕೂಡಾ 2 ಭಾಗಗಳಲ್ಲಿ ತಯಾರಾಗುತ್ತಿದ್ದು ಎರಡನೇ ಭಾಗವು 2027ರ ಅಂದಾಜು ಮೇ ತಿಂಗಳಿನಲ್ಲಿ ತೆರೆ ಕಾಣಲಿದೆ. ಇದನ್ನು ಹೊರತುಪಡಿಸಿ ನಟ ಸೂರ್ಯ, ಕಾರ್ತಿಕ್‌ ಸುಬ್ಬರಾಜು ನಿರ್ದೇಶನದ ಮತ್ತೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಕಂಗುವಾ ಫ್ಯಾಂಟಸಿ ಆಕ್ಷನ್‌ ಸಿನಿಮಾವಾಗಿದ್ದು ಚಿತ್ರವನ್ನು ಸ್ಟುಡಿಯೋ ಗ್ರೀನ್‌, ಯುವಿ ಕ್ರಿಯೇಷನ್ಸ್‌ ಬ್ಯಾನರ್‌ ಅಡಿ ನಿರ್ಮಾಣವಾಗಿದೆ. ಈ ಚಿತ್ರಕ್ಕೆ ಸಿರುತೈ ಶಿವ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ದೇವಿ ಶ್ರೀ ಪ್ರಸಾದ್‌ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಸೂರ್ಯ, ಬಾಬಿ ಡಿಯೋಲ್‌, ದಿಶಾ ಪಟಾನಿ, ಕಿಚ್ಚ ಸುದೀಪ್‌, ಜಗಪತಿ ಬಾಬು, ಯೋಗಿ ಬಾಬು ಹಾಗೂ ಇನ್ನಿತರರು ನಟಿಸಿದ್ದಾರೆ.

ಇಲ್ಲಿದೆ ನೋಡಿ ವರದರಾಜ್ ಬರೆದ ಹಾಡು

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ