logo
ಕನ್ನಡ ಸುದ್ದಿ  /  ಮನರಂಜನೆ  /  ಟಾಕ್‌ಬ್ಯಾಕ್ ಇಲ್ಲದೆ ಹತ್ತು ತಾಸು ಶೋ ಮಾಡ್ತೀನಿ; ನೆಗೆಟಿವ್‌ ಕಾಮೆಂಟ್ ಮಾಡುವವರಿಗೆ ಅನುಶ್ರೀ ಖಡಕ್ ಉತ್ತರ

ಟಾಕ್‌ಬ್ಯಾಕ್ ಇಲ್ಲದೆ ಹತ್ತು ತಾಸು ಶೋ ಮಾಡ್ತೀನಿ; ನೆಗೆಟಿವ್‌ ಕಾಮೆಂಟ್ ಮಾಡುವವರಿಗೆ ಅನುಶ್ರೀ ಖಡಕ್ ಉತ್ತರ

Suma Gaonkar HT Kannada

Oct 18, 2024 08:34 PM IST

google News

ನೆಗಟಿವ್‌ ಕಾಮೆಂಟ್ ಮಾಡುವವರಿಗೆ ಅನುಶ್ರೀ ಖಡಕ್ ಉತ್ತರ

    • Anchor Anushree: ಇನ್ನು ಎಷ್ಟು ವರ್ಷ ನೀವೇ ನಿರೂಪಣೆ ಮಾಡ್ತೀರಾ? ಎಂದು ಪ್ರಶ್ನೆ ಮಾಡುವವರಿಗೆ ಅನುಶ್ರೀ ಉತ್ತರ ನೀಡಿದ್ದಾರೆ. ಗೆದ್ದಿರುವವರಿಗೇ ಬದುಕು ತುಂಬಾ ಕಷ್ಟ. ಹೆಸರು ಮಾಡೋದಲ್ಲ, ಹೆಸರನ್ನು ಉಳಿಸಿಕೊಳ್ಳೋದು ಮುಖ್ಯ ಎಂದಿದ್ದಾರೆ. 
ನೆಗಟಿವ್‌ ಕಾಮೆಂಟ್ ಮಾಡುವವರಿಗೆ ಅನುಶ್ರೀ ಖಡಕ್ ಉತ್ತರ
ನೆಗಟಿವ್‌ ಕಾಮೆಂಟ್ ಮಾಡುವವರಿಗೆ ಅನುಶ್ರೀ ಖಡಕ್ ಉತ್ತರ

ಕನ್ನಡ ಕಿರುತೆರೆ ಜನಪ್ರಿಯ ನಿರೂಪಕಿ ಅನುಶ್ರೀ ಅವರಿಗೆ ಹಲವಾರು ಜನ ಕೇಳುವ ಒಂದು ಸಾಮಾನ್ಯ ಪ್ರಶ್ನೆ ಎಂದರೆ ಇನ್ನು ಎಷ್ಟು ವರ್ಷ ನೀವೇ ನಿರೂಪಣೆ ಮಾಡ್ತೀರಾ? ಹೊಸಬರಿಗೆ ಅವಕಾಶ ಕೊಡಿ ಎಂದು ಹೀಗೆ ಕಾಮೆಂಟ್‌ ಮಾಡುವ ಜನರಿಗೆ ಅನುಶ್ರೀ ಉತ್ತರ ನೀಡಿದ್ದಾರೆ. ಇವರು ಈ ಪ್ರಶ್ನೆಗೆ ಉತ್ತರ ನೀಡಬೇಕಾದ ಒಂದು ಸಂದರ್ಭ ಬರುತ್ತದೆ. ಸಂದರ್ಶನ ನೀಡುತ್ತಿರುವ ಸಂದರ್ಭದಲ್ಲಿ ನಯನಾ ಅವರು ಅನುಶ್ರೀ ಬಳಿ ಈ ಪ್ರಶ್ನೆ ಕೇಳುತ್ತಾರೆ. ಆಗ ಅನುಶ್ರೀ ಇದು ಎಲ್ಲರೂ ಯಾವಾಗಲೂ ಕೇಳುವ ಪ್ರಶ್ನೆ ಇದಕ್ಕೆ ನಾನು ಉತ್ತರ ಕೊಡಲೇಬೇಕು ಎಂದು ಹೇಳುತ್ತಾರೆ. ನಂತರ ಅದಕ್ಕೆ ತಕ್ಕನಾದ ಉತ್ತರ ನೀಡುತ್ತಾರೆ.

ಬಹಳಷ್ಟು ವರ್ಷಗಳಿಂದ ಜೀ ಕನ್ನಡದ ಎಲ್ಲ ರಿಯಾಲಿಟಿ ಷೋಗಳಿಗೆ ನಿರೂಪಣೆ ಮಾಡಿಕೊಂಡು ಬರುತ್ತಿರುವ ಅನುಶ್ರೀ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಒಂದು ಪ್ರಶ್ನೆ ಕೇಳಲಾಗುತ್ತದೆ. ಇನ್ನು ಕೆಲವರು ಕೆಟ್ಟದಾಗಿ ನೋಡಿದ್ದೇ ಮುಖ ಎಷ್ಟು ದಿನ ಅಂತ ನೋಡೋದು, ಇವಳು ಯಾವಾಗ ಈ ನಿರೂಪಣೆ ಬಿಡ್ತಾಳೆ ಎಂದೆಲ್ಲ ಕಾಮೆಂಟ್ ಮಾಡಿತ್ತಿದ್ದರು. ಅದು ಅನುಶ್ರೀ ಅವರ ಗಮನಕ್ಕೆ ಬಂದಿದ್ದರೂ ಉತ್ತರ ಕೊಡುವ ಸಂದರ್ಭ ಬಂದಿರಲಿಲ್ಲ ಎಂದಿದ್ದಾರೆ. ಅವರು ನೀಡಿದ ಉತ್ತರ ಹೀಗಿತ್ತು.

"ಅವರವರ ಟ್ಯಾಲೆಂಟಿನಿಂದ ಕೆಲಸ ಪಡೆಯುತ್ತಾರೆ. ನಾನು ಕೆಲಸ ಮಾಡ್ತೀನಿ. ನನ್ನ ಸಾಮರ್ಥ್ಯದ ಮೇಲೆ ನಾನು ಕೆಲಸ ಮಾಡ್ತೀನಿ. ನಿಮಗೆ ಇವಳನ್ನು ಬಿಟ್ರೆ ಬೇರೆ ಆ್ಯಂಕರೇ ಇಲ್ವಾ? ಇವಳೊಬ್ಳೆನಾ ನಿಮಗೆ ಸಿಗೋದು? ಈ ರೀತಿ ಪ್ರಶ್ನೆಗಳನ್ನೆಲ್ಲ ನನ್ನೆದುರಲ್ಲೇ ಕೇಳ್ತಾರೆ. ನನಗೆ ಟಾಕ್ ಬ್ಯಾಕ್‌ ನೀಡಬೇಡಿ, ನನಗೆ ಸ್ಕ್ರಿಪ್ಟ್‌ ಕೊಡಬೇಡಿ, ಯಾರ್‌ ಬರ್ತಾರೆ ಏನೂ ಹೇಳ್ಬೇಡಿ ಆದ್ರೂ ನಾನು ಹತ್ತು ತಾಸು ಶೋ ಮಾಡ್ತೀನಿ" ಎಂದು ಅನುಶ್ರೀ ಹೇಳುತ್ತಾರೆ.

“ಇದು ಗೊತ್ತಿರೋದ್ರಿಂದ ಚಾನೆಲ್‌ಅವರು ಅವಳು ಮಾಡ್ತಾಳೆ ಗುರು ಎಂದು ಹಾಕ್ಕೊಳ್ತಾರೆ. ಮನೆಯಲ್ಲಿ ಕುಳಿತುಕೊಂಡು ಕಾರ್ಯಕ್ರಮ ನೋಡುವವರಿಗೆ ನಾನು ಏನು ಎನ್ನುವುದು ಗೊತ್ತಿದೆ, ಅವರು ಎಂಜಾಯ್​ ಮಾಡುತ್ತಾರೆ. ಆದರೆ ಈ ಮೊಬೈಲ್​ನಲ್ಲಿ ಮೆಸೇಜ್​ ಮಾಡುವವರಿಗೆ ಗೊತ್ತಿರಲ್ಲ. ಯಾಕೆಂದರೆ ಅವರಿಗೆ ಮಾಡೋಕೆ ಬೇರೆ ಕೆಲಸ ಇರೋದಿಲ್ಲ” ಎಂದು ಹೇಳಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ

ಕರ್ನಾಟಕದಲ್ಲಿ ನಿಮಗಿಂತ ಒಳ್ಳೆಯ ಟ್ಯಾಲೆಂಟೆಡ್ ಆಂಕರ್ ಇಲ್ಲ ಎಂದು ಜನ ಕಾಮೆಂಟ್ ಮಾಡಿದ್ದಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ