ಟಿಆರ್‌ಪಿಯಲ್ಲಿ ಮತ್ತೆ ತನ್ನ ಗತವೈಭವಕ್ಕೆ ಮರಳಿದ ಪುಟ್ಟಕ್ಕನ ಮಕ್ಕಳು ಧಾರಾವಾಹಿ; ಬಿಗ್ ಬಾಸ್ ಟಿಆರ್‌ಪಿ ಹೇಗಿದೆ?
Oct 24, 2024 03:51 PM IST
ಟಿಆರ್‌ಪಿಯಲ್ಲಿ ಮತ್ತೆ ತನ್ನ ಗತವೈಭವಕ್ಕೆ ಮರಳಿದ ಪುಟ್ಟಕ್ಕನ ಮಕ್ಕಳು ಧಾರಾವಾಹಿ; ಬಿಗ್ ಬಾಸ್ ಟಿಆರ್‌ಪಿ ಹೇಗಿದೆ?
- Kannada Serial TRP: 42ನೇ ವಾರದ ಕಿರುತೆರೆಯ ಟಿಆರ್‌ಪಿಯ ಅಂಕಿ ಅಂಶ ಹೊರಬಿದ್ದಿದೆ. ಆ ಪೈಕಿ ಈ ವಾರ ಟಾಪ್ 10ರಲ್ಲಿ ಜೀ ಕನ್ನಡದ ಸೀರಿಯಲ್‌ಗಳೇ ಮೇಲುಗೈ ಸಾಧಿಸಿವೆ. ಅದರಲ್ಲೂ ಎರಡು ವರ್ಷಗಳ ಕಾಲ ಟಾಪ್ ಸ್ಥಾನದಲ್ಲಿಯೇ ಮುಂದುವರಿದಿದ್ದ ಪುಟ್ಟಕ್ಕನ ಮಕ್ಕಳು, ಇದೀಗ ಮತ್ತೆ ಹಳೇ ಲಯಕ್ಕೆ ಮರಳಿದೆ.
Kannada Serial TRP: ಈ ವಾರದ ಕನ್ನಡ ಕಿರುತೆರೆಯಲ್ಲಿ ಒಂದಷ್ಟು ದಾಖಲೆಗಳಾಗಿವೆ. ಹಲವು ಸೀರಿಯಲ್‌ಗಳು ಅಚ್ಚರಿಯ ಮತ್ತು ಅನಿರೀಕ್ಷಿತ ಘಟನಾವಳಿಗಳನ್ನು ವೀಕ್ಷಕರ ಮುಂದಿಟ್ಟಿವೆ. ಅದರಲ್ಲೂ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಮತ್ತೆ ಹೊಸ ರೆಕಾರ್ಡ್ ತನ್ನದಾಗಿಸಿಕೊಂಡಿದೆ. ಈ ಮೊದಲು 7;30ಕ್ಕೆ ಪ್ರಸಾರ ಕಾಣುತ್ತಿದ್ದಾಗ ಟಾಪ್‌ನಲ್ಲಿದ್ದ ಪುಟ್ಟಕ್ಕ, 6:30ಕ್ಕೆ ಶಿಫ್ಟ್ ಆಗುತ್ತಿದ್ದಂತೆ, ಟಿಆರ್‌ಪಿಯಲ್ಲಿ ಕೊಂಚ ಮಂಕಾಗಿತ್ತು. ಆದರೆ, ಈಗ ಮತ್ತೆ ತನ್ನ ಹಳೇ ಗತವೈಭವಕ್ಕೆ ಈ ಧಾರಾವಾಹಿ ಮರಳಿದೆ. ಈ ವಾರ ಟಾಪ್ 1 ಸೀರಿಯಲ್ ಆಗಿ ಹೊರಹೊಮ್ಮಿದೆ.
42ನೇ ವಾರದ ಕಿರುತೆರೆಯ ಟಿಆರ್‌ಪಿಯ ಅಂಕಿ ಅಂಶ ಹೊರಬಿದ್ದಿದೆ. ಆ ಪೈಕಿ ಈ ವಾರ ಟಾಪ್ 10ರಲ್ಲಿ ಜೀ ಕನ್ನಡದ ಸೀರಿಯಲ್‌ಗಳೇ ಮೇಲುಗೈ ಸಾಧಿಸಿವೆ. ಅದರಲ್ಲೂ ಎರಡು ವರ್ಷಗಳ ಕಾಲ ಟಾಪ್ ಸ್ಥಾನದಲ್ಲಿಯೇ ಮುಂದುವರಿದಿದ್ದ ಪುಟ್ಟಕ್ಕನ ಮಕ್ಕಳು, ಪ್ರಸಾರದ ಸ್ಲಾಟ್ ಬದಲಾದ ಹಿನ್ನೆಲೆಯಲ್ಲಿ ಎರಡು ತಿಂಗಳಿಂದ ಅಗ್ರ ಸ್ಥಾನಕ್ಕೆ ಮರಳಿರಲಿಲ್ಲ. ಇದೀಗ ಕಂಟೆಂಟ್ ಈಸ್ ಕಿಂಗ್ ಎಂಬುದನ್ನು ಈ ಸೀರಿಯಲ್ ಮತ್ತೆ ಸಾಬೀತುಪಡಿಸಿದೆ. ಈ ವಾರ ದಾಖಲೆಯ 9.9 ಟಿಆರ್‌ಪಿ ಪಡೆದುಕೊಂಡು, ಮತ್ತೆ ಮೊದಲ ಸ್ಥಾನಕ್ಕೆ ಎಂಟ್ರಿಕೊಟ್ಟಿದೆ.
ಈ ಮೊದಲು ಮೊದಲ ಸ್ಥಾನದಲ್ಲಿಯೇ ಕಾಣಿಸಿಕೊಂಡಿದ್ದ ಜೀ ಕನ್ನಡದ ಲಕ್ಷ್ಮೀ ನಿವಾಸ ಸೀರಿಯಲ್ ಈ ವಾರ 9.0 ಟಿಆರ್‌ಪಿ ಮೂಲಕ ಎರಡನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಈ ಸೀರಿಯಲ್ ಸಹ ರ ಒಂದಷ್ಟು ಅಚ್ಚರಿಯ ಘಟನಾವಳಿಗೆ ಸಾಕ್ಷಿಯಾಗಿತ್ತು. ಅದೇ ರೀತಿ ಅಮೃತಧಾರೆ ಸೀರಿಯಲ್ ಸಹ ವೀಕ್ಷಕರನ್ನು ಸೆಳೆದಿತ್ತು. ಅದರಂತೆ ಈ ವಾರ 8.6 ಟಿಆರ್‌ಪಿ ಪಡೆಯುವ ಮೂಲಕ ಮೂರನೇ ಸ್ಥಾನದಲ್ಲಿದೆ. ಇತ್ತೀಚೆಗಷ್ಟೇ ಶುರುವಾಗಿರುವ ಅಣ್ಣಯ್ಯ ಸೀರಿಯಲ್ ಈ ವಾರ 8.3 ಟಿಆರ್‌ಪಿ ಪಡೆದುಕೊಂಡು ನಾಲ್ಕನೇ ಸ್ಥಾನದಲ್ಲಿದೆ.
ಜೀ ಕನ್ನಡದ ಮತ್ತಿಂದು ಸೀರಿಯಲ್ ಶ್ರಾವಣಿ ಸುಬ್ರಮಣ್ಯ ಈ ವಾರ 7.1 ಟಿಆರ್‌ಪಿ ಪಡೆದುಕೊಂದು ಐದನೇ ಸ್ಥಾನದಲ್ಲಿದೆ. ಅದೇ ರೀತಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಲಕ್ಷ್ಮೀ ಬಾರಮ್ಮ ಸೀರಿಯಲ್ ಟಾಪ್ ಸ್ಥಾನದಲ್ಲಿದೆ. ಈ ಸೀರಿಯಲ್ 7.0 ಟಿಆರ್‌ಪಿ ಒಡೆದು ಆರನೇ ಸ್ಥಾನದಲ್ಲಿದ್ದರೆ, ರಾಮಾಚಾರಿ ಸೀರಿಯಲ್ 6.9 ಟಿಆರ್‌ಪಿ ಪಡೆದುಕೊಂಡು ಏಳನೇ ಸ್ಥಾನದಲ್ಲಿದೆ. ಕಳೆದ ಎರಡು ವಾರಗಳ ಹಿಂದಷ್ಟೇ ಈ ಎರಡು ಸೀರಿಯಲ್‌ಗಳು ಟಾಪ್ 5ರಲ್ಲಿ ಕಂಡಿದ್ದವು.
ಸೀತಾ ರಾಮ ಸೀರಿಯಲ್‌ಗೆ ಕೊನೇ ಸ್ಥಾನ
ಅದೇ ರೀತಿ, ಭಾಗ್ಯಲಕ್ಷ್ಮೀ 6.2 ಟಿಆರ್‌ಪಿ ಪಡೆದು ಎಂಟನೇ ಸ್ಥಾನದಲ್ಲಿದ್ದರೆ, 9ರಲ್ಲಿ ನಿನಗಾಗಿ ಸೀರಿಯಲ್ 5.7 ಟಿಆರ್‌ಪಿ ಗಿಟ್ಟಿಸಿಕೊಂಡಿದೆ. ಇತ್ತ ಅಚ್ಚರಿಯ ಘಟನಾವಳಿಗಳಿಗೆ ಸಾಕ್ಷಿಯಾಗುತ್ತಿರುವ ಜೀ ಕನ್ನಡದ ಸೀತಾ ರಾಮ ಸೀರಿಯಲ್ ಟಾಪ್ 10ರಲ್ಲಿ ಕೊನೇ ಸ್ಥಾನದಲ್ಲಿದೆ. ಅದಕ್ಕೆ ಕಾರಣ; ಬಿಗ್ ಬಾಸ್. ಹಾಗಾದರೆ ಈ ವಾರ ಬಿಗ್‌ಬಾಸ್ ಕನ್ನಡ 11ಕ್ಕೆ ಸಿಕ್ಕ ಟಿಆರ್‌ಪಿ ಎಷ್ಟು? ಇಲ್ಲಿದೆ ಅದರ ವಿವರ.
ಬಿಗ್ ಬಾಸ್‌ಗೆ ಸಿಕ್ಕ ಟಿಆರ್‌ಪಿ ಎಷ್ಟು
ಕಳೆದ ವಾರ ಬಿಗ್ ಬಾಸ್ ಕನ್ನಡ 11ರ ಮನೆಯಿಂದ ಇಬ್ಬರು ನೇರವಾಗಿ ಎಲಿಮಿನೇಟ್ ಆಗಿದ್ದರು. ವಾರದ ಪಂಚಾಯ್ತಿಯಲ್ಲಿ ಕಿಚ್ಚ ಇಡೀ ಮನೆ ಮಂದಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಹೀಗಿರುವಾಗ ಈಗ ಆ ವಾರದ ಐದು ದಿನಗಳ ಮತ್ತು ವಾರಾಂತ್ಯದ ಎರಡು ದಿನಗಳ ಟಿಆರ್‌ಪಿ ಲೆಕ್ಕಾಚಾರ ಹೊರಬಿದ್ದಿದೆ. ವಾರದ ಐದು ದಿನಗಳಲ್ಲಿ 7.3 ಟಿಆರ್‌ಪಿ ಪಡೆದುಕೊಂಡರೆ, ಶನಿವಾರ 7.0 ಮತ್ತು ಭಾನುವಾರ 6.9 ಟಿಆರ್‌ಪಿ ಪಡೆದಿದೆ. ಈ ಮೂಲಕ ಕಳೆದ ವಾರಕ್ಕಿಂತ ಈ ವಾರದ ಟಿಆರ್‌ಪಿಯಲ್ಲಿ ಇಳಿಕೆ ಕಂಡಿದೆ.
ಈ ವಾರದ ಕನ್ನಡದ ಟಾಪ್ 10 ಸೀರಿಯಲ್‌ಗಳು
- ಪುಟ್ಟಕ್ಕನ ಮಕ್ಕಳು 9.9 ಟಿಆರ್‌ಪಿ
- ಲಕ್ಷ್ಮೀ ನಿವಾಸ 9.0 ಟಿಆರ್‌ಪಿ
- ಅಮೃತಧಾರೆ 8.6 ಟಿಆರ್‌ಪಿ
- ಅಣ್ಣಯ್ಯ 8.3 ಟಿಆರ್‌ಪಿ
- ಶ್ರಾವಣಿ ಸುಬ್ರಮಣ್ಯ 7.1 ಟಿಆರ್‌ಪಿ
- ಲಕ್ಷ್ಮೀ ಬಾರಮ್ಮ 7.0 ಟಿಆರ್‌ಪಿ
- ರಾಮಾಚಾರಿ 6.9 ಟಿಆರ್‌ಪಿ
- ಭಾಗ್ಯಲಕ್ಷ್ಮೀ 6.2 ಟಿಆರ್‌ಪಿ
- ನಿನಗಾಗಿ 5.7 ಟಿಆರ್‌ಪಿ
- ಸೀತಾ ರಾಮ 5.3 ಟಿಆರ್‌ಪಿ